ಗಡಿ ವಿವಾದ: ಬೆಳಗಾವಿಗೆ ಶರದ್​​ ಪವಾರ್​​​, ಸಂಜಯ್​​ ರಾವತ್​​ ಕರೆಸಿ ಸಮಾವೇಶ ನಡೆಸಲು ಮುಂದಾದ ಎಂಇಎಸ್​​​

ಎಂಇಎಸ್ ಮುಖಂಡರು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದಿಟ್ಟುಕೊಂಡು ಸಂಘಟನೆ ಆರಂಭಿಸಿದ್ದಾರೆ. ಇನ್ನೂ ಎಂಇಎಸ್​​ಗೆ ಟಕ್ಕರ್ ನೀಡಲು ಬೆಳಗಾವಿಯಲ್ಲಿ ಗಡಿ ಕನ್ನಡಿಗರ ಸಮಾವೇಶ ನಡೆಸುತ್ತೇವೆ ಎಂದು ಕರವೇ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡ ಹೇಳಿದ್ದಾರೆ.

news18-kannada
Updated:January 2, 2020, 3:36 PM IST
ಗಡಿ ವಿವಾದ: ಬೆಳಗಾವಿಗೆ ಶರದ್​​ ಪವಾರ್​​​, ಸಂಜಯ್​​ ರಾವತ್​​ ಕರೆಸಿ ಸಮಾವೇಶ ನಡೆಸಲು ಮುಂದಾದ ಎಂಇಎಸ್​​​
ಶರದ್​ ಪವಾರ್​-ಸಂಜಯ್​ ರಾವತ್​​
  • Share this:
ಬೆಳಗಾವಿ (ಜ.02) ಬೆಳಗಾವಿ ಗಡಿ ವಿಚಾರವಾಗಿ ಶಿವಸೇನೆ, ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅನಗತ್ಯ ಕ್ಯಾತೆಯನ್ನು ಆರಂಭಿಸಿವೆ. ಮಹಾರಾಷ್ಟ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಶಿವಸೇನೆ ಮರಾಠಿಗರನ್ನು ಹಿಡಿದಿಡಲು ಗಡಿ ವಿಚಾವರನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಠಾಕ್ರೆ ಸಂಪುಟ ವಿಸ್ತರಣೆಯ ಬಳಿಕ ಮಿತ್ರ ಪಕ್ಷಗಳಲ್ಲಿ ಒಡಕು ಮೂಡಿದೆ. ಮಹಾರಾಷ್ಟ್ರದಲ್ಲಿ ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಗಡಿ ವಿಚಾರವನ್ನೇ ಅಸ್ತ್ರ ಮಾಡಿಕೊಂಡು ಮರಾಠಿಗರ ಮತ ಸೆಳೆಯಲು ಶಿವಸೇನೆ ಕಸರತ್ತು ಆರಂಭಿಸಿದೆ. ಶಿವಸೇನೆ ಬೆಂಬಲದಿಂದ ಎಂಇಎಸ್ ಸಹ ಬೆಳಗಾವಿಯಲ್ಲಿ ಆಕ್ಟಿವ್ ಆಗಿದೆ. ಇದೇ ತಿಂಗಳ ಕೊನೆಯಲ್ಲಿ ಎನ್ ಸಿ ಪಿ ನಾಯಕ ಶರದ್​​​​ ಪವಾರ್, ಶಿವಸೇನೆ ಮುಖಂಡ ಸಂಜಯ ರಾವತ್ ಕರೆಸಿ ಸಮಾವೇಶ  ಮಾಡಲು ಸಿದ್ದತೆಯನ್ನು ಆರಂಭಿಸಿದೆ.

ಈಗಾಗಲೇ ಈ ಬಗ್ಗೆ ಮಹಾರಾಷ್ಟ್ರದ ಹಲವು ನಾಯಕರ ಜತೆಗೆ ಎಂಇಎಸ್ ಮುಖಂಡರು ಚರ್ಚೆ ನಡೆಸಿದ್ದಾರೆ. ಮಹಾರಾಷ್ಟ್ರದ ಸಚಿವರು, ಶಾಸಕರು ಬೆಳಗಾವಿಗೆ ಬಂದು ಈ ಬಗ್ಗೆ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸಮಾವೇಶದ ಬಗ್ಗೆ ಎಂಇಎಸ್ ನಗರ ಘಟಕದ ಅಧ್ಯಕ್ಷ ದೀಪಕ ದಳವಿ ಮಾತನಾಡಿದ್ದು, "ನಾವು ಈಗಾಗಲೇ ಎನ್ ಸಿಪಿ ಅಧ್ಯಕ್ಷ ಶರದ್​​​​​​​​ ಪವಾರ್​​​ಗೆ ಆಹ್ವಾನ ನೀಡಿದ್ದೇವೆ. ಶೀಘ್ರದಲ್ಲಿ ಅವರು ಇಲ್ಲಿಗೆ ಬರಲಿದ್ದಾರೆ," ಎಂದು ಖಚಿತವಾಗಿ ಹೇಳಿದ್ದಾರೆ.

ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರೊಲ್ಲ; ಶಿವಸೇನೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ

ಗಡಿ ವಿಚಾರವಾಗಿ ಎರಡು ರಾಜ್ಯಗಳ ನಡುವೆ ವಾಗ್ವಾದ ನಡೆಯುತ್ತಿರುವ ಸಂದರ್ಭದಲ್ಲಿ ಮಹಾ ನಾಯಕರು ಬೆಳಗಾವಿಗೆ ಭೇಟಿ ನೀಡಿ ಸಮಾವೇಶ ನಡೆಸುವ ಬಗ್ಗೆ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ಮಾಹಿತಿ ನೀಡಿದ್ದಾರೆ. "ಈ ಬಗ್ಗೆ ಇನ್ನೂ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ. ಕೇವಲ ಊಹಾಪೋಹಗಳು ಹರಿದಾಡುತ್ತಿವೆ. ಒಂದು ವೇಳೆ ಪವಾರ್ ಬರುವುದು ನಿಗದಿಯಾದರೆ ಕಾನೂನು ಸುವ್ಯವಸ್ಥೆ ಕಾಪಾಡಲು ನಿರ್ಧಾರ ಕೈಗೊಳ್ಳುತ್ತೇವೆ," ಎಂದರು.

ಎಂಇಎಸ್ ಮುಖಂಡರು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದಿಟ್ಟುಕೊಂಡು ಸಂಘಟನೆ ಆರಂಭಿಸಿದ್ದಾರೆ. ಇನ್ನೂ ಎಂಇಎಸ್​​ಗೆ ಟಕ್ಕರ್ ನೀಡಲು ಬೆಳಗಾವಿಯಲ್ಲಿ ಗಡಿ ಕನ್ನಡಿಗರ ಸಮಾವೇಶ ನಡೆಸುತ್ತೇವೆ ಎಂದು ಕರವೇ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡ ಹೇಳಿದ್ದಾರೆ. ಅಷ್ಟೇ ಅಲ್ಲ ಶೀಘ್ರದಲ್ಲಿ ಸಿಎಂ ಭೇಟಿಯಾಗಿ ಬೆಳಗಾವಿಗೆ ಗಡಿ ಉಸ್ತುವಾರಿ ಸಚಿವರ ನೇಮಕ ಮಾಡಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಪ್ರಾಧಿಕಾರ ಬೆಳಗಾವಿಗೆ ಶಿಫ್ಟ್ ಮಾಡುವಂತೆ ಒತ್ತಾಡ ಹಾಕುತ್ತೇವೆ. ಶಿವಸೇನೆ ಅಧಿಕಾರಕ್ಕೆ ಬರೋದೆ ಗಡಿ ವಿಚಾರವನ್ನು ಮುಂದಿಟ್ಟುಕೊಂಡು. ಸಾಮಾಜಿಕ ಕೆಲಸ ಮಾಡಿ ಜನರ ಬಳಿ ಕಾರ್ಯವೈಖರಿ ಹೇಳಿ ಅಧಿಕಾರಕ್ಕ ಬಂದಿಲ್ಲ. ಬೆಳಗಾವಿ ಗಡಿ ವಿಚಾರವನ್ನು ಮುಂದಿಟ್ಟು ಮರಾಠಿಗರನ್ನು ಪ್ರಚೋದಿಸುವುದು. ಗಡಿ ವಿಚಾರನ್ನು ಜೀವಂತವಾಗಿ ಇಡುವುದು ಶಿವಸೇನೆ ಮುಖ್ಯ ಉದ್ದೇಶ ಎಂದು ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ರಕ್ಷಣಾ ಕಾರ್ಯಾಚರಣೆ ವೇಳೆ ಕುಸಿದ ಕಟ್ಟಡ, 14 ಮಂದಿಗೆ ಗಾಯ

ಬೆಳಗಾವಿಗೆ ಮಹಾರಾಷ್ಟ್ರದ ಯಾವುದೇ ನಾಯಕರು ಬರಬಹುದು. ಆದರೇ ಅವರ ನಡುವಳಿಕೆ ಹೇಗೆ ಇರುತ್ತದೆ ಎಂಬುದು ಮುಖ್ಯ. ಶರದ್​​​​​​​​​​ ಪವಾರ್ ಕರ್ನಾಟಕ ವಿರುದ್ದ, ಗಡಿ ವಿಚಾರವನ್ನು ಕೆದಕಿದರೆ ಕರ್ನಾಟಕ ರಕ್ಷಣಾ ವೇದಿಕೆ ಅದೇ ವೇದಿಕೆಯಲ್ಲಿ ತಕ್ಕ ಉತ್ತರ ನೀಡಲಿದೆ ಎಂಬ ಎಚ್ಚರಿಕೆಯನ್ನು ನಾರಾಯಣಗೌಡ ನೀಡಿದ್ದಾರೆ. ಬೆಳಗಾವಿ ಗಡಿ ವಿವಾದ ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಈ ವಿಚಾರವನ್ನು ರಾಜಕೀಯ ಕಾರಣಕ್ಕೆ ಶಿವಸೇನೆ, ಎಂಇಎಸ್ ನಾಯಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಬೆಳಗಾವಿಯಲ್ಲಿ ಮಹಾರಾಷ್ಟ್ರ ನಾಯಕರ ಪುಂಡಾಟಕ್ಕೆ ಬ್ರೇಕ್ ಹಾಕಬೇಕಿದೆ. ಇಲ್ಲವಾದಲ್ಲಿ ಕನ್ನಡಿಗರು, ಮರಾಠಿಗರ ಸೌಹಾರ್ದತೆಗೆ ಬೆಂಕಿ ಹಚ್ಚುವ ಕೆಲಸ ಆಗಲಿದೆ. 

 
First published:January 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ