Karwar: ಕೆರೆಯಲ್ಲಿ ವಿದೇಶಿ ವಲಸೆ ಹಕ್ಕಿಗಳ ಕಲರವ! ಸಾವಿರಾರು ಕಿ.ಮೀ. ದೂರದಿಂದ ಅವು ಬರುವುದಾದರೂ ಯಾಕೆ?

ಈ ಗ್ರಾಮದಲ್ಲಿ ವಿದೇಶಿ ಹಕ್ಕಿಗಳದ್ದೇ ಹವಾ ಶುರುವಾಗಿದೆ. ನೀರಿನಿಂದ ತುಂಬಿರುವ ಕೆರೆಗಳ ಮಧ್ಯೆ ಅವುಗಳ ವಾಸ. ಕಪ್ಪು ಕೊಕ್ಕು, ಬಣ್ಣ ಬಣ್ಣದ ರೆಕ್ಕೆ ಹೊತ್ತು ಮನಮೋಹಕವಾಗಿ ಕಾಣುವ ಈ ವಿದೇಶಿ ವಲಸೆ ಹಕ್ಕಿಗಳನ್ನು ನೋಡುವುದೇ ಚೆಂದ.

ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ

ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ

  • Share this:
ಕಾರವಾರ: ಉತ್ತರ ಕನ್ನಡ (Uttara Kannada) ಅಂದರೆ ಪ್ರಕೃತಿಯ (Nature) ತವರೂರು. ರಾಜ್ಯದ ಅರಣ್ಯದಲ್ಲಿ (Forest) ಶೇಕಡಾ 70ರಷ್ಟು ಭಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವುದು. ಇಲ್ಲಿ ಅರಣ್ಯ (Forest), ನದಿ (River), ಸಮುದ್ರ (Sea), ಜಲಪಾತ (Falls), ಅಪರೂಪದ ಪ್ರಾಣಿ (Animals), ಪಕ್ಷಿಗಳು (Birds), ಸಸ್ಯಸಂಪತ್ತು ಏನಿಲ್ಲ ಹೇಳಿ. ವನ್ಯಜೀವಿ ಪ್ರಿಯರು, ಪಕ್ಷಿ ಪ್ರೇಮಿಗಳಿಗಂತೂ ಇದು ಹೇಳಿ ಮಾಡಿಸಿದ ತಾಣ. ಇದೀಗ ಕಾರವಾರ (Karwar) ತಾಲೂಕಿನ ಕೆರವಡ್ಡಿ ಗ್ರಾಮದಲ್ಲಿ ವಿದೇಶಿ ಹಕ್ಕಿಗಳದ್ದೆ ಹವಾ ಶುರುವಾಗಿದೆ. ನೀರಿನಿಂದ ತುಂಬಿರುವ ಕೆರೆಗಳ ಮಧ್ಯೆ ಅವುಗಳ ವಾಸ. ಕಪ್ಪು ಕೊಕ್ಕು, ಬಣ್ಣ ಬಣ್ಣದ ರೆಕ್ಕೆ ಹೊತ್ತು ಮನಮೋಹಕವಾಗಿ ಕಾಣುವ ಆ ವಿದೇಶಿ ವಲಸೆ ಹಕ್ಕಿಗಳನ್ನು ನೋಡುವುದೇ ಚೆಂದ.. ವರ್ಷದ ಕೆಲವು ತಿಂಗಳು ಮಾತ್ರ ಅತಿಥಿಗಳಂತೆ ಬರುವ ಈ ಹಕ್ಕಿಗಳು  ಪ್ರವಾಸಿಗರನ್ನು, ಪಕ್ಷಿ ಪ್ರೇಮಿಗಳನ್ನು ತಮ್ಮತ್ತ ಕೈ ಬಿಸಿ ಕರೆಯುತ್ತಿವೆ.

ನೀವು ನೋಡಿದ್ದೀರಾ ಸೂಜಿ ಬಾಲದ ಬಾತುಗಳನ್ನು?

ಶಾಲ ಕೆರೆಯಲ್ಲಿ ಚೆಲ್ಲಾಟ ಆಡುತ್ತ ಈಜುತ್ತಿರುವ ಹಕ್ಕಿಗಳ ಗುಂಪು ಕಂಡುಬರೋದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೆರವಡಿ ಗ್ರಾಮದ ಕೆರೆಗಳಲ್ಲಿ..  ಈ ಗ್ರಾಮದ ಕೆರೆಗೆ ಸಾವಿರಾರು 'ಸೂಜಿ ಬಾಲದ ಬಾತು'ಗಳು ಅಥವಾ ನಾರ್ದರ್ನ್ ಪಿನ್‌ಟೈಲ್ (Northern Pintail) ಹಕ್ಕಿಗಳು ವಲಸೆ ಬಂದಿವೆ. ಇದು ಹಕ್ಕಿ ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ.

 ವಿವಿಧ ದೇಶಗಳಿಂದ ವಲಸೆ ಬರುವ ಹಕ್ಕಿಗಳು!

ಈ ಸೂಜಿ ಬಾಲದ ಬಾತು ಉತ್ತರ ಅಮೆರಿಕ, ಉತ್ತರ ಯೂರೋಪ್ ಮತ್ತು ಏಷ್ಯಾ ಖಂಡದ ವಿವಿಧ ಕಡೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಅಷ್ಟೆ ಅಲ್ಲದೆ ಆಫ್ರಿಕಾದ ಪಶ್ಚಿಮ ಭಾಗ, ಆಗ್ನೇಯ ಏಷ್ಯಾ, ಕೊಲ್ಲಿ ರಾಷ್ಟ್ರಗಳ ದಕ್ಷಿಣದಲ್ಲಿ ಹಾಗೂ ಪಾಕಿಸ್ತಾನದ ಕೆಲವೆಡೆಯೂ ಈ ಹಕ್ಕಿಗಳಿವೆ ಎಂಬ ಮಾಹಿತಿ ಕೂಡ ಇದೆ. ಈ ಹಕ್ಕಿಗಳು ಜನವರಿ ತಿಂಗಳ ನಂತರ ಹೀಗೆ ವಲಸೆ ಬರುತ್ತವೆ. ಪ್ರಕೃತಿ ಸೌಂದರ್ಯ ನೀರಿನ ಸೌಲಭ್ಯ ಇರುವ ಜಾಗ ಗುರುತಿಸಿ ಇಲ್ಲೆ ಕೆಲ ತಿಂಗಳು ವಾಸ ಮಾಡಿ ಮತ್ತೆ ತಮ್ಮ ತವರಿಗೆ ಮರಳುತ್ತವೆ.. ಇನ್ನೂ ಈ ಹಕ್ಕಿಗಳನ್ನ ನೋಡುವುದೆ ಚಂದ ಅಂತಾ ಇಲ್ಲಿಯ ಸ್ಥಳೀಯರು ಹೇಳುತ್ತಾರೆ..

ಇದನ್ನೂ ಓದಿ: Birds Lover: ಮೂಕ ಹಕ್ಕಿಗಳಿಗೆ ನೀರು, ಆಹಾರ ನೀಡುತ್ತಿದ್ದಾರೆ ಈ ಚಾಲಕ! 14 ವರ್ಷಗಳಿಂದ ಸದ್ದಿಲ್ಲದೇ ಸಾಗಿದೆ ಇವರ ಕಾರ್ಯ

ಸಾವಿರಾರು ಕಿಲೋ ಮೀಟರ್ ಹಾರಾಟ

ಪ್ರತಿವರ್ಷ ಸಾವಿರಾರು ಕಿಲೋಮೀಟರ್ ಹಾರಾಡುತ್ತ ವಲಸೆ ಹೋಗುತ್ತವೆ.. ಹೆಚ್ಚಾಗಿ ಈ ಪಕ್ಷಿಗಳು ಹೀಗೆ ಗುಂಪು ಗುಂಪಾಗಿ ವಲಸೆ ಬಂದು ಕೆಲ ತಿಂಗಳುಗಳು ಇದ್ದು ವಾಪಾಸ್ಸಾಗುತ್ತವೆ. ಇನ್ನೂ ಈ ಪಕ್ಷಗಳ ಕಲರವ ತುಂಟಾಟ ನೋಡಲು ಸಾಕಷ್ಟು ಪ್ರವಾಸಿಗರು ಈ ಪ್ರದೇಶಕ್ಕೆ ಬರುತ್ತಿದ್ದಾರೆ...

ಚಳಿಗಾಲದ ಪ್ರದೇಶದಲ್ಲಿ ಇಲ್ಲಿಯೇ ಇವುಗಳ ವಾಸ

ಇನ್ನು ಚಳಿಗಾಲದಲ್ಲಿ ನಮ್ಮ ದೇಶಕ್ಕೆ ಇವು ಸಾಮಾನ್ಯವಾಗಿ ವಲಸೆ ಬರುತ್ತವೆ. ಹೆಚ್ಚು ಜೌಗು ಪ್ರದೇಶದಲ್ಲಿ, ಪೊದೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಬಂದು ಒಂದಷ್ಟು ದಿನ ಇದ್ದು ವಾಪಸ್ ಹೋಗುತ್ತವೆ. ಬಾತುಗಳು ಸಾಮಾನ್ಯವಾಗಿ ಹುಲ್ಲಿನ ಮಧ್ಯೆ ಇರುವ ಕ್ರಿಮಿ ಕೀಟಗಳು, ಜಲಮೂಲಗಳಲ್ಲಿರುವ ಜೀವಿಗಳನ್ನು ಸೇವಿಸುತ್ತವೆ. ಅವುಗಳನ್ನ ತಿಂದು ತಮ್ಮ ಜೀವನ ಸಾಗಿಸುತ್ತವೆ.. ಈ ಬಾತುಗಳ ಮರಿಗಳು ಮೊಟ್ಟೆಯೊಡೆದು ಹೊರ ಬಂದು ಕೆಲವೇ ಗಂಟೆಗಳಲ್ಲಿ ತಮ್ಮ ತಾಯಿಯನ್ನು ಅನುಸರಿಸಿಕೊಂಡು ಹೋಗುವ ಸಾಮರ್ಥ್ಯ ಪಡೆದುಕೊಳ್ಳುತ್ತವೆ.

ಪ್ರವಾಸಿಗರ ಮನಸೆಳೆವ ಹಕ್ಕಿಗಳು

ಪ್ರತಿವರ್ಷ ಸಾವಿರಾರು ಕಿಲೋಮೀಟರ್ ಹಾರಾಡುತ್ತ ವಲಸೆ ಹೋಗುತ್ತವೆ.. ಹೆಚ್ಚಾಗಿ ಈ ಪಕ್ಷಿಗಳು ಹೀಗೆ ಗುಂಪು ಗುಂಪಾಗಿ ವಲಸೆ ಬಂದು ಕೆಲ ತಿಂಗಳುಗಳು ಇದ್ದು ವಾಪಾಸ್ಸಾಗುತ್ತವೆ. ಇನ್ನೂ ಈ ಪಕ್ಷಗಳ ಕಲರವ ತುಂಟಾಟ ನೋಡಲು ಸಾಕಷ್ಟು ಪ್ರವಾಸಿಗರು ಈ ಪ್ರದೇಶಕ್ಕೆ ಬರುತ್ತಿದ್ದಾರೆ...

ಇದನ್ನೂ ಓದಿ: Golden Taxi: ಇಲ್ಲಿ ನೋಡ್ರೀ ಚಿನ್ನದ ಟ್ಯಾಕ್ಸಿ! ಇದ್ರಲ್ಲಿ ಒಂದ್ ರೈಡ್ ಹೋಗ್ಬೇಕಾ, ಜಸ್ಟ್ 7 ಲಕ್ಷ ಕೊಡಿ!

ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿಯ ಮೇಲೆ ಮನುಷ್ಯನ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ಈ ರೀತಿಯ ಬಾತುಗಳು ವಿನಾಶದತ್ತ ಸಾಗುತ್ತಿವೆ' ಎಂಬ  ಕಳವಳ ಕೂಡ ಇದೆ. ಒಟ್ಟಾರೆಯಾಗಿ ವಿದೇಶಿ ಅಥಿತಿಗಳು ತಮ್ಮ ಬಣ್ಣ ಬಣ್ಣದ ಮೈ ಮಾಟದ ಮೂಲಕ, ತುಂಟಾಟಗಳ ಮೂಲಕ ಜನರ ಮನಸ್ಸನ್ನ ಕದಿಯುತ್ತಿವೆ..
Published by:Annappa Achari
First published: