ನ್ಯಾಯಮೂರ್ತಿಗಳಿಗೆ ಕರ್ನಾಟಕ ಸರ್ಕಾರ ಲಂಚ ಕೊಟ್ಟು ವರದಿ ಮೇಲೆ ಪರಿಣಾಮ ಬೀರಿದೆ ; ಠಾಕೂರು ವಿವಾದಾತ್ಮಕ ಹೇಳಿಕೆ

ನ್ಯಾ. ಮಹಾಜನಗೆ ಬ್ಯಾಗ್, ಬಂಗಲೆಯನ್ನು ಕರ್ನಾಟಕ ಸರ್ಕಾರ ಕೊಟ್ಟಿದೆ. ನ್ಯಾಯಮೂರ್ತಿ ಹಣ ಪಡೆದ್ರೆ ಆಗೋ ಪರಿಣಾಮ ನಮ್ಮ ಮೇಲೆ ಆಗಿದೆ. ಮಹಾಜನ ವರದಿಯಲ್ಲಿ ಸಾಕಷ್ಟು ಗೋಲಮಾಲ್ ಆಗಿದೆ.

news18-kannada
Updated:January 17, 2020, 5:51 PM IST
ನ್ಯಾಯಮೂರ್ತಿಗಳಿಗೆ ಕರ್ನಾಟಕ ಸರ್ಕಾರ ಲಂಚ ಕೊಟ್ಟು ವರದಿ ಮೇಲೆ ಪರಿಣಾಮ ಬೀರಿದೆ ; ಠಾಕೂರು ವಿವಾದಾತ್ಮಕ ಹೇಳಿಕೆ
ಎಂಇಎಸ್ ಮುಖಂಡ ಕಿರಣ್ ಠಾಕೂರ್
  • Share this:
ಬೆಳಗಾವಿ(17): ಗಡಿ ವಿಚಾರದಲ್ಲಿ ನ್ಯಾ. ಮೆಹರ್ ಚಂದ್ ಮಹಾಜನ್ ವರದಿ ಅಂತಿಯ ಎಂದು ಕರ್ನಾಟಕ ಪದೇ ಪದೇ ಹೇಳುತ್ತದೆ. ಆದರೇ ನ್ಯಾ. ಮಹಾಜನ್ ಲಂಚ ಪಡೆದು ಕರ್ನಾಟಕ ಪರ ವರದಿ ನೀಡಿದ್ದಾರೆ. ನ್ಯಾಯಮೂರ್ತಿಗಳಿಗೆ ಕರ್ನಾಟಕ ಸರ್ಕಾರ ಬ್ಯಾಗ್, ಬಂಗಲೆ ಕೊಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಎಂಇಎಸ್ ಮುಖಂಡ ಕಿರಣ್ ಠಾಕೂರ್ ನೀಡಿದ್ದಾರೆ. 

ಬೆಳಗಾವಿಯಲ್ಲಿ ಗಡಿ ವಿಚಾರದಲ್ಲಿ ಹೋರಾಟ ಮಾಡಿದ ಮೃತಪಟ್ಟ ಎಂಇಎಸ್ ಕಾರ್ಯಕರ್ತರನ್ನು ಸ್ಮರಿಸಲು ಹುತಾತ್ಮ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಂಇಎಸ್ ನಗರ ಘಟಕದ ಅಧ್ಯಕ್ಷ ದೀಪಕ ದಳವಿ, ಎಂಇಎಸ್ ಮುಖಂಡ ಕಿರಣ್ ಠಾಕೂರ್ ಪಾಲ್ಗೊಂಡಿದ್ದರು. ಹುತಾತ್ಮ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಎಂಇಎಸ್ ಮುಖಂಡ ಕಿರಣ್ ಠಾಕೂರ್, ನ್ಯಾ. ಮೆಹರ್ ಚಂದ್ ಮಹಾಜನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನ್ಯಾ. ಮಹಾಜನ್ ಅವರಿಗೆ ಬ್ಯಾಗ್, ಬಂಗಲೆಯನ್ನು ಕರ್ನಾಟಕ ಸರ್ಕಾರ ಕೊಟ್ಟಿದೆ. ನ್ಯಾಯಮೂರ್ತಿಗಳು ಹಣ ಪಡೆದ್ರೆ ಆಗೋ ಪರಿಣಾಮ ನಮ್ಮ ಮೇಲೆ ಆಗಿದೆ. ಮಹಾಜನ ವರದಿಯಲ್ಲಿ ಸಾಕಷ್ಟು ಗೋಲಮಾಲ್ ಆಗಿದೆ. ನ್ಯಾ, ಮಹಾಜನ್ ಜಡ್ಜ್ ಇದ್ದರೂ ಅಥವಾ ಕರ್ನಾಟಕ ಪರ ವಕೀಲರು ಇದ್ರಾ ಎಂಬ ಪ್ರಶ್ನೆ ಮಾಡಿದರು. ನ್ಯಾ. ಮಹಾಜನ ಬಗ್ಗೆ ಮಹಾರಾಷ್ಟ್ರದ ಆಚಾರ್ಯ ಅತ್ರೆ, ಲೋಕಸಭೆಯಲ್ಲಿ ನಾಥಪೈ ಧ್ವನಿ ಎತ್ತಿದ್ದರು. ಈ ಬಗ್ಗೆ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಗೆ ದೂರು ಕೊಡಲು ಹೋದ ಸಂದರ್ಭದಲ್ಲಿ ಓಡು ಹೋದರು. ಹೀಗಾಗಿ ಗಲಭೆ ಆಗಿದೆ. ಗಲಭೆಯಲ್ಲಿ ಶಿವಸೇನೆಯ 67 ಜನ ಕಾರ್ಯಕರ್ತರು ಮೃತಪಟ್ಟಿದ್ದರು ಎಂದು ಠಾಕೂರ್ ಭಾಷಣ ಮಾಡಿದರು.

ಮಹಾ ನಾಯಕರು ಬೆಳಗಾವಿ ಪ್ರವೇಶಕ್ಕೆ ದಿಗ್ಬಂಧ ಹಾಕಿದ ಪೊಲೀಸರು..!

ಎಂಇಎಸ್ ಹುತಾತ್ಮ ದಿನ ಆಚರಣೆಯಲ್ಲಿ ಪಾಲ್ಗೊಳ್ಳಲು ಅನೇಕ ಮಹಾರಾಷ್ಟ್ರದ ಶಾಸಕರು, ಸಚಿವರು ಮುಂದಾಗಿದ್ದರು. ಇದನ್ನು ತಡೆಯಲು ಬೆಳಗಾವಿ ಪೊಲೀಸರು ಇಂದು ನಾಕಾಬಂದಿ ಮಾಡಿದ್ದರು. ಬೆಳಗಾವಿಯ ಸುತಗಟ್ಟಿ, ಕಾಕತಿ ಸೇರಿ ನಗರದ ಚನ್ನಮ್ಮ ವೃತ್ತದಲ್ಲಿ ಮಹಾರಾಷ್ಟ್ರ ವಾಹನಗಳನ್ನು ತಪಾಸಣೆ ಮಾಡಿದರು. ಬಸ್ ನಲ್ಲಿ ಮಹಾ ಸಚಿವನನ್ನು ವಶಕ್ಕೆ ಪಡೆದ ಪೊಲೀಸರು, ಬೆಳಗಾವಿಗೆ ಮಹಾರಾಷ್ಟ್ರ ಸಚಿವರು, ಶಾಸಕರು ಆಗಮಿಸಬಾರದು ಎಂದು ಪೊಲೀಸರು ಸರ್ಪಗಾವಲು ಹಾಕಿದ್ದರು.

ಇದನ್ನೂ ಓದಿ :  ಭರ್ಜರಿ ಭತ್ತ ಬೆಳೆದ ರೈತರಿಗೆ ಬೆಲೆ ಸಂಕಷ್ಟ ; ವಿದೇಶಗಳಿಗೆ ರಫ್ತಾಗುತ್ತಿದ್ದ ಭತ್ತಕ್ಕೂ ಕುತ್ತು

ಆದರೆ, ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ್ ಮಾತ್ರ ಮಹಾರಾಷ್ಟ್ರ ಬಸ್ ನಲ್ಲಿ ಬೆಳಗಾವಿ ಪ್ರವೇಶ ಮಾಡಿದ್ರು. ಹುತಾತ್ಮ ಚೌಕ್ ತಲುಪುತಿದ್ದಂತೆ ಖಡೇಬಜಾರ  ಪೊಲೀಸರು ಸಚಿವ ರಾಜೇಂದ್ರ ಪಾಟೀಲ್ ವಶಕ್ಕೆ ಪಡೆದು ಕಾರ್ ನಲ್ಲಿ ಕರೆದುಕೊಂಡು ಹೋದರು. ಈ ವೇಳೆಯಲ್ಲಿ ಪೊಲೀಸರು ಹಾಗೂ ಎಂಇಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ