Dakshina Kannada: ದಕ್ಷಿಣ ಕನ್ನಡದಲ್ಲಿ ಮತ್ತೆ ಕಂಪಿಸಿದ ಭೂಮಿ; ಸೂಕ್ತ ಅಧ್ಯಯನಕ್ಕೆ ಗ್ರಾಮಸ್ಥರ ಒತ್ತಾಯ

ಒಂದೇ ವಾರದಲ್ಲಿ ಮೂರು ಸಲ ಈ ರೀತಿಯ  ಭೂಕಂಪನವಾಗಿದ್ದು, 2.4, 3.0 ತೀವ್ರತೆ ಸಂಭವಿಸಿದೆ.  ಕೊಡಗು ಜಿಲ್ಲೆಯ ಮದೆನಾಡು, ಜೋಡುಪಾಲ ಮೊದಲಾದ ಕಡೆಗಳಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಭೀಕರ ದುರಂತದ ಬಳಿಕ ಮತ್ತೆ‌ ಬದುಕು ಕಟ್ಟಿಕೊಂಡಿದ್ದ ಈ ಭಾಗದ ಜನರಲ್ಲಿ ಮತ್ತೊಂದು ದುರಂತದ ಸಂಭವಿಸಲಿದೆಯೇ ಎನ್ನುವ ಭಯ ಶುರುವಾಗಿದೆ. 

ಭೂಕಂಪನದಿಂದ ಮನೆಗೆ ಹಾನಿ

ಭೂಕಂಪನದಿಂದ ಮನೆಗೆ ಹಾನಿ

  • Share this:
ದಕ್ಷಿಣಕನ್ನಡ:  ಜಿಲ್ಲೆಯ ಭೂಮಿ ಮತ್ತೆ ಕಂಪಿಸಿದ್ದು, ಒಂದೇ ವಾರದೊಳಗೆ ಎರಡನೇ ಬಾರಿ ಭೂಕಂಪ ಸಂಭವಿಸಿರೋದು ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿದೆ.   ಕೊಡಗು ಗಡಿಭಾಗವಾದ ಸಂಪಾಜೆ, ಕಲ್ಲುಗುಂಡಿ,ಸುಳ್ಯ ಮತ್ತು ಚೆಂಬು ಗ್ರಾಮದಲ್ಲಿ ಈ ಕಂಪನ ಸಂಭವಿಸಿದ್ದು, ಜೂನ್ 28 ರಂದು‌ ಸಂಭವಿಸಿದ ಭೂಕಂಪದ ತೀವೃತೆ  3.0 ಮ್ಯಾಗ್ನಟ್ಯೂಟ್ ದಾಖಲಾಗಿದೆ. ಮಳೆಗಾಲದ ಸಮಯದಲ್ಲಿ ಈ ರೀತಿಯ ಭೂಕಂಪನ ಸಂಭವಿಸುತ್ತಿರುವುದು ಗಡಿಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಕೊಡಗು ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ಸಂಪಾಜೆ,ಕಲ್ಲುಗುಂಡಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಂಪನದ ಅನುಭವ  ಆಗಿರುವುದು  ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ.

ಸೂಕ್ತ ಅಧ್ಯಯನಕ್ಕೆ ಗ್ರಾಮಸ್ಥರ ಒತ್ತಾಯ

ಹೆಚ್ಚಾಗಿ ಗುಡ್ಡಗಾಡುಗಳನ್ನು ಹೊಂದಿರುವ ಈ ಭಾಗದಲ್ಲಿ ಈ ರೀತಿಯ ಭೂಕಂಪ ಸಂಭವಿಸುವುದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಅಧ್ಯಯನ ನಡೆಯಬೇಕು ಎನ್ನುವ ಆಗ್ರಹವನ್ನೂ ಸ್ಥಳೀಯರು ಇದೀಗ ಮಾಡಲಾರಂಭಿಸಿದ್ದಾರೆ. ಒಂದೇ ವಾರದಲ್ಲಿ ಮೂರು ಸಲ ಈ ರೀತಿಯ  ಭೂಕಂಪನವಾಗಿದ್ದು, 2.4, 3.0 ತೀವೃತೆಯ ಸಂಭವಿಸಿದೆ.  ಕೊಡಗು ಜಿಲ್ಲೆಯ ಮದೆನಾಡು, ಜೋಡುಪಾಲ ಮೊದಲಾದ ಕಡೆಗಳಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಭೀಕರ ದುರಂತದ ಬಳಿಕ ಮತ್ತೆ‌ ಬದುಕು ಕಟ್ಟಿಕೊಂಡಿದ್ದ ಈ ಭಾಗದ ಜನರಲ್ಲಿ ಮತ್ತೊಂದು ದುರಂತದ ಸಂಭವಿಸಲಿದೆಯೇ ಎನ್ನುವ ಭಯ ಶುರುವಾಗಿದೆ.

ಇದನ್ನೂ ಓದಿ: Kodagu Earthquake: ಕೊಡಗಿನಲ್ಲಿ 3 ನೇ ಬಾರಿಗೆ ಕಂಪಿಸಿದ ಭೂಮಿ, ಆತಂಕದಲ್ಲಿ ಜನ

ಕಂಪನಗಳು ನಡೆಯುವುದು ಸಹಜ

ಕೊಡಗು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಬಹುಭಾಗ ಗುಡ್ಡ ಹಾಗು ಸಮತಟ್ಟು ಭೂಭಾಗ ಹೊಂದಿರುವ ಪ್ರದೇಶವಾಗಿದ್ದು,  ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಮತೋಲನ ಹೊಂದಿರುವ  ಪ್ರದೇಶದಲ್ಲಿ ಮಾನವ ಹಸ್ತಕ್ಷೇಪಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಕೃತಿಯಲ್ಲಿ ಅಸಮಾತೋಲನ ಉಂಟಾಗಿರುವ ಕಾರಣಕ್ಕೆ ಈ ರೀತಿಯ ಕಂಪನಗಳು ನಡೆಯುವುದು ಸಹಜ ಎನ್ನುವುದು ತಜ್ಞರ ಅಭಿಪ್ರಾಯಗಳಾಗಿವೆ.  ಗುಡ್ಡಗಳನ್ನು ಕಡಿದು ಸಮತಟ್ಟು ಮಾಡಿ ಇತರ ಉದ್ಧೇಶಗಳನ್ನು ಬಳಸುತ್ತಿರುವುದು ಇಂಥ ವಿಕೋಪಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಬೇಕು ಎನ್ನುವ ಒತ್ತಾಯ ಇದೀಗ ಕೇಳಿ ಬರಲಾರಂಭಿಸಿದೆ.

ದುರಂತದ ಮುನ್ಸೂಚನೆಯೇ? 

ಈ ಸಂಬಂಧ ಸಂಪಾಜೆ ಗ್ರಾಮಪಂಚಾಯತ್ ಅಧ್ಯಕ್ಷ ಬಿ.ಕೆ.ಹಮೀದ್ ಸುಳ್ಯ‌ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ‌ ಭಾಗದಲ್ಲಿ ಜೀವನ ಸಾಗಿಸುತ್ತಿದ್ದ, ಈವರೆಗೂ ಭೂಕಂಪನತಹ ವಿದ್ಯಾಮಾನಗಳು ಈ‌ ಭಾಗದಲ್ಲಿ ನಡೆದಿಲ್ಲ. ಹೀಗಿರುವಾಗ ಒಂದೇ ವಾರದ ನಡುವೆ ಮೂರು ಬಾರಿ ಭೂಮಿ ಕಂಪಸುತ್ತಿರುವುದು ಸಹಜವಾಗಿಯೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಭೂಕಂಪನಕ್ಕೆ ನಿಖರ‌ ಲಾರಣ ಏನು ಎನ್ನುವುದರ ಅಧ್ಯಯನ ನಡೆಯಬೇಕು ಎನ್ನುವುದು ಗ್ರಾಮಸ್ಥರ‌ ಒತ್ತಾಯವೂ ಆಗಿದ್ದು, ಈ ಹಿನ್ನಲೆಯಲ್ಲಿ ಪಂಚಾಯತ್ ಮೂಲಕವೇ ಸರಕಾರಕ್ಕೆ‌ ಅಧ್ಯಯನಕ್ಕಾಗಿ ಮನವಿಯನ್ನು ನೀಡಲಾಗಿದೆ ಎನ್ನುತ್ತಾರೆ ಸಂಪಾಜೆ‌ ಗ್ರಾಮಪಂಚಾಯತ್ ಅಧ್ಯಕ್ಷ ಹಮೀದ್. ಕೊಡಗು ಜಿಲ್ಲೆಯ ಜೋಡುಪಾಲದಂತಹ ದುರಂತವನ್ನು ಕಣ್ಣಾರೆ ನೋಡಿರುವ ಕೊಡಗು ಗಡಿಯ ಸಂಪಾಜೆ ಗ್ರಾಮದ ಜನತೆಯಲ್ಲಿ  ಈ ರೀತಿಯ ಭೂಕಂಪನ  ಮತ್ತೊಂದು ಭೀಕರ ದುರಂತದ ಮುನ್ಸೂಚನೆಯೇ ಎನ್ನುವ ಆತಂಕ ಮೂಡಿಸಿದೆ.

ಕೊಡಗಿನಲ್ಲೂ ಭೂಕಂಪನ 

ಕೊಡಗುಜಿಲ್ಲೆಯಲ್ಲಿ ಮತ್ತೆ ಹಲವು ಗ್ರಾಮಗಳಲ್ಲಿ ಭೂಕಂಪವಾಗಿದೆ. ಮಡಿಕೇರಿ  ತಾಲ್ಲೂಕಿನ ಸಂಪಾಜೆ, ಕರಿಕೆ, ಚೆಂಬು ಭಾಗಮಂಡಲ, ನಾಪೋಕ್ಲು, ಗಾಳಿಬೀಡು, ಅರವತ್ತೊಕ್ಲು ಮತ್ತು ಮಡಿಕೇರಿ ನಗರದ ಕೆಲವೆಡೆ ಭೂಕಂಪವಾಗಿದೆ. ಬೆಳಿಗ್ಗೆ 7 ಗಂಟೆ 45 ನಿಮಿಷದಲ್ಲಿ ಎರಡು ಸೆಕೆಂಡುಗಳ ಕಾಲ ಭೂಕಂಪವಾಗಿದೆ. ಭೂಕಂಪನಕ್ಕೆ ಜನರಿಗೆ ಹಿಡಿದು ನೂಕಿದ ಅನುಭವವಾಗಿದೆ. ಇನ್ನು ಚೆಂಬು ಗ್ರಾಮದಲ್ಲಿ ಜನರು ಹೆದರಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದ ಅನುಭವವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿದೆ.
Published by:Kavya V
First published: