• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chamarajanagar: ಶಸ್ತ್ರಚಿಕಿತ್ಸೆ ವಿಧಾನಗಳ ನೇರ ಪ್ರಾತ್ಯಕ್ಷಿಕೆ ಮಾಡಿದ ಚಾಮರಾಜ ನಗರದ ಸಿಮ್ಸ್ ಆಸ್ಪತ್ರೆ

Chamarajanagar: ಶಸ್ತ್ರಚಿಕಿತ್ಸೆ ವಿಧಾನಗಳ ನೇರ ಪ್ರಾತ್ಯಕ್ಷಿಕೆ ಮಾಡಿದ ಚಾಮರಾಜ ನಗರದ ಸಿಮ್ಸ್ ಆಸ್ಪತ್ರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈವರೆಗೆ ಕೃತಕ ಮಂಡಿಚಿಪ್ಪು ಜೋಡಣೆಯ ವಿಧಾನಗಳನ್ನು ವಿಡಿಯೋ ಮೂಲಕ ನೋಡಿ ಕಲಿಯಬೇಕಿತ್ತು, ಇಲ್ಲವೇ ಫೆಲೋಶಿಪ್ ಮಾಡಬೇಕಿತ್ತು ಆದರೆ ಈಗ ಈ ರೀತಿ ವಿಡಿಯೋ ಮಾಡಿರುವುದು ಕಲಿಕೆಗೆ ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಚಾಮರಾಜ ನಗರ: ವೈದ್ಯಕೀಯ (Medical) ಕ್ಷೇತ್ರ ತುಂಬಾ ಮುಂದಿವರೆದಿದೆ ಎಲ್ಲಾ ರೀತಿಯ ಚಿಕಿತ್ಸೆಗಳು ಕೂಡ ಈಗ ತಂತ್ರಜ್ಞಾನದ ಮೂಲಕ ಸುಲಭವಾಗುತ್ತದೆ. ಅಷ್ಟೇ ಅಲ್ಲ ವೈದ್ಯಕೀಯ ಕ್ಷೇತ್ರದಲ್ಲೇ ತಮ್ಮ ವೃತ್ತಿಯನ್ನು ಮುಂದುವರಿಸಲು ಬಯಸುವ ಅದೆಷ್ಟೋ ಜನರಿಗೆ ಇದೀಗ ಯುಟ್ಯೂಬ್​ಗಳಲ್ಲಿ ಅನೇಕ ವಿಡಿಯೋಗಳೂ ಸಹ ಲಭ್ಯವಿದೆ. ಆದರೆ ಇದೀಗ ಚಾಮರಾಜ ನಗರದ (Chamarajanagar) ಸಿಮ್ಸ್ ಆಸ್ಪತ್ರೆಯಲ್ಲಿ ಕೃತಕ ಮಂಡಿಚಿಪ್ಪು ಜೋಡಣೆ ಶಸ್ತ್ರಚಿಕಿತ್ಸೆಯ ಲೈವ್ (Live) ಡೆಮಾನ್‌ಸ್ಟ್ರೇಷನ್ ಮಾಡಲಾಗಿದೆ.


ರಾಜ್ಯದಲ್ಲೇ ಮೊದಲ ಬಾರಿಗೆ ಲೈವ್


ನಮ್ಮ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯ ಮಾಡಲಾಗಿದೆ. ಮಂಡಿಚಿಪ್ಪು ಜೋಡಣೆಯ ಶಸ್ತ್ರಚಿಕಿತ್ಸೆ ರಾಜ್ಯದಲ್ಲೇ ಮೊದಲ ಬಾರಿಗೆ ಲೈವ್ ಡೆಮಾನ್‌ಸ್ಟ್ರೇಷನ್ ಮಾಡಲಾಗಿದೆ. ಸಿಮ್ಸ್ ತಜ್ಞ ವೈದ್ಯರಿಂದ ಏಕ ಕಾಲದಲ್ಲಿ ಐದು ಮಂದಿ ರೋಗಿಗಳಿಗೆ ಮಂಡಿಚಿಪ್ಪು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿದ ವಿಡಿಯೋ ಲೈವ್​ ಮಾಡಲಾಗಿದೆ.


ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆಯ ನೇರ ಪ್ರಾತ್ಯಕ್ಷಿಕೆ


ರಾಜ್ಯದ ವಿವಿಧ ಆಸ್ಪತ್ರೆಗಳ 30 ಮಂದಿ ಕೀಲು ಮತ್ತು ಮೂಳೆ ವೈದ್ಯರು ಹಾಗು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆಯ ನೇರ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಬಯಸುವ ಅದೆಷ್ಟೋ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಈ ವಿಡಿಯೋ ಸಹಾಯವಾಗಿದೆ. ಈ ಹಿಂದೆ ಈ ಕುರಿತು ಅಭ್ಯಾಸ ಮಾಡಲು ಬಯಸಿದ ವಿದ್ಯಾರ್ಥಿಗಳಿಗೆ ಕೃತಕವಾಗಿ ಇದನ್ನು ತೋರಿಸಲಾಗುತ್ತಿತ್ತು. ಅದಕ್ಕಿಂತ ಇದು ಕಲಿಕೆಗೆ ತುಂಬಾ ಪರಿಣಾಮಕಾರಿಯಾಗಿದೆ.


ಇದನ್ನೂ ಓದಿ: Siddaramaiah: ಡಿಕೆಶಿ ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ


ಕೃತಕ ಮಂಡಿಚಿಪ್ಪು ಜೋಡಣೆ ಕಲಿಕೆ


ಈವರೆಗೆ ಕೃತಕ ಮಂಡಿಚಿಪ್ಪು ಜೋಡಣೆಯ ವಿಧಾನಗಳನ್ನು ವಿಡಿಯೋ ಮೂಲಕ ನೋಡಿ ಕಲಿಯಬೇಕಿತ್ತು, ಇಲ್ಲವೇ ಫೆಲೋಶಿಪ್ ಮಾಡಬೇಕಿತ್ತು ಆದರೆ ಈಗ ಈ ರೀತಿ ವಿಡಿಯೋ ಮಾಡಿರುವುದು ಕಲಿಕೆಗೆ ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.


ಕಲಿಕೆಗೆ ಪೂರಕವಾಗಿದೆ ಪ್ರಾತ್ಯಕ್ಷಿಕೆ


ಇದೀಗ ಸ್ವತಃ ನೇರವಾಗಿ ಭಾಗಿಯಾಗುವ ಅವಕಾಶ ದೊರೆತದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಶಸ್ತ್ರಚಿಕಿತ್ಸಾ ಚಟುವಟಿಕೆಗಳಲ್ಲಿ ಸ್ವತಃ ಭಾಗಿಯಾಗಲು ಅನುವು ಮಾಡಿಕೊಟ್ಟಿರುವುದು ಕಲಿಕೆಗೆ ಪೂರಕವಾಗಿದೆ. ಸಿಮ್ಸ್ ಆಸ್ಪತ್ರೆಯಲ್ಲಿ ಏಕ ಕಾಲದಲ್ಲಿ ಐದು ಮಂದಿಗೆ ಕೃತಕ ಮಂಡಿ ಚಿಪ್ಪು ಜೋಡಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.


ಈ ಹಿಂದೇ ಕೂಡ ಇದೇ ರೀತಿ ಇನ್ನೊಂದು ಪ್ರಯತ್ನ ಮಾಡಲಾಗಿತ್ತು
ಬೆಂಗಳೂರಿನ ಪ್ರಸೂತಿ ತಜ್ಞ ವೈದ್ಯ ಚಂದ್ರಶೇಖರ್ ಮೂರ್ತಿ ಅವರ ನೇತೃತ್ವದ ಹತ್ತು ಮಂದಿ ವೈದ್ಯರ ತಂಡದಿಂದ ಆರು ಮಂದಿ ಮಹಿಳೆಯರಿಗೆ ಗರ್ಭಕೋಶ ಸಂಬಂಧಿತ ಕಾಯಿಲೆಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಒಟ್ಟು ಹದಿನೈದು ಮಂದಿ ಮಹಿಳೆಯರ ಪೈಕಿ ಮೊದಲ ದಿನ ಆರು ಮಂದಿಗೆ ಹೊಟ್ಟೆ ಭಾಗವನ್ನು ಕೊಯ್ಯದೆ ಯೋನಿಯ ಮೂಲಕ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.


ಕಡಿಮೆ ಕರ್ಚಿನಲ್ಲಿ ಮಾಡಬಹುದಾದ ಶಸ್ತ್ರ ಚಿಕಿತ್ಸೆ


Non decent vaginal hysterectomy, Vault Prolaps, Vesico Vaginal Fistula Repair, Pubo Vaginal Sling, Lipo Plasty, Perineoplasty ಹೀಗೆ ಆರು ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದ್ದು, ಇಂತಹ ಶಸ್ತ್ರ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಲಕ್ಷ ರೂಪಾಯಿಗಳವರೆಗೂ ಖರ್ಚಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಇಂತಹ ಶಸ್ತ್ರ ಚಿಕಿತ್ಸೆಗಳನ್ನು ಮಾಡಲು ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದರು.

First published: