• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Student Suicide: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮೆಡಿಕಲ್​ ವಿದ್ಯಾರ್ಥಿನಿ; ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Student Suicide: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮೆಡಿಕಲ್​ ವಿದ್ಯಾರ್ಥಿನಿ; ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ತೇಜಶ್ರೀ

ತೇಜಶ್ರೀ

ಮಾನಸಿಕವಾಗಿ ನೊಂದಿದ್ದ ತೇಜಶ್ರೀ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ತೇಜಶ್ರೀಯನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಯಲ್ಲಿ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ತೇಜಶ್ರೀ ಸಾವನ್ನಪ್ಪಿದ್ದಾಳೆ.

  • Share this:

ಕೊಪ್ಪಳ (ಜು 3): ಮೆಡಿಕಲ್​ ಕಾಲೇಜು (Medical College) ವಿದ್ಯಾರ್ಥಿನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದ ಕಿಡದಾಳ್​ ರೈಲ್ವೇ ಗೇಟ್​ ಬಳಿ ನಡೆದಿದೆ. 22 ವರ್ಷದ ತೇಜಶ್ರೀ ಆತ್ಮಹತ್ಯೆ ಮಾಡಿಕೊಂಡ‌ ವಿದ್ಯಾರ್ಥಿನಿಯಾಗಿದ್ದಾಳೆ. ತೇಜಶ್ರೀ (TejShree) ಮೂಲತಃ ಬಳ್ಳಾರಿ ಜಿಲ್ಲೆಯವರಾಗಿದ್ದು, ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಕೆಲಸವನ್ನು ಮಾಡುತ್ತಿದ್ದಳು. ಆದರೆ ಮಾನಸಿಕವಾಗಿ ನೊಂದಿದ್ದ ಈಕೆ ಇಂದು ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ (Suicide) ಯತ್ನಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ತೇಜಶ್ರೀಯನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಯಲ್ಲಿ (Hospital)  ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ತೇಜಶ್ರೀ ಸಾವನ್ನಪ್ಪಿದ್ದಾಳೆ.




ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತೇಜಶ್ರೀ


ಮಾನಸಿಕ ಖಿನ್ನತೆ ಅದೆಷ್ಟೋ ಮಂದಿಯನ್ನು ಬಲಿ ತೆಗೆದುಕೊಳ್ತಿದೆ. ತೇಜ ಶ್ರೀ ಕೂಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ರು. ಕಳೆದ 3 ತಿಂಗಳಿಂದ ಮಾನಸಿಕ ಖಿನ್ನತೆಗೆ ತೇಜಶ್ರೀ ಒಳಗಾಗಿದ್ದಳು ಎಂದು ಪೋಷಕರು ತಿಳಿಸಿದ್ದು, ಗದಗ ರೈಲ್ವೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸಾವಿನ ತನಿಖೆ ನಡೆಸಿದ್ದಾರೆ.


ಇದನ್ನೂ ಓದಿ: Breaking News: ಮಹಿಳೆ ಹತ್ಯೆ ಗೈದು ಬೆಂಕಿ ಇಟ್ಟ ಪಾಪಿಗಳು! ನಿರ್ಜನ ಪ್ರದೇಶದಲ್ಲಿ ನಡೆಯಿತಾ ಪೈಶಾಚಿಕ ಕೃತ್ಯ?


ಗುರಾಯಿಸಿ ನೋಡಿದ್ದಕ್ಕೆ ಚಾಕು ಇರಿತ


ಚಿತ್ರದುರ್ಗ: ಗುರಾಯಿಸಿ ನೋಡಿದ್ದನ್ನು ಪ್ರಶ್ನಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದಿರುವ ಪ್ರಕರಣ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಕೃಷ್ಣ ರಾಜಪುರ ರಸ್ತೆಯಲ್ಲಿ ನಡೆದಿದೆ. ಸಮಿವುಲ್ಲಾ (35) ಚಾಕು ಇರಿತಕ್ಕೊಳಗಾದ ವ್ಯಕ್ತಿ.


ಸಮಿವುಲ್ಲಾ ಸ್ಥಿತಿ ಗಂಭೀರ


ನೂತನ್ ಎಂಬ ಯುವಕ ಸಮಿವುಲ್ಲಾ ಎಂಬಾತನನ್ನು ಗುರಾಯಿಸಿದ್ದಾನೆ. ಈ ವೇಳೆ ಇದನ್ನು ಪ್ರಶ್ನಿಸಿದ್ದಕ್ಕೆ ಸಮಿವುಲ್ಲಾಗೆ ಚಾಕು ಇರಿದು ಗಾಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಚಾಕು ಇರಿತಕ್ಕೊಳಗಾದ ಸಮಿವುಲ್ಲಾ ಸ್ಥಿತಿ ಗಂಭೀರವಾಗಿದ್ದು, ಆತನನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.


ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ


ಘಟನೆ ಬಳಿಕ ಆರೋಪಿ ನೂತನ್​ ತಲೆಮರೆಸಿಕೊಂಡಿದ್ದಾನೆ. ವಿಶೇಷ ತಂಡಗಳನ್ನ ರಚಿಸಿ ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಮುಕ ಶಿಕ್ಷಕ ಅಂದರ್​


ಪಾಠದ ನೆಪದಲ್ಲಿ ಮಕ್ಕಳನ್ನು (Children) ಸಂಜೆ ಕ್ಲಾಸ್ ಗೆ (Evening Class) ಕರೆಸಿ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ (Teacher) ಮಹಮ್ಮದ್ ಅಜರುದ್ಧಿನ್ ನನ್ನು ಧಾರವಾಡ (Dharwad) ಜಿಲ್ಲೆಯಲ್ಲಿ ಪೊಲೀಸರು (Police) ಬಂಧಿಸಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಮಕ್ಕಳ ತಾಯಂದಿರಿಗೆ ಸರ್ಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿ ಅವರ ಜೊತೆ ದೈಹಿಕ ಸಂಪರ್ಕ (Relationship) ಹೊಂದಿದ್ದನು. ಮಕ್ಕಳ ಜೊತೆಗ ಅಸಭ್ಯವಾಗಿ ವರ್ತನೆ ಮತ್ತು ಮಹಿಳೆಯರ ಜೊತೆಗಿನ ಖಾಸಗಿ ವಿಡಿಯೋಗಳು ವೈರಲ್ (Viral Video) ಆಗಿದ್ದವು. ಇತ್ತ ಸಂತ್ರಸ್ತೆ ತನಗಾದ ಮೋಸದ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ (Karatagi Police Station) ದೂರು ಸಹ ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಶಿಕ್ಷಕ ಮಹಮದ್ ಅಜರುದ್ಧಿನ್ ಮೊಬೈಲ್


ವರ್ಷದ ಹಿಂದೆ ದಾಖಲಾಗಿತ್ತು ದೂರು


ವಿಕೃತಕಾಮಿ ಶಿಕ್ಷಕನ ವಿರುದ್ದ ಪತ್ನಿ ಸಲ್ಮಾ ಬೇಗ ವರ್ಷ ಹಿಂದೆಯೇ ಬಿಇಓ (ಶಿಕ್ಷಣಾಧಿಕಾರಿ) ಗೆ ದೂರು ಸಲ್ಲಿಸಿದ್ದರು. ನಾನು ಮನೆಯಲ್ಲಿರುವಾಗಲೇ ವಿವಾಹಿತ, ವಿಧವೆಯರನ್ನು ಕರೆದುಕೊಂಡು ಬರುತ್ತಿದ್ದನು. ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದನು. ಈ ಸಮಯದಲ್ಲಿ ಬೇರೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದುತ್ತಿದ್ದ


ಇದನ್ನೂ ಓದಿ: Love Jihad: ಸರ್ಕಾರಿ ಶಿಕ್ಷಕನ ಕಾಮಪುರಾಣ, ರಾಸಲೀಲೆ ಹಿಂದೆ ಲವ್ ಜಿಹಾದ್ ಹುನ್ನಾರ; ಸಂತ್ರಸ್ತೆ ಬಿಚ್ಚಿಟ್ಟ ಸ್ಫೋಟಕ ಸತ್ಯ


ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!


ಕೊಲೆ ನಡೆಯೋದಕ್ಕೆ ಯಾವ ಘನಂದಾರಿ ಕಾರಣವೂ ಬೇಕಿಲ್ಲ, ಚಿಕ್ಕ ಚಿಕ್ಕ ಸಿಲ್ಲಿ ಎನಿಸುವಂತೆ ರೀಸನ್‌ಗಳಿಗೆಲ್ಲ ಕೊಲೆ ನಡೆದೇ ಹೋಗುತ್ತದೆ ಎನ್ನುವುದಕ್ಕೆ ಬೆಂಗಳೂರಿನಲ್ಲೇ ಉದಾಹರಣೆಯೊಂದು ನಡೆದಿದೆ. ಇಲ್ಲಿ ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಂದು ಮುಗಿಸಿದ್ದಾನೆ. ಈ ಕೊಲೆಗೆ ಕಾರಣ ಮಾತ್ರ ಕ್ಷುಲ್ಲಕ. ಅಷ್ಟಕ್ಕೂ ತಮ್ಮ ಗುರಾಯಿಸಿದ ಎಂಬ ಕಾರಣ ತೆಗೆದು, ಅಣ್ಣ ಆ ತಮ್ಮನನ್ನು ಕೊಲೆ ಮಾಡಿದ್ದಾನೆ.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು