Ganesha Festival: ಗಣೇಶ ಹಬ್ಬದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ, ಬಿಬಿಎಂಪಿ ಆದೇಶ

ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ನಾಡಿದ್ದು ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಕಸಾಯಿಖಾನೆಯಲ್ಲಿ ಪ್ರಾಣಿವಧೆ ನಿಷೇಧ ಅನ್ವಯವಾಗಲಿದೆ. ಮಾಂಸ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.

ಗಣೇಶ ಹಬ್ಬಕ್ಕೆ ಸಿದ್ಧತೆ

ಗಣೇಶ ಹಬ್ಬಕ್ಕೆ ಸಿದ್ಧತೆ

  • Share this:
ನಾಳೆ ಗೌರಿ ಹಬ್ಬ. ನಾಡಿದ್ದು ನಾಡಿನಾದ್ಯಂತ ಗಣೇಶ ಹಬ್ಬವನ್ನು (Ganesha Festival) ಸಂಭ್ರಮದಿಂದ ಆಚರಿಸಲಾಗ್ತಿದೆ. ಈ ಹಿಂದೆ ಕೊರೋನಾ (Corona) ಕರಿಛಾಯೆಯಿಂದಾಗಿ ಗಣೇಶ ಹಬ್ಬವನ್ನು ವಿಜ್ರಂಭನೆಯಿಂದ ಆಚರಿಸಲು ಆಗಿರಲಿಲ್ಲ. ಆದರೆ ಈ ಬಾರಿ ಆ ಎಲ್ಲಾ ವಿಘ್ನಗಳಿಂದ ಮುಕ್ತರಾಗಿ ಮೊದಲ ಬಾರಿಗೆ ಕೊರೋನಾ ನಿರ್ಬಂಧಗಳಿಲ್ಲದೆ (Condition) ಗಣೇಶ ಹಬ್ಬವನ್ನು ಆಚರಿಸಲಾಗ್ತಿದೆ. ಅದ್ಧೂರಿಯಾಗಿ ಗಣೇಶ ಹಬ್ಬ ಆಚರಣೆಗೆ (Celebration) ಇಡೀ ರಾಜ್ಯವೇ ಸಜ್ಜಾಗಿದೆ. ಇದರ ನಡುವೆ ಗಣೇಶ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ (Bengaluru) ಆಗಸ್ಟ್ 31ರಂದು ಅಂದರೆ ಬುಧವಾರ ಪ್ರಾಣಿವಧೆ ಮತ್ತು ಮಾಂಸ (Meat Ban) ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಇಂದು ಬಿಬಿಎಂಪಿ ಆದೇಶ ಹೊರಡಿಸಿದೆ.

ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಅದ್ಧೂರಿಯಾಗಿ ವಿಘ್ನ ವಿನಾಶಕನನ್ನು ನೆನೆಯಲು ಭಕ್ತರು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮಾರುಕಟ್ಟೆ​ಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.

Meat sale ban in Bengaluru on Ganesha festival BBMP orders
ಗಣೇಶ ಹಬ್ಬಕ್ಕೆ ಸಿದ್ಧತೆ


ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ
ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ನಾಡಿದ್ದು ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಕಸಾಯಿಖಾನೆಯಲ್ಲಿ ಪ್ರಾಣಿವಧೆ ನಿಷೇಧ ಅನ್ವಯವಾಗಲಿದೆ. ಮಾಂಸ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿ ಬಳಿಕ ದೇವಸ್ಥಾನದ ಶುದ್ಧೀಕರಣ, ವಿಶೇಷ ಪೂಜೆ

ಬಿಬಿಎಂಪಿಯಿಂದ ಆದೇಶ
2022ರ ಆಗಸ್ಟ್ 31ರ ಬುಧವಾರದಂದು ‘ಗಣೇಶ ಚತುರ್ಥಿ’ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಕೃಷ್ಣಜನ್ಮಾಷ್ಟಮಿಯಂದು ಕೂಡ ಮಾಂಸ ಮಾರಾಟ ನಿಷೇಧ
ಈ ಹಿಂದೆ ಕೂಡ ಇದೇ ತಿಂಗಳ ಆರಂಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಲಾಗಿತ್ತು. ಈಗ ಗಣೇಶ ಚತುರ್ಥಿ ಹಬ್ಬಕ್ಕೂ ಇದೇ ಆದೇಶ ಮುಂದುವರೆದಿದೆ.

ಬೆಂಗಳೂರಿನಲ್ಲಿ ಗಣೇಶ ಹಬ್ಬದ ಹಿನ್ನೆಲೆ ರೂಟ್​ ಮಾರ್ಚ್​
ಬೆಂಗಳೂರಿನಲ್ಲಿ ಗಣೇಶ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ರೂಟ್ ಮಾರ್ಚ್ ಕೈಗೊಂಡಿದ್ದಾರೆ. ಪಶ್ಚಿಮ ವಿಭಾಗ ಪೊಲೀಸ್, ಕೆಎಸ್ಆ​ರ್​ಪಿ, ಕ್ವಿಕ್ ರಿಯಾಕ್ಷನ್ ಟೀಂ ಹಾಗೂ ಸ್ವಾಟ್ ಪೊಲೀಸರು ರೂಟ್ ಮಾರ್ಚ್ ಗೆ ಸಿದ್ಧತೆ ನಡೆಸಿದ್ದಾರೆ. ಜೆಜೆ ನಗರದ ಗಲ್ಲಿಗಳಲ್ಲಿ ಪಥಸಂಚಲನ ಮಾಡುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲಿದ್ದಾರೆ.

ಸುಪ್ರೀಂಕೋರ್ಟ್ ಏನು ಹೇಳುತ್ತೆ ನೋಡೋಣ- ಸಿ.ಟಿ.ರವಿ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ನ್ಯಾಯಾಲಯಕ್ಕೆ ಹೋಗಲು ಅವಕಾಶ ಇದೆ. ಸುಪ್ರೀಂಕೋರ್ಟ್ ಏನು ಹೇಳುತ್ತೆ ನೋಡೋಣ. ಗಣೇಶ ಹಬ್ಬ ಪ್ರಕೃತಿ ಪೂಜೆಗೆ ಸನಿಹಕ್ಕೆ ಸರಿಸಮಾನಾಗಿರುವುದು ಅಂದರು.

ಗಾಳಿಯನ್ನ ವಾಯು ದೇವರೆಂದು ಹಿಂದೂಗಳು ಪೂಜೆ ಮಾಡುತ್ತೇವೆ. ಅದೇ ರೀತಿ ನೀರನ್ನ ಗಂಗೆ ಎಂದು ಪೂಜೆ ಮಾಡುತ್ತೇವೆ. ನೀರು, ಗಾಳಿ ಇಲ್ಲದೇ ಬದುಕಲು ಆಗುತ್ತಾ ಅಂತಾ ಪ್ರಶ್ನೆ ಮಾಡಿದ್ದಾರೆ. ನಮ್ಮಂತಹ ಕಾರ್ಯಕರ್ತರಿಂದಲೇ ಸರ್ಕಾರ ಬಂದಿರುವುದು. ನಮ್ಮ ಸರ್ಕಾರ ಯಾರ ಆನಂದವನ್ನು ಕಿತ್ತುಕೊಳ್ಳಲು ಬಯಸುವುದಿಲ್ಲ. ಅದು ಹಿಂದೂ ಆಗಿರಬಹುದು ಮುಸ್ಲಿಂ ಆಗಿರಬಹುದು ಅಂತಾ ಸಿ.ಟಿ.ರವಿ ಹೇಳಿದ್ದಾರೆ.

ಇದನ್ನೂ ಓದಿ: ಗಣೇಶೋತ್ಸವ ಆಯೋಜಕರಿಗೆ ಪೊಲೀಸರ ಖಡಕ್ ಸೂಚನೆ; ಪ್ರಕಟಣೆಯಲ್ಲಿ ಏನಿದೆ?

ಚಾಮರಾಜಪೇಟೆ ಮೈದಾನದಲ್ಲಿ ಸಿದ್ಧತೆ
ಚಾಮರಾಜಪೇಟೆ ಆಟದ ಮೈದಾನದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಚಾಮರಾಜಪೇಟೆಯಲ್ಲಿ ಬೆಳಗ್ಗೆ 8 ಗಂಟೆಗೆ ಗಣೇಶ ಪ್ರತಿಷ್ಠಾಪನೆ ಮಾಡಲು ಅವಕಾಶ ಇದೆ. ಅದೇ ದಿನ ಸಂಜೆ 4 ಗಂಟೆಯೊಳಗೆ ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಅದೇ ರೀತಿ ಯಾವುದೇ ಪಕ್ಷದ ಬ್ಯಾನರ್ ಹಾಗೂ ಫೋಟೋಗೆ ಅವಕಾಶ ಇಲ್ಲ ಅಂದ್ರು.
Published by:Thara Kemmara
First published: