ಹುಬ್ಬಳ್ಳಿ: ಎರಡು ವರ್ಷದಲ್ಲಿ ಮಹಿಳೆಯರು (Women) ಮನೆ ಹಕ್ಕು ಪಡೆಯುತ್ತಾರೆ. ಗಂಡಸರು (Men) ಹೆಂಡತಿ (Wife) ಮಾತು ಕೇಳಿಕೊಂಡಿರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಹಾಸ್ಯ ಚಟಾಕಿ ಹಾರಿಸಿದರು. ಆಶ್ರಯ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ, ಮಹಿಳೆಯರಿಗೆ ಮನೆ (House) ಕೊಡುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮಾಡಿದರು. 70 ಸಾವಿರ ಕೋಟಿ ಹಣ ಆಶ್ರಯ ಮನೆ ನಿರ್ಮಾಣಕ್ಕೆ ಕೊಟ್ಟಿದ್ದೇವೆ. ಕೇಂದ್ರದಿಂದ 1.22 ಕೋಟಿ ಮನೆ ಮಂಜೂರಾತಿ ಕೊಟ್ಟಿದ್ದೇವೆ. 46 ಲಕ್ಷ ಮನೆಗಳನ್ನ ಹಸ್ತಾಂತರಿಸಿದ್ದೇವೆ ಎಂದು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷ ಅಂದ್ರೆ ಏಜೆಂಟರ ಪಾರ್ಟಿ. ಅವರ ಕಾಲದಲ್ಲಿ ಆಶ್ರಯ ಮನೆಗಳನ್ನ ಏಜೆಂಟ್ರ ಮೂಲಕ ಹಂಚುತ್ತಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸೋ ಕೆಲಸ ಮಾಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಖೇಣಿಗೆ ‘ನೈಸ್’ ಖೆಡ್ಡಾ
ನೈಸ್ ಸಂಸ್ಥೆ ಮುಖ್ಯಸ್ಥ, ಬೀದರ್ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿಗೆ (Ashok Kheny) ಖೆಡ್ಡಾ ತೋಡಲು ಸರ್ಕಾರ ಮುಂದಾಗಿದೆ. ರೈತರಿಗೆ ಹೆಚ್ಚು ಪರಿಹಾರ ಕೊಡದಿದ್ದರೆ ಭೂಮಿ ವಶಪಡಿಸಿಕೊಳ್ತೀವಿ ಎಂದು ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
26 ವರ್ಷಗಳ ಹಿಂದೆ ನೈಸ್ ಕಂಪನಿಗೆ 1,906 ಎಕರೆ ನೀಡಲಾಗಿತ್ತು. ಆಗ ನೈಸ್ ಕಂಪನಿ ಪ್ರತಿ ಎಕರೆಗೆ 41 ಲಕ್ಷ ನೀಡಿತ್ತು. ಈಗ ರೈತರಿಗೆ 3 ಕೋಟಿಗೂ ಹೆಚ್ಚು ಹಣ ನೀಡಬೇಕು ಎಂದು ಸಚಿವ ST ಸೋಮಶೇಖರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Janardhan Reddy: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್ ಬೇಕಾ? ಹಾಗಿದ್ರೆ ಇಷ್ಟು ಮಾಡಿ ಸಾಕು
ಎಕರೆಗೆ 3 ಕೋಟಿಗೂ ಹೆಚ್ಚು ಕೊಡದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಸೋಮಶೇಖರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ