4 ದಿನಗಳಲ್ಲಿ 17 ಪರ್ವತ ಏರಿರುವ ಕೊಪ್ಪಳದ ಯೋಧ

ಈ ಸಾಧನೆಯಿಂದಾಗಿ ಅವರಿಗೆ  2 ಇಂಡಿಯಾ ಬುಕ್ ಆಫ್ ರೆಕಾರ್ಡ್, 2 ಏಷ್ಯಾ ಬುಕ್ ಆಫ್ ರಿಕಾರ್ಡ್, 1 ನೊಬೆಲ್ ವರ್ಲ್ಡ್ ರೆಕಾರ್ಡ್, 1 ವರ್ಲ್ಡ್ ಆಫ್  ರೆಕಾರ್ಡ್ ಹೀಗೆ 6 ದಾಖಲೆ ಬರೆದ  ಸಾಧನೆ ಮಾಡಿದ್ದಾರೆ.

ಕೊಪ್ಪಳದ ಯೋಧ

ಕೊಪ್ಪಳದ ಯೋಧ

  • Share this:
ಕೊಪ್ಪಳ: ಇಲ್ಲೊಬ್ಬ ಪರ್ವತಾರೋಹಿ(Mountaineer)ಗಳಿದ್ದಾರೆ. ಅವರ ಪರ್ವತಾರೋಹಣದಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ ಬಂದಿವೆ .ಈ ಸಾಧನೆಯಲ್ಲಿ ಮಾಡಿದವರಲ್ಲಿ ದಕ್ಷಿಣ ಭಾರತದಲ್ಲಿ (South India) ಪ್ರಥಮರಾಗಿದ್ದಾರೆ. ಸೇನೆಯಲ್ಲಿರುವ ಈ ಪರ್ವತಾರೋಹಿ ಕೊಪ್ಪಳದ ಗವಿಮಠಕ್ಕೆ (Gavi mutt koppal)ಆಗಮಿಸಿ ಇಲ್ಲಿಯ ಸ್ವಾಮೀಜಿ  ಆಶೀರ್ವಾದ ಪಡೆದರು.ಇವರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರದ ವೀರೇಶ್ ಗಾದಿಗನೂರು, ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಗುಡ್ಡ, ಬೆಟ್ಟಗಳನ್ನು ಏರುವ ಹವ್ಯಾಸ.

ಈ ಹವ್ಯಾಸದ ಹಿನ್ನೆಲೆಯಲ್ಲಿ ಅವರು ಸೇನೆ ಸೇರಿದ ನಂತರವೂ ಅಲ್ಲಿಯ ಅಧಿಕಾರಿಗಳ ಸಹಾಯದಿಂದಾಗಿ ಪರ್ವತರೋಹಣದ ತರಬೇತಿ ಪಡೆದಿದ್ದಾರೆ. ಈಗಾಗಲೇ 27 ಎತ್ತರದ ಬೆಟ್ಟಗಳನ್ನು ಏರಿರುವ ವೀರೇಶ್, ಇತ್ತೀಚಿಗೆ 4 ದಿನಗಳಲ್ಲಿ 17 ಎತ್ತರದ ಬೆಟ್ಟಗಳನ್ನು ಏರಿದ್ದಾರೆ.

meet the koppal Mountaineer
ಕೊಪ್ಪಳದ ಯೋಧ


6,300 ಮೀಟರ್ ಎತ್ತರದ ಮೌಂಟ್ ಮೆಟಾಕ್

ಒಟ್ಟು 6,300 ಮೀಟರ್ ಎತ್ತರವನ್ನು ಏರಿದ್ದಾರೆ. ಅದು ಹಿಮಾಚ್ಚಾಧಿತ ಗುಡ್ಡವನ್ನು ಏರಿ ಸಾಧನೆ ಮಾಡಿದ್ದಾರೆ. ಆಗಸ್ಟ್  19 ರಂದು ಉತ್ತರ ಖಂಡದಿಂದ ಮನೋಜ್ ಜೋಶಿ,  ಉತ್ತರ ಪ್ರದೇಶದ ದೀಪಕ್ ಕುಮಾರ್ ಇವರೊಂದಿಗೆ ವೀರೇಶ್ ನೇತೃತ್ವದ ತಂಡವು ದೆಹಲಿಯಿಂದ ಹೊರಟು ಆಗಸ್ಟ್ 24 ರಂದು ಆರೋಹಣ ಆರಂಭಿಸಿದ ತಂಡವು ನಾಲ್ಕು ದಿನಗಳ ಕಾಲ ಪರ್ವತ ಏರಿದ್ದು 6,300 ಮೀಟರ್ ಎತ್ತರದ ಮೌಂಟ್ ಮೆಟಾಕ್ ಎಂಬ ಪರ್ವತ ಏರಿದ್ದಾರೆ.

ಇದನ್ನೂ ಓದಿ:  ಮಂಗಳೂರಿನಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಪೊಲೀಸರ ವಿರುದ್ಧ ಆಕ್ರೋಶ ಸ್ಫೋಟ

ಹೆಸರಿನಲ್ಲಿವೆ ಆರು ದಾಖಲೆಗಳು

ಈ ಸಾಧನೆಯಿಂದಾಗಿ ಅವರಿಗೆ  2 ಇಂಡಿಯಾ ಬುಕ್ ಆಫ್ ರೆಕಾರ್ಡ್, 2 ಏಷ್ಯಾ ಬುಕ್ ಆಫ್ ರಿಕಾರ್ಡ್, 1 ನೊಬೆಲ್ ವರ್ಲ್ಡ್ ರೆಕಾರ್ಡ್, 1 ವರ್ಲ್ಡ್ ಆಫ್  ರೆಕಾರ್ಡ್ ಹೀಗೆ 6 ದಾಖಲೆ ಬರೆದ  ಸಾಧನೆ ಮಾಡಿದ್ದಾರೆ.

meet the koppal Mountaineer
ಕೊಪ್ಪಳದ ಯೋಧ


ದೀಪಕ್ ಕುಮಾರ್ ದಾಖಲೆ ಬ್ರೇಕ್ ಮಾಡಿದ ವೀರೇಶ್ 

ಈ ಹಿಂದೆ 2019 ರಲ್ಲಿ ದೀಪಕ್ ಕುಮಾರ್ 5800 ಮೀಟರ್ ಎತ್ತರವನ್ನು ಏರಿದ ದಾಖಲೆ ಇತ್ತು. ದೀಪಕ್ ಕುಮಾರ್ ಒಳಗೊಂಡಿರುವ ತಂಡವು ಈ ದಾಖಲೆಯನ್ನು ಮುರಿದು ಈಗ 6,000 ಮೀಟರ್ ಎತ್ತರ ಏರಿದ್ದಾರೆ.

ಮೌಂಟ್ ಎವರೆಸ್ಟ್ ಏರುವ ಕನಸು

ಪರ್ವತಾರೋಹಿಗಳಲ್ಲಿ ಮುಖ್ಯವಾದ ಕನಸು ಮೌಂಟ್ ಎವರೆಸ್ಟ್ ಏರುವುದು, ಅವರಲ್ಲಿಯೂ ಮೌಂಟ್ ಎವರೆಸ್ಟ್ ಪರ್ವತವನ್ನು ಏರುವ ಆಸೆ ಇಟ್ಟುಕೊಂಡಿದ್ದಾರೆ. ವೀರೇಶ್ 20 ವರ್ಷದ ಸೇನೆಯ ಸರ್ವಿಸ್ ನಲ್ಲಿದ್ದು ಅವರಿಗೆ ಪತ್ನಿ ಹಾಗೂ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

meet the koppal Mountaineer
ಕೊಪ್ಪಳದ ಯೋಧ


ಇದನ್ನೂ ಓದಿ:  ಯೋಗ ಕಲಿಸುವ ವೇಳೆ ಲವ್; ಮದುವೆ ಆಗಲು ತಯಾರಿ ನಡೆಸಿದವ ಗೆಳತಿಯನ್ನ ಕೊಂದೇ ಬಿಟ್ಟ!

ತಮ್ಮ ಕನಸಿನ ಮೌಂಟ್ ಎವರೆಸ್ಟ್ ಏರಬೇಕು ಎನ್ನುವ ಆಸೆ ಇದೆ. ಅದಕ್ಕಾಗಿ ಯತ್ನ ಮುಂದುವರಿಸಿದ್ದಾರೆ.

ಶ್ರೀಗಳ ಆಶೀರ್ವಾದ ಪಡೆದ ಯೋದ 

ಸೇನಾ ನಿವೃತ್ತಿಯ ನಂತರವೂ ಪರ್ವತರೋಹಣವನ್ನು ಮುಂದುವರಿಸಲಿದ್ದಾರೆ. ಈಗ ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದು ಈ ಸಂದರ್ಭದಲ್ಲಿ ಕೊಪ್ಪಳದ ಗವಿಮಠಕ್ಕೆ ಆಗಮಿಸಿ ಶ್ರೀಗವಿಸಿದ್ದೇಶ್ವರ ಸ್ವಾಮಿಜಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ್, ಈ ಸಾಧನೆ ಮಾಡಲು ಕುಟುಂಬ ಹಾಗೂ ಸೇನೆಯ ಅಧಿಕಾರಿಗಳ ಸಹಕಾರವಿದೆ ಎಂದು ಹೇಳಿದರು. ಸಾಮಾನ್ಯವಾಗಿ ಈ  ಅತಿ ಚಳಿ ದಿನಗಳಲ್ಲಿ ನಾವು ಹೊರಗಡೆ ಬರಲು ಹಿಂಜರಿಯುತ್ತೇವೆ, ಆದರೆ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಹಿಮಾಲಯದ ಪರ್ವತ ಶ್ರೇಣಿಯ ಬೆಟ್ಟವನ್ನು ಏರಿರುವ ಬಿಸಿಲು ನಾಡಿನ ಈ ಮಿಲಿಟ್ರಿ ಮ್ಯಾನ್ ಸಾಧನೆಗೆ ಕೊಪ್ಪಳ ಜಿಲ್ಲೆಯು ಹೆಮ್ಮೆ ಪಡುವಂತಾಗಿದೆ.
Published by:Mahmadrafik K
First published: