ವಿದೇಶದಲ್ಲಿ ಮೊದಲ ಡೋಸ್ Pfizer Vaccine: ಎರಡನೇ ಡೋಸ್ ಸಿಗದೇ ರಾಯಚೂರಿನ MBBS ವಿದ್ಯಾರ್ಥಿನಿ ಪರದಾಟ

"ಆಕೆಗೆ ಎರಡನೇ ಡೋಸ್ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ನೀಡಲಾಗುವುದಿಲ್ಲ" ಎಂದು ಡಾ. ವಿಜಯಾ ಹೇಳಿದರು. ಅಲ್ಲದೆ, ಆಕೆಗೆ ಹೊಸದಾಗಿ ಲಸಿಕೆ ಹಾಕಬೇಕೇ ಎಂದು ನಮಗೆ ತಿಳಿದಿಲ್ಲ. ಹೆಚ್ಚಿನ ನಿರ್ದೇಶನಗಳನ್ನು ಕೋರಿ ಇಲಾಖೆಗೆ ಪತ್ರ ಬರೆಯಲು ಕಾಲೇಜಿಗೆ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

ರಾಯಚೂರು (Raichur) ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ 20 ವರ್ಷದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ (MBBS Student) ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ (Riyadh, Saudi Arabia) ತನ್ನ ಪೋಷಕರನ್ನು (Parents) ಭೇಟಿ ಮಾಡಲು ಹೋದಾಗ ಫೈಜರ್‌ನ ಕೋವಿಡ್ -19 ಲಸಿಕೆ (Pfizer vaccine) ತೆಗೆದುಕೊಂಡಿದ್ದಾರೆ. ಆದರೆ, ಎಂಬಿಬಿಎಸ್ ತರಗತಿಗಳು ಪುನಾರಂಭವಾದ ಕಾರಣ ಮತ್ತು ಆಂತರಿಕ ಪರೀಕ್ಷೆ ಆರಂಭವಾಗುತ್ತಿದ್ದ ಕಾರಣ ವಿದ್ಯಾರ್ಥಿನಿ ಭಾರತಕ್ಕೆ ವಾಪಸಾಗಿದ್ದಾರೆ. ಆದರೆ ಫೈಜರ್‌ ಲಸಿಕೆ ಭಾರತದಲ್ಲಿ ಸದ್ಯ ಲಭ್ಯವಿಲ್ಲದ ಕಾರಣ ಎರಡನೇ ಡೋಸ್ (Second Dose Vaccine)‌ ತೆಗೆದುಕೊಳ್ಳಲು ಸಾಧ್ಯವಾಗದೆ ಗೊಂದಲಕ್ಕೆ ಸಿಲುಕಿದ್ದಾರೆ.


ಅಲ್ಲದೆ, ಮೊದಲ ವರ್ಷದ ಪರೀಕ್ಷೆಗಳು ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದ್ದು, ಸಂಪೂರ್ಣ ಲಸಿಕೆ ಪಡೆದ ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡುವ ಸಾಧ್ಯತೆ ಇದೆ. ಈ ಹಿನ್ನೆಲೆ ತಜ್ಞರನ್ನು ಸಂಪರ್ಕಿಸಿ ಸಂಪೂರ್ಣ ಲಸಿಕೆ ಪಡೆಯುವಂತೆ ಆ ವಿದ್ಯಾರ್ಥಿನಿಗೆ ಕಾಲೇಜು ಹೇಳಿದೆ. ಪರೀಕ್ಷೆ ಹತ್ತಿರ ಬಂದಾಗ ಸಮಸ್ಯೆ ಎದುರಾಗಬಾರದೆಂದು ಲಸಿಕೆ ಪಡೆಯುವಂತೆ ಸೂಚಿಸಿದೆ.


ಆದರೂ, ಭಾರತದಲ್ಲಿ ಫೈಜರ್ ಲಸಿಕೆ ಲಭ್ಯವಿಲ್ಲದ ಕಾರಣ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ನೀತಿ ಇಲ್ಲದಿರುವುದರಿಂದ ಅಧಿಕಾರಿಗಳು ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ.


ಪ್ರತಿ ಡೋಸ್‌ಗೆ ವಿಭಿನ್ನ ಲಸಿಕೆಗಳನ್ನು ತೆಗೆದುಕೊಳ್ಳುವ ಯಾವುದೇ ಮಾರ್ಗಸೂಚಿಗಳು ಸದ್ಯಕ್ಕಿಲ್ಲ. ಕಾಲೇಜು ಸಹ ಲಸಿಕೆ ವಿಚಾರ ನೋಡಿಕೊಳ್ಳುವ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (RCHO) ಯೊಂದಿಗೆ ಗುರುವಾರ ಸಮಸ್ಯೆ ವಿವರಿಸಿದೆ.


ಸಂಕಷ್ಟದಲ್ಲಿ ವಿದ್ಯಾರ್ಥಿನಿ

ಈ ಸಂಬಂಧ ಪ್ರತಿಕ್ರಿಯೆ ನೀಡಿದ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಕೋವಿಡ್-19 ಲಸಿಕೆಯ ನೋಡಲ್ ಅಧಿಕಾರಿ ಡಾ.ಶಿವಪ್ಪ ಹತ್ನೂರ, “ಸದ್ಯಕ್ಕೆ ಪರೀಕ್ಷೆಗೆ ಕುಳಿತುಕೊಳ್ಳಲು ಸಂಪೂರ್ಣವಾಗಿ ಲಸಿಕೆ ಪಡೆಯಬೇಕು ಎಂದು ಹೇಳುವ ಯಾವುದೇ ನಿಯಮವಿಲ್ಲ. ಆದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಅಂತಹ ಆದೇಶ ನೀಡಿದರೆ, ವಿದ್ಯಾರ್ಥಿನಿಗೆ ತೊಂದರೆಯಾಗಬಾರದು. ಆದ್ದರಿಂದ, ನಾವು ವೈದ್ಯರನ್ನು ಸಂಪರ್ಕಿಸಲು ಮತ್ತು ಅವರ ಕುಟುಂಬದೊಂದಿಗೆ ವಿಷಯವನ್ನು ಚರ್ಚಿಸಲು ಕೇಳಿದ್ದೇವೆ ಎಂದು ಹೇಳಿದರು.


ಯುವತಿ ಹೇಳುತ್ತಿರೋದೇನು?

ಇನ್ನು, ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡಿದ ಎಂಬಿಬಿಎಸ್‌ ವಿದ್ಯಾರ್ಥಿನಿ, ‘’ಜನವರಿಯಲ್ಲಿ ಕೋರ್ಸ್‌ಗೆ ಸೇರಿಕೊಂಡೆ ಮತ್ತು 1 ತಿಂಗಳ ಕಾಲ ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದೆ. ಬಳಿಕ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಕ್ಯಾಂಪಸ್ ತರಗತಿಗಳಿಗೆ ಹಾಜರಾಗಿದ್ದೆ. ನಂತರ, ಎರಡನೇ ಕೋವಿಡ್ -19 ಅಲೆ ಹಿನ್ನೆಲೆ ಲಾಕ್‌ಡೌನ್ ವಿಧಿಸಿದಾಗ, ನಾನು ನನ್ನ ಹೆತ್ತವರೊಂದಿಗೆ ಇರಲು ರಿಯಾದ್‌ಗೆ ತೆರಳಿದೆ. ರಿಯಾದ್‌ನಲ್ಲಿದ್ದಾಗ, ನಾನು ನನ್ನ ಮೊದಲ ಡೋಸ್ ಫೈಜರ್ ಲಸಿಕೆಯನ್ನು ಆಗಸ್ಟ್ 15 ರಂದು ತೆಗೆದುಕೊಂಡೆ. ಬಳಿಕ, ನಾನು ಆಗಸ್ಟ್ 26 ರಂದು ರಾಯಚೂರಿಗೆ ಮರಳಿದೆ. ಏಕೆಂದರೆ ಆಗಸ್ಟ್ 27ರಿಂದ ಎರಡನೇ ಆಂತರಿಕ ಮೌಲ್ಯಮಾಪನ ಪ್ರಾರಂಭವಾಗುತ್ತಿತ್ತು’’ ಎಂದು ಹೇಳಿದರು.


ಇದನ್ನೂ ಓದಿ:  Pfizer Vaccine| 2ನೇ ಡೋಸ್‌ ಪಡೆದ 6 ತಿಂಗಳ ನಂತರ ಫೈಜರ್ ಲಸಿಕೆಯ ಪರಿಣಾಮ ಕಡಿಮೆಯಾಗುತ್ತದೆ: ಅಧ್ಯಯನದಲ್ಲಿ ಬಯಲು

‘’ಫೈಜರ್ ತನ್ನ ಲಸಿಕೆಗಾಗಿ ಡೋಸ್‌ಗಳ ನಡುವೆ 21-ದಿನಗಳ ಮಧ್ಯಂತರ ನಿಗದಿಪಡಿಸುತ್ತದೆ. ಈ ಹಿನ್ನೆಲೆ ತಾನು ಸೆಪ್ಟೆಂಬರ್‌ 2ರಲ್ಲಿ ಎರಡನೇ ಡೋಸ್‌ ಪಡೆಯಬೇಕಿತ್ತು. ಆದರೆ, ನನ್ನ 2ನೇ ಆಂತರಿಕ ಮೌಲ್ಯಮಾಪನವನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಭಾರತಕ್ಕೆ ಮರಳಿದೆ’’ ಎಂದೂ ಯುವತಿ ಹೇಳಿದರು.


"ನಾನು ಈಗಾಗಲೇ ಜುಲೈನಲ್ಲಿ ಮೊದಲ ಆಂತರಿಕ ಮೌಲ್ಯಮಾಪನ ಮಿಸ್‌ ಮಾಡಿಕೊಂಡಿದ್ದೆ. ಇಲ್ಲಿಯವರೆಗೆ ಭಾರತದಲ್ಲಿ ಫೈಜರ್ ಲಭ್ಯವಿಲ್ಲ ಎಂದು ನನಗೆ ತಿಳಿದಿರಲಿಲ್ಲ’’ ಎಂದೂ ಹೇಳಿದಳು.


ಬಾಲಕಿ 9ನೇ ತರಗತಿಯವರೆಗೆ ಬಹ್ರೇನ್‌ನಲ್ಲಿ ಓದಿದ್ದಳು. ಆಕೆಯ ಪೋಷಕರು ರಿಯಾದ್‌ಗೆ ತೆರಳಿದಾಗ, ಆಕೆ ಭಾರತಕ್ಕೆ ಮರಳಿದಳು ಮತ್ತು ಬೀದರ್ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ 10 ರಿಂದ II PUವರೆಗೆ ಓದಿದಳು. ಅಲ್ಲಿ ಆಕೆ ತಮ್ಮ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಳು..


ರಾಯಚೂರು ಜಿಲ್ಲೆಯ RCHO ಡಾ.ವಿಜಯ ಕೆ ಅವರನ್ನು ಈ ಸಂಬಂಧ ಸಂಪರ್ಕಿಸಿದಾಗ, ಈ ಸಮಸ್ಯೆಯನ್ನು ತನ್ನ ಗಮನಕ್ಕೆ ತರಲಾಗಿದೆ ಎಂದು ದೃಢಪಡಿಸಿದರು. ಆದರೆ ಪ್ರಕರಣವು ವಿಶಿಷ್ಟವಾದ ಕಾರಣ ತನಗೂ ಹೇಗೆ ಮುಂದುವರಿಯಬೇಕೆಂದು ತಿಳಿದಿಲ್ಲ ಎಂದು ಒಪ್ಪಿಕೊಂಡರು.


ಹೊಸದಾಗಿ ಮತ್ತೆ ಲಸಿಕೆ ಪಡೆಯಬೇಕೆ?

"ಆಕೆಗೆ ಎರಡನೇ ಡೋಸ್ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ನೀಡಲಾಗುವುದಿಲ್ಲ" ಎಂದು ಡಾ. ವಿಜಯಾ ಹೇಳಿದರು. ಅಲ್ಲದೆ, ಆಕೆಗೆ ಹೊಸದಾಗಿ ಲಸಿಕೆ ಹಾಕಬೇಕೇ ಎಂದು ನಮಗೆ ತಿಳಿದಿಲ್ಲ. ಹೆಚ್ಚಿನ ನಿರ್ದೇಶನಗಳನ್ನು ಕೋರಿ ಇಲಾಖೆಗೆ ಪತ್ರ ಬರೆಯಲು ಕಾಲೇಜಿಗೆ ತಿಳಿಸಲಾಗಿದೆ.


ಕಾಲೇಜು ನೀಡಿದ ಮಾಹಿತಿಯ ಆಧಾರದ ಮೇಲೆ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಹಾಕುವ ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದು, ಎರಡನೇ ಡೋಸ್ ಆಗಿ ಕೋವಿಶೀಲ್ಡ್ ನೀಡಬಾರದು ಎಂದು ತಿಳಿಸಲಾಗಿದೆ ಎಂದು ಡಾ. ವಿಜಯಾ ಹೇಳಿದರು.


ಇದನ್ನೂ ಓದಿ: Pfizer Covid Pill- ಸರಿ ಸಮಯಕ್ಕೆ ಈ ಮಾತ್ರೆ ನುಂಗಿದ್ರೆ ಕೋವಿಡ್ ಮಾಯ? ಮ್ಯಾಜಿಕ್ ಪಿಲ್ Paxlovid

“ಇದೊಂದು ಅಪರೂಪದ ಸನ್ನಿವೇಶ ಮತ್ತು ವಿಶಿಷ್ಟವಾದದ್ದು. ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ


ಈ ಮಧ್ಯೆ, ಯುವತಿ, ತನ್ನ ಸ್ವಂತ ಖರ್ಚಿನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗಿರುವುದರಿಂದ 2ನೇ ಡೋಸ್ ಫೈಜರ್‌ ತೆಗೆದುಕೊಳ್ಳಲು ರಿಯಾದ್‌ಗೆ ಪ್ರಯಾಣಿಸುವ ಯಾವುದೇ ಯೋಜನೆ ಇಲ್ಲ.


ಅವಳು ಏಪ್ರಿಲ್‌ನಲ್ಲಿ ಪ್ರಯಾಣಿಸಿದಾಗಲೂ, ನಿಯಮಗಳ ಪ್ರಕಾರ ಬೇರೆ ದೇಶದಲ್ಲಿ (ಬಹ್ರೇನ್) 14 ದಿನಗಳನ್ನು ಕ್ವಾರಂಟೈನ್‌ನಲ್ಲಿ ಕಳೆಯಬೇಕಾಗಿತ್ತು. ಅಲ್ಲದೆ, ರಿಯಾದ್‌ನಲ್ಲಿ ಮತ್ತೊಮ್ಮೆ ಕಡ್ಡಾಯ ಎರಡು ವಾರಗಳ ಸಾಂಸ್ಥಿಕ ಸಂಪರ್ಕತಡೆ ಪೂರ್ಣಗೊಳಿಸಿದ ನಂತರ ಅವಳು ಜೂನ್‌ನಲ್ಲಿ ತನ್ನ ರಿಯಾದ್‌ನಲ್ಲಿರುವ ಮನೆಗೆ ತಲುಪಿದ್ದಳು.


Published by:Mahmadrafik K
First published: