ಬೆಂಗಳೂರಿನಲ್ಲಿ 9 ಕಡೆ ನೆಲಮಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಾಣ: ಬಜೆಟ್​ನಲ್ಲಿ ಸಾಕಾರಗೊಳಿಸಲು ಮುಂದಾದ ಮೇಯರ್


Updated:February 14, 2018, 10:49 PM IST
ಬೆಂಗಳೂರಿನಲ್ಲಿ 9 ಕಡೆ ನೆಲಮಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಾಣ: ಬಜೆಟ್​ನಲ್ಲಿ ಸಾಕಾರಗೊಳಿಸಲು ಮುಂದಾದ ಮೇಯರ್

Updated: February 14, 2018, 10:49 PM IST
-ಶ್ಯಾಮ್. ಎಸ್, ನ್ಯೂಸ್ 18 ಕನ್ನಡ

ಬೆಂಗಳೂರು(ಫೆ.14): ಐಡಿಯಾ ಸಂಪತ್ ಎಂದೇ ಫೇಮಸ್ ಆಗಿರುವ ಬೆಂಗಳೂರು ಮೇಯರ್ ಸಂಪತ್ ರಾಜ್ ಸಾಹೇಬರು ಕ್ರಿಕೆಟ್ ಸ್ಟೇಡಿಯಂ ಬಳಿಕ ಬೆಂಗಳೂರಿನಲ್ಲಿ 9 ಕಡೆ ನೆಲಮಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇದೇ 23ರಂದು ಮಂಡನೆಯಾಗಲಿರುವ ಬಿಬಿಎಂಪಿ ಬಜೆಟ್​ನಲ್ಲಿ ನೆಲಮಟ್ಟದಲ್ಲಿ ಹೆಲಿಪ್ಯಾಡ್​ಗಳ ನಿರ್ಮಾಣಕ್ಕೆ ಹಣ ಮೀಸಲಿಡಲು ಮೇಯರ್ ಮುಂದಾಗಿದ್ದು, ಈಗಾಗಲೇ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆಯಂತೆ. ಇಷ್ಟೇ ಅಲ್ಲ, ಹೆಲಿಪ್ಯಾಡ್ ನಿರ್ಮಾಣಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆಯಂತೆ.

ರಾಜಧಾನಿಯಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಟ್ಟಡಗಳ ಮೇಲೆಲ್ಲಾ ಹೆಲಿಪ್ಯಾಡ್​ಗಳಿದ್ದು, ಅವುಗಳ ಬಳಕೆಯೇ ಸಾಧ್ಯವಾಗುತ್ತಿಲ್ಲ. ಈಗ ಪಾಲಿಕೆ ಒಡೆತನದಲ್ಲಿ ಇಲ್ಲದ ಹೆಲಿ ಆಂಬ್ಯುಲೆನ್ಸ್​ಗಳ ಬಳಕೆಗಾಗಿ ಹೆಲಿಪ್ಯಾಡ್​ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಒಂದು ಹೆಲಿಪ್ಯಾಡ್ ಖರ್ಚು ಅಂದಾಜು 25 ಲಕ್ಷವಾಗಲಿದೆ. ಜೊತೆಗೆ ಜಾಗವೂ ಬೇಕಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೇ ಜಾಗಕ್ಕಾಗಿ ಪರದಾಡಿದ್ದ ಪಾಲಿಕೆ, ಹೆಲಿಪ್ಯಾಡ್​ಗೆ ಎಲ್ಲಿಂದ ಜಾಗ ತರುತ್ತೋ ಏನೋ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ