HOME » NEWS » State » MEGA RALLY HELD AT CHIKKAMAGALURU IN THE PART OF DATTA JAYANTHI VCTV LG

ಚಿಕ್ಕಮಗಳೂರು ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ; ನಗರದೆಲ್ಲೆಡೆ ಕೇಸರಿ ಕಲರವ

ಇದೇ ವೇಳೆ ಮಾತಾನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇದು ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ಅಲ್ಲ, ಜನರ ಸಂಕೀರ್ತನಾ ಯಾತ್ರೆ, ಈ ಬಾರಿ ಸರಳವಾಗಿ ಆಚರಣೆ ಮಾಡೋಣ ಅಂದುಕೊಂಡಿದ್ದೆವು. ಆದ್ರೆ ಸಾವಿರಾರು ಜನರು ಉತ್ಸುಕದಿಂದ ಬಂದು ಭಾಗವಹಿಸಿದ್ದಾರೆ ಎಂದರು.

news18-kannada
Updated:December 29, 2020, 8:20 AM IST
ಚಿಕ್ಕಮಗಳೂರು ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ; ನಗರದೆಲ್ಲೆಡೆ ಕೇಸರಿ ಕಲರವ
ಬೃಹತ್ ಸಂಕೀರ್ತನಾ ಯಾತ್ರೆ
  • Share this:
ಚಿಕ್ಕಮಗಳೂರು(ಡಿ.29): ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಸೋಮವಾರ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಿತು. ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭಗೊಂಡ ಸಂಕೀರ್ತನಾ ಯಾತ್ರೆ ಆಜಾದ್ ಪಾರ್ಕ್ ವೃತ್ತದಲ್ಲಿ ಕೊನೆಗೊಳ್ತು. 1500 ಕ್ಕೂ ಹೆಚ್ಚು ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಸಂಕೀರ್ತನಾ ಯಾತ್ರೆ ಎರಡು ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಪಾಲ್ಗೊಂಡಿದ್ದರು. ಸಂಕೀರ್ತನಾ ಯಾತ್ರೆ ಯಲ್ಲಿ ಕೇಸರಿ ಬಾವುಟ ಗಳ ಹಾರಾಟ ಜೋರಾಗಿತ್ತು. ದತ್ತ ಪೀಠದ ಮುಕ್ತಿಗಾಗಿ ಹೋರಾಟ ನಿರಂತರವೆಂದು ಭಕ್ತರು ಪುನರುಚ್ಚರಿಸಿದರು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ದತ್ತಭಕ್ತರು ಉತ್ಸಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ನಮ್ಮಪೀಠ ದತ್ತಪೀಠ, ಜೈಶ್ರೀರಾಮ್ ಘೋಷಣೆ ಕೂಗಿ ಭಕ್ತಿಯ ಪರಕಾಷ್ಟೇ ಮೆರೆದರು. ಮೆರವಣಿಯುದ್ಧಕ್ಕೂ ಮಹಿಳೆಯರು, ಮಕ್ಕಳು, ಯುವತಿಯರು ಭಜನೆ ಕೀರ್ತನೆಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾ ಸಾಗಿದರು.

ಮೆರವಣಿಗೆಯುದ್ದಕ್ಕೂ ಕಣ್ಣು ಹಾಯಿಸಿದಷ್ಟು ಕೇಸರಿ ಭಾವುಟ, ಭಗಧ್ವಜಗಳು ರಾರಾಜಿಸಿದವು. ಸಂಕೀರ್ತನಾ ಯಾತ್ರೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಮೆರವಣಿಗೆ ಸಾಗುವ ಪ್ರತೀ ವೃತ್ತದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ನಿರೀಕ್ಷೆಗೂ ಮೀರಿದ ದತ್ತಭಕ್ತರು, ದತ್ತ ಅಭಿಮಾನಿಗಳು ಆಗಮಿಸಿದರು. ಮೆರವಣಿಗೆ ಶಾಂತಿಯುತವಾಗಿ ಸಾಗುವಂತೆ ಪೊಲೀಸ್ ಇಲಾಖೆ ಕ್ರಮಕೈಗೊಂಡಿತ್ತು.

ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ನಿಧನಕ್ಕೆ ಎಚ್​.ಡಿ.ದೇವೇಗೌಡ, ಸಿಎಂ ಬಿಎಸ್​ವೈ ಸೇರಿ ಹಲವು ಗಣ್ಯರ ಸಂತಾಪ

ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಸಂಕೀರ್ತನಾ ಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಳ್ತು. ಸಂಕೀರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಭಾಗಿಯಾಗಿದ್ರು. ನಗರದ ಪ್ರಮುಖ ಬೀದಿಗಳಲ್ಲಿ ಸಂಕೀರ್ತನಾ ಯಾತ್ರೆ ಸಾಗುವ ವೇಳೆ ಬಿಲ್ಡಿಂಗ್ಗಳ ಮೇಲೆ ಸಾವಿರಾರು ಮಹಿಳೆಯರು, ಪುರುಷರು ನಿಂತು ಸಂಕೀರ್ತನಾ ಯಾತ್ರೆಯನ್ನ ಕಣ್ತುಂಬಿಕೊಂಡರು.

ಇನ್ನು ಇದೇ ವೇಳೆ ಮಾತಾನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇದು ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ಅಲ್ಲ, ಜನರ ಸಂಕೀರ್ತನಾ ಯಾತ್ರೆ, ಈ ಬಾರಿ ಸರಳವಾಗಿ ಆಚರಣೆ ಮಾಡೋಣ ಅಂದುಕೊಂಡಿದ್ದೆವು. ಆದ್ರೆ ಸಾವಿರಾರು ಜನರು ಉತ್ಸುಕದಿಂದ ಬಂದು ಭಾಗವಹಿಸಿದ್ದಾರೆ. ಕೆಲವರು ನನಗೆ ಪ್ರಶ್ನೆ ಮಾಡಿದ್ರು ಏನ್ ಸರ್ ವಾದ್ಯ, ವೀರಗಾಸೆ ಇಲ್ಲ ಅಂತೆ, ಅದಕ್ಕೆ ನಾನು ಹೇಳ್ದೆ ಮುಂದಿನ ವರ್ಷ ಬಡ್ಡಿ ಸಮೇತ ಆಚರಣೆ ಮಾಡೋಣ ಅಂದೆ ಎಂದರು.
ಬೃಹತ್ ಸಂಕೀರ್ತನಾ ಯಾತ್ರೆಯಲ್ಲಿ ಭಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್, ಭಜರಂಗದಳದ ರಾಜ್ಯ ಸಂಯೋಜಕ ಕೆ.ಆರ್.ಸುನೀಲ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಭಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು, ಕೃಷ್ಣ, ಚಂದ್ರು, ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಉಪಾಧ್ಯಕ್ಷ ಪ್ರೇಮ್‍ಕುಮಾರ್ ಜಿ.ಪಂ. ಸದಸ್ಯೆ ಜಸಿಂತಾ ಅನಿಲ್ ಕುಮಾರ್ ಸೇರಿದಂತೆ ತಾಲ್ಲೂಕು ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Published by: Latha CG
First published: December 29, 2020, 8:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories