Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:June 29, 2020, 5:31 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 29, 2020, 5:31 PM IST
  • Share this:
1. ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ

ಬ್ರೆಕ್ಸಿಟ್​ ಒಪ್ಪಂದವನ್ನು ಪಕ್ಷದ ಸಂಸದರು ಬೆಂಬಲಿಸದ ಕಾರಣಕ್ಕೆ ಕನ್ಸವೇಟಿವ್​ ಪಕ್ಷದ ನಾಯಕತ್ವಕ್ಕೆ ಜೂನ್​ 7ರ ಶುಕ್ರವಾರದಂದು ರಾಜೀನಾಮೆ ನೀಡುವುದಾಗಿ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಘೋಷಿಸಿದರು. ಈ ಘೋಷಣೆ ವೇಳೆ ಥೆರೆಸಾ ಕಣ್ಣೀರು ಹಾಕಿ ಗದ್ಗದಿತರಾದರು. ರಾಜೀನಾಮೆ ಘೋಷಣೆ ವೇಳೆ ಮಾತನಾಡಿದ ಅವರು, ಬ್ರೆಕ್ಸಿಟ್​ ಒಪ್ಪಂದ ಸಂಬಂಧ ಬೆಂಬಲ ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ಸಾಕಷ್ಟು ವಿಷಾದವಿದೆ. ಪ್ರಧಾನಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಸಿಗುವವರೆಗೂ ಜೂನ್​ 7ರವರೆಗೆ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮುಂದುವರೆಯುವುದಾಗಿ ಥೆರೆಸಾ ಹೇಳಿದರು.

2.ಎನ್​ಡಿಎ ಸರ್ಕಾರ ಕೊನೇ ಸಚಿವ ಸಂಪುಟ ಸಭೆ ಇಂದು; ಮೇ 30ರಂದು 2ನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ

17ನೇ ಲೋಕಸಭಾ ಚುನಾವಣೆಯ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಮಲ ನಾಯಕರು ಮುಳುಗಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ 353 ಸ್ಥಾನಗಳನ್ನು ಗೆಲ್ಲುವ  ಮೂಲಕ ಪ್ರಚಂಡ ಜಯಭೇರಿ ಬಾರಿಸಿದ್ದಾರೆ. ಈ ದೊಡ್ಡ ಯಶಸ್ಸಿನೊಂದಿಗೆ ಶುಕ್ರವಾರ ತಮ್ಮ 16ನೇ ಲೋಕಸಭೆಯನ್ನು ವಿಸರ್ಜಿಸಿ, ಹೊಸ  ಸರ್ಕಾರ ರಚನೆಗೆ ಮೋದಿ ಅಣಿಯಾಗಿದ್ದಾರೆ. ಇಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭೇಟಿ ಮಾಡಲಿರುವ ಅವರು ಸರ್ಕಾರ ವಿಸರ್ಜಿಸುವ ಕುರಿತು ಶಿಫಾರಸ್ಸು ಮಾಡಲಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಬಿಜೆಪಿ ಹಿರಿಯ ನಾಯಕರಾದ ಎಲ್​.ಕೆ ಆಡ್ವಾಣಿ ಹಾಗೂ ಮುರಳಿ ಮನೋಹರ್​ ಜೋಷಿ ಭೇಟಿಯಾಗಿ, ಆಶೀರ್ವಾದ ಪಡೆದರು.

3. ಡಿಎಂಕೆಗೆ ಕೈಕೊಟ್ಟ ವಿಧಾನಸಭೆ; ಸ್ಟಾಲಿನ್ ಸಿಎಂ ಕನಸು ಮುಂದೂಡಿಕೆ

ತಮಿಳುನಾಡಿನಲ್ಲಿ ನಿರೀಕ್ಷೆಯಂತೆಯೇ ಡಿಎಂಕೆ ಮೈತ್ರಿ ಕೂಟ 38 ಲೋಕಸಭೆ ಪೈಕಿ 36ರಲ್ಲಿ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಡಿಎಂಕೆ ತಾನು ಸ್ಪರ್ಧೆ ಮಾಡಿದ ಎಲ್ಲಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿದೆ. ಆದರೆ, 22 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆಯನ್ನೂ ಜಯಿಸುವ ಮೂಲಕ ಮುಖ್ಯಮಂತ್ರಿ ಆಗಬೇಕು ಎಂಬ ಎಂ.ಕೆ. ಸ್ಟಾಲಿನ್ ಅವರ ಕನಸು ಮಾತ್ರ ಕೆಲ ಕಾಲ ಮುಂದೂಡುವಂತಾಗಿದೆ. ಒಟ್ಟಾರೆ 234 ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ 97 ಸ್ಥಾನಗಳನ್ನು ಹೊಂದಿದೆ. ಪ್ರಸ್ತುತ ನಡೆದಿರುವ 22 ವಿಧಾನಸಭಾ ಕ್ಷೇತ್ರಗಳ ಪೈಕಿ ಡಿಎಂಕೆ 13 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ. ಇದರಿಂದ ಪಕ್ಷದ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಆದರೆ, ಸರ್ಕಾರ ರಚಿಸಲು 117 ಮ್ಯಾಜಿಕ್ ನಂಬರ್​ ಪರಿಣಾಮ ಸಿಎಂ ಆಗಬೇಕು ಎಂಬ ಸ್ಟಾಲಿನ್ ಕನಸು ಮುಂದೂಡಲಾಗಿದೆ.

4. ಉತ್ತರಪ್ರದೇಶ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜ್​ ಬಬ್ಬರ್ ರಾಜೀನಾಮೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತು ಸುಣ್ಣವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಕಾರ್ಯಕಾರಿಣಿ ಮುಖಂಡರ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಆದ ತೀವ್ರ ಮುಖಭಂಗದಿಂದಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜ್​ ಬಬ್ಬರ್​ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಯುಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಬ್ಬರ್, ರಾಜೀನಾಮೆ ಪತ್ರವನ್ನು ರಾಹುಲ್ ಗಾಂಧಿಗೆ ತಲುಪಿಸಿದ್ದಾರೆ. ಸಂಸತ್ತಿಗೆ 80 ಸದಸ್ಯರನ್ನು ಕಳುಹಿಸುವ ರಾಜ್ಯದಲ್ಲಿ ಕಾಂಗ್ರೆಸ್ ತೀರಾ ಕಳಪೆ ಪ್ರದರ್ಶನ ನೀಡಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

5. ಮೈತ್ರಿ ಸರ್ಕಾರ ಸೋತಿಲ್ಲ, ಮುಂದಿನ ನಾಲ್ಕು ವರ್ಷವೂ ಕುಮಾರಸ್ವಾಮಿಯೇ ಸಿಎಂ; ಪರಮೇಶ್ವರ್

ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದಾರೆ. ಆದರೆ, ರಾಜ್ಯದ ಆಡಳಿತಕ್ಕೆ ಕಳೆದ ವರ್ಷವೇ ಮನ್ನಣೆ ನೀಡಿಯಾಗಿದೆ. ಹೀಗಾಗಿ ಮೈತ್ರಿ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಅನೌಪಚಾರಿಕ ಸಚಿವ ಸಂಪುಟದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ವಿಶ್ಲೇಷಣೆ ಅದು ಅವರ ವೈಯಕ್ತಿಕ. ಅವರೇ ಏನಾದರೂ ಹೇಳಿಕೊಳ್ಳಲಿ. ಆದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿರಲಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

6.ಮೈತ್ರಿಯಿಂದ ಲಾಭವಾಗಿದ್ದು ಗೌಡರ ಕುಟುಂಬ ಮತ್ತು ಡಿಕೆ ಬ್ರದರ್ಸ್​ಗೆ ಮಾತ್ರ​: ಮಂಜು ಆರೋಪ

ಮೈತ್ರಿಯಿಂದ ಸಿದ್ದರಾಮಯ್ಯ ಅವರಿಗೆ ನಷ್ಟವಾಗಿಲ್ಲ. ಬದಲಿಗೆ ಕಾಂಗ್ರೆಸ್‌ಗೆ ಮಾತ್ರ ನಷ್ಟವಾಗಿದೆ. ಮೈತ್ರಿ ಲಾಭ ಅಗಿದ್ದು ದೇವೇಗೌಡರ ಕುಟುಂಬಕ್ಕೆ ಮತ್ತು ಡಿ.ಕೆ. ಸುರೇಶ್ ಸೋದರರಿಗೆ ಮಾತ್ರ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಎ ಮಂಜು ಕಿಡಿಕಾರಿದರು. ತುಮಕೂರಿನಲ್ಲಿ ಸೋತ ದೇವೇಗೌಡರಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಡಲು ಪ್ರಜ್ವಲ್ ರೇವಣ್ಣ ನಿರ್ಧರಿಸಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎ. ಮಂಜು, ದೇವೇಗೌಡರು ಅಗತ್ಯ ಅಂತ ಪ್ರಜ್ವಲ್​ಗೆ  ಮೊದಲೇ ಗೊತ್ತಿರಲಿಲ್ವ? ಚುನಾವಣೆಗೂ ಮೊದಲೇ ದೇವೇಗೌಡರೇ ಸ್ಪರ್ಧಿಸುವಂತೆ ಮನವಿ ಮಾಡಿದ್ದೆ. ಅವರ ಕುಟುಂಬದವರಿಗೆ ಈ ವಿಚಾರ ತಿಳಿದಿರಲಿಲ್ವ..? ಪಕ್ಷ ಅನುಮತಿ ಸೂಚಿಸಿದ್ರೆ ನಾನೇ ದೇವೇಗೌಡರ ವಿರುದ್ದ ಪುನಃ ಸ್ಪರ್ಧೆಮಾಡುತ್ತೇನೆ. ದೇವೇಗೌಡರು ತಮ್ಮ ಕುಟುಂಬಕ್ಕೆ ಲಾಭ ಮಾಡಲು ಹೋಗಿ ಕಾಂಗ್ರೆಸ್‌ ಕಥೆ ಮುಗಿಯಿತು. ಮೈತ್ರಿ ಸಂದರ್ಭದಲ್ಲೇ ನಾನು ವಿರೋಧಿಸಿದ್ದೆ. ಅವರು 38 ಸ್ಥಾನ ಗಳಿಸಲು ಬಿಜೆಪಿ ಕಾರಣ. ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪ ಬಳಿ ಹಣ ಲಾಭ, ರಾಜಕೀಯ ಲಾಭ ಎಲ್ಲ ಪಡೆದು ಅವರಿಗೆ ಮೋಸ ಮಾಡಿದರು. ಅಂದು ಯಡಿಯೂರಪ್ಪ ಕಾಂಗ್ರೆಸ್ ನಾಯಕರಿಗೆ ಅವರನ್ನು ನಂಬಬೇಡಿ ಎಂದು ಹೇಳಿದ ಮಾತು ಇಂದು ನಿಜವಾಯ್ತು ಎಂದು ಮಾಜಿ ಸಚಿವರೂ ಆದ ಮಂಜು ಕುಟುಕಿದರು.

7. ನಾಳೆ ಸಿಇಟಿ ಫಲಿತಾಂಶ ಪ್ರಕಟ

ಲೋಕಸಭಾ ಫಲಿತಾಂಶದ ಬಳಿಕ ನಾಳೆ 2019ರ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಫಲಿತಾಂಶ ಪ್ರಕಟವಾಗಲಿದೆ. ಕಳೆದ ತಿಂಗಳು ಎಪ್ರಿಲ್​ನಲ್ಲಿ ರಾಜ್ಯದ ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್​​ ಸೇರಿದಂತೆ ವೃತ್ತಿಪರ ಕೋರ್ಸ್​ಗಳಿಗೆ ಕೆಇಎ ಸಿಇಟಿ ಪರೀಕ್ಷೆಗಳು ನಡೆದಿತು. ಈ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಈ ಕುರಿತು ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಮಲ್ಲೇಶ್ವರಂನಲ್ಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸಚಿವ ಜಿಟಿ ದೇವೇಗೌಡ ಪರೀಕ್ಷೆ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ1 ಗಂಟೆ ಬಳಿಕ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

8. ಯಾವುದೇ ಕಾರಣಕ್ಕೂ ಮೈತ್ರಿ ಮುರಿಯೋ ಮಾತು ಬೇಡ; ಕಾಂಗ್ರೆಸ್ ಉಪಾಹಾರ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ

ಹೀನಾಯ ಸೋಲಿನ ಪರಾಮರ್ಶೆ ಹಾಗೂ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಚರ್ಚಿಸಲು ಡಿಸಿಎಂ ಜಿ.ಪರಮೇಶ್ವರ್ ಇಂದು ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಚಿವರನ್ನು ಉಪಾಹಾರಕ್ಕೆ ಆಹ್ವಾನಿಸಿ ಚರ್ಚೆ ನಡೆಸುತ್ತಿದ್ದಾರೆ. ಇದೇ ವೇಳೆ ಮೈತ್ರಿ ಮುರಿಯೋ ಮಾತು ಬೇಡ ಎಂಬ ನಿರ್ಧಾರ ವ್ಯಕ್ತವಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿರುವ ಕಡೆಯೇ ಭಾರಿ ಹಿನ್ನೆಡೆಯಾಗಿದೆ. ಬೆಂಗಳೂರು ಉತ್ತರದಲ್ಲಿ ಮಹಾಲಕ್ಷ್ಮೀ ಲೇಔಟ್, ದಾಸರಹಳ್ಳಿಯಲ್ಲಿ ಜೆಡಿಎಸ್ ಶಾಸಕರಿದ್ದರು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡಗೆ ಭಾರಿ ಹಿನ್ನೆಡೆಯಾಗಿದೆ.  ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಗೆ ಹೆಚ್ಚಿನ ಲೀಡ್ ಬಂದಿದೆ. ಮೈಸೂರು ಲೋಕಸಭಾ ಕ್ಷೇತ್ರದ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಬಿಜೆಪಿಗೆ ಹೆಚ್ಚು ಮುನ್ನಡೆ ಬಂದಿದೆ.  ಚಾಮುಂಡೇಶ್ವರಿ ಸಚಿವ ಜಿಟಿ ದೇವೇಗೌಡ ಪ್ರತಿನಿಧಿಸುತ್ತಿರುವ ಕ್ಷೇತ್ರ. ಜೆಡಿಎಸ್ ಕಾಂಗ್ರೆಸ್ ಮೈತ್ರಿಯನ್ನು ಜನ ಒಪ್ಪಿಲ್ಲ ಅನ್ನೋ ಸಂದೇಶ ಬಂದಿದೆ. ಇನ್ನೂ ಮೈತ್ರಿ ಮುಂದುವರೆದರೆ ಪಕ್ಷಕ್ಕೆ ಮತ್ತಷ್ಟು ಹಿನ್ನೆಡೆ ಆಗುತ್ತದೆ ಎಂದು ಮೈತ್ರಿ ಮುರಿದುಕೊಳ್ಳುವ ಅಭಿಪ್ರಾಯಯನ್ನು ಬೆಂಗಳೂರು ಶಾಸಕರು ವ್ಯಕ್ತಪಡಿಸಿದರು.

9. ಸುಮಲತಾರಿಗೆ ಶುಭ ಹಾರೈಸಿದ ರಿಯಲ್​ ಸ್ಟಾರ್ ಉಪೇಂದ್ರ

ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ, ಸಂಸತ್ತಿನ ಮೆಟ್ಟಿಲು ಹತ್ತಲಿರುವ ಮಹಿಳೆ ಎಂಬ ಹೆಗ್ಗಳಿಕೆ ಸುಮಲತಾ ಅವರದು. ಸುಮಲತಾರ ಈ ಜಯಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಇಡೀ ಚಿತ್ರರಂಗವೇ ಸುಮಲತಾರ ಪರವಾಗಿತ್ತು. ಪಕ್ಷಬೇಧ ಮರೆತು ಎಲ್ಲರೂ ಅವರ ಪರವಾಗಿ ನಿಂತಿದ್ದರು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಸುಮಲತಾರಿಗೆ ಈಗ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ.

10. ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದು ನಿಜಕ್ಕೂ ಅಚ್ಚರಿ!

ವಿಶ್ವಕಪ್ ಮಹಾಸಮರಕ್ಕೆ ಇನ್ನೇನು ಕೇವಲ ಐದು ದಿನಗಳಷ್ಟೆ ಬಾಕಿ ಉಳಿದಿವೆ. ಮೇ 30 ರಂದು ಈ ಕ್ರಿಕೆಟ್ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಿವೆ. ವಿಶ್ವಕಪ್ ಆರಂಭಕ್ಕೂ ಮುನ್ನ ಹಿಂದಿನ ಘತವೈಭವದ ಬಗ್ಗೆ ಮೆಲುಕು ಹಾಕುವುದಾದರೆ, ಜೂನ್ 25, 1983, ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಭಾರತದ ಕ್ರಿಕೆಟ್ ಚಿತ್ರ ಬದಲಾವಣೆಗೆ ಮುನ್ನುಡಿಯಾದ ದಿನವದು. ಆ ದಿನವನ್ನು ಮೆಲುಕು ಹಾಕಿದರೆ ಭಾರತ ಕ್ರಿಕೆಟ್ ಪ್ರೇಮಿಗಳ ಮೈ ರೋಮಾಂಚನವಾಗುತ್ತದೆ. ಭಾರತ ಚೊಚ್ಚಲ ವಿಶ್ವಕಪ್ ಗೆದ್ದ ನೆನಪೂ ಇಂದಿಗೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹಸಿರಾಗಿದ
First published: May 24, 2019, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading