ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಎರಡು ದಿನ ಬಿಸಿಯೂಟ ತಯಾರಕರ ಪ್ರತಿಭಟನೆ

ಬಿಸಿಯೂಟ ತಯಾರಕರು ಎರಡು ದಿನಗಳ ಕಾಲ ಹೋರಾಟ ನಡೆಸುತ್ತಿರುವುದರಿಂದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲದಂತೆ ಆಗಿದೆ. ಶಾಲೆಯಲ್ಲಿ ಅಡುಗೆ ತಯಾರಕರು ಹಾಗೂ ಸಹಾಯಕರು ಕೂಡ ಗೈರಾಗುತ್ತಿರುವ ಹಿನ್ನೆಲೆ ಮಕ್ಕಳು ಎರಡು ದಿನ ಮನೆ ಊಟಕ್ಕೆ ಅವಲಂಬಿತರಾಗಬೇಕಿದೆ.

ಪ್ರತಿಭಟನಾಕಾರರು

ಪ್ರತಿಭಟನಾಕಾರರು

  • Share this:
ಬೆಂಗಳೂರು(ಜ. 21): ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಸಿಐಟಿಯುಸಿ ಸಂಘಟನೆ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1 ಲಕ್ಷ 18 ಸಾವಿರ ಮಕ್ಕಳು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾವಣೆಯಾಗಿ, 11 ಗಂಟೆಗೆ ಫ್ರೀಡಂ ಪಾರ್ಕ್ ವರೆಗೆ ಬೃಹತ್  ಮೆರವಣಿಗೆ ನಡೆಸಿದ್ದು, ತಮ್ಮ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸಲಿದ್ದಾರೆ.

ತಮ್ಮ ಬೇಡಿಕೆ ಈಡೇರಿಕೆಗಾಗಿ  ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಇನ್ನು ಎರಡು ದಿನಗಳ ಹೋರಾಟಕ್ಕೆ ಬೇಕಾಗುವ ಉಪಹಾರ ಹಾಗೂ ಹಾಸಿಗೆ ಹೊದಿಕೆಯನ್ನು ತರಬೇಕು ಎಂದು ಸಂಘಟನೆಯವರು ಕರೆ ನೀಡಿದ ಹಿನ್ನೆಲೆ ತಮ್ಮ ಕೆಲಸ ಬಂದ್​ ಮಾಡಿ ಸಜ್ಜಾಗಿ ಆಗಮಿಸಿದ್ದಾರೆ.

ಮಕ್ಕಳಿಗಿಲ್ಲ ಎರಡು ದಿನ ಊಟ

ಬಿಸಿಯೂಟ ತಯಾರಕರು ಎರಡು ದಿನಗಳ ಕಾಲ ಹೋರಾಟ ನಡೆಸುತ್ತಿರುವುದರಿಂದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲದಂತೆ ಆಗಿದೆ. ಶಾಲೆಯಲ್ಲಿ ಅಡುಗೆ ತಯಾರಕರು ಹಾಗೂ ಸಹಾಯಕರು ಕೂಡ ಗೈರಾಗುತ್ತಿರುವ ಹಿನ್ನೆಲೆ ಮಕ್ಕಳು ಎರಡು ದಿನ ಮನೆ ಊಟಕ್ಕೆ ಅವಲಂಬಿತರಾಗಬೇಕಿದೆ.

ಬೇಡಿಕೆ ಏನು?

ಬಿಸಿಯೂಟ ತಯಾರಿಕರಿಗೆ ಸದ್ಯ ರಾಜ್ಯ ಸರ್ಕಾರದಿಂದ ಶೇ 75 ರಷ್ಟು ಹಣ ಹಾಗೂ ಕೇಂದ್ರದಿಂದ ಶೇ.25 ರಷ್ಟು ಹಣ ನೀಡಲಾಗುತ್ತಿದ್ದು, ತಿಂಗಳಿಗೆ 2.700 ರೂ ವೇತನ ಪಡೆಯುತ್ತಿದ್ದಾರೆ. ಬಿಸಿಯೂಟ ತಯಾರಿಕೆಯಾದರೂ ಅವರನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ಕೂಲ್ ಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ.

ಇದನ್ನು ಓದಿ: ನಾಯಿ ಬೊಗಳದಂತೆ ಮಾಡಿ ಕುರಿಗಳನ್ನು ಕಳ್ಳತನ ಮಾಡಿದ ಖದೀಮರು

ಈ ಹಿನ್ನೆಲೆಯಲ್ಲಿ ತಮಗೆ ಕನಿಷ್ಠ ವೇತನ ಜಾರಿಯಾಗಬೇಕು. ಜೊತೆಗೆ ಸಂಸ್ಥೆಗಳಿಗೆ ಬಿಸಿಯೂಟ ಪೂರೈಕೆಯನ್ನ ವಹಿಸಬಾರದು. ಉದ್ಯೋಗಕ್ಕೆ ಭದ್ರತೆ ಕೊಡಬೇಕು. ಪ್ರತಿ ತಿಂಗಳು 5ನೇ ತಾರೀಕು ಸಂಬಳ ಕೊಡಬೇಕು. ಕಾರ್ಮಿಕರು ಅಂತ ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ಸೇರಿಸಬೇಕು ಎಂಬುದು ಇವರ ಬೇಡಿಕೆ.
First published: