Udupi; ಬೆಳಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಮಧ್ಯಾಹ್ನದ ಬಳಿಕ ಕೂಲಿ: ಇದು ರಾಜ್ಯದ ಮಹಿಳೆಯ ಪರಿಶ್ರಮದ ಕತೆ..!

ವಲಸೆ ಬಂದ ಮರಿಯಪ್ಪ ಹಾಗೂ ಭೀಮವ್ವ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಭೀಮವ್ವನ ಹಿರಿಯ ಮಗ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಹೆಮ್ಮೆಯ ಸೈನಿಕ. ಉಡುಪಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡಿದ ನಂತರ ತಲ್ಲೂರಿಗೆ ಬಂದಿದ್ದ ದಂಪತಿ ಕೆಲ ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ.

ಭೀಮವ್ವ

ಭೀಮವ್ವ

  • Share this:
ಪುರುಷರು (Men) ಮನೆ ಹೊರಗೆ ಕೆಲಸ ಮಾಡಬೇಕು; ಮಹಿಳೆ (Women) ಮನೆಯಲ್ಲೇ ಕೆಲಸ ಮಾಡಬೇಕು ಎಂಬುದೆಲ್ಲ ಈಗ ಹಳೆಯ ಮಾತು. ಮಹಿಳೆ ಛಲದಿಂದ ಪರಿಶ್ರಮ ಪಟ್ಟರೆ ಏನನ್ನಾದರೂ ಸಾಧಿಸಬಹುದೆಂಬುದನ್ನು ಸತ್ಯವನ್ನಾಗಿಸಿದ್ದಾರೆ ಈಕೆ. ಇವರು ದಿನಗೂಲಿ ಕೆಲಸ (Daily Wages) ಮಾಡುವ ಮಹಿಳೆ. ಆದರೀಗ, ಗ್ರಾಮ ಪಂಚಾಯಿತಿ(Gram Panchayat)ಯೊಂದರ ಅಧ್ಯಕ್ಷೆ. ಇದು ಎಲ್ಲೋ ನಡೆದಿರುವ ಘಟನೆಯಲ್ಲ. ನಮ್ಮ ರಾಜ್ಯದಲ್ಲೇ. ಕರ್ನಾಟಕದ ಉಡುಪಿ ಜಿಲ್ಲೆಯ ತಲ್ಲೂರಿನ (Tallur, Udupi) ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಬಗ್ಗೆ ನಾವು ಹೇಳಲು ಹೊರಟಿರುವ ಈ ಸ್ಟೋರಿಯನ್ನು ಮಿಸ್‌ ಮಾಡದೆ ಪೂರ್ತಿಯಾಗಿ ಓದಿ.

27 ವರ್ಷಗಳ ಹಿಂದೆ ಬರಗಾಲದ ಹಿನ್ನೆಲೆಯಲ್ಲಿ ತಮ್ಮ 2 ಎಕರೆ ಜಮೀನಿನಲ್ಲಿ ಏನೂ ಇಳುವರಿ ಸಾಧ್ಯವಾಗದೆ ಭೀಮವ್ವ ಮತ್ತು ಅವರ ಪತಿ ಮರಿಯಪ್ಪ ಅವರು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಕಟಗೇರಿಯಿಂದ ಉಡುಪಿ ಜಿಲ್ಲೆಯ ತಲ್ಲೂರಿಗೆ ಕೆಲಸ ಅರಸಿ ವಲಸೆ ಬಂದರು.

ದಿನಗೂಲಿ ಕೆಲಸಗಾರರಾಗಿ ತಮ್ಮ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಆ ಮಹಿಳೆ ಅಂತಿಮವಾಗಿ ತಮ್ಮ ಎಲ್ಲಾ ಶ್ರಮದ ಲಾಭವನ್ನು ಪಡೆಯಬಹುದು. ಯಾಕೆಂದರೆ, ಈಗ ಅದೇ ಮಹಿಳೆ ಅಂದರೆ ನಮ್ಮ ಭೀಮವ್ವ ಅದೇ ಉಡುಪಿ ಜಿಲ್ಲೆಯ ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ.

ಇದನ್ನೂ ಓದಿ:  ಯಾರದೋ ಮಕ್ಕಳಿಗೆ 12 ಲೀಟರ್ ಎದೆಹಾಲು ದಾನ ಮಾಡಿದ ಮಹಾತಾಯಿ!

ತಮಗಿರುವ ಸವಾಲಿನ ಬಗ್ಗೆ ಭೀಮವ್ವ ಹೇಳೋದೇನು?

ಆ ದಿನಗೂಲಿ ಕೆಲಸ ಮಾಡುವ ಮಹಿಳೆ ಪಟ್ಟಿರುವ ಕಷ್ಟಗಳು ಒಂದೊಂದಲ್ಲ. ಅದನ್ನು ಅವರ ಮಾತುಗಳಲ್ಲಿ ನೀವೇ ಕೇಳಿ. “ನನ್ನ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಪಡೆಯಲು ನಾನು ತುಂಬಾ ಕಷ್ಟಪಟ್ಟಿದ್ದೇನೆ. ಸರ್ಕಾರಿ ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಮಾಡಲು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ.

ಈಗ ನಾನು ವಿಷಯಗಳನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದೇನೆ. ಇದು ನನಗೂ ಆಶ್ಚರ್ಯವನ್ನುಂಟು ಮಾಡಿದೆ, ಜನರು ತಮ್ಮ ಕೆಲಸವನ್ನು ಸುಲಭವಾಗಿ ಮಾಡಲು ಮತ್ತು ಎಲ್ಲಾ ಸೌಲಭ್ಯಗಳನ್ನು ನ್ಯಾಯಯುತವಾಗಿ ವಿತರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ’’ ಎಂದು ಭೀಮವ್ವ ತಾವು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮಾಡುತ್ತಿರುವ ಕೆಲಸದ ಬಗ್ಗೆ, ತಮಗಿರುವ ಸವಾಲಿನ ಬಗ್ಗೆ ನ್ಯೂಸ್‌ 18ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈಗಲೂ ಕೂಲಿ ಕೆಲಸ ಮಾಡುವ ಭೀಮವ್ವ..!

ಇನ್ನು, ಭೀಮವ್ವ 27 ವರ್ಷಗಳಿಂದ ಪಟ್ಟ ಶ್ರಮಕ್ಕೂ ಈಗ ತಕ್ಕ ಪ್ರತಿಫಲ ಸಿಕ್ಕಿದೆ. ಈಗ ಆಕೆ ಆರಾಮಾಗಿರಬೋದು ಅಂತ ಅಂದ್ಕೊಂಡ್ರೆ ಅದು ನಿಮ್ಮ ಭ್ರಮೆ. ಏಕೆಂದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಬಳಿಕವೂ ಭೀಮವ್ವ ಕೂಲಿ ಕೆಲಸವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:  Puttur: ಕೊರೋನಾ ರೋಗಿಗಳಿಗಾಗಿ ಇಡೀ ಆಸ್ಪತ್ರೆಯನ್ನೇ ನೀಡಿದ ವೈದ್ಯೆ; ಪುತ್ತೂರಿನ ಗಿರಿಜಾ ಕ್ಲಿನಿಕ್ ಕೋವಿಡ್ ಸೆಂಟರ್ ಆಗಿ ಮಾರ್ಪಾಡು

ಹೌದು, ಬೆಳಗ್ಗೆ ಪಂಚಾಯತ್ ಕಚೇರಿಗೆ ಭೇಟಿ ನೀಡುವ ಭೀಮವ್ವ, ದಿನದ ದ್ವಿತೀಯಾರ್ಧದಲ್ಲಿ ಅಂದರೆ ಮಧ್ಯಾಹ್ನದ ಬಳಿಕ ಮತ್ತೆ ಕೂಲಿ ಕೆಲಸ ಮಾಡುವುದನ್ನು ಬಿಟ್ಟಿಲ್ಲ.

ಇನ್ನು, ಭೀಮವ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಬಳಿಕ ಆ ಗ್ರಾಮದ ಸ್ಥಿತಿಯೇ ಬದಲಾಗಿದೆಯಂತೆ. ಈ ಬಗ್ಗೆ ತಲ್ಲೂರು ಗ್ರಾಮದ ನಿವಾಸಿಯ ಪ್ರತಿಕ್ರಿಯೆ ಹೀಗಿದೆ ನೋಡಿ..

“ಗ್ರಾಮದಲ್ಲಿ ಯಾರೂ ಈಗ ಅಧ್ಯಕ್ಷರು ತಮ್ಮ ವಿನಂತಿಯನ್ನು ಅಂಗೀಕರಿಸುತ್ತಾರೆ ಎಂದು ಕಾಯುವುದಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಮಗಾರಿ ಅಷ್ಟು ತ್ವರಿತವಾಗಿದೆ. ಮೇಲಾಗಿ, ಅವರು ನಮಗೆಲ್ಲರಿಗೂ ತಿಳಿದಿರುವ ಹಳೆಯ ಭೀಮವ್ವ. ಈ ಅಧ್ಯಕ್ಷ ಸ್ಥಾನವು ಅವಳನ್ನು ಸ್ವಲ್ಪವೂ ಬದಲಾಯಿಸಿಲ್ಲ” ಎಂದು ಗ್ರಾಮದ ನಿವಾಸಿ ಶ್ಯಾಮಲಾ ಹೇಳಿದ್ದಾರೆ.

ಭೀಮವ್ವನ ಮಗ ದೇಶ ಕಾಯುವ ಸೈನಿಕ..!

ವಲಸೆ ಬಂದ ಮರಿಯಪ್ಪ ಹಾಗೂ ಭೀಮವ್ವ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಭೀಮವ್ವನ ಹಿರಿಯ ಮಗ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ ಹೆಮ್ಮೆಯ ಸೈನಿಕ. ಉಡುಪಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡಿದ ನಂತರ ತಲ್ಲೂರಿಗೆ ಬಂದಿದ್ದ ದಂಪತಿ ಕೆಲ ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ.

ತನ್ನ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದಾಗಿ ಭೀಮವ್ವ ಶೀಘ್ರದಲ್ಲೇ ಬೇಡಿಕೆಯ ಕೆಲಸಗಾರರಾದರು. 2020ರ ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾದಾಗ ಪರಿಶಿಷ್ಟ ಪಂಗಡದ ಅಭ್ಯರ್ಥಿಯೇ ಅಧ್ಯಕ್ಷರಾಗಬೇಕೆಂದು ಮೀಸಲು ಸ್ಥಾನ ನಿಗದಿಯಾಯ್ತು.

ಆ ವೇಳೆ ತಲ್ಲೂರು ಗ್ರಾಮದ ನಿವಾಸಿಯೊಬ್ಬರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಭೀಮವ್ವ ಅವರ ಹೆಸರನ್ನು ಸೂಚಿಸಿದ್ದು ಆ ಜಮೀನಿನ ಮಾಲೀಕ ಕರಣ್‌. ಚುನಾವಣಾ ಅಖಾಡಕ್ಕೆ ಇಳಿಯುವಂತೆ ಭೀಮವ್ವರನ್ನು ಒಪ್ಪಿಸಿದ್ದರು. ಸಾಕಷ್ಟು ಚಿಂತನೆ ಮಾಡಿ ಭೀಮವ್ವ ಇದಕ್ಕೆ ಒಪ್ಪಿಗೆ ನೀಡಿದ್ದರು. ಬಳಿಕ, ಆಕೆ 162 ಮತಗಳ ಅಂತರದಿಂದ ಎದುರಾಳಿ ಅಭ್ಯರ್ಥಿ ಎದುರು ಗೆದ್ದು ಉಡುಪಿ ಜಿಲ್ಲೆಯ ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದರು.
Published by:Mahmadrafik K
First published: