ನಟಿ ಸುಮಲತಾ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ರಜಿನಿಕಾಂತ್ ?

ದಕ್ಷಿಣ ಭಾರತದ ಚಿತ್ರರಂಗದ ನಟರಾದ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್, ನಟ ಮೋಹನ್ ಬಾಬು ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಸುಮಲತಾಗೆ ಬೆಂಬಲವನ್ನು ಸೂಚಿಸಿದ್ದಾರೆ

G Hareeshkumar | news18
Updated:February 6, 2019, 5:02 PM IST
ನಟಿ ಸುಮಲತಾ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ರಜಿನಿಕಾಂತ್ ?
ಸಾಂದರ್ಭಿಕ ಚಿತ್ರ
G Hareeshkumar | news18
Updated: February 6, 2019, 5:02 PM IST
ಬೆಂಗಳೂರು ( ಫೆ. 06) :  ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿರುವ ನಟಿ ಸುಮಲತಾ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದ ನಟರು ಪ್ರಚಾರಕ್ಕೆ ಬರಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾರತದ ಚಿತ್ರರಂಗದ ನಟರಾದ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್, ನಟ ಮೋಹನ್ ಬಾಬು ಸೇರಿದಂತೆ  ಅನೇಕ ಚಿತ್ರರಂಗದ ಗಣ್ಯರು ಸುಮಲತಾಗೆ ಬೆಂಬಲವನ್ನು ಸೂಚಿಸಿದ್ದಾರೆ. ಚಿತ್ರರಂಗದ ಗಣ್ಯರೆಲ್ಲರ ಜೊತೆ ನಟ ಅಂಬರೀಷ್ ಸಂಬಂಧ ಚೆನ್ನಾಗಿತ್ತು. ಆ ಹಿನ್ನೆಲೆಯಲ್ಲಿ ನಟಿ  ಸುಮಲತಾಗೆ ಬೆಂಬಲವನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ಶುಭಾಶಯ ಕೊರಿದ ಮೆಗಾಸ್ಟಾರ್ ಚಿರಂಜೀವಿ

ಕಳೆದ ನಾಲ್ಕು ದಿನಗಳಿಂದ ಚಿತ್ರರಂಗದ ಗಣ್ಯರನ್ನು ಭೇಟಿಯಾಗಿ ಮಾರ್ಗದರ್ಶನವನ್ನು ಸುಮಲತಾ ಪಡೆಯುತ್ತಿದ್ದಾರೆ. ಸ್ಪರ್ಧೆಯ ವಿಚಾರವಾಗಿ ಇತ್ತೀಚೆಗೆ ನಟ ಚಿರಂಜೀವಿ ಅವರು ಕರೆಮಾಡಿ ಶುಭಾಶಯ ಕೊರಿದ್ದಾರೆ. ನಟಿ ಸುಮಲತಾ ಕನ್ನಡ, ತಮಿಳು, ತೆಲುಗು ಮಲೆಯಾಳಂ, ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಎಲ್ಲಾ ಭಾಷೆಯ ನಟರು ನಟಿ ಸುಮಲತಾಗೆ ಚಿರಪರಿತರಾಗಿದ್ದಾರೆ.

ಸುಮಲತಾ ಬೆಂಬಲಕ್ಕೆ ನಿಂತ ತಲೈವಾ 

ರಜನಿಕಾಂತ್ ಅವರನ್ನು ರೆಬಲ್​ಸ್ಟಾರ್ ಅಂಬರೀಷ್ ಒಮ್ಮೆ ಮಂಡ್ಯಕ್ಕೆ ಆಹ್ವಾನಿದ್ದರು. ಇಲ್ಲಿಯ ಜನರು ಅಂಬರೀಷ್ ಅವರ ಮೇಲಿಟ್ಟ ಅಭಿಮಾನವನ್ನು ಕಣ್ಣಾರೆ ಕಂಡಿದ್ದರು ಎನ್ನಲಾಗಿದೆ.  ಈ ಹಿನ್ನೆಲೆಯಲ್ಲಿ ನಟಿ ಸುಮಲತಾ ಅವರಿಗೆ ರಜಿನಿಕಾಂತ್ ಕರೆ ಮಾಡಿ ಮಂಡ್ಯ ಜನರು ಅಭಿಮಾನವನ್ನು ನೆನಪು ಮಾಡಿಕೊಂಡಿದ್ದಾರೆ. ನೀವು ಸ್ಪರ್ಧೆ ಮಾಡಿದ್ದರೆ ನಿಮಗೆ ಬೆಂಬಲವನ್ನುನೀಡುವುದಾಗಿ ಬರವಸೆ ನೀಡಿದ್ದರು. ಇನ್ನೂ ಈಗಾಗಲೇ ನಟ ದರ್ಶನ  ಸುಮಲತಾ ಅವರಿಗೆ ಟಿಕೆಟ್​ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ :   ಸುಮಲತಾ ಅವರಿಗೆ ಟಿಕೆಟ್​ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯಗೆ ನಟ ದರ್ಶನ್ ಮನವಿ?
Loading...

ಇದೀಗ, ಮಂಡ್ಯದ ಸೊಸೆಯಾದ ಸುಮಲತಾ ಅಂಬರೀಷ್​ ಬದಲಿಗೆ ಮಂಡ್ಯದ ಮನೆಮಗಳನ್ನೇ ಅಖಾಡಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. ಆ ಮೂಲಕ ಕಾಂಗ್ರೆಸ್ ತಂತ್ರಕ್ಕೆ ತಿರುಗೇಟು ನೀಡಲು ದೇವೇಗೌಡರು ಸಿದ್ಧತೆ ನಡೆಸಿದ್ದಾರೆ. 2 ಬಾರಿ ಜೆಡಿಎಸ್​ನಿಂದ ಟಿಕೆಟ್ ವಂಚಿತರಾಗಿದ್ದ ಮಂಡ್ಯದ ಲಕ್ಷ್ಮೀ ಅಶ್ವಿನ್​ ಗೌಡ ಅವರಿಗೆ ಈಗ ಅವಕಾಶ ನೀಡಲು ಜೆಡಿಎಸ್​ ಮುಂದಾಗಿದೆ ಎನ್ನಲಾಗಿದೆ. ಕಳೆದ ಲೋಕಸಭಾ ಉಪಸಮರದಲ್ಲೂ ಅವಕಾಶ ವಂಚಿತರಾಗಿದ್ದ ಲಕ್ಷ್ಮೀಗೆ ವಿಧಾನ ಸಭೆ ಚುನಾವಣೆಯಲ್ಲೂ ಟಿಕೆಟ್ ಕೈತಪ್ಪಿತ್ತು. ಈಗ ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಐಆರ್​ಎಸ್​ ಅಧಿಕಾರಿಯಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ  ಅವರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಲಾಗಿದೆ.

ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ಗೆ ಮಂಡ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ ಕುಟುಂಬ ರಾಜಕಾರಣದ ಆರೋಪ ಬರುತ್ತದೆ. ಸುಮಲತಾ ಅಂಬರೀಷ್​ ಸ್ಪರ್ಧಿಸಬೇಕೆಂಬ ಒತ್ತಾಯ ಇರುವುದರಿಂದ ಮಹಿಳೆಗೆ ಅವಕಾಶ ತಪ್ಪಿಸಿದ ಆರೋಪವೂ ಬರಬಹುದು. ಈ ಕಾರಣಕ್ಕಾಗಿ ಇನ್ನೋರ್ವ ಮಹಿಳೆಗೆ ಅವಕಾಶ ನೀಡುವ ಮೂಲಕ ಜೆಡಿಎಸ್​ನಿಂದಲೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ದೇವೇಗೌಡರು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : 38 ವರ್ಷಗಳ ನಂತರ ಅಂಬಿ ಅಭಿನಯದ 'ಅಂತ' ಸಿನಿಮಾ ಮರು ಬಿಡುಗಡೆ..!

ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗದ ನಾಯಕರಿಂದ ಸುಮಲತಾಗೆ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ. ಅಂಬಿಯ 60 ನೇ  ಹುಟ್ಟು ಹಬ್ಬಕ್ಕೆ ಮಂಡ್ಯಕ್ಕೆ ಬಂದಾಗ ಅಂಬಿ ಮೇಲೆ ಜನರು ಇಟ್ಟಿರೋ ಪ್ರೀತಿ ನೋಡಿ ಖುಷಿ ಪಟ್ಟಿದ್ದರು ಅಂಬಿ ಅಭಿಮಾನಿ ಪ್ರೀತಿ ಕಂಡಿದ್ದ ಅವರು ಸುಮಲತಾ ಸ್ಪರ್ಧಿಸುವಂತೆ ಕರೆ ಮಾಡಿದ್ದರು ಎಂದು ಅಂಬರೀಷ್ ಅಭಿಮಾನಿ ಬಳಗದ ರಾಜ್ಯಾದ್ಯಕ್ಷ ಬೇಲೂರು ಸೋಮಶೇಖರ್ ಹೇಳುತ್ತಾರೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...