ಒಂದು ಭೇಟಿಗಾಗಿ ಕಾಯುತ್ತಿದ್ದಾನೆ ಪವರ್ ಸ್ಟಾರ್ ಪುನಿತ್ ಅಭಿಮಾನಿ

news18
Updated:July 10, 2018, 4:31 PM IST
ಒಂದು ಭೇಟಿಗಾಗಿ ಕಾಯುತ್ತಿದ್ದಾನೆ ಪವರ್ ಸ್ಟಾರ್ ಪುನಿತ್ ಅಭಿಮಾನಿ
news18
Updated: July 10, 2018, 4:31 PM IST
- ಲೋಹಿತ್ ಶಿರೋಳ ನ್ಯೂಸ್18 ಕನ್ನಡ

ಚಿಕ್ಕೋಡಿ ( ಜುಲೈ 10):  ಅವರು ಪಕ್ಕಾ  ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿಮಾನಿಗಳು. ಪುನೀತ್ ರಾಜಕುಮಾರ ಅಂದ್ರೆ ಅವರಿಗೆ ಪಂಚಪ್ರಾಣ. ಪುನೀತ್ ರಾಜಕುಮಾರ ಚಿತ್ರಗಳು ಸಂಗ್ರಹಿಸಿ ತಮ್ಮ ಮನೆಯಲ್ಲಿ ಅಂಟಿಸಿದ್ದಾರೆ. ಅಷ್ಟೇ ಅಲ್ಲದೇ  ಇವರು ಪುನೀತ್ ರಾಜಕುಮಾರನಂತೆಯೇ ಸ್ಟಂಟ್, ಕಿಕ್, ಡ್ಯಾನ್ಸ್ ಕೂಡಾ ಮಾಡ್ತಾರೆ.  15ಕ್ಕೂ ಹೆಚ್ಚು   ಯುವಕರ ಗುಂಪು ಪುನೀತ್ ರಾಜಕುಮಾರ ಸ್ಟಂಟ್ ಗ್ರುಪ್ ಮಾಡಿಕೊಂಡು  ಪುನೀತ್ ಅವರ ಎದುರು ತಮ್ಮ ಕಲೆ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ.

ಇವರೆಲ್ಲರೂ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿನ ಬಡ ಪ್ರತಿಭೆಗಳು. ಇವರು ಸಹ ಪುನಿತ್ ರಾಜಕುಮಾರ ಅಭಿಮಾನಿಗಳು ಕಳೆದ ಹಲವು ವರ್ಷಗಳಿಂದ ಪುನಿತ್ ರಾಜಕುಮಾರ ಹೆಸರಿನ ಅಭಿಮಾನಿ ಸಂಘ ಮಾಡಿಕೊಂಡು ಗೋಪಿ ಎಂಬ ಯುವಕ ಯಾರ ಸಹಾಯವಿಲ್ಲದೆ ಪುನಿತ್ ಅವರ ಚಿತ್ರಗಳನ್ನೆ ನೋಡುತ್ತಾ ಪುನಿತ್ ಮಾಡುವ ಪ್ರತಿಯೊಂದು ಸ್ಟಂಟ್ ಗಳನ್ನ ಮಾಡುತ್ತಿದ್ದಾರೆ.

ಗುಡಿಸಲಿನಲ್ಲಿ ವಾಸವಾಗಿರುವ ಗೋಪಿ ತನ್ನ ಗುಡಿಸಲನ್ನೆ ಸಿನಿಮಾ ಥೆಟರ್ ತರಹ ಪುನಿತ್ ಅವರ ಭಾವಚಿತ್ರದಿಂದ ಅಲಂಕಾರ ಮಾಡಿದ್ದನೆ.  ಗೋಪಿ ತಾನು ಸ್ಟಂಟ್ ಮಾಡೊದನ್ನ ಕಲಿತಿದ್ದು ಅಲ್ಲದೆ ಅದೆ ಗ್ರಾಮದ 15ಕ್ಕೂ ಹೆಚ್ಚು ಯುವಕರಿಗೆ ಕಲೆಯ ತರಬೇತಿ ನಿಡುತ್ತಿದ್ದಾರೆ. ತಮ್ಮ ಗ್ರಾಮ ಹಾಗೂ ಸುತ್ತಲು ಗ್ರಾಮದಗಳಲ್ಲಿ ಜಾತ್ರೆ ಸಮಾರಂಭದಲ್ಲಿ ಡಾನ್ಸ ಹಾಗೂ ಸ್ಟಂಟ್ ಗಳನ್ನ ಪ್ರದರ್ಶನ ಮಾಡುತ್ತಿದ್ದಾರೆ. ಒಮ್ಮೆಯಾದರು. ತನ್ನ ನೆಚ್ಚಿನ ನಾಯಕನ್ನ ಭೇಟಿಯಾಗಿ ತಮ್ಮ ಕಲೆಯನ್ನ ಪುನಿತ್ ಎದುರಿಗೆ ತೊರಿಸಬೇಕೆಂಬ ಬಯಕೆಯನ್ನ ಹೊಂದಿದ್ದಾರೆ.

ಇನ್ನು ಗೋಪಿ ಗೋಪಿ ಅಂತಿಂತಾ ಆಭಿಮಾನಿಯಲ್ಲ ಪುನಿತ್ ಯಾವುದೆ ಹೊಸ ಚಿತ್ರ ಬಂದರೂ ಅದನ್ನ ತಪ್ಪದೆ ನೋಡಿ ಯಾವುದೇ ಹೊಸ ಸ್ಟಂಟ್ ಮಾಡಿದರು ಅದನ್ನ ಇವರು ಸಹ ಮಾಡಿ ತೊರಿಸುತ್ತಾರೆ. ಇವರ ಗುಂಪಿನಲ್ಲಿನ ಪ್ರತಿ ಯುವಕರು ಒಂದೊಂದೂ ಪ್ರತಿಭೆಯನ್ನ ಹೊಂದಿದ್ದಾರೆ.

ಗೋಪಿ ಮತ್ತು ಅವರ ಸ್ನೇಹಿತರು ಒಂದು ವಿಡಿಯೋ ಮಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಲಕ್ಷಾಂತರ ಜನ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ನಮಗೆ ಬೇರೆ ಗುರಿ ಇಲ್ಲ. ಪುನೀತ್ ರಾಜಕುಮಾರ‌ ಎದುರು ನಮ್ಮ ಕಲೆ ಪ್ರದರ್ಶನ ಮಾಡುವುದು ಒಂದೇ ಗುರಿ ಅಂತಾರೆ ಇವರ ಸ್ನೇಹಿತರು.

ಒಟ್ಟಿನಲ್ಲಿ ಗುರು ಇಲ್ಲದೆ ಸ್ಟಂಟ್ ಕಲಿತಿರುವ ಇವರು ಒಂದೆ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಮ್ಮೆ ಪುನಿತ್ ರಾಜಕುಮಾರ ಅವಕಾಶ ನೀಡಿದರೆ ಸಾಕು ನನ್ನ ಜೀವನ ಸಾರ್ಥಕ ಎನ್ನುತ್ತಿದ್ದಾರೆ. ಇಂತಹ ಬಡ ಪ್ರತಿಭೆಗೆ ಇಂದು ಅವಕಾಶ ಸಿಗಲಿ ಎಂಬುದೆ ನಮ್ಮ ಆಶಯ.

First published:July 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ