ಐರನ್ ಮ್ಯಾನ್ ದೇಹ ದಂಡನೆ ಸ್ಪರ್ಧೆ: 53ನೇ ವಯಸ್ಸಿನಲ್ಲೂ ಸಾಧನೆಗೈದ ಸೇನಾಧಿಕಾರಿ; ಪ್ರಥಮ ಸ್ಥಾನ

ಇಷ್ಟೆಲ್ಲ ಮಾಡಿರುವ ಶಂಕರ್ ಅವರು ಯಾವುದೇ ನಾನ್ ವೇಜ್ ಆಹಾರ ಸ್ವೀಕರಿಸದೆ ಕೇವಲ ಸಸ್ಯಾಹಾರಿಯಾಗಿರುವುದು ವಿಶೇಷ ಸಂಗತಿ. ದೇಹ ದಂಡಿಸುವ ಸ್ಪರ್ಧೆ ಮಾಡಿದರು ಮೊಟ್ಟೆಯನ್ನು ಕೂಡ ಶಂಕರ ಅವರು ಸೇವಿಸುವುದಿಲ್ಲ. ರಾತ್ರಿ ಊಟ ಕೂಡ ಮಾಡದೆ ಫಿಟ್ ಅಂಡ್ ಫೈನ್ ಆಗಿದ್ದಾರೆ.

news18-kannada
Updated:January 3, 2020, 2:56 PM IST
ಐರನ್ ಮ್ಯಾನ್ ದೇಹ ದಂಡನೆ ಸ್ಪರ್ಧೆ: 53ನೇ ವಯಸ್ಸಿನಲ್ಲೂ ಸಾಧನೆಗೈದ ಸೇನಾಧಿಕಾರಿ; ಪ್ರಥಮ ಸ್ಥಾನ
ಶಂಕರ್ ಕರಜಗಿ
  • Share this:
ಇವರು ವೃತ್ತಿಯಲ್ಲಿ ಭಾರತ ಪೆಟ್ರೋಲಿಯಂ ಕಂಪನಿಯ ಜನರಲ್ ಮ್ಯಾನೇಜರ್ ಜತೆಗೆ ಸೇನಾಧಿಕಾರಿಯು ಹೌದು.  53 ವಯಸ್ಸಿನ  ಈ ಸೇನಾಧಿಕಾರಿ ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಮಾತ್ರವಲ್ಲದೆ, ಹೆಮ್ಮೆ ತರುವಂತಹ ಕೆಲಸ ಮಾಡಿದ್ದಾರೆ. ಈ ಸೇನಾಧಿಕಾರಿ ಐರನ್ ಮ್ಯಾನ್ ಆದ ಇಂಟರ್ಸಿಟಿಂಗ್ ಕಥೆ ಇಲ್ಲಿದೆ ನೋಡಿ.

ಮಲೆಷ್ಯಾದಲ್ಲಿ ಇತ್ತೀಚಿಗೆ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಲ್ಲಿ ಪ್ರಥಮ ಸ್ಥಾನ ಪಡೆದು ಶಂಕರ ಕರಜಗಿ ಕೀರ್ತಿ ತಂದಿದ್ದಾರೆ. ಶಂಕರ್ ಕರಜಗಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿದ್ದಾರೆ.ಮಾತ್ರವಲ್ಲದೆ, ಭಾರತ ಪೆಟ್ರೋಲಿಯಂನ ಕರ್ನಾಟಕದ ಮುಖ್ಯ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ  ಇಂಡಿಯನ್ ಟೆರಿಟರಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ಇವರು ಮಲೆಷ್ಯಾದಲ್ಲಿ ಇತ್ತೀಚಿಗೆ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ 12 ಗಂಟೆಯ ಅವಧಿಯಲ್ಲಿ  3 ಕಿ.ಮೀ ಸಮುದ್ರದಲ್ಲಿ ಈಜು ಹೊಡೆದು, ನಂತರ 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗೂ 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೇಂಜ್ ಸ್ವೀಕರಿಸಿದ್ದರು. ಮಾತ್ರವಲ್ಲದೆ, 15 ಗಂಟೆ 43 ನಿಮಿಷಗಳಲ್ಲಿ ಅದನ್ನ ಯಶಸ್ವಿಯಾಗಿ ನಿರ್ವಹಿಸಿ ಐರನ್ ಮ್ಯಾನ್ ಪ್ರಶಸ್ತಿ ಪಡೆದು ಭಾರತೀಯ ಸೇನೆ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.‌ ಇವರ ಈ ಸಾಧನೆಗೆ ಮೆಚ್ಚಿ ಸೇನಾ ಮೆಡಲ್ ಪುರಸ್ಕಾರ ನೀಡುವಂತೆ ಸೇನಾಧಿಕಾರಿಗಳು ಶಿಪಾರಸ್ಸು ಮಾಡಿದ್ದಾರೆ.

ಇಷ್ಟೆಲ್ಲ ಮಾಡಿರುವ ಶಂಕರ್ ಅವರು ಯಾವುದೇ ನಾನ್ ವೇಜ್ ಆಹಾರ ಸ್ವೀಕರಿಸದೆ ಕೇವಲ ಸಸ್ಯಾಹಾರಿಯಾಗಿರುವುದು ವಿಶೇಷ ಸಂಗತಿ. ದೇಹ ದಂಡಿಸುವ ಸ್ಪರ್ಧೆ ಮಾಡಿದರು ಮೊಟ್ಟೆಯನ್ನು ಕೂಡ ಶಂಕರ ಅವರು ಸೇವಿಸುವುದಿಲ್ಲ. ರಾತ್ರಿ ಊಟ ಕೂಡ ಮಾಡದೆ ಫಿಟ್ ಅಂಡ್ ಫೈನ್ ಆಗಿದ್ದಾರೆ.ಶಂಕರ್ ಅವರಿಗೆ ಸದ್ಯ 53 ವಯಸ್ಸು. ಈ ವಯಸ್ಸಿನಲ್ಲಿ ಗಣನೀಯ ಪ್ರಮಾಣದ ಸಾಹಸ ಸಾಧನೆ ಮಾಡಿರುವ ಶಂಕರ್ ಅವರನ್ನು ಇತ್ತಿಚಿಗೆ ಕುಟುಂಬಸ್ಥರು ಸತ್ಕರಿಸಿ ಸನ್ಮಾನಿಸಿದರು.‌ ಒಟ್ಟಿನಲ್ಲಿ ಸಾಧಿಸುವ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ ಎನ್ನುವದನ್ನ ಶಂಕರ ಕರಜಗಿ ತೋರಿದ್ದಾರೆ.(ವರದಿ:ಲೋಹಿತ್ ಶಿರೋಳ ಚಿಕ್ಕೋಡಿ)
Published by: Harshith AS
First published: January 2, 2020, 6:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading