ಡಿಸೆಂಬರ್ 19 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದ್ದ ಗ್ರೀನ್ ರೈಡ್ 2.0 (Green Ride 2.0) ಕಾರ್ಯಕ್ರಮದಲ್ಲಿ ಫಿಟ್ನೆಸ್ ಐಕಾನ್ ಮಿಲಿಂದ್ ಸೋಮನ್ (Fitness Icon Milind soman) ಭಾಗಿಯಾಗಿದ್ದರು. ಎಲೆಕ್ಟ್ರಾನಿಕ್ ವಾಹನಗಳ (Electric Vehicles) ಬಳಕೆಯನ್ನು ಉತ್ತೇಜಿಸುವ ಮೂಲಕ ವಾಯು ಮಾಲಿನ್ಯವನ್ನು ನಿಯಂತ್ರಿಸಲು (Air Pollution) ಜನರನ್ನು ಪ್ರೇರೆಪಿಸುವ ಗುರಿ ಹೊಂದಿರುವ ಈ ಕಾರ್ಯಕ್ರಮದಲ್ಲಿ ಮಿಲಿಂದ್ ಭಾಗಿಯಾಗಿ ಬೆಂಗಳೂರಿನಿಂದ ಮಂಗಳೂರಿಗೆ (Bengaluru To Managaluru) 450ಎಕ್ಸ್ ಇವಿ ಬೈಕ್ ಏರಿ ಅಭಿಯಾನಕ್ಕೆ ಸಾಥ್ ನೀಡಿದರು.
ಮೊದಲ ಆವೃತ್ತಿಯಲ್ಲೂ ಭಾಗಿಯಾಗಿದ್ದ ಮಿಲಿಂದ್
ಗ್ರೀನ್ ರೈಡ್ನ ಮೊದಲ ಆವೃತ್ತಿಯನ್ನು ಡಿಸೆಂಬರ್ 2021 ರಲ್ಲಿ ಪ್ರಾರಂಭಿಸಲಾಯಿತು. ಮಾಡಲ್ ಮತ್ತು ನಟ ಮಿಲಿಂದ್ ಈ ಹಿಂದೆ ಗ್ರೀನ್ ರೈಡ್ನ ಮೊದಲ ಆವೃತ್ತಿಯಲ್ಲಿ ಭಾಗವಹಿಸಿ, ಮುಂಬೈನಿಂದ ದೆಹಲಿಗೆ 1,000 ಕಿಮೀ ಸೈಕಲ್ ಸವಾರಿ ಮಾಡಿದ್ದರು.
ಶುದ್ಧ ಇಂಧನ ಬಳಕೆ ಮತ್ತು ಮಾಲಿನ್ಯವನ್ನು ನಿಭಾಯಿಸಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಲು ಮಿಲಿಂದ್ ದಿನಕ್ಕೆ 150 ಕಿಮೀ ಸೈಕಲ್ ಸವಾರಿ ಮಾಡಿ ಜಾಗೃತಿ ಮೂಡಿಸಿದ್ದರು.
"ಶುದ್ಧ ಗಾಳಿಯೇ ಇರದಿದ್ದರೆ ನಾವು ಸಾಧಿಸಿದ್ದೆಲ್ಲಾ ನಿಷ್ಪ್ರಯೋಜಕ"
ಸರಿಯಾದ ಆಯ್ಕೆಗಳನ್ನು ಮಾಡುವ ಮೂಲಕ ಮಾಲಿನ್ಯ ಮುಕ್ತ ಗಾಳಿಯೊಂದಿಗೆ ಪರಿಸರವನ್ನು ಆರೋಗ್ಯಕರವಾಗಿಡಲು, ಅವರನ್ನು ಪ್ರೋತ್ಸಾಹಿಸಲು ಈ ಸವಾರಿಯು ಜನರಲ್ಲಿ ಜಾಗೃತಿ ಮೂಡಿಸುವ ಉಪಕ್ರಮವಾಗಿದೆ.
ಇದು ಸುಸ್ಥಿರ ಪರಿಸರ, ಶುದ್ಧ ಗಾಳಿ ಮತ್ತು ಹಸಿರು ಶಕ್ತಿಯ ಕಾರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. "ನಮಗೆ ಉಸಿರಾಡಲು ಶುದ್ಧ ಗಾಳಿಯೇ ಇರದಿದ್ದರೆ ನಾವು ಸಾಧಿಸಿದ್ದೆಲ್ಲಾ ನಿಷ್ಪ್ರಯೋಜಕವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ದಿನನಿತ್ಯದ ಜೀವನದಲ್ಲಿ ಸಣ್ನ-ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಸೈಕಲ್ ಬಳಕೆ, ಸಸಿ ನೆಡುವುದು, ಮರುಬಳಕೆಯಂತಹ ಮಾರ್ಗಗಳತ್ತ ಜನ ಬದಲಾವಣೆ ಮಾಡಿಕೊಳ್ಳಬೇಕು" ಎಂದು ಈ ಸಂದರ್ಭದಲ್ಲಿ ಮಿಲಿಂದ್ ಸೋಮನ್ ಹೇಳಿದರು.
ಗ್ರೀನ್ ರೈಡ್ 2.0
ಡಿಸೆಂಬರ್ 19 ರಂದು ಆರಂಭವಾದ ಈ ಯಾತ್ರೆಯು ಮುಂಬೈ, ಪುಣೆ, ಕರಾಡ್, ಕೊಲ್ಲಾಪುರ, ಬೆಳಗಾವಿ, ಶೇಗಾಂವ್, ಹಿರೇಬೆನ್ನೂರು, ತುಮಕೂರು, ಮೈಸೂರು ಮಾರ್ಗವಾಗಿ ಡಿಸೆಂಬರ್ 26 ರಂದು ಮಂಗಳೂರು ತಲುಪಿದೆ.
ಮಿಲಿಂದ್ ಸೋಮನ್ ಅವರು ಅಥರ್ 450X ಏರಿ ಪ್ರಯಾಣ ಬೆಳೆಸಿದ್ದು, ಪ್ರಯಾಣದ ದಾರಿಯಲ್ಲಿ ಮಿಲಿಂದ್ ಸೌರಶಕ್ತಿ ಸ್ಥಾವರಗಳಿಗೆ ಭೇಟಿ ನೀಡಿದರು.
ಮಿಲಿಂದ್ ಸೋಮನ್ ಜೊತೆ ಪಾಲುದಾರಿಕೆ ಖುಷಿ ನೀಡಿದೆ
ಅಥೆರ್ ವಕ್ತಾರ, ಅಥೆರ್ ಎನರ್ಜಿಯ ಮುಖ್ಯ ವ್ಯಾಪಾರ ಅಧಿಕಾರಿ ರವನೀತ್ ಫೋಕೆಲಾ ಅವರು, ಮಾತನಾಡಿ "ವಿದ್ಯುತ್ ವಾಹನಗಳು ಡಿಕಾರ್ಬನೈಸ್ಡ್ ಜಗತ್ತನ್ನು ಸಾಧಿಸುವ ಏಕೈಕ ದೊಡ್ಡ ಭರವಸೆಯಾಗಿದೆ ಮತ್ತು EV ಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಈ ಗುರಿಯತ್ತ ಮೊದಲ ಹೆಜ್ಜೆಯಾಗಿದೆ.
Met some of the wonderful folks from @atherenergy powering my #GreenRide
Handed over the keys to five new owners too, so they can embark on green rides of their own 🛵💚 pic.twitter.com/vbhuKNxbGP
— Milind Usha Soman (@milindrunning) December 26, 2022
10 ಲಕ್ಷ ಕಿಲೋಮೀಟರ್ಗಳಿಗಿಂತ ಹೆಚ್ಚು ದೀರ್ಘ ಪ್ರಯಾಣ
ಪ್ರತಿದಿನ, ಅಥರ್ ಬಳಕೆದಾರರು 25,000 ಲೀಟರ್ ಪೆಟ್ರೋಲ್ ಮತ್ತು 57.5 ಟನ್ C02 ಅನ್ನು ಉಳಿಸುವ ಮೂಲಕ 10 ಲಕ್ಷ ಕಿಲೋಮೀಟರ್ಗಳಿಗಿಂತ ಹೆಚ್ಚು ದೀರ್ಘ ಪ್ರಯಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: University: ಕರ್ನಾಟಕದ ಆರು ಶಿಕ್ಷಣ ಸಂಸ್ಥೆಗಳಿಗೆ ಸಿಗಲಿದೆ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾನಮಾನ
ಶುದ್ಧ ಗಾಳಿ ಮತ್ತು ಹಸಿರು ಶಕ್ತಿಯನ್ನು ಉತ್ತೇಜಿಸಲು ಗ್ರೀನ್ ರೈಡ್ 2.0 ಮತ್ತು ಮಿಲಿಂದ್ ಸೋಮನ್ ಜೊತೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ" ಎಂದು ಅವರು ಹೇಳಿದರು.
ಜನರಿಗೆ ಶಿಕ್ಷಣ ನೀಡುವ ಗುರಿ
ಉಪಕ್ರಮದ ವಿಮಾ ಪಾಲುದಾರರಾದ ಟರ್ಟಲ್ಮಿಂಟ್ನ ಸಹ-ಸಂಸ್ಥಾಪಕ ಆನಂದ್ ಪ್ರಭುದೇಸಾಯಿ, “ಮಿಲಿಂದ್ ಸೋಮನ್ ಅವರನ್ನು ಆರೋಗ್ಯ ಮತ್ತು ಫಿಟ್ನೆಸ್ನ ಐಕಾನ್ ಆಗಿ ನೋಡುವ ಲಕ್ಷಾಂತರ ಜನರಿದ್ದಾರೆ ಮತ್ತು ವಿವಿಧ ಉಪಕ್ರಮಗಳಿಗಾಗಿ ಅವರು ಭಾಗವಾಗಿದ್ದಾರೆ.
ಗ್ರೀನ್ ರೈಡ್ 2.0 ಗಾಗಿ ಮಿಲಿಂದ್ ಸೋಮನ್ ಅವರೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ, ಇದು ಪ್ರತಿದಿನವೂ ಫಿಟ್ ಆಗಿರುವ ಮತ್ತು ಸಮರ್ಥನೀಯತೆಯನ್ನು ಆಯ್ಕೆ ಮಾಡುವ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ" ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ