ರಾಮನಗರ (ಮೇ 19): ಎಸ್ಪಿ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಂಗಳೂರಿನ ವೈದ್ಯನ (Doctor) ಮೂಲಕ ಐಸಿಸ್ ಗೆ ಸೇರ್ಪಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ವಿಚಾರವಾಗಿ ಮಾಧ್ಯಮದಲ್ಲಿ ನೋಡಿದ್ದೇನೆ. ನಮ್ಮ ಮೇಲಾಧಿಕಾರಿಗಳಿಗೆ (Officers) ಈ ಬಗ್ಗೆ ತಿಳಿಸಿದ್ದೇನೆ. ಈ ವಿಚಾರವಾಗಿ ಮಾಹಿತಿ ನೀಡಬೇಕು ಎಂದಿದ್ದೇನೆ. ಮಾಹಿತಿ ಸಂಗ್ರಹ ಮಾಡಿ ನನ್ನ ಬಳಿ ಮಾತನಾಡ್ತಾರೆ. ಬೆಂಗಳೂರಿನಲ್ಲಿ ಉಗ್ರಗಾಮಿ (Militant) ಚಟುವಟಿಕೆ ನಡೆಯುತ್ತಿರುವ ವಿಚಾರವಾಗಿಯೂ ಗೃಹ ಸಚಿವರು (Home Minister) ಮಾತಾಡಿದ್ದಾರೆ.
ಉಗ್ರಗಾಮಿ ಚಟುವಟಿಕೆ ನಡೆಸುವವರು ಇದ್ದಾರೆ
ಈ ಹಿಂದೆ 2-3 ಕಡೆ ಬಾಂಬ್ ಕೂಡ ಎಕ್ಸ್ ಪೋಲ್ಡ್ ಆಗಿತ್ತು, ಈ ರೀತಿಯ ಚಟುವಟಿಕೆ ಮಾಡುವವರು ಇದ್ದಾರೆ, ಇಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಈ ರೀತಿಯ ಚಟುವಟಿಕೆಗಳು ತುಂಬಾ ಕಡಿಮೆಯಾಗಿವೆ. ನಮ್ಮ ಪೊಲೀಸರು ಸಿಟಿಯಲ್ಲಿ ವಿಶೇಷವಾಗಿ ಕಣ್ಗಾವಲು ಮಾಡ್ತಿದ್ದಾರೆ. NIA ಈ ಬಗ್ಗೆ ವರದಿ ಕೊಟ್ಟಿದೆ, ನಮ್ಮ ಪೊಲೀಸರು ಜಾಗೃತರಾಗಿ ಕಣ್ಣಿಟ್ಟಿದ್ದಾರೆಂದರು.
ಇದನ್ನೂ ಓದಿ: Supplementary Exam: ಫೇಲ್ ಆಗಿದ್ದಕ್ಕೆ ಭಯ ಬೇಡ, ನಿಮಗಿದೆ ಇನ್ನೊಂದು ಚಾನ್ಸ್; ಮೇ 27ರಿಂದ SSLC ಪೂರಕ ಪರೀಕ್ಷೆ
ಇನ್ನು ಆಜಾನ್ ಗದ್ದಲದ ವಿಚಾರವಾಗಿ ಮಾತನಾಡಿ ಈಗ ಅದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ, ಅವರೇ ಒಪ್ಪಿಕೊಂಡಿದ್ದಾರೆ. ಬೆಳಗ್ಗೆ 6 ರ ನಂತರ ಆಜಾನ್ ಹಾಕ್ತೇವೆಂದು. ಎಷ್ಟು ಡೆಸಿಬಲ್ ಇರಬೇಕು ಎಂಬುದು ಕೋರ್ಟ್ ಆರ್ಡರ್ ಇದೇ. ಅದರ ಪ್ರಕಾರ ನಿಯಮಾವಳಿಗಳನ್ನ ಅವರಿಗೆ ಕೊಡಲಾಗಿದೆ. ಲೈಸೆನ್ಸ್ ತೆಗೆದುಕೊಳ್ಳಬೇಕೆಂದು ಹೇಳಿದ್ದೇವೆ. ಪರಿಸರ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.
ಎಲ್ಲವೂ ಕಾನೂನಿನ ಪ್ರಕಾರ ನಡೆಯಬೇಕು
ಇದರಲ್ಲಿ ಯಾವ ಪ್ರೋತ್ಸಾಹ ನಡೆಯಲ್ಲ, ಕಾನೂನು ಪ್ರಕಾರ ನಡೆಯಬೇಕು ಎಂದರು. ಇನ್ನು ಪಠ್ಯಪುಸ್ತಕದ ಗೊಂದಲದ ವಿಚಾರವಾಗಿ ಮಾತನಾಡಿ ಇದು ನನ್ನ ಇಲಾಖೆ ಅಲ್ಲ, ಶಿಕ್ಷಣ ಸಚಿವರು ಪ್ರತಿದಿನ ಮಾಹಿತಿ ಕೊಡ್ತಿದ್ದಾರೆ. ನಾರಾಯಣಗುರು, ಭಗತ್ ಸಿಂಗ್ ವಿಚಾರವನ್ನ ಕೈಬಿಟ್ಟಿದ್ದಾರೆ ಅಂತಿದ್ದಾರೆ. ಸಚಿವರು ಕೈಬಿಟ್ಟಿಲ್ಲ ಎಂದು ಹೇಳ್ತಿದ್ದಾರೆ. ಕೇವಲ ಊಹಾಪೋಹದಲ್ಲಿ ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಅದನ್ನ ಶಿಕ್ಷಣ ಸಚಿವರು ಹೇಳ್ತಾರೆಂದರು. ಇನ್ನು ಅಕ್ರಮ ಪಿಎಸ್ಐ ಪ್ರಕರಣ ವಿಚಾರವಾಗಿ ಮಾತನಾಡಿಪಿಎಸ್ಐ ಪ್ರಕರಣದ ತನಿಖೆ ನಡೆಯುತ್ತಿದೆ. ಅನೇಕರು ವಂಚಿಸಿದ್ದಾರೆ, ಇದಕ್ಕೆ ಲಾಜಿಕಲ್ ಅಂತ್ಯ ಹಾಡಲಿದ್ದೇವೆ,
ಇದನ್ನೂ ಓದಿ: Basavaraj Bommai: ಸಿಟಿ ರೌಂಡ್ಸ್ ಬಳಿಕ ಅಧಿಕಾರಿಗಳ ಮೇಲೆ ಸಿಎಂ ಫುಲ್ ಗರಂ; ರಾಜಕಾಲುವೆ ಅಭಿವೃದ್ಧಿಗೆ 1,600 ಕೋಟಿ ಡಿಪಿಆರ್
ಕಷ್ಟಪಟ್ಟು ಓದಿದವರಿಗೆ ಬಾಯಿಗೆ ಮಣ್ಣು ಹಾಕಿದ್ದಾರೆ. ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ, ನಾವು ತಪ್ಪು ಮಾಡಿದ ಪೊಲೀಸರನ್ನೇ ಬಿಡುತ್ತಿಲ್ಲ. ರಾಜ್ಯದ 92 ಕೇಂದ್ರಗಳಿಲ್ಲಿ ಪರೀಕ್ಷೆ ನಡೆದಿದೆ. ಅಲ್ಲಿ ನಾನು ಹೋಗಿ ಪರಿಶೀಲನೆ ನಡೆಸಲು ಸಾಧ್ಯವೆ ಎಂದರು. ಇನ್ನು ಯಾವುದೇ ಮುಲಾಜು, ಪ್ರಭಾವ ಇಲ್ಲದೇ, ಸಿಐಡಿಗೆ ಫ್ರಿ ಹ್ಯಾಂಡ್ ನೀಡಿದ್ದೇವೆ. ಮುಂದಿನ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ.
ಅಮಾಯಕರಿಗೆ ಅನ್ಯಾಯ
2016 ರಲ್ಲಿ ಪಿಯುಸಿಯಲ್ಲಿ ನಾಲ್ಕು ಭಾರೀ ಪರೀಕ್ಷೆ ನಡೆದಿದೆ. 2014 -15 ರಲ್ಲಿ ಎಪಿಪಿಗಳ ಸೆಲೆಕ್ಷನ್ ನಲ್ಲಿಯು ಅಂಕಗಳನ್ನು ತಿದ್ದಿದ್ದಾರೆ. ಅಂತಹ ನೇಮಕಗಳನ್ನು ತಡೆಹಿಡಿಯಲಾಗಿದೆ. ಅಮಾಯಕರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಒಂದು ಸೆಂಟರ್ ನಲ್ಲಿ ಅಕ್ರಮ ನಡೆದಿಲ್ಲ. ಹೆಡ್ ಆಫಿಸ್ ನ ಲಾಕರ್ ನಲ್ಲಿದ್ದ ಒಎಂಆರ್ ಶೀಟ್ ಗಳನ್ನು ತಿದ್ದಿದ್ದಾರೆ.
ಅಲ್ಲದೇ ಬ್ಲೂಟೂತ್ ಅಕ್ರಮ ನಡೆದಿದೆ. ಈಗ ಮರು ಪರೀಕ್ಷೆ ಅನಿವಾರ್ಯ., ಆದ್ರೆ ನೋಟಿಪಿಕೆಷನ್ ರದ್ದುಪಡಿಸಿಲ್ಲ. ಈಗ ಪರೀಕ್ಷೆಯನ್ನೆ ರದ್ದು ಮಾಡಿದ್ದೇವೆ, ಯಾರು ಅಕ್ರಮ ನಡೆಸಿದ್ದಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಅಸಹಾಯಕತೆಯಾಗಿದೆ ಎಂದರು.
ವರದಿ: ಎ.ಟಿ ವೆಂಕಟೇಶ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ