HOME » NEWS » State » MBA HOLDER FROM CHIKKAMAGALURU DOING ORGANIC FARMING IN HIS LAND AND INSPIRED OTHERS VCTV LG

ಓದಿದ್ದು ಎಂಬಿಎ, ಮಾಡ್ತಿರೋದು ವ್ಯವಸಾಯ: ಸಾವಯವ ಕೃಷಿಯಿಂದ ಎಲ್ಲರಿಗೂ ಮಾದರಿಯಾದ ಕಾಫಿನಾಡಿನ ಯುವಕ

ಶಿವಪ್ರಸಾದ್ ತಮ್ಮ ಜಮೀನಿನ ಒಂದು ಎಕರೆಯಷ್ಟು ಜಾಗದಲ್ಲಿ ಸಾವಯವ ಗೊಬ್ಬರ ತಯಾರಿಸುವ ಕಂಪನಿಯನ್ನ ಆರಂಭಿಸಿ ಜೀವನ ಕಟ್ಟಿಕೊಂಡಿದ್ದಾರೆ. ಗೋವಿನ ಸಗಣಿ, ತೆಂಗಿನ ನಾರು, ಮೊಲಸಿಸ್ , ಗೋವಿನ ಮೂತ್ರ, ಬೇವಿನ ಹಿಂಡಿ, ಸುಣ್ಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಮಿಶ್ರಣ ಮಾಡಿ ಉತ್ತಮವಾದ ಸಾವಯವ ಗೊಬ್ಬರವನ್ನ ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಾ ಬಂದಿದ್ದಾರೆ

news18-kannada
Updated:January 21, 2021, 2:50 PM IST
ಓದಿದ್ದು ಎಂಬಿಎ, ಮಾಡ್ತಿರೋದು ವ್ಯವಸಾಯ: ಸಾವಯವ ಕೃಷಿಯಿಂದ ಎಲ್ಲರಿಗೂ ಮಾದರಿಯಾದ ಕಾಫಿನಾಡಿನ ಯುವಕ
ಶಿವಪ್ರಸಾದ್
  • Share this:
ಚಿಕ್ಕಮಗಳೂರು(ಜ.21): ಆ ಯುವಕ ಓದಿದ್ದು ಎಂಬಿಎ. ಮಾಡ್ತಿರೋದು ಸಾವಯವ ಕೃಷಿ. ಎಂಬಿಎ ಓದಿ ಬೆಂಗಳೂರಿಗೆ ಹೋಗುವುದಕ್ಕಿಂತ ಹುಟ್ಟಿದ ಊರಲ್ಲೇ ಜೀವನ ಕಟ್ಟಿಕೊಳ್ಳಬೇಕೆಂಬ ಹಂಬಲ ಆ ಯುವಕನದ್ದು. ಆ ಯುವಕ ಕಳೆದ 9 ವರ್ಷಗಳಿಂದ ಗೋವಿನ ಸಗಣಿ ಹಾಗೂ ಮೂತ್ರ, ಬೇವಿನ ಹಿಂಡಿ, ತೆಂಗಿನ ನಾರು, ಮೊಲಸಿಸ್, ಸುಣ್ಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಮಿಶ್ರಣ ಮಾಡಿ ಉತ್ತಮವಾದ ಸಾವಯವ ಗೊಬ್ಬರವನ್ನ ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದಾನೆ. ಗೊಬ್ಬರ ತಯಾರಿಸಿ ರೈತರಿಗೆ ನೇರವಾಗಿ ನೀಡುವ ಮೂಲಕ ತನ್ನದೇ ಆದ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ಸಾವಯವ ಗೊಬ್ಬರ ತಯಾರಿಸುವಲ್ಲಿ ಯಶಸ್ವಿಯಾಗಿದ್ದು ಎಲ್ಲರಿಗೂ ಮಾದರಿಯಾಗಿದ್ದಾನೆ.

ಈತನ ಹೆಸರು ಶಿವಪ್ರಸಾದ್. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ನಿವಾಸಿ. ಓದಿದ್ದು ಎಂಬಿಎ. ಆದ್ರೆ, ಮಾಡ್ತಿರೋದು ರೈತರನ್ನ ಉಳಿಸಿ-ಬೆಳೆಸೋ ಕಾಯಕ. ಶಿವಪ್ರಸಾದ್ ತಮ್ಮ ಜಮೀನಿನ ಒಂದು ಎಕರೆಯಷ್ಟು ಜಾಗದಲ್ಲಿ ಸಾವಯವ ಗೊಬ್ಬರ ತಯಾರಿಸುವ ಕಂಪನಿಯನ್ನ ಆರಂಭಿಸಿ ಜೀವನ ಕಟ್ಟಿಕೊಂಡಿದ್ದಾರೆ. ಗೋವಿನ ಸಗಣಿ, ತೆಂಗಿನ ನಾರು, ಮೊಲಸಿಸ್ , ಗೋವಿನ ಮೂತ್ರ, ಬೇವಿನ ಹಿಂಡಿ, ಸುಣ್ಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಮಿಶ್ರಣ ಮಾಡಿ ಉತ್ತಮವಾದ ಸಾವಯವ ಗೊಬ್ಬರವನ್ನ ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಾ ಬಂದಿದ್ದಾರೆ.  ಕಳೆದ 9 ವರ್ಷಗಳಿಂದ ಸಾವಯವ ಗೊಬ್ಬರವನ್ನ ತಯಾರಿಸುತ್ತಾ ಬಂದಿದ್ದಾರೆ. ಸುಮಾರು 6 ರಿಂದ 8 ತಿಂಗಳು  10 ರಿಂದ 12 ವಸ್ತುಗಳನ್ನ ಕೊಳೆಸಿ ಸಾವಯವ ಗೊಬ್ಬರವನ್ನ ರೆಡಿ ಮಾಡ್ತಾ ಇದ್ದಾರೆ.

ಟ್ವಿಟರ್​ನಲ್ಲಿ 2019ರಲ್ಲಿ ವೈರಲಾಗಿದ್ದ ಪೋಟೋದಿಂದಾಗಿ ಗ್ರಾಮಕ್ಕೆ ನಿರ್ಮಾಣವಾಯಿತು ಸೇತುವೆ!

ಇನ್ನು ಇವರು ನೀಡ್ತಿರೋ ಸಾವಯವ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು ರೈತರು ಕೂಡ ಸಾವಯವ ಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ. ಇನ್ನು ಶಿವಪ್ರಸಾದ್ ತಯಾರಿಸಿರೋ ಸಸ್ಯ ಸಂಜೀವಿನಿ ಸಾವಯವ ಗೊಬ್ಬರ ಬಳಸಿರೋ ರೈತರು ಕೂಡ ನಮ್ಮ ಬೆಳೆಗಳು ಉತ್ತಮ ಫಸಲು ನೀಡ್ತಿವೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ಹೋಗಿ ದುಡಿಮೆ ಮಾಡೋದುಕ್ಕಿಂತ ನಮ್ಮೂರಿನಲ್ಲೇ ರೈತರಿಗೆ ಅನುಕೂಲವಾಗುವುದರ ಜೊತೆ ನಮ್ಮ ಜೀವನ ಕಟ್ಟಿಕೊಳ್ಳಬೇಕೆಂಬುದು ಸಾವಯವ ಗೊಬ್ಬರವನ್ನ ಕಾಯಕ ಎಂದು ಮಾಡ್ತಾ ಇದ್ದೀನಿ ಅಂತಿದ್ದಾರೆ ಶಿವಪ್ರಸಾದ್.

ಇನ್ನು ಇದರ ಜೊತೆ ರೈತರಿಗೆ ಅನುಕೂಲವಾಗುವಂತೆ ಬೇವಿನ ಪುಡಿ ಕೂಡ ತಯಾರಿಸಿ ಶಿವಪ್ರಸಾದ್ ರೈತರಿಗೆ ನೀಡ್ತಾ ಇದ್ದಾರೆ. ಬೇವಿನ ಪುಡಿಗೆ ಬೇಡಿಕೆ ಹೆಚ್ಚಾಗಿದ್ದು ನಕಲಿ ಬೇವಿನ ಪುಡಿ ನೀಡುವ ದಂಧೆ ಹೆಚ್ಚಾಗಿರೋದನ್ನ ಕಂಡು ಉತ್ತಮ ಬೇವಿನ ಪುಡಿ ರೈತರಿಗೆ ನೀಡುವ ಸಲುವಾಗಿ ಶಿವಪ್ರಸಾದ್ ಬೇವಿನ ಪುಡಿ ತಯಾರಿಸುತ್ತಿದ್ದಾರೆ. ಬೇವಿನ ಬೀಜ ತಂದು ರೈತರ ಸಮ್ಮಖದಲ್ಲಿ ಪುಡಿ ಮಾಡಿ ನೀಡ್ತಾ ಇದ್ದಾರೆ. ಇದಲ್ಲದೆ ಸಾವಯವ ಗೊಬ್ಬರ ತಯಾರಿಕಾ ಘಟಕದಲ್ಲಿ ಪದವಿ ಓದಿ ದುಡಿಮೆಗಾಗಿ ಊರು ಬಿಡ್ತಿದ್ದ ಯುವಕರಿಗೆ ಕೆಲಸ ನೀಡಿ ಹಳ್ಳಿಯಲ್ಲೇ ಬದುಕುವಂತೆ ಉತ್ತೇಜನ ನೀಡುತ್ತಿದ್ದಾರೆ. ಈ ಕೆಲಸ ನನಗೆ ಖುಷಿ ಕೊಟ್ಟಿದೆ, ಇದಲ್ಲದೆ ಐದಾರು ಯುವಕರಿಗೆ ಕೆಲ ನೀಡಿದ್ದೇನೆ ಎಂಬ ಖುಷಿ ನನಗಿದೆ ಅಂತಿದ್ದಾರೆ ಶಿವಪ್ರಸಾದ್. ನಾವು ಕೆಲಸವಿಲ್ಲದೆ ಅಲೆದಾಡುತ್ತಿದ್ದಾಗ ಶಿವಪ್ರಸಾದ್ ಕೆಲಸ ನೀಡಿ ನಮಗೆ ಬೆಂಬಲಿದ್ದಾರೆ ಅಂತಿದ್ದಾರೆ ಅಲ್ಲೇ ಕೆಲಸ ಮಾಡ್ತಿರೋ ಯುವಕರು.

ಒಟ್ಟಾರೆ, ಶಿವಪ್ರಸಾದ್ ಯಿಂದ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೃಷಿ ಜೀವಂತವಾಗ್ತಿದೆ ಅಂದ್ರೆ ತಪ್ಪಿಲ್ಲ. ರೈತರ ಮೇಲೆ ವಿಶೇಷ ಕಾಳಜಿ ಹೊಂದಿ, ಅವ್ರ ಉಳಿವು-ಬೆಳವಣಿಗೆಗೆ ಶ್ರಮಿಸ್ತಿರೋ ಇವರು ಎಲ್ಲಾ ಯುವಕರಿಗೂ ಮಾದರಿಯಾಗಿದ್ದಾರೆ. ಅಲ್ದೆ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಯಶಸ್ವಿಯಾಗಿ ಉತ್ತಮ ಲಾಭ ಕೂಡ ಗಳಿಸುತ್ತಿದ್ದಾರೆ, ಅಲ್ದೆ ಇತ್ತೀಚಿಗೆ ರಾಸಯನಿಕ ಗೊಬ್ಬರಗಳ ಮೊರೆ ಹೋಗಿದ್ದ ರೈತರಿಗೆ ಅರಿವು ಮೂಡಿಸಿ ಸಾವಯವ ಗೊಬ್ಬರಗಳತ್ತ ಮುಖಮಾಡುವಂತೆ ಮಾಡಿರೋದು ನಿಜಕ್ಕೂ ಶ್ಲಾಘನೀಯ..
Published by: Latha CG
First published: January 21, 2021, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories