ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹಿರೇ ಬೆಣಕಲ್ (Hire Benakal, Gangavati, Koppal) ಅತ್ಯಂತ ಹಳೆಯ ಬೃಹತ್ ಶಿಲಾ ತಾಣಗಳಲ್ಲಿ ಒಂದಾಗಿದ್ದು ಇದೀಗ ಯುನೆಸ್ಕೋದ (UNESCO_ ಪಾರಂಪರಿಕ ತಾಣಗಳ 'ತಾತ್ಕಾಲಿಕ' ಪಟ್ಟಿಯಲ್ಲಿ (ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಕ್ಕೆ ಪೂರ್ವಾಪೇಕ್ಷಿತ) ಸ್ಥಾನ ಪಡೆದುಕೊಂಡಿದೆ. ಬೃಹತ್ ಶಿಲಾ ಸಂಪತ್ತನ್ನು (oldest necropolises) ಹೊಂದಿರುವ ಈ ಗ್ರಾಮ ಯುಗಾಯುಗಾಂತರಗಳಿಂದ ಯಾರ ಗಮನಕ್ಕೂ ಬಂದಿಲ್ಲ. ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ಜನಪ್ರಿಯ ಭಾರತೀಯ ತಾಣ ವಾಸ್ತುಶಿಲ್ಪದ ವೈಭವಕ್ಕೆ ಖ್ಯಾತಗೊಂಡಿರುವ ಹಂಪಿಯಿಂದ ಹಿರೇ ಬೆಣಕಲ್ 50 ಕಿಮೀ ದೂರದಲ್ಲಿದೆ.
ಭಾರತದ ಬೃಹತ್ ಶಿಲಾ ಸಮಾಧಿ
ಭಾರತದ ಅತ್ಯಂತ ಹಳೆಯ ಸಮಾಧಿ ಸ್ಥಳಗಳಲ್ಲಿ ಒಂದಾಗಿರುವ ಹಿರೇ ಬೆಣಕಲ್ ತಾಣವು ದಕ್ಷಿಣ ಭಾರತದಲ್ಲೇ ದೊಡ್ಡದಾಗಿದೆ. ಮೆಗಾಲಿಥಿಕ್ (ಬೃಹತ್ ಶಿಲೆ) ಸಮಾಧಿ ಸ್ಥಳವು ಗ್ರಾನೈಟ್ ಬೆಟ್ಟದ ಮೇಲೆ ನೆಲೆಗೊಂಡಿದ್ದು ಪ್ರಮುಖ ಪುರಾತತ್ತ್ವ ಶಾಸ್ತ್ರದ ಸ್ಥಳವಾದ ಧಾರವಾಡ ಸರಣಿಯ ಬಂಡೆಗಳ ಭಾಗವಾಗಿದೆ.
ಮೆಗಾಲಿತ್ಗಳನ್ನು ವಿವಿಧ ರೀತಿಯ ನವಶಿಲಯುಗದ ಹಾಗೂ ಕಂಚಿನ ಯುಗದ ಸ್ಮಾರಕಗಳಲ್ಲಿ ಬಳಸಲಾಗುವ ಬೃಹತ್ ಕಲ್ಲು ಎಂದು ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ವ್ಯಾಖ್ಯಾನಿಸಿದೆ.
ವಿಶ್ವದಾದ್ಯಂತ ಕಂಡುಬರುವ ಈ ಕಲ್ಲಿನ ರಚನೆಗಳು ತಮ್ಮದೇ ಆದ ವಿಶಿಷ್ಟವಾದ ವಾಸ್ತುಶಿಲ್ಪ ಮಾದರಿಗಳ ಮೂಲಕ ನಿರ್ಮಾಣದ ಹಿಂದಿನ ಕಾರಣವನ್ನು ನಿರ್ಧರಿಸಲು ಇತಿಹಾಸಕಾರರಿಗೆ ಸವಾಲೊಡ್ಡಿವೆ.
ಅತ್ಯಂತ ಹಳೆಯ ಸ್ವತಂತ್ರ ರಚನೆ
ಮೃತರಾದವರಿಗೆ ಸಂಬಂಧಿಸಿದ ಆಚರಣೆಗಳು, ಸಮಾಧಿ ಸ್ಥಳ ಇಲ್ಲವೇ ಅಗಲಿದವರ ಸ್ಮಾರಕವಾಗಿ ಈ ಬೃಹತ್ ಶಿಲೆಗಳ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ.
ವಿಶ್ವದ ಅತ್ಯಂತ ಪ್ರಸಿದ್ಧ ಮೆಗಾಲಿಥಿಕ್ ಸ್ಮಾರಕಗಳಲ್ಲಿ ಯುನೈಟೆಡ್ ಕಿಂಗ್ಡಮ್ನ ಸ್ಟೋನ್ಹೆಂಜ್ ಒಂದಾಗಿದೆ. ಮಾಲ್ಟಾದ ಮೆಗಾಲಿಥಿಕ್ ದೇವಾಲಯಗಳು, ಬಹುಶಃ 3000 BC ಮತ್ತು 700 BC ನಡುವಿನ ದಿನಾಂಕವನ್ನು ಸೂಚಿಸಿದ್ದು, ಪ್ರಪಂಚದಲ್ಲೇ ಅತ್ಯಂತ ಹಳೆಯ ಸ್ವತಂತ್ರ ರಚನೆಗಳು ಎಂದು ಹೇಳಲಾಗುತ್ತದೆ.
ಹಿರೇ ಬೆಣಕಲ್ನಲ್ಲಿದೆ ಅದ್ಭುತ ಶಿಲಾ ಸಂಗ್ರಹ
ಹೊಸಪೇಟೆಯಿಂದ ಕೇವಲ 35 ಕಿಮೀ ದೂರದಲ್ಲಿರುವ ಹಿರೇ ಬೆಣಕಲ್ ಸ್ಥಳವು ಮೂರು ಪ್ರದೇಶಗಳಲ್ಲಿ ಹರಡಿರುವ ಸುಮಾರು 20 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ.
ಈ ತಾಣವೂ ಮೀಸಲು ಅರಣ್ಯದ ಒಂದು ಭಾಗವಾಗಿದೆ. ಹಿರೇ ಬೆಣಕಲ್ನಲ್ಲಿ ಸುಮಾರು 100 ಮೆಗಾಲಿಥಿಕ್ ಡಾಲ್ಮೆನ್ಗಳು ( ಗೋರಿಗಳು) ಎತ್ತರದ ನೇರವಾದ ಕಲ್ಲಿನ ರಚನೆಗಳು, ಕಲ್ಲಿನ ಹಾಸುಗಳನ್ನು ಕಾಣಬಹುದಾಗಿದೆ.
ಈ ನೂರಾರು ಮೆಗಾಲಿತ್ ಸ್ಮಾರಕಗಳು ವಿಶಾಲವಾದ ಮತ್ತು ಆಳವಿಲ್ಲದ ಜಲಾನಯನ ಪ್ರದೇಶಗಳ ಬಳಿ ಕಂಡುಬಂದಿವೆ ಹಾಗೂ ಇವುಗಳು ಮಳೆನೀರನ್ನು ಸಂಗ್ರಹಿಸುವ ಕಲ್ಲಿನ ಕೊಳಗಳಾಗಿ ತೋರುತ್ತಿದ್ದು ನಂತರ ಈ ರಚನೆಗಳನ್ನು ತಯಾರಿಸಲು ಬಳಸಲಾಗಿದೆ ಎಂಬುದು ತಿಳಿದುಬಂದಿದೆ.
ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವ ಸಂಗೀತ ಸ್ವರ ಉತ್ಪಾದಿಸುವ ಕಲ್ಲುಗಳು
ಹಿರೇ ಬೆಣಕಲ್ನಲ್ಲಿರುವ ಇನ್ನೊಂದು ಸೋಜಿಗದ ಅಂಶವೆಂದರೆ ಸಂಗೀತ ಕಲ್ಲುಗಳಾಗಿವೆ. ಈ ಕಲ್ಲುಗಳನ್ನು ಕೆಟಲ್ಡ್ರಮ್ ಎಂದು ಕರೆಯಲಾಗುತ್ತದೆ. ಅರ್ಧಗೋಳಾಕಾರವಾಗಿರುವ ಕಲ್ಲಿಗೆ ಮರ ಅಥವಾ ಕಲ್ಲಿನಿಂದ ಬಡಿದಾಗ 1 ಕಿ.ಮೀ ದೂರದವರೆಗೆ ಕೇಳಬಹುದಾದ ಸಂಗೀತದ ಟಿಪ್ಪಣಿಗಳನ್ನು ಉತ್ಪಾದಿಸುತ್ತದೆ.
ಈ ಶಿಲಾ ರಚನೆಗಳಲ್ಲದೆ ಹಿರೇ ಬೆಣಕಲ್ನಲ್ಲಿ ಮತ್ತೊಂದು ಆಶ್ವರ್ಯಕರ ಅಂಶವಿದ್ದು ಅದುವೇ ಇತಿಹಾಸಪೂರ್ವ ಶಿಲಾ ವರ್ಣಚಿತ್ರಗಳಾಗಿವೆ. ಈ ಕಲ್ಲುಗಳಲ್ಲಿರುವ ವರ್ಣಚಿತ್ರಗಳು ಶಿಲಾಯುಗದ ಜನರ ಜೀವನದ ಬಗ್ಗೆ ಸಾಕಷ್ಟು ಸುಳಿವನ್ನು ನೀಡುತ್ತದೆ.
ಪ್ರಾಣಿಗಳು, ದೇವತೆಗಳು, ಆಯುಧಗಳ ಚಿತ್ರಗಳನ್ನು ಕಲ್ಲುಗಳ ಮೇಲೆ ಕಾಣಬಹುದಾಗಿದ್ದು ಇದು ನವಶಿಲಾಯುಗ ಮತ್ತು ಆರಂಭಿಕ ಕಂಚಿನ ಯುಗಕ್ಕೆ ಸಂಬಂಧಿಸಿದವುಗಳಾಗಿವೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: Saath Kabar: ಕೇಳದೆ ನಿಮಗೀಗ ಹೃದಯ ವಿದ್ರಾವಕ ಕೂಗು? 60 ಪತ್ನಿಯರ ಸಮಾಧಿ ನಿರ್ಮಾಣಗೊಂಡ ಇತಿಹಾಸ ಇದು!
ಮೆಗಾಲಿಥಿಕ್ ಸ್ಮಾರಕಗಳು
ಹಿರೇ ಬೆಣಕಲ್ ಬೆಟ್ಟಗಳ ನಡುವೆ ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ವಿಚಿತ್ರವಾದ ಬೆಣಚು ಕಲ್ಲುಗಳ ರಚನೆಗಳನ್ನು ಹಲವಾರು ಸಾವಿರ ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ಕುಬ್ಜ ಸಮುದಾಯಗಳ ಕರಕುಶಲತೆ ಎಂದು ಸ್ಥಳೀಯ ಜನರು ನಂಬಿದ್ದರು. ಆದರೆ ಇತಿಹಾಸಕಾರರ ಪ್ರಕಾರ, ಇವುಗಳು ನವಶಿಲಾಯುಗದ ಕಾಲಕ್ಕೆ ಸೇರಿದ ಮೆಗಾಲಿಥಿಕ್ ಸ್ಮಾರಕಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ