HOME » NEWS » State » MEMBER OF LEGISLATIVE COUNCIL AYANUR MANJUNATH COMPARES MLA YATNAL TO HUCHCHA VENKAT LG

Ayanur Manjunath: ಬಸನಗೌಡ ಪಾಟೀಲ್‌ ಯತ್ನಾಳ್ ಹುಚ್ಚ ವೆಂಕಟ್ ಇದ್ದಂತೆ..!; ಆಯನೂರು ಮಂಜುನಾಥ್ ಲೇವಡಿ

ಬಸನಗೌಡ ಪಾಟೀಲ್‌ ಯತ್ನಾಳ್ ಆತ್ಮರತಿ ವ್ಯಕ್ತಿ. ಪ್ರಚಾರಪ್ರಿಯ, ತನ್ನನ್ನು ತಾನು ಲೀಡರ್ ಅಂದುಕೊಂಡಿದ್ದಾರೆ. ಒಂದು ಕಾಲದಲ್ಲಿ ಹುಚ್ಚ ವೆಂಕಟ್‌ಗೂ ಪ್ರಚಾರ ಸಿಕ್ಕಿತ್ತು. ಈಗ ಯತ್ನಾಳ್‌ಗೆ ಪ್ರಚಾರ ಸಿಗುತ್ತಿದೆ. ಪ್ರಚಾರದಿಂದ ನಾಯಕರಾಗಿ ಬೆಳೆಯುವುದಿಲ್ಲ. ಹುಚ್ಚ ವೆಂಕಟ್ ಕಾರಿಗೆ ಕಲ್ಲು‌ ಹೊಡೆದಿದ್ದ. ಇವರು ಪಕ್ಷಕ್ಕೆ ಕಲ್ಲು ಹೊಡೆಯುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯ ಮಾಡಿದರು.

news18-kannada
Updated:April 1, 2021, 6:10 PM IST
Ayanur Manjunath: ಬಸನಗೌಡ ಪಾಟೀಲ್‌ ಯತ್ನಾಳ್ ಹುಚ್ಚ ವೆಂಕಟ್ ಇದ್ದಂತೆ..!; ಆಯನೂರು ಮಂಜುನಾಥ್ ಲೇವಡಿ
ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್
  • Share this:
ಬೆಂಗಳೂರು(ಏ.01):  ಸಿಎಂ ಯಡಿಯೂರಪ್ಪ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕರಣ ಬಿಜೆಪಿಯಲ್ಲಿ ಭಿನ್ನಮತ ಹುಟ್ಟುಹಾಕಿದೆ. ಯಡಿಯೂರಪ್ಪ ವಿರುದ್ಧ ನಿರಂತರವಾಗಿ ಹರಿಹಾಯುತ್ತಲೇ ಬಂದಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆಯೂ ಸಿಎಂ ನಿಷ್ಠರು ಕೆರಳಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಯತ್ನಾಳ್ ಅವರನ್ನು ಹುಚ್ಚ ವೆಂಕಟ್‌ಗೆ ಹೋಲಿಸಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್ ಆತ್ಮರತಿ ವ್ಯಕ್ತಿ. ಪ್ರಚಾರಪ್ರಿಯ, ತನ್ನನ್ನು ತಾನು ಲೀಡರ್ ಅಂದುಕೊಂಡಿದ್ದಾರೆ. ಒಂದು ಕಾಲದಲ್ಲಿ ಹುಚ್ಚ ವೆಂಕಟ್‌ಗೂ ಪ್ರಚಾರ ಸಿಕ್ಕಿತ್ತು. ಈಗ ಯತ್ನಾಳ್‌ಗೆ ಪ್ರಚಾರ ಸಿಗುತ್ತಿದೆ. ಪ್ರಚಾರದಿಂದ ನಾಯಕರಾಗಿ ಬೆಳೆಯುವುದಿಲ್ಲ. ಹುಚ್ಚ ವೆಂಕಟ್ ಕಾರಿಗೆ ಕಲ್ಲು‌ ಹೊಡೆದಿದ್ದ. ಇವರು ಪಕ್ಷಕ್ಕೆ ಕಲ್ಲು ಹೊಡೆಯುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯ ಮಾಡಿದರು.

ಈವರೆಗೂ ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಆಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯನೂರು, ಗೂಳಿಯನ್ನು ಆರಾಮಾಗಿ ತಿರುಗಾಡಲು ಬಿಡಬೇಕು. ಎಷ್ಟಾದರೂ ಸುತ್ತಾಡಲಿ, ಎಲ್ಲಾದರೂ ಹೋಗಲಿ. ಮಿತಿಮೀರಿದಾಗ ಹಗ್ಗ ಕಟ್ಟಿಹಾಕಬೇಕು. ಗೂಟಕ್ಕೆ‌ಕಟ್ಟಿ ಹಾಕುವುದು ಪಕ್ಷಕ್ಕೆ ಗೊತ್ತಿದೆ. ಗಾಳಿ ಪಟ ಎಷ್ಟು ಎತ್ತರಕ್ಕೆ ಬೇಕಾದರೂ ಹಾರಾಡಲಿ. ನಾನು ಎತ್ತರಕ್ಕೆ‌ ಹೋಗಿದ್ದೇನೆ ಎಂದು ಹೋಲಾಡಿದರೆ ಅದರ ಸೂತ್ರ ಕೈಯಲ್ಲೇ ಇರುತ್ತದೆ. ದಾರವನ್ನು ಸುತ್ತಿ‌ ಕೆಳಗಿಳಿಸುವುದು ಗೊತ್ತಿದೆ ಎಂದರು.

ಮಹಿಳಾ ಸ್ವಾಮ್ಯದ ಕಂಪನಿಗಳಿಂದ ಖರೀದಿಸುವ ಮೂಲಕ ಲಿಂಗ ಅಸಮಾನತೆಯನ್ನು ಹೇಗೆ ಕಡಿಮೆ ಮಾಡಬಹುದು ಗೊತ್ತಾ..?

ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದರಿಂದ ಯಾರೂ ನಾಯಕರಾಗುವುದಿಲ್ಲ. ಪ್ರಚಾರದಿಂದ ನಾಯಕ ಹುಟ್ಟುವುದಿಲ್ಲ. ನಾಯಕನಾದವನು ಪ್ರಚಾರ ಬಯಸುವುದಿಲ್ಲ. ಪ್ರಚಾರಪ್ರಿಯ ಯತ್ನಾಳ್ ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಕೇವಲ‌ ಯತ್ನಾಳ್ ಮಾತ್ರವಲ್ಲ ಅನೇಕರು ಇದೇ ದಾರಿ ಹಿಡಿದಿದ್ದಾರೆ. ಬಹುತೇಕರು ಪ್ರಚಾರಕ್ಕಾಗಿ ಕ್ಯಾಮರಾ ಮುಂದೆ ಬರುತ್ತಾರೆ. ಕ್ಯಾಮರಾ ಮುಂದೆ ಹೇಳಿಕೆ ಕೊಡದಿದ್ದರೆ ಅವರಿಗೆ ನಿದ್ದೆಯೇ ಬರುವುದಿಲ್ಲ ಎಂದರು.

ಸಿಎಂ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್ ಸ್ವವ್ಯಾಮೋಹಿ. ಆತ್ಮರತಿಯ ವ್ಯಕ್ತಿಯ ಹೇಳಿಕೆಯಿಂದ ಏನೂ ಆಗವುದಿಲ್ಲ. ಯಡಿಯೂರಪ್ಪ ಅವರಿಗೆ ಸರಿಸಟಿಯಾಗಬಲ್ಲ ನಾಯಕರಿನ್ನೂ ಬೆಳೆಯಬೇಕಿದೆ. ಯಡಿಯೂರಪ್ಪ ಸಮೂಹದ ನಾಯಕ, ಪ್ರಬಲ ನಾಯಕ. ಅವರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹತ್ತು ಸೀಟುಗಳನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಇರುವ ನಾಯಕರು ಯಾರಿದ್ದಾರೆ? ಯಡಿಯೂರಪ್ಪ ಅತ್ಯಂತ ಪ್ರಬಲ ನಾಯಕರು. ಅವರ ಬದಲಾವಣೆ ಇಲ್ಲವೇ ಇಲ್ಲ ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದರು.
Youtube Video

ಈಶ್ವರಪ್ಪ ಅವರು ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದಾರೆ. ದೂರು ನೀಡುವ ಬದಲು ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಪರಿಹರಿಸಿಕೊಳ್ಳಬೇಕಿತ್ತು. ಈಶ್ವರಪ್ಪ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ಆದರೆ ಯತ್ನಾಳ್ ಹಂತಕ್ಕೆ‌ ತಲುಪಿಲ್ಲ. ಯತ್ನಾಳ್ ಅವರ ಹಾಗೆ ಆಗಬಾರದು ಎಂಬುದು ನನ್ನ ಆಶಯ. ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಬಿಟ್ಟರೆ ಈಶ್ವರಪ್ಪ ಅವರೇ ನಾಯಕರು ಎಂದು ತೆರೆ ಎಳೆದರು.

(ವರದಿ: ದಶರಥ ಸಾವೂರು)
Published by: Latha CG
First published: April 1, 2021, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories