ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ಮಾಡಿಲ್ಲ; ಎಂಬಿ ಪಾಟೀಲ್​ ಸ್ಪಷ್ಟನೆ

ಕೆಪಿಸಿಸಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ನಾನು ಮಾಡಿಲ್ಲ. ನಾನಾಗಲೀ, ಈಶ್ವರ್​ ಖಂಡ್ರೆಯಾಗಲಿ ಹುದ್ದೆ ನಿಭಾಯಿಸುತ್ತೇವೆ ಎಂದಿದ್ದೇವೆ. ಲಿಂಗಾಯತರಿಗೆ ಸ್ಥಾನ ನೀಡಿ ಎಂದು ಕೋರಿಲ್ಲ

ಎಂಬಿ ಪಾಟಿಲ್​

ಎಂಬಿ ಪಾಟಿಲ್​

  • Share this:
ನವದೆಹಲಿ (ಜ.17): ಕೆಪಿಸಿಸಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ನಾನು ಮಾಡಿಲ್ಲ. ನಾನಾಗಲೀ, ಈಶ್ವರ್​ ಖಂಡ್ರೆಯಾಗಲಿ ಹುದ್ದೆ ನಿಭಾಯಿಸುತ್ತೇವೆ ಎಂದಿದ್ದೇವೆ. ಲಿಂಗಾಯತರಿಗೆ ಸ್ಥಾನ ನೀಡಿ ಎಂದು ಕೋರಿಲ್ಲ ಎಂದು ಕಾಂಗ್ರೆಸ್​ ನಾಯಕ ಎಂಬಿ ಪಾಟೀಲ್ ಸ್ಪಷ್ಟಪಡಿಸಿದರು. 

ಈ ಕುರಿತು ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಹುದ್ದೆ ಆಯ್ಕೆ ವಿಚಾರದಲ್ಲಿ ಹೈ ಕಮಾಂಡ್​ ನಿರ್ಧಾರವೇ ಅಂತಿಮವಾಗಿದ್ದು, ಇಂದು ನಾಳೆಯೊಳಗೆ ಯಾರನ್ನು ಆಯ್ಕೆ ಮಾಡಲಿದೆ. ಎಲ್ಲದಕ್ಕೂ ಕಾದು ನೋಡೋಣ, ಮುಂಚೆ ಹೇಳಲು ಆಗಲ್ಲ . ನನ್ನ ಅಭಿಪ್ರಾಯ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ ಎಂದರು.

ಇನ್ನು ಪಕ್ಷದಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆ ಮಾಡುವ ಉದ್ದೇಶದಿಂದ ವಿಪಕ್ಷ ಸ್ಥಾನ ಹಾಗೂ ಸಿಎಲ್​ಪಿ ನಾಯಕನ ಸ್ಥಾನವನ್ನು ಪ್ರತ್ಯೇಕ ಮಾಡಲಾಗುತ್ತಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು. ಈ ರೀತಿ ಹುದ್ದೆಯನ್ನು ಪ್ರತ್ಯೇಕ ಮಾಡುವುದು ಸರಿಯಲ್ಲ. ವಿಪಕ್ಷ ನಾಯಕ ಶ್ಯಾಡೋ ಸಿಎಂ ಇದ್ದ ಹಾಗೇ. ಈ ರೀತಿ ಅವರ ಹುದ್ದೆ ಬೇರ್ಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.

ಇನ್ನು ಪಕ್ಷದಲ್ಲಿ ನಾಲ್ಕು ಕಾರ್ಯಧ್ಯಕ್ಷ ಹುದ್ದೆ ಸೃಷ್ಟಿಸುವುದರಿಂದ ಸಂಘಟನೆ ಚುರುಕು ಆಗುತ್ತದೆ. ಇದು ಉತ್ತರ ನಿರ್ಧಾರ ಎಂದರು,

 

ನಾನು ಕೂಡ ಆಕಾಂಕ್ಷಿಯಾಗಿದ್ದೆ; ಸತೀಶ್​ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷ ಆಯ್ಕೆ ಕುರಿತು ಮಾತನಾಡಿರುವ ಸತೀಶ್​ ಜಾರಕಿಹೊಳಿ, ನಾನು ಕೂಡ ಈ ಹುದ್ದೆ ಆಕಾಂಕ್ಷಿಯಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಹಲವರು ಆಕಾಂಕ್ಷಿಗಳಾಗಿದ್ದು, ಹೈ ಕಮಾಂಡ್​ ಯಾರನ್ನು ಆಯ್ಕೆ ಮಾಡುತ್ತದೆ ಕಾದು ನೋಡಬೇಕಿದೆ. ಆದರೆ ನಾನು ದೆಹಲಿಗೆ ಬಂದಿರುವುದು ಲಾಬಿ ಮಾಡಲು ಅಲ್ಲ ಬೇರೆ ಉದ್ದೇಶದಿಂದ ಎಂದರು.

ಇದನ್ನು ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ; ಅಧಿಕೃತ ಘೋಷಣೆಗೂ ಮುನ್ನ ಟೆಂಪಲ್​ ರನ್​ ನಡೆಸಿದ ಡಿಕೆ ಶಿವಕುಮಾರ್​

ಇನ್ನು ಪಕ್ಷದಲ್ಲಿನ ನಾಯಕರ ನಡುವೆ ಮೂಡಿರುವ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ಅವರು,  ಎಲ್ಲಾ ಪಕ್ಷಗಳಲ್ಲೂ ಬಣ ಗಳಿರುತ್ತವೆ. ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಾ ಭಿಪ್ರಯ ಇರುವವರಿದ್ದಾರೆ. ಯಾರೇ ಅಧ್ಯಕ್ಷರಾದರೂ ಒಮ್ಮತದಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
First published: