ನವೆಂಬರ್ 1 ರಂದು ಕರ್ನಾಟಕದಲ್ಲಿ ಕನ್ನಡಿಗರು ರಾಜ್ಯೋತ್ಸವದ ದಿನವೇ ನಾಡದ್ರೋಹಿ ಎಂಇಎಸ್ ಪ್ರತಿವರ್ಷ ಕರಾಳ ದಿನ ಆಚರಿಸಿಕೊಂಡು ಬರುತ್ತಿದ್ದರು. ಆದ್ರೆ ಈ ಬಾರಿ ಕರಾಳ ದಿನಕ್ಕೆ ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಡಿಸಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ಬೆಳಗಾವಿ: ನವೆಂಬರ್ 1 ಕನ್ನಡ ರಾಜ್ಯೋತ್ಸವ (Kannada Rajyotsava) ದಿನ ಎಂಇಎಸ್ (MES) ಕರಾಳ ದಿನಕ್ಕೆ ಅನುಮತಿ ಇಲ್ಲ. ರಾಜ್ಯೋತ್ಸವ ಸಮಿಪಿಸುತ್ತಿ ದ್ದಂತೆಯೇ ನಾಡದ್ರೋಹಿ ಎಂಇಎಸ್ ತನ್ನ ಹಳೆ ಚಾಳಿ ಮುಂದುವರಿಸಿ ಕಿರಿಕ್ ಮಾಡಲು ಸಜ್ಜಾಗಿದೆ. ಆದ್ರೆ ಎಂಇಎಸ್ ಕರಾಳ ದಿನಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ. ಕರಾಳ ದಿನಕ್ಕೆ ಅವಕಾಶ ನೀಡಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಎಂಇಎಸ್ ದೊಡ್ಡ ಶಾಕ್ ಆಗಿದೆ. ಇತ್ತೀಚಿಗೆ ಪಾಲಿಕೆ ಚುನಾವಣೆ ಸೋತಿದ್ದ ನಾಡದ್ರೋಹಿ ಎಂಇಎಸ್ ಬಾಲ್ ಸುಟ್ಟ ಬೆಕ್ಕಿನಂತೆ ಆಗಿದೆ. ಬೆಳಗಾವಿಯಲ್ಲಿ ಎಂಇಎಸ್ ಮುಖಂಡರು ಮತ್ತೆ ಕಿತಾಪತಿ ನಡೆಸಿದ್ದಾರೆ.
ಕರಾಳ ದಿನಾಚರಣೆಗೆ ನಕಾರ:
ನವೆಂಬರ್ 1 ರಂದು ಕರ್ನಾಟಕದಲ್ಲಿ ಕನ್ನಡಿಗರು ರಾಜ್ಯೋತ್ಸವದ ದಿನವೇ ನಾಡದ್ರೋಹಿ ಎಂಇಎಸ್ ಪ್ರತಿವರ್ಷ ಕರಾಳ ದಿನ ಆಚರಿಸಿಕೊಂಡು ಬರುತ್ತಿದ್ದರು. ಆದ್ರೆ ಈ ಬಾರಿ ಕರಾಳ ದಿನಕ್ಕೆ ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಡಿಸಿ ಎಂ.ಜಿ. ಹಿರೇಮಠ ಹೇಳಿದ್ದಾರೆ. ಈಗಾಗಲೇ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಎಂಇಎಸ್ ಕರಾಳ ದಿನಕ್ಕೆ ಸಿದ್ದತೆ ನಡೆಸಿದೆ. ಮಾಡಿದ್ದು ಕನ್ನಡಿಗರ ಆಕ್ರೋಶ ಕಾರಣವಾಗಿದೆ.
ಆದರೆ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ನೇತೃತ್ವದಲ್ಲಿ ನಡೆದ ಕನ್ನಡ ಹೋರಾಟಗಾರ ಜೊತೆಗಿನ ರಾಜ್ಯೋತ್ಸವ ಪೂರ್ವ ಭಾವಿ ಸಭೆಯಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಎಂಇಎಸ್ ಕರಾಳ ದಿನಾಚರಣೆಗೆ ಅವಕಾಶ ನೀಡ ಬೇಡಿ ಅಂತಾ ಕನ್ನಡಿಗರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಡಿಸಿ ಎಂ.ಜಿ.ಹಿರೇಮಠ ಭರವಸೆ ನೀಡಿದ್ದಾರೆ.
ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಪರ ಸಂಘಟನೆಗಳು ಸಿದ್ಧತೆ:
ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಕನ್ನಡ ರಾಜ್ಯೋತ್ಸವ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯೋತ್ಸವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯೋತ್ಸವ ಆಚರಣೆ ನಡೆಯಲಿದೆ. ಇದೇ ಮೊದಲ ಬಾರಿಗೆ ನಾಡದ್ರೋಹಿ ಎಂಇಎಸ್ ಕರಾಳ ದಿನಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಅತ್ತ ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಕರಾಳ ದಿನದ ನೆಪದಲ್ಲಿ ಮತ್ತೆ ಗಡಿ, ಭಾಷಾ ರಾಜಕಾರಣವನ್ನ ಜೀವಂತ ಇಡುವುದಕ್ಕಾಗಿ ಹುನ್ನಾರ ನಡೆಸಿದೆ.ಕರಾಳ ದಿನಕ್ಕೆ ಅನುಮತಿ ಇಲ್ಲ ಎಂದಿದ್ದೆ ತಡ ಎಂಇಎಸ ಪುಂಡರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಪುಂಡಾಟ್ ಪ್ರದರ್ಶನ ಮಾಡಿದೆ.
ಜಿಲ್ಲಾಧಿಕಾರಿ ನಿರ್ಧಾರಕ್ಕೆ ಎಂಇಎಸ್ ಮುಖಂಡ ಶುಭಂ ಶಳಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಕಳೆದ 64 ವರ್ಷಗಳಿಂದ ಕರಾಳ ದಿನ ಆಚರಣೆ ಮಾಡತ್ತಲೇ ಬಂದಿದ್ದೇವೆ. ಗಡಿ ಭಾಗದ ಮರಾಠಿಗರ ಮೇಲೆ ಅನ್ಯಾಯ ಆಗಿದೆ. ಸಂವಿಧಾನದಲ್ಲಿ ತಮ್ಮ ಭಾವನೆ ವ್ಯಕ್ತಿ ಪಡಿಸಲು ಎಲ್ಲರಿಗೂ ಹಕ್ಕಿದೆ. ಕರಾಳ ದಿನ ಆಚರಣೆಯನ್ನು ಶಾಂತ ರೀತಿಯ ಮಾಡಿದ್ದೇವೆ. ನಾವು ಕಪ್ಪು ದಿನ ಆಚರಣೆ ಮಾಡುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ