ಗ್ರಾಮೀಣ ಭಾಗದ ಜನರ ಜೀವನಾಡಿ ಕೆರೆಗಳಿಗೆ ಕಾಯಕಲ್ಪ ನೀಡುತ್ತಿದೆ ನರೇಗಾ ಯೋಜನೆ..!

ಜಿಲ್ಲಾ ಪಂಚಾಯ್ತಿ ಸಿಇಓ ಮೊಹಮ್ಮದ ರೋಶನ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕೆರೆ ಹೂಳೆತ್ತೋ ಕಾಮಗಾರಿಯಲ್ಲಿ ಶ್ರಮದಾನ ಮಾಡೋ ಮೂಲಕ ದುಡಿಯೋ ಕಾರ್ಮಿಕರಿಗೆ ಉತ್ತೇಜನ ನೀಡ್ತಿದ್ದಾರೆ.

ಕೆರೆ

ಕೆರೆ

 • Share this:
  ಹಾವೇರಿ(ಏ.19): ಕೆರೆಗಳು ಗ್ರಾಮೀಣ ಪ್ರದೇಶದ ಜನರ ಜಲಮೂಲಗಳು. ಕೆಲ ಕೆರೆಗಳು ಜಾನುವಾರುಗಳಿಗೆ ಕುಡಿಯೋ ನೀರಿನ ಮೂಲವಾಗಿದ್ರೆ, ಕೆಲವು ಕೆರೆಗಳು ರೈತರ ನೀರಾವರಿ ಕೃಷಿಗೆ ಅನುಕೂಲ ಆಗಿವೆ. ಆದ್ರೆ ಅದೆಷ್ಟೋ ಕೆರೆಗಳು ಹೂಳು ತುಂಬ್ಕೊಂಡು, ಒತ್ತುವರಿಯಾಗಿ ಕೆರೆಗಳಲ್ಲಿ ನೀರು ಅಷ್ಟಾಗಿ ನಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ ಹಾವೇರಿ ಜಿಲ್ಲೆಯಲ್ಲಿ ಕೆರೆಗಳಿಗೆ ಕಾಯಕಲ್ಪ ನೀಡೋ ಕೆಲಸ ಶುರುವಾಗಿದೆ.

  ಜಿಲ್ಲೆ ಅಂದ್ರೆ ಅದು ಕೃಷಿ ಪ್ರಧಾನವಾದ ಜಿಲ್ಲೆ. ಜಿಲ್ಲೆಯಲ್ಲಿ ಬಹುತೇಕ ರೈತಾಪಿ ವರ್ಗದ ಜನರೇ ವಾಸವಾಗಿದ್ದಾರೆ. ಹೀಗಾಗಿ ಬಹುತೇಕ ರೈತರಿಗೆ‌ ಕೆರೆಗಳು ನೀರಿನ ಮೂಲವಾಗಿವೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಒಂದು, ಎರಡು ಕೆರೆಗಳಿವೆ. ಆದ್ರೆ ಬಹುತೇಕ ಕೆರೆಗಳಿಗೆ ಕಾಯಕಲ್ಪ ನೀಡೋದು ಅಗತ್ಯವಾಗಿತ್ತು. ಯಾಕಂದ್ರೆ ಕೆಲವು ಕೆರೆಗಳಲ್ಲಿ ಮುಳ್ಳು ಕಂಟೆಗಳು ಬೆಳೆದು ನಿಂತಿವೆ. ಕೆಲವೆಡೆ ಕೆರೆಗಳು ಇತ್ತುವರಿಯಾಗಿ ಹೂಳು ತುಂಬಿಕೊಂಡಿವೆ. ಹೀಗಾಗಿ ಜಿಲ್ಲಾ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲಮೂಲಗಳ ರಕ್ಷಣೆಗೆ ಮುಂದಾಗಿದೆ. ಅದ್ರಲ್ಲೂ ಹೆಚ್ಚಾಗಿ ಕೆರೆಗಳಿಗೆ ಕಾಯಕಲ್ಪ ನೀಡೋ ಕೆಲಸ ಮಾಡ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳನ್ನ ಹೂಳತ್ತೋ ಕೆಲಸ ಮಾಡ್ತಿದೆ. ಕೆರೆಗಳಲ್ಲಿ ತುಂಬಿರೋ ಹೂಳು ತೆಗೆದು ಕೆರೆಗಳಿಗೆ ನೀರು ತುಂಬಿಸೋ ಕೆಲಸಕ್ಕೆ ಮುಂದಾಗಿದೆ.  Mewalal Choudhary: ಬಿಹಾರದ ಮಾಜಿ ಸಚಿವ ಮೇವಲಾಲ್ ಚೌಧರಿ ಕೊರೋನಾಗೆ ಬಲಿ

  ಕೆರೆಗಳಿಗೆ ಕಾಯಕಲ್ಪ ನೀಡಿ ಜಿಲ್ಲೆಯಲ್ಲಿ ಹಾದು ಹೋಗಿರೋ ತುಂಗಾ ಮೇಲ್ದಂಡೆ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸೋ ಉದ್ದೇಶವಿದೆ. ಕೆರೆಗಳಲ್ಲಿ ತುಂಬಿರೋ ಹೂಳು ತೆಗೆಯೋದ್ರಿಂದ ಮಳೆಗಾಲದಲ್ಲಿ ಕೆರೆಗೆ ನೀರು ಹರಿದು ಬಂದು ಕೆರೆ ನೀರಿನಿಂದ ತುಂಬಿಕೊಳ್ಳಲಿದೆ. ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳಲ್ಲಿ ಈಗಲೂ ನೀರಿದೆ. ಆದ್ರೆ ಕೆರೆಗಳಲ್ಲಿ ಹೂಳು ತುಂಬ್ಕೊಂಡು, ಗಿಡಗಂಟೆಗಳು ಬೆಳೆದಿರೋದ್ರಿಂದ ಕೆಲವು ಕೆರೆಗಳಲ್ಲಿ ನೀರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹೀಗಾಗಿ ಜಿಲ್ಲಾ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಕೆರೆಗಳಿಗೆ ಕಾಯಕಲ್ಪ ನೀಡೋ ಕೆಲಸ ಮಾಡ್ತಿದೆ. ಇದ್ರಿಂದ ಕೆರೆಗಳಿಗೆ ಕಾಯಕಲ್ಪ ಸಿಗೋದರ ಜೊತೆಗೆ ದುಡಿಯೋ ಕೈಗಳಿಗೆ ಕೆಲಸ‌ ಸಿಗಲಿದೆ.

  ಜಿಲ್ಲಾ ಪಂಚಾಯ್ತಿ ಸಿಇಓ ಮೊಹಮ್ಮದ ರೋಶನ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕೆರೆ ಹೂಳೆತ್ತೋ ಕಾಮಗಾರಿಯಲ್ಲಿ ಶ್ರಮದಾನ ಮಾಡೋ ಮೂಲಕ ದುಡಿಯೋ ಕಾರ್ಮಿಕರಿಗೆ ಉತ್ತೇಜನ ನೀಡ್ತಿದ್ದಾರೆ. ವಾರಕ್ಕೊಮ್ಮೆ ಅಧಿಕಾರಿಗಳು ಶ್ರಮದಾನ ಮಾಡೋ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಪ್ರೋತ್ಸಾಹ ನೀಡೋ ಮೂಲಕ ಜಲಮೂಲಗಳ‌ ಸಂರಕ್ಷಣೆಗೆ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಕೆರೆಗಳಿಗೆ ಕಾಯಕಲ್ಪ ನೀಡೋದ್ರಿಂದ ಜಾನುವಾರುಗಳಿಗೆ ಕುಡಿಯೋಕೆ ನೀರು ಸಿಗೋದರ ಜೊತೆಗೆ ಕೆಲವು ರೈತರಿಗೆ ಕೆರೆಯ ನೀರು ನೀರಾವರಿ ಕೃಷಿಗೆ‌ ಅನುಕೂಲ ಆಗಲಿದೆ.

  ಗ್ರಾಮೀಣ ಪ್ರದೇಶದ ಜನರಿಗೆ ಕೆರೆಗಳೆ ಎಲ್ಲದಕ್ಕೂ ಮೂಲವಾಗಿವೆ. ಕೆರೆಗಳಲ್ಲಿ ನೀರು ಇರದಿದ್ರೆ ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲಿಲ್ಲದ ಸಮಸ್ಯೆ ಆಗುತ್ತದೆ. ಕೆರೆಯಲ್ಲಿ ನೀರಿಲ್ಲದಿದ್ರೆ ಜಾನುವಾರುಗಳಂತೂ ಕುಡಿಯೋ‌ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕೆರೆಗಳ ಜೊತೆಗೆ ಕೆಲವು ಕಡೆಗಳಲ್ಲಿ ನೀರಿನ ಮೂಲವಾಗಿರೋ ಹಳ್ಳ,‌ಕಟ್ಟೆಗಳಿಗೂ ಕಾಯಕಲ್ಪ ನೀಡೋದು ಜಿಲ್ಲಾ ಪಂಚಾಯ್ತಿ ಉದ್ದೇಶವಾಗಿದೆ. ಹೀಗಾಗಿ ಜಿಲ್ಲಾ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜಲಮೂಲಗಳ‌ ಸಂರಕ್ಷಣೆಗೆ ಮುಂದಾಗಿರೋದು ಗ್ರಾಮೀಣ ಭಾಗದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

  • ವರದಿ: ಮಂಜುನಾಥ ತಳವಾರ

  Published by:Latha CG
  First published: