Belagavi: ಮೇಯರ್ ಚುನಾವಣೆ ವಿಳಂಬ! ಬಿಜೆಪಿ ಶಾಸಕರಿಗೆ ಗೌನ್ ಗಿಫ್ಟ್ ಕೊಡ್ತೀವಿ ಎಂದ ಸತೀಶ್ ಜಾರಕಿಹೊಳಿ

ಈಗಾಗಲೇ ಅನಧಿಕೃತವಾಗಿ ಬೆಳಗಾವಿಯ ಸ್ಥಳೀಯ ಶಾಸಕರು ಮೇಯರ್, ಉಪಮೇಯರ್ ಆಗಿದ್ದಾರೆ. ಅವರಿಗೆ ಆ.9 ರಂದು ಬೆಳಗಾವಿಗೆ ಬರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ  (DK Shivakumar)ಕಾರ್ಯಕ್ರಮದಲ್ಲಿ ಮೇಯರ್, ಉಪಮೇಯರ್ ಗೌನ್ ಉಡುಗೊರೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಬೆಳಗಾವಿ(ಆ.07): ಮಹಾನಗರ ಪಾಲಿಕೆಯ ಮೇಯರ್ (Mayor) ಹಾಗೂ ಉಪಮೇಯರ್ ಚುನಾವಣೆ (Mayor Election) ‌ನಡೆಯದ ಹಿನ್ನೆಲೆಯಲ್ಲಿ ಅನಧಿಕೃತವಾಗಿರುವ ಸ್ಥಳೀಯ ಬಿಜೆಪಿ ಶಾಸಕರಿಗೆ (MLA) ಆ.9 ರಂದು ಕಾಂಗ್ರೆಸ್ ನಿಂದ ಗೌನ್ ಉಡುಗರೆ ನೀಡಲಾಗುವುದು ಎಂದು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭೆಯ‌ ಚುನಾವಣೆ ಮುಗಿಯುವವರೆಗೂ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಈಗಾಗಲೇ ಅನಧಿಕೃತವಾಗಿ ಬೆಳಗಾವಿಯ ಸ್ಥಳೀಯ ಶಾಸಕರು ಮೇಯರ್, ಉಪಮೇಯರ್ ಆಗಿದ್ದಾರೆ. ಅವರಿಗೆ ಆ.9 ರಂದು ಬೆಳಗಾವಿಗೆ ಬರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ  (DK Shivakumar)ಕಾರ್ಯಕ್ರಮದಲ್ಲಿ ಮೇಯರ್, ಉಪಮೇಯರ್ ಗೌನ್ ಉಡುಗೊರೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.

ಪಾಲಿಕೆಯ ಬಿಜೆಪಿ ಸದಸ್ಯರೇ ಮೇಯರ್, ಉಪಮೇಯರ್ ಆಯ್ಕೆಯಾಗದಿದ್ದಕ್ಕೆ ಅಸಮಾಧಾನ ಇದ್ದಾರೆ ಎನ್ನುವ ಮಾಹಿತಿ ಇದೆ. ಪಾಲಿಕೆಯ ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತೇವೆ ಎಂದು ನಮ್ಮ ಬಳಿ ಬಂದಿಲ್ಲ‌. ಅವರು ಚರ್ಚೆ ನಡೆಸಿರುವ ಮಾಹಿತಿ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ದಾವಣಗೇರೆಯಲ್ಲಿ ಸಿದ್ದರಾಮಯ್ಯ ಅಮೃತ‌ ಮಹೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಗೆ ಶಕ್ತಿ ನೀಡಿದೆ.

ಅದೊಂದು ಐತಿಹಾಸಿಕ ಸಮಾವೇಶ. ಇದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಬಿಜೆಪಿ ಮಾಡುವ ಆರೋಪಕ್ಕೆ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ಬಿಜೆಪಿ ನಾಯಕರೇ ವಾಹನ ಕಳುಹಿಸಿಕೊಟ್ಟಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: Idgah Maidana: ವಕ್ಫ್ ಬೋರ್ಡ್ ಅರ್ಜಿ ವಜಾ; ಈದ್ಗಾ ಮೈದಾನ ಸರ್ಕಾರದ ಆಸ್ತಿ ಎಂದು ಆದೇಶ

ಬೆಳಗಾವಿ ಕಾಂಗ್ರೆಸ್ ನಲ್ಲಿ ಫಿರೋಜ್ ಸೇಠ್ ಹಾಗೂ ಸತೀಶ ಜಾರಕಿಹೊಳಿ ವೈಮನಸ್ಸಿನ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪ ಸ್ವಲ್ಪ ಅಸಮಾಧಾನ ಎಲ್ಲ ಪಕ್ಷದಲ್ಲಿಯೂ ಇರುತ್ತದೆ. ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಜಾಧವ ನಗರದಲ್ಲಿ ಚಿರತೆ ಬಂದಿರುವುದು ಸೇಠ್ ಮತ್ತು ನನ್ನ ನಡುವೆ ಸಂಧಾನ ಮಾಡಲು ಬಂದಿಲ್ಲ. ಬಿಜೆಪಿಯವರ ಬೆಲೆ ಏರಿಕೆ ಮಾಡಿರುವುದು ಜನರ ಮಾತು ಕೇಳುತ್ತಿಲ್ಲ ಚಿರತೆಯ ಮಾತನಾದರೂ ಕೇಳುತ್ತಾರಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಬಿಜೆಪಿ ಬೆಂಬಲಿತ ಮುಸ್ಲಿಮರು ಯಾರೂ ಇಲ್ಲ

ಮಾಜಿ ಸಚಿವ ಜಮೀರ ಅಹ್ಮದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಇರಲಿಲ್ಲ ಎಂಬ ಫಿರೋಜ್ ಸೇಠ್ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಬಿಜೆಪಿ ಬೆಂಬಲಿತ ಮುಸ್ಲಿಮರು ಯಾರೂ ಇಲ್ಲ. ಕಾಂಗ್ರೆಸ್ ಕಾರ್ಯಕರ್ತರು ಜಮೀರ ಅವರ ಅಭಿಮಾನಿಗಳು ಇದ್ದರು. ನಾನು‌ ಜಮೀರ ಅವರಿಗೆ ಕೇಳಿದೆ ಅವರಿಗೆ ಏಕೆ ಕರೆದಿಲ್ಲ ಎಂದು ಅವರು ಆಹ್ವಾನ‌ ಕೊಟ್ಟಿದ್ದೆ ಎಂದರು. ನಾನು‌ ಆ ಕಾರ್ಯಕ್ರಮ ಆಯೋಜಿಸಿರಲಿಲ್ಲ. ನಾನು ಒಬ್ಬ ಅತಿಥಿಯಾಗಿ ಹೋಗಿದ್ದೆ ಎಂದರು.

ಇದನ್ನೂ ಓದಿ: Kolara: ದಯಮಾಡಿ ಬಿಜೆಪಿ, ಜೆಡಿಎಸ್​ಗೆ ಮತ ಹಾಕಬೇಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ವಿಧಾನಸಭಾ ಚುನಾವಣೆ ಇನ್ನೂ 8 ತಿಂಗಳು ಇದೆ. ಯಮಕನಮರಡಿ ಮತಕ್ಷೇತ್ರದಲ್ಲಿ ಸಚಿವ ಉಮೇಶ ಕತ್ತಿ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಉಸ್ತುವಾರಿ ಕೊಟ್ಟಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ನಮಗೆ ಒಂದು‌ ವರ್ಷದ ಹಿಂದೆಯೇ ಗೊತ್ತಿದೆ. ಚುನಾವಣೆಯಲ್ಲಿ ಗೆಲವು ಸಾಧಿಸಲು ಎಲ್ಲರೂ ಶ್ರಮಿಸುವುದು ಸಹಜ ಎಂದರು.
Published by:Divya D
First published: