ಬೆಳಗಾವಿ (ಡಿ.9): ಕರ್ನಾಟಕ ಮಹಾರಾಷ್ಟ್ರ (Maharashtra) ಗಡಿ ವಿವಾದದಿಂದ ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಬಂದ ಆಗಿದ್ದ ಸಾರಿಗೆ ಬಸ್ ಸಂಚಾರ ಇಂದು ಪುನರ್ ಆರಂಭಗೊಂಡಿದೆ. ಇನ್ನೂ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾದ ನಾಡದ್ರೋಹಿ ಎಂಇಎಸ್ (MES) ಸಂಘಟನೆ ಮತ್ತೆ ಮಾಡಿದೆ. ಡಿಸೆಂಬರ್ 19 ರಂದು ಚಳಿಗಾಲ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ (Mahamelav) ಆಯೋಜನೆ ಮಾಡಲು ಮುಂದಾಗಿದೆ.
ಅಧಿವೇಶನ ಆರಂಭದ ದಿನ ಮಹಾಮೇಳಾವ್ಗೆ ಸಿದ್ಧತೆ
ಅಧಿವೇಶನ ಆರಂಭದ ದಿನವೇ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಹಾಮೇಳಾವ್ಗೆ ಸಿದ್ಧತೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಮಹಾಮೇಳಾವ್ದಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರ ನಾಯಕರಿಗೆ ಎಂಇಎಸ್ ಆಹ್ವಾನ. ಇದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮಹಾಮೇಳಾವ್ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದಾರೆ.
ನಾಯಕರನ್ನು ಮಹಾಮೇಳಾವ್ಗೆ ಕಳುಹಿಸುವಂತೆ ಮನವಿ
ಎಂಇಎಸ್ ಸಂಘಟನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಎನ್ಸಿಪಿ ವರಿಷ್ಠ ಶರದ್ ಪವಾರ್. ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ, ಶಂಭುರಾಜ್ ದೇಸಾಯಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವು ನಾಯಕರಿಗೆ ಎಂಇಎಸ್ ಆಹ್ವಾನ ನೀಡಿದೆ. ಒಂದು ಪಕ್ಷದಿಂದ ತಲಾ ಇಬ್ಬರು ನಾಯಕರನ್ನು ಮಹಾಮೇಳಾವ್ಗೆ ಕಳುಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಮಹಾ ನಾಯಕರಿಗೆ ಎಂಇಎಸ್ ಆಗ್ರಹ
ಪತ್ರದ ಮೂಲಕ ಮಹಾ ನಾಯಕರಿಗೆ ಎಂಇಎಸ್ ಆಗ್ರಹಿಸಿದೆ. ಚುನಾವಣೆ ವರ್ಷ ಆಗಿರುವ ಕಾರಣಕ್ಕೆ ಈ ಸಲ ಅದ್ಧೂರಿಯಾಗಿ ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದೆ. ಮಹಾರಾಷ್ಟ್ರ ನಾಯಕರನ್ನು ಕರೆಯಿಸಿ ಬೆಳಗಾವಿಯಲ್ಲಿ ಭಾಷಾದ್ವೇಷದ ಕಿಡಿ ಹಚ್ಚಲು ಹುನ್ನಾರ ಇದಾಗಿದ್ದು, ಮಹಾಮೇಳಾವ್ಗೆ ಅನುಮತಿ ನೀಡದಂತೆ ಕನ್ನಡ ಪರ ಸಂಘಟನೆಗಳ ಮನವಿ ಮಾಡಿಕೊಂಡಿವೆ.
ಮಹಾರಾಷ್ಟ್ರಕ್ಕೆ ಕರ್ನಾಟಕ ಸರ್ಕಾರದ ಇಬ್ಬರು ಸಚಿವರ ಕಳುಹಿಸಲು- ಅಶೋಕ ಚಂದರಗಿ ಆಗ್ರಹ
ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರ ಸೇರಿ ಕನ್ನಡ ಪ್ರದೇಶಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ. ಇದಕ್ಕಾಗಿ ರಾಜ್ಯದ ಇಬ್ಬರು ಹಿರಿಯ ಸಚಿವರು, ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರ ಕಳಿಸಲು ಅಶೋಕ ಚಂದರಗಿ ಆಗ್ರಹ ಮಾಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಕನ್ನಡ ಭಾಷಿಕ ಪ್ರದೇಶಗಳು ಕರ್ನಾಟಕ ಸೇರಬೇಕು ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಬೊಮ್ಮಾಯಿ ಹೇಳಿಕೆಯಿಂದ ಮಹಾರಾಷ್ಟ್ರದ ಕನ್ನಡಿಗರಲ್ಲಿ ಹೊಸ ಆಸೆ ಮೂಡಿಸಿದೆ. ಅಲ್ಲಿಯ ಗ್ರಾಮ ಪಂಚಾಯತಿಗಳು ಕರ್ನಾಟಕ ಸೇರಲು ನಿರ್ಣಯ ಅಂಗೀಕರಿಸುತ್ತೀವೆ. ಇದರಿಂದ ಮಹಾರಾಷ್ಟ್ರ ಸರ್ಕಾರ ಅಲ್ಲಿಯ ಕನ್ನಡಿಗರಿಗೆ ಕಿರುಕುಳ ನೀಡಲಾರಂಭಿಸಿದೆ.
ಮಹಾರಾಷ್ಟ್ರದ ಕನ್ನಡಿಗರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಲ್ಲಬೇಕಾದ ಕರ್ನಾಟಕ ಸರ್ಕಾರ ಮೌನ ವಹಿಸಿದ್ದು ಖಂಡನೀಯ. ಕನ್ನಡ ಪ್ರದೇಶದಲ್ಲಿರುವ ಪ್ರಮುಖರ ಬೆದರಿಸುವ ತಂತ್ರದಲ್ಲಿ ಮಹಾರಾಷ್ಟ್ರ ಸರ್ಕಾರ ತೊಡಗಿದೆ. ನೇಣಿಗೇರಿಸಿದರೂ ತಮ್ಮ ನಿಲುವು ಬಿಡಲ್ಲ ಎಂದು ಮಹಾರಾಷ್ಟ್ರದ ಕನ್ನಡಿಗರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಸಿಗರೇಟ್ ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ, ಪುಡಿರೌಡಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ
ಅವರನ್ನು ನಡುನೀರಿನಲ್ಲಿ ಬಿಡುವ ಕೆಲಸ ಕರ್ನಾಟಕ ಸರ್ಕಾರದಿಂದ ಆಗಬಾರದು. ಹೀಗಾಗಿ ಇಬ್ಬರು ಹಿರಿಯ ಸಚಿವರು, ಗಡಿಸಂರಕ್ಷಣಾ ಆಯೋಗದ ಅಧ್ಯಕ್ಷರನ್ನು ಮಹಾರಾಷ್ಟ್ರಕ್ಕೆ ಕಳಿಸಿ. ಮಹಾರಾಷ್ಟ್ರ ಕನ್ನಡಿಗರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿ ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ