Anekal: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಮಿತಿಮೀರಿದ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ

ನೆರಿಗಾ ಗ್ರಾಮದಲ್ಲಿ ಅಸಲು ಸಮೇತ ಮೀಟರ್ ಬಡ್ಡಿ ನೀಡಲಿಲ್ಲ ಎಂದು ಮನೆಗೆ ನುಗ್ಗಿದ ದಂಧೆಕೋರರು ಇಬ್ಬರು ಸಹೋದರಿಯರ ಜೊತೆ ಅಮಾನುಷವಾಗಿ ವರ್ತಿಸಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್ : ರಾಜ್ಯದಲ್ಲಿ ಮಾನವೀಯತೆಯ ಮರೆಯಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಮೀಟರ್ ಬಡ್ಡಿ (Meter Baddi) ವಸೂಲಿ ಮಾಡುವ ಭರದಲ್ಲಿ ಕಿರಾತಕರು ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ (undress) ಮಾರಣಾಂತಿಕವಾಗಿ ಹಲ್ಲೆ (Assault) ನಡೆಸಿರುವ ಅಮಾನುಷ ಘಟನೆ ನಡೆದಿದ್ದು, ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ.  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ (Anekal Taluk) ನೆರಿಗಾ ಗ್ರಾಮದಲ್ಲಿ ಅಸಲು ಸಮೇತ ಮೀಟರ್ ಬಡ್ಡಿ ನೀಡಲಿಲ್ಲ ಎಂದು ಮನೆಗೆ ನುಗ್ಗಿದ ದಂಧೆಕೋರರು ಇಬ್ಬರು ಸಹೋದರಿಯರ ಮೇಲೆ ಅಮಾನುಷವಾಗಿ ವರ್ತಿಸಿರುವ ಘಟನೆ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ದೌರ್ಜನ್ಯಕ್ಕೆ ಒಳಗಾದವರು. ಇದೇ ಗ್ರಾಮದ ವಾಸಿಗಳಾದ ರಾಮಕೃಷ್ಣಾರೆಡ್ಡಿ, ಆತನ ಪತ್ನಿ ಇಂದ್ರಮ್ಮ, ಮಗ ಸುನೀಲ್ ಕುಮಾರ್ ಮತ್ತು ಇತರರು ಸಾರ್ವಜನಿಕವಾಗಿ ಪೈಶಾಚಿಕ ಕೃತ್ಯವೆಸಗಿ ಪೊಲೀಸರ ಅತಿಥಿಯಾಗಿದ್ದಾರೆ.

ಮೀಟರ್ ಬಡ್ಡಿ ಕರಾಳ ದಂಧೆ 

ಮೂರ್ನಾಲ್ಕು ವರ್ಷಗಳ ಹಿಂದೆ ಸುಬ್ಬಾರೆಡ್ಡಿ ಕುಟುಂಬ ರಾಮಕೃಷ್ಣಾರೆಡ್ಡಿ ಬಳಿ  30% ಮೀಟರ್ ಬಡ್ಡಿಗೆ ಒಂದು ಲಕ್ಷ ಹಣ ಸಾಲವಾಗಿ ಪಡೆದುಕೊಂಡಿದ್ದಾರೆ. ಅಂದಿನಿಂದ ಕಷ್ಟಪಟ್ಟು 30% ಬಡ್ಡಿಯನ್ನು ಪಾವತಿಸಿದ್ದಾರೆ. ಆದ್ರೆ ಕೊರೊನಾ ಬಿಗಡಾಯಿಸಿದ ಬಳಿಕ ಬಡ್ಡಿ ಕಟ್ಟಲಾಗದೆ ಮೀಟರ್ ಬಡ್ಡಿ ಸುಸ್ತಿ ಬಡ್ಡಿಯಾಗಿ ಲಕ್ಷ ಲಕ್ಷ ನೀಡಬೇಕು ಎಂದು ಆಗ್ಗಿಂದಾಗ್ಗೆ ರಾಮಕೃಷ್ಣಾರೆಡ್ಡಿ ಕುಟುಂಬದವರು ಕಿರುಕುಳ ನೀಡಿದ್ದಾರೆ. ಪ್ರಕರಣ ಸರ್ಜಾಪುರ ಠಾಣೆ ಮೆಟ್ಟಿಲೇರಿದ್ದು, ರಾಜಿ ಪಂಚಾಯ್ತಿಯಾಗಿ ಬಡ್ಡಿ, ಮೀಟರ್ ಬಡ್ಡಿ, ಸುಸ್ತಿ ಬಡ್ಡಿ ಸೇರಿ  ಒಂದು ಲಕ್ಷಕ್ಕೆ ಹನ್ನೊಂದು ಲಕ್ಷ  ಅಂತಿಮಗೊಳಿಸಿದ್ದಾರೆ ಎಂದು ಹಲ್ಲೆಗೊಳಗಾದ ಶಾಂತಿ ಪ್ರಿಯ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಪರಪುರುಷನ ಜೊತೆ 4 ಮಕ್ಕಳ ತಾಯಿ ಪರಾರಿ; ಇಬ್ಬರು ಮಕ್ಕಳನ್ನು ಕೊಂದು ಪೊಲೀಸರಿಗೆ ಶರಣಾದ ತಂದೆ!

ಸುಬ್ಬಾರೆಡ್ಡಿ ಕುಟುಂಬಕ್ಕೆ ಕೊಲೆ ಬೆದರಿಕೆ

ಇನ್ನೂ ಪೊಲೀಸ್ ಠಾಣೆಯಲ್ಲಿ ರಾಜಿಯಾದ ಬಳಿಕವು ರಾಮಕೃಷ್ಣಾರೆಡ್ಡಿ ಮತ್ತು ಮಗ ಸುನೀಲ್ ಕುಮಾರ್ ಸುಬ್ಬಾರೆಡ್ಡಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕುತ್ತಿದ್ದ ಮತ್ತು ಸಾರ್ವಜನಿಕವಾಗಿ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ಮುಂದುವರಿದ ಭಾಗವಾಗಿ ಕಳೆದ ಭಾನುವಾರ ಏಕಾಏಕಿ ಮನೆಗೆ ನುಗ್ಗಿದ ರಾಮಕೃಷ್ಣಾರೆಡ್ಡಿ, ಪತ್ನಿ ಇಂದ್ರಮ್ಮ ಮತ್ತು ಮಗ ಸುನೀಲ್ ಮತ್ತು ಇತರರು ಮೊದಲು ಸಿಕ್ಕ ಶಾಂತಿ ಪ್ರಿಯ ಎಂಬ ಮಹಿಳೆ ಮೇಲೆ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ತಂಗಿಯನ್ನು ಬಿಡಿಸಲು ಬಂದ ಭಾನುಪ್ರಿಯ ಬಟ್ಟೆಗಳನ್ನು ಹರಿದು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ ಅಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಅಕ್ಕಪಕ್ಕದ ಮನೆಯವರು ಸಾಥ್ ನೀಡಿದ್ದು, ನಾಗರೀಕ ತಲೆ ತಗ್ಗಿಸುವಂತಾಗಿದೆ ಎಂದು ದೌರ್ಜನ್ಯಕ್ಕೊಳಗಾದ ಮಹಿಳೆ ಭಾನು ಪ್ರಿಯ ತಿಳಿಸಿದ್ದಾರೆ.

ಇದನ್ನೂ ಓದಿ: Murder: ಸಂಧಾನಕ್ಕೆ ಕರೆಸಿ ಮಾವನಿಗೆ ಬೆಂಕಿ ಇಟ್ಟ ಪಾಪಿ ಅಳಿಯ! ನೋಡ ನೋಡುತ್ತಲೇ ಇಬ್ಬರ ಸಜೀವ ದಹನ

ಒಟ್ನಲ್ಲಿ ರಾಜ್ಯ ರಾಜಧಾನಿಗೆ ಅಣತಿ ದೂರದಲ್ಲಿ ಹಾಡುಹಗಲೇ ಅಮಾಯಕ ಮಹಿಳೆಯರ ಮೇಲೆ ಇಂತಹ ಪೈಶಾಚಿಕ ಕೃತ್ಯ ನಡೆಸಿರುವುದು ಗಮನಿಸಿದರೆ ಪೊಲೀಸ್ ವ್ಯವಸ್ಥೆ ಬಗ್ಗೆ ಅನುಮಾನ ಆಕ್ರೋಶ ಮೂಡದಿರದು. ಅದ್ರಲ್ಲು ಮಹಿಳೆಯರು ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ ಸಮಾಜದಲ್ಲಿ ಮಾನವೀಯತೆ ಮಾಯವಾಗುತ್ತಿದೆ ಎಂದೆನಿಸುತ್ತದೆ. ಹಾಗಾಗಿ ಪೊಲೀಸರು ನೆಪಮಾತ್ರಕ್ಕೆ ರಾಮಕೃಷ್ಣಾರೆಡ್ಡಿ ಮತ್ತು ಆತನ ಪುತ್ರ ಸುನೀಲ್ ನನ್ನು ಬಂಧಿಸುದರೆ ಸಾಲದು ಬಡ್ಡಿ ಬಂಗಾರಮ ಇಂದ್ರಮ್ಮ ಮತ್ತು ಇತರರನ್ನು ಬಂಧಿಸಿ ಜೈಲಿಗಟ್ಟಬೇಕಿದೆ.
Published by:Kavya V
First published: