ಸಾರ್ವಜನಿಕ ಸ್ಥಳಗಳಲ್ಲಿ ಜನರ ಪ್ರಾಣಕ್ಕೆ ಸಂಚಕಾರವಾಗುತ್ತಿರುವ ಮಾನಸಿಕ ಅಸ್ವಸ್ಥರು

ತನಗರಿವಿಲ್ಲದಂತೆ ಈ ವ್ಯಕ್ತಿಗಳು ಕೊಲೆಯಂತಹ ಅಪರಾಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಜನಸಾಮಾನ್ಯ ಇಂಥ ಬೆಳವಣಿಗೆಯಿಂದ ಆತಂಕ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು(ನವೆಂಬರ್​. 26): ಮಾನಸಿಕ ಸ್ಥಿಮಿತ ಕಳೆದುಕೊಂಡ ಜನ ಇಂದು ಸಮಾಜಕ್ಕೆ ಕಂಟಕವಾಗಿ ಬದಲಾಗುತ್ತಿದ್ದಾರೆಯೇ ಎನ್ನುವ ಆತಂಕ ಇತ್ತೀಚಿನ ದಿನಗಳಲ್ಲಿ ಕಾಡತೊಡಗಿದೆ. ದಕ್ಷಿಣಕನ್ನಡ , ಉಡುಪಿ ಹಾಗೂ ರಾಜ್ಯದ ಇತರ ಕಡೆಗಳಲ್ಲಿ ನಡೆದ ಕೆಲವು ಕೊಲೆಗಳಿಗೆ ಈ ಮಾನಸಿಕ ಅಸ್ವಸ್ಥರೇ ಕಾರಣವಾಗುತ್ತಿರುವುದು ಆತಂಕಕಾಗಿ ಬೆಳವಣಿಗೆಯಾಗಿದ್ದು, ಇಂಥವರನ್ನು ಅಲೆದಾಡಲು ಬಿಡುವಂತಹ ವ್ಯವಸ್ಥೆಗೆ ಕಡಿವಾಣ ಬೀಳಬೇಕಿದೆ. ಜನನಿಬಿಡ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸುತ್ತಾಡುವ ಇಂಥಹ ವ್ಯಕ್ತಿಗಳು ಸಾಮಾನ್ಯ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಕಷ್ಟು ಪ್ರಕರಣಗಳು ನಡೆಯುತ್ತಿದ್ದು, ಪೋಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಇಂಥವರನ್ನು ಹಿಡಿದು ಸೂಕ್ತ ಪರಿಹಾರ ಒದಗಿಸುವ ಕಾರ್ಯ ನಡೆಸಬೇಕಿದೆ. ಮಾನಸಿಕವಾಗಿ ಸ್ಥಿಮಿತ ಕಳೆದು ಕೊಂಡಿರುವ ಜನ ಇಂದು ಗಲ್ಲಿ ಗಲ್ಲಿಗಳಲ್ಲಿ ಕಾಣಸಿಗುವುದು ಸಾಮಾನ್ಯವಾಗಿ ಬಿಟ್ಟಿದೆ. ಯಾವುದೋ ಒತ್ತಡಕ್ಕೋ, ಕಾಯಿಲೆಗೋ ತುತ್ತಾಗಿ ಇಂಥಹ ಜನ ಮಾನಸಿಕವಾಗಿ ಅಸ್ವಸ್ಥತೆಯನ್ನು ಹೊಂದಿದ್ದು, ಇಂಥವರು ಇದೀಗ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ತನಗರಿವಿಲ್ಲದಂತೆ ಈ ವ್ಯಕ್ತಿಗಳು ಕೊಲೆಯಂತಹ ಅಪರಾಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಜನಸಾಮಾನ್ಯ ಇಂಥ ಬೆಳವಣಿಗೆಯಿಂದ ಆತಂಕ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂಥ ಪ್ರಕರಣಗಳು ದಕ್ಷಿಣಕನ್ನಡ , ಉಡುಪಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ನಡೆಯುತ್ತಿರುವುದು ಇದೀಗ ಸಾಮಾನ್ಯವಾಗಿ ಬಿಟ್ಟಿದ್ದು, ಇಂಥಹ ವ್ಯಕ್ತಿಗಳನ್ನು ಅಲೆದಾಡಲು ಬಿಟ್ಟಿರುವುದೇ ಇದಕ್ಕೆ ಒಂದು ಕಾರಣವೂ ಆಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾನಸಿಕ ರೋಗಿಯೊಬ್ಬ ತನ್ನ ದೊಡ್ಡಪ್ಪನನ್ನೇ ಕೊಚ್ಚಿ ಕೊಂದ, ಉಡುಪಿಯ ಕಾರ್ಕಳದಲ್ಲಿ ಮಾನಸಿಕ ರೋಗಿಯೊಬ್ಬ ಮಗುವಿನ ತಲೆ ಮೇಲೆ ಪಿಕ್ಕಾಸಿನಿಂದ ಹೊಡೆದ ಹಾಗೂ ಇಡೀ ದೇಶದಲ್ಲಿ ಭಾರೀ ವಿವಾದ ಮಾಡಿದ್ದ ಧರ್ಮಸ್ಥಳದಲ್ಲಿ ನಡೆದಂತಹ ಸೌಜನ್ಯ ಎನ್ನುವ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಬಳಿಕ ನಡೆದ ಆಕೆಯ ಕೊಲೆಯ ಪ್ರಕರಣದಲ್ಲೂ ಪೋಲೀಸರು ಮಾನಸಿಕ ಅಸ್ವಸ್ಥನೊಬ್ಬನನ್ನು ಬಂಧಿಸಿರುವುದು ಹೀಗೆ ಈ ಎಲ್ಲಾ ಪ್ರಮುಖ ಪ್ರಕರಣಗಳು ಇಂಥಹ ವ್ಯಕ್ತಿಗಳಿಂದ ನಡೆದಿರುವುದಕ್ಕೆ ಉದಾಹರಣೆಯಾಗಿಯೂ ಇದೆ.

ಇತ್ತೀಚಿನ ದಿನಗಳಲ್ಲಿ ಹೀಗೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಜನರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದು ಹೆಚ್ಚಾಗುತ್ತಿದ್ದು, ಈ ವ್ಯಕ್ತಿಗಳು ಇತರರಿಗೆ ಪ್ರಾಣ ಹಾನಿಗೂ ಕಾರಣರಾಗುತ್ತಿದ್ದಾರೆ. ಇಂಥಹ ಘಟನೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದು, ಮಾನಸಿಕ ಅಸ್ವಸ್ಥರಾದವರನ್ನು ಮನೆಯಲ್ಲಿ ಹಾಗೂ ಅಲೆಮಾರಿಯಾಗಿ ಅಲೆದಾಡಲು ಬಿಡುವ ವ್ಯವಸ್ಥೆಗಳನ್ನು ನಿಯಂತ್ರಿಸಿದರೆ ಮಾತ್ರ ಸಮಾಜದಲ್ಲಿ ಇಂಥಹ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ.

ಸಾಮಾನ್ಯ ಮನುಷ್ಯನಿಗೂ, ಮಾನಸಿಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿಗಳ ಮನಸ್ಥಿತಿಗೂ ವ್ಯತ್ಯಾಸಗಳಿದ್ದು, ಇಂಥಹ ವ್ಯಕ್ತಿಗಳನ್ನು ಸಮಾಜದಲ್ಲಿ ಸ್ವಚ್ಛಂದವಾಗಿ ತಿರುಗಾಡಲು ಬಿಡುವುದು ಅಪಾಯಕಾರಿ ಬೆಳವಣಿಗೆಯೂ ಆಗಿದೆ. ಎಲ್ಲೆಂದರಲ್ಲಿ ಅಲೆದಾಡುವ ಹಾಗೂ ದಾರಿಯಲ್ಲಿ ನಡೆಯುವ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವವರ ಮೇಲೆ ಕಲ್ಲು ಎಸೆಯುವ, ವಾಹನಗಳ ಮುಂದೆ ಅಡ್ಡ ಬಂದು ವಾಹನ ಸವಾರರನ್ನು ಸಮಸ್ಯೆಗೆ ಸಿಲುಕಿಸುವಂತಹ  ಹಲವು ಘಟನೆಗಳು ಈ ಮಾನಸಿಕವಾಗಿ ಅಸ್ವಸ್ಥರಾಗಿರುವ ವ್ಯಕ್ತಿಗಳಿಂದ ಉಂಟಾಗುತ್ತಿದೆ.

ಇಂಥಹ ಮಾನಸಿಕ ಸ್ಥಿಮಿತ ಕಳೆದುಕೊಂಡವರಿಗೆ ಚಿಕಿತ್ಸೆಯನ್ನು ಕೊಡುವ ಅಥವಾ ಅಂತವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಡೆಯುವಂತಹ ಪ್ರಕ್ರಿಯೆಗಳು ಆದಷ್ಟು ಶೀಘ್ರವಾಗಿ ನಡೆಯಬೇಕಿದೆ. ಪೋಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಇಂಥಹ ವ್ಯಕ್ತಿಗಳನ್ನು ಹಿಡಿದು ಮಾನಸಿಕ ಅಸ್ವಸ್ಥರ ಸೆಲ್ ಗಳಲ್ಲಿ ಇಡುವಂತಹ ಕಾರ್ಯವನ್ನು ಮಾಡಬೇಕಿದ್ದು, ಇಲ್ಲದೇ ಹೋದಲ್ಲಿ ಸಮಾಜ ಇಂಥಹ ವ್ಯಕ್ತಿಗಳ ಕ್ರೌರ್ಯಕ್ಕೆ ಬಲಿಯಾಗಬೇಕಾಗುವುದು ಹೆಚ್ಚಾಗಲಿದೆ.
Published by:G Hareeshkumar
First published: