ಸಿಎಂ ಎಚ್​​ಡಿಕೆ ಪರ ವೋಟ್​​ ಮಾಡುವಂತೆ ಬಿಎಸ್​ಪಿ ಶಾಸಕ ಎನ್​​. ಮಹೇಶ್​​ಗೆ ಮಾಯಾವತಿ ಆದೇಶ

ನಮ್ಮ ನಾಯಕಿ ಮಾಯಾವತಿಯವರು ತಟಸ್ಥರಾಗಿರುವಂತೆ ಸೂಚಿಸಿದ್ದರು. ಪಕ್ಷದ ವರಿಷ್ಠರು ನೀಡುವ ಸೂಚನೆ ಮೇರೆಗೆ ನಾಳಿನ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದರು.

Ganesh Nachikethu | news18
Updated:July 21, 2019, 8:39 PM IST
ಸಿಎಂ ಎಚ್​​ಡಿಕೆ ಪರ ವೋಟ್​​ ಮಾಡುವಂತೆ ಬಿಎಸ್​ಪಿ ಶಾಸಕ ಎನ್​​. ಮಹೇಶ್​​ಗೆ ಮಾಯಾವತಿ ಆದೇಶ
ಎನ್. ಮಹೇಶ್
  • News18
  • Last Updated: July 21, 2019, 8:39 PM IST
  • Share this:
ಬೆಂಗಳೂರು(ಜುಲೈ.21): ವಿಶ್ವಾಸಮತ ಯಾಚನೆ ವೇಳೆ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಬಿಎಸ್​​ಪಿ ಶಾಸಕ ಎನ್​​. ಮಹೇಶ್​ ಅವರಿಗೆ ಪಕ್ಷದ ಹೈಕಮಾಂಡ್​​ ಸೂಚಿಸಿದೆ. ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ನಡೆದಲ್ಲಿ,  ಸಿಎಂ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವಂತೆ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್​​ ಮೂಲಕ ಆದೇಶಿಸಿದ್ದಾರೆ.ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್‍ಪಿ ತಟಸ್ಥ ನಿಲುವು ತಳೆದಿದೆ. ಇದರಿಂದಾಗಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ ಎನ್ನಲಾಗಿತ್ತು.

ಬಿಎಸ್‍ಪಿ ಶಾಸಕ ಎನ್​​. ಮಹೇಶ್​​ ಇತ್ತೀಚೆಗೆ ಅಧಿವೇಶನದಿಂದ ಹೊರಗೆ ಉಳಿದಿದ್ದಾರೆ. ಮಾಯಾವತಿ ಅವರೂ ಕೂಡ ಈ ಸಂದರ್ಭದಲ್ಲಿ ಮಹೇಶ್ ಅವರಿಗೆ ತಟಸ್ಥವಾಗಿರುವಂತೆ ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
Loading...

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಪಟ್ಟ? ಮಾಜಿ ಸಿಎಂ ಭೇಟಿ ಮಾಡಿದ ಜೆಡಿಎಸ್ ನಿಯೋಗ

ಇನ್ನು ಖುದ್ದು ಶಾಸಕ ಮಹೇಶ್ ಅವರೇ, ಖಾಸಗಿ ಕೆಲಸಗಳಿಂದಾಗಿ ಅಧಿವೇಶನಕ್ಕೆ ಹೋಗಲು ಆಗಿಲ್ಲ. ನಮ್ಮ ನಾಯಕಿ ಮಾಯಾವತಿಯವರು ತಟಸ್ಥರಾಗಿರುವಂತೆ ಸೂಚಿಸಿದ್ದರು. ಪಕ್ಷದ ವರಿಷ್ಠರು ನೀಡುವ ಸೂಚನೆ ಮೇರೆಗೆ ನಾಳಿನ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಸಿಎಂ ಕುಮಾರಸ್ವಾಮಿ ಅನಾರೋಗ್ಯ; ಬಿಜೆಪಿಗೆ ವಿಶ್ವಾಸಮತದ್ದೇ ಟೆನ್ಷನ್

ಈ ಬೆನ್ನಲ್ಲೀಗ ಟ್ವೀಟ್​​ ಮೂಲಕ ಮಾಯಾವತಿ ಅವರು, ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಆದೇಶಿಸಿದ್ಧಾರೆ. ಹೀಗಾಗಿ ಶಾಸಕ ಎನ್​​. ಮಹೇಶ್​ ನಾಳೆ ಅಧಿವೇಶನದಲ್ಲಿ ಪಾಲ್ಗೊಳಲ್ಲಿದ್ದಾರೆ. ಅಲ್ಲದೇ ಸಿಎಂ ಎಚ್​​.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಲಿದ್ದಾರೆ.
-----------------------
First published:July 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...