ಅನರ್ಹರು ಸೋಲಬೇಕು ಎಂಬುದಷ್ಟೇ ನನ್ನ, ಸಿದ್ದರಾಮಯ್ಯರ ಅಭಿಪ್ರಾಯ; ಎಚ್​.ಡಿ.ಕುಮಾರಸ್ವಾಮಿ

ಬಳಿಕ ಹುಣಸೂರಿನ ಹೊಸರಾಮನಹಳ್ಳಿಯಲ್ಲಿರುವ ಶಾಸಕ ಚಿಕ್ಕಮಾದು ಸಮಾಧಿ ಬಳಿಗೆ ತೆರಳಿದ ಕುಮಾರಸ್ವಾಮಿ, ಸಮಾಧಿಗೆ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಅವರೊಂದಿಗೆ ಶಾಸಕ ಸಾ.ರಾ ಮಹೇಶ್, ಅಭ್ಯರ್ಥಿ ಸೋಮಶೇಖರ್ ಜೊತೆಗಿದ್ದರು. ಆನಂತರ ಬಿಳಿಕೆರೆಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ‌ ನಡೆಯುತ್ತಿರುವ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಎಚ್​ಡಿಕೆ ಚರ್ಚೆ ನಡೆಸಿದರು.

HR Ramesh | news18-kannada
Updated:November 20, 2019, 5:00 PM IST
ಅನರ್ಹರು ಸೋಲಬೇಕು ಎಂಬುದಷ್ಟೇ ನನ್ನ, ಸಿದ್ದರಾಮಯ್ಯರ ಅಭಿಪ್ರಾಯ; ಎಚ್​.ಡಿ.ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಮೈಸೂರು/ಹುಣಸೂರು: ಅರ್ನಹರು ಸೋಲಬೇಕು ಎಂಬುದೇ ನನ್ನ ಮತ್ತು ಸಿದ್ದರಾಮಯ್ಯ ಅವರ ಅಭಿಪ್ರಾಯ ಅಷ್ಟೇ. ಆದರೆ ನಾವು ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ನನ್ನ ಸಿದ್ದರಾಮಯ್ಯ ಮಾತುಗಳನ್ನು ಬೇರೆ ರೀತಿ ವ್ಯಾಖ್ಯಾನ ಮಾಡುವ ಅಗತ್ಯ ಇಲ್ಲ. ಸರ್ಕಾರ ಉರುಳಿಸುವ ಕೆಲಸಕ್ಕೆ ಅನರ್ಹರ ಕೈ ಹಾಕಿದ್ದಾರೆ. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆಯಾಗುತ್ತೆ. ಆ ರೀತಿ ಆಗಬಾರದು ಅನ್ನೋದು ಸಿದ್ದರಾಮಯ್ಯರ ಅಭಿಪ್ರಾಯ ಹಾಗೂ ನನ್ನ ಅಭಿಪ್ರಾಯ. ಆದರೂ 14 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಇದ್ದಾರೆ. ಅವರು ಕಾಂಗ್ರೆಸ್ - ಬಿಜೆಪಿಯಷ್ಟೇ ಸಮರ್ಥರಿದ್ದಾರೆ ಎಂದು ಹೇಳಿದರು.

ಬಳಿಕ ಹುಣಸೂರಿನ ಹೊಸರಾಮನಹಳ್ಳಿಯಲ್ಲಿರುವ ಶಾಸಕ ಚಿಕ್ಕಮಾದು ಸಮಾಧಿ ಬಳಿಗೆ ತೆರಳಿದ ಕುಮಾರಸ್ವಾಮಿ, ಸಮಾಧಿಗೆ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಅವರೊಂದಿಗೆ ಶಾಸಕ ಸಾ.ರಾ ಮಹೇಶ್, ಅಭ್ಯರ್ಥಿ ಸೋಮಶೇಖರ್ ಜೊತೆಗಿದ್ದರು. ಆನಂತರ ಬಿಳಿಕೆರೆಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ‌ ನಡೆಯುತ್ತಿರುವ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಎಚ್​ಡಿಕೆ ಚರ್ಚೆ ನಡೆಸಿದರು.

ಇದನ್ನು ಓದಿ: ಜನರಿಗೆ ಬೆಲೆಬಾಳುವ ಉಡುಗೊರೆ ನೀಡುವುದಾಗಿ ಆಡಿಯೋ ಮೂಲಕ ಹೇಳಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್

ಎಂಟಿಬಿ ನಾಗರಾಜ್‌ ಸಿದ್ದರಾಮಯ್ಯಗೆ ಸಾಲ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್​ಡಿಕೆ, ರಾಜಕಾರಣ ಸಾಲ ಮಾಡೋದು ಸಹಜ. ನಾವು ಸಾಲ ಮಾಡ್ತಿವಿ ಹಾಗೇಯೆ ನಾವು ಸಾಲ ಕೊಟ್ಟಿರುತ್ತೇವೆ. ಅಂತ ವಿಚಾರಗಳ ಬಗ್ಗೆ ಮಾತನಾಡೋದೇ ಬೇಡ ಬ್ರದರ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತು ಎಂಟಿಗೆ ಟಾಂಗ್ ನೀಡಿದರು.

First published:November 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading