• Home
  • »
  • News
  • »
  • state
  • »
  • Belagavi: ಬೆಳಗಾವಿಯಲ್ಲಿ ಮತ್ತೆ ಶಿವಸೇನೆ, ಎಂಇಎಸ್ ಪುಂಡಾಟ; ಕನ್ನಡದ ಕಟ್ಟಾಳುಗಳಿಂದ ಸವಾಲು

Belagavi: ಬೆಳಗಾವಿಯಲ್ಲಿ ಮತ್ತೆ ಶಿವಸೇನೆ, ಎಂಇಎಸ್ ಪುಂಡಾಟ; ಕನ್ನಡದ ಕಟ್ಟಾಳುಗಳಿಂದ ಸವಾಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪದೇ ಪದೇ ಗಡಿ ಹಾಗೂ ಭಾಷಾ ವಿವಾದ ಕೆದಕುವ ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆ ಪುಂಡರ ವಿರುದ್ದ ಕನ್ನಡದ ಕಟ್ಟಾಳುಗಳು ಗರಂ ಆಗಿದ್ದಾರೆ.

  • Share this:

ಬೆಳಗಾವಿ: ಸದಾ ಒಂದಿಲ್ಲೊಂದು ಕ್ಯಾತೆ ತೆಗೆದು ಗಡಿ (Belagavi And Karnataka Border) ಹಾಗೂ ಭಾಷಾ (Kannada) ವಿವಾದ ಕೆದಕುವ ನಾಡದ್ರೋಹಿಗಳು ಇದೀಗ ರಾಜ್ಯೋತ್ಸವ (Kannada Rajyotsava) ಸಮೀಪಿಸುತ್ತಿದ್ದಂತೆ ಮತ್ತೆ ಕಿರಿಕ್ ಆರಂಭಿಸಿದ್ದಾರೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಿಸುವ ಎಂಇಎಸ್ (MES) ಪುಂಡರಿಗೆ ಸಾಥ್ ನೀಡಲು ಕೋಲ್ಲಾಪುರದ (Kollahpur) ಶಿವಸೇನೆ ಮುಖಂಡರು (Shivsena Leaders) ರೆಡಿಯಾಗಿದ್ದು, ಬೆಳಗಾವಿಗೆ (Belagavi) ಬರುವುದಾಗಿ ಸವಾಲ್ ಹಾಕಿದ್ದಾರೆ. ಪ್ರತಿ ವರ್ಷ ರಾಜ್ಯೋತ್ಸವದಂದು ಕರಾಳ ದಿನ ಆಚರಿಸುವ ಎಂಇಎಸ್ ಪುಂಡರು ಇದೀಗ ಮತ್ತೊಮ್ಮೆ ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ.


ಬೆಳಗಾವಿ ಎಂಇಎಸ್ ಪುಂಡರಿಗೆ ಸಾಥ್ ನೀಡಲು ಕೊಲ್ಲಾಪುರದ ಶಿವಸೇನೆ ಪುಂಡರು ರೆಡಿಯಾಗಿದ್ದಾರೆ. ಕರಾಳ‌‌‌ ದಿನಾಚರಣೆಗೆ ಬೆಳಗಾವಿಗೆ ಬರ್ತಿವಿ ಎಂದು ಶಿವಸೇನೆ ಪುಂಡರು ಪುಂಗಿ ಬಿಟ್ಟಿದ್ದಾರೆ.


ವಿಜಯ್ ಧವಳೆ ಉದ್ಧಟತನದ ಹೇಳಿಕೆ


ಕರಾಳ ದಿನದ ಹೆಸರಿನಲ್ಲಿ ಭಾಷಾ ವಿಷಬೀಜ ಬಿತ್ತಲು ಮುಂದಾಗಿರುವ ಮಾಜಿ‌‌ ಸಿಎಂ ಉದ್ಧವ ಠಾಕ್ರೆ ಬಣದ ಶಿವಸೇನೆ ಪುಂಡರು ಅಕ್ಟೋಬರ್ 31 ರಂದು ಮಹಾರಾಷ್ಟ್ರದ ಕೋಲ್ಲಾಪುರದಿಂದ ಬೆಳಗಾವಿಗೆ ಮೆರವಣಿಗೆ ಮೂಲಕ ಬರ್ತಿವಿ ಎಂದು ಕೋಲ್ಲಾಪುರದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ಧವಳೆ ಉದ್ಧಟತನದ ಹೇಳಿಕೆ ನೀಡಿದ್ದಾನೆ.


MES And Shivsena plan to preparing for protest black day on november 1
ಬೆಳಗಾವಿ ಮಹಾನಗರ ಪಾಲಿಕೆ


ಅಕ್ಟೋಬರ್ 31 ರಂದು ಬೆಳಗ್ಗೆ 11 ಗಂಟೆಗೆ ಕೋಲ್ಲಾಪುರದ ಶಾಹು ಮಹಾರಾಜರ ಸಮಾಧಿ ಸ್ಥಳದಿಂದ ಮೆರವಣಿಗೆ ಮೂಲಕ ಕೋಲ್ಲಾಪುರದಿಂದ ಕಾಗಲ್ ಚೆಕ್ ಪೋಸ್ಟ್ ಮೂಲಕ ಕರ್ನಾಟಕ ಗಡಿ ಪ್ರವೇಶ ಮಾಡಲಿದ್ದೇವೆ. ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಂಭಾಜಿ ಮೂರ್ತಿಗೆ ಹಾಲಿನ ಅಭೀಷೆಕ ಮಾಡ್ತೀವಿ ಎಂದು ಬೊಗಳೆ ಬಿಟ್ಟಿದ್ದಾನೆ.


ಕರವೇ ಕಾರ್ಯಕರ್ತರ ಸವಾಲ್


ಪದೇ ಪದೇ ಗಡಿ ಹಾಗೂ ಭಾಷಾ ವಿವಾದ ಕೆದಕುವ ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆ ಪುಂಡರ ವಿರುದ್ದ ಕನ್ನಡದ ಕಟ್ಟಾಳುಗಳು ಗರಂ ಆಗಿದ್ದಾರೆ. ರಾಜ್ಯೋತ್ಸವಕ್ಕೆ ವಿರುದ್ದವಾಗಿ ಕರಾಳ ದಿನ ಆಚರಿಸಲು ಬೆಳಗಾವಿಗೆ ಬರ್ತೀವಿ ಎಂದಿರುವ ಶಿವಸೇನೆ ಪುಂಡರ ವಿರುದ್ದ ಸಿಡಿದೆದ್ದ ಕರವೇ ಕಾರ್ಯಕರ್ತರು ತಾಕತ್ತಿದ್ದರೆ ಬೆಳಗಾವಿಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.


ಅಷ್ಟೇ ಅಲ್ಲದೇ ಎಂಇಎಸ್ ಪುಂಡರಿಗೆ ಕರಾಳ ದಿನ ಆಚರಿಸಲು ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಕರಾಳ ದಿನಕ್ಕೆ ಅನುಮತಿ ಕೊಟ್ಟರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ

 ಕರಾಳ ದಿನಾಚರಣೆಗೆ ಮುಂದಾಗಿರುವ ನಾಡದ್ರೋಹಿಗಳಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಪೋಲಿಸರು ಯಾವ ರೀತಿಯ ಸಂದೇಶ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.


ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್​ ಯತ್ನ


ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಎಂಇಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದೆ. ಬೆಳಗಾವಿ ಪಾಲಿಕೆ, ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಸೋತು ಸುಣ್ಣವಾಗಿದೆ. ಮತ್ತೆ ರಾಜ್ಯೋತ್ಸವದ ನೆಪದಲ್ಲಿ ಸಂಘಟನೆಗೆ ಕೈ ಹಾಕಿದೆ. ಇದಕ್ಕೆ ಬೆಳಗಾವಿ ಜನ ಯಾವ ರೀತಿ ಉತ್ತರ ನೀಡುತ್ತಾರೆ ಎನ್ನುವುದು ಕಾದು ನೋಡಬೇಕು. ಇನ್ನೂ ಗಡಿ ಭಾಗದಲ್ಲಿ ಶಿವಸೇನೆ ಮುಖಂಡರನ್ನು ತಡೆಯಲು ಪೊಲೀಸರು ಸಹ ಸಿದ್ದತೆ ಮಾಡಿಕೊಂಡಿದ್ದಾರೆ.


MES And Shivsena plan to preparing for protest black day on november 1
ಬೆಳಗಾವಿ


ಪಾರ್ಕಿಂಗ್​ ಕಾರ್ಮಿಕನ ಮೇಲೆ ಹಲ್ಲೆ!


ಪಾರ್ಕಿಂಗ್​ ಕಾರ್ಮಿಕನ ಮೇಲೆ ಗ್ರಾಮಪಂಚಾಯ್ತಿ ಉಪಾಧ್ಯಕ್ಷನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆ ಶಿವಮೊಗ್ಗದ ಶ್ರೀ ಟಾಕೀಸ್​​ ಬಳಿ ನಡೆದಿದೆ. ಮಡಸೂರು ಗ್ರಾಮಪಂಚಾಯ್ತಿ ಉಪಾಧ್ಯಕ್ಷ ವೀರೇಂದ್ರ, ಕಾರ್ಮಿಕ ಅರುಣ್​ ಮೇಲೆ ಹಲ್ಲೆ ಮಾಡಿದ್ದಾರೆ.


ಇದನ್ನೂ ಓದಿ:  Vijayapura: ತಾಯಿ ಜೊತೆ ಮಲಗಿದ್ದವನನ್ನ ಕೊಂದ ಮಕ್ಕಳು; ತಲೆಗೆ ಕೊಡಲಿಯಿಂದ ಹೊಡೆದು ಹತ್ಯೆ


ಕಾರು ಪಾರ್ಕಿಂಗ್​​ನಲ್ಲಿ ನಿಲ್ಲಿಸಿ ಅಂತ ಹೇಳಿದ್ದಾರೆ. ಇಷ್ಟೇ ಪಾರ್ಕಿಂಗ್​ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ಅರುಣ್‌ನನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Published by:Mahmadrafik K
First published: