ಶಂಕಿತ ಉಗ್ರನಿಗೆ ಚಾಮರಾಜ ನಗರದಲ್ಲಿ ಆಶ್ರಯ ನೀಡಿದ್ದ ಮೌಲ್ವಿ; ವಿಚಾರಣೆಯಿಂದ ಮಹತ್ವದ ಮಾಹಿತಿ ಕಲೆಹಾಕಿದ ಸಿಸಿಬಿ ಪೊಲೀಸರು

ಚಾಮರಾಜ ನಗರದ ಮುಸ್ಲಿಂ ನಾಯಕರನ್ನು ಪೊಲೀಸ್​ ಠಾಣೆಗೆ ಕರೆದು ಖಡಕ್​ ಎಚ್ಚರಿಕೆ ನೀಡಿರುವ ಪೊಲೀಸ್​ ತಕ್ಷಣ ನಗರದ ಎಲ್ಲಾ ಮಸೀದಿ ಮತ್ತು ಮದರಸಗಳಲ್ಲಿ ತಪ್ಪದೆ ಸಿಸಿ ಕ್ಯಾಮರಾ ಅಳವಡಿಸುವಂತೆಯೂ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

MAshok Kumar | news18-kannada
Updated:January 14, 2020, 9:27 AM IST
ಶಂಕಿತ ಉಗ್ರನಿಗೆ ಚಾಮರಾಜ ನಗರದಲ್ಲಿ ಆಶ್ರಯ ನೀಡಿದ್ದ ಮೌಲ್ವಿ; ವಿಚಾರಣೆಯಿಂದ ಮಹತ್ವದ ಮಾಹಿತಿ ಕಲೆಹಾಕಿದ ಸಿಸಿಬಿ ಪೊಲೀಸರು
ಪ್ರಾತಿನಿಧಿಕ ಚಿತ್ರ.
  • Share this:
ಚಾಮರಾಜನಗರ (ಜನವರಿ 14); ಮದರಸದಲ್ಲಿ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇಲ್ಲಿನ ಮಸೀದಿಯ ಮೌಲ್ವಿ ಸದಾಹತ್​ ಉಲ್ಲಾ ಎಂಬಾತನನ್ನು ಗುಂಡ್ಲುಪೇಟೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ ಎನ್ನಲಾಗುತ್ತಿದೆ.

ಗಡಿ ಜಿಲ್ಲೆ ಚಾಮರಾಜ ನಗರದಲ್ಲಿ ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿರುವ ಹಾಗೂ ಮಸೀದಿಯಲ್ಲಿ ಆಶ್ರಯ ಪಡೆದಿರುವ ಕುರಿತು ಪೊಲೀಸ್​ ಇಲಾಖೆಗೆ ಮಾಹಿತಿ ದೊರೆತಿತ್ತು. ಅಲ್ಲದೆ, ಶಂಕಿತ ಉಗ್ರನೊಬ್ಬನಿಗೆ ಗುಂಡ್ಲುಪೇಟೆ ಮೌಲ್ವಿ ಸದಾಹತ್​ ಉಲ್ಲಾ 10 ದಿನಗಳ ಕಾಲ ಆಶ್ರಯ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

ಮೌಲ್ವಿ ಸದಾಹತ್​ ಉಲ್ಲಾ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ, ಎಟಿಎಸ್ ಮತ್ತು ಆಂತರಿಕ ಭದ್ರತಾದಳದ ಪೊಲೀಸರು ಮೌಲ್ವಿ ಸದಾಹತ್ ಉಲ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೆ, ಮದರಸ ಮತ್ತು ಮಸೀದಿಗಳಿಗೆ ನೋಟೀಸ್ ನೀಡಿರುವ ಪೊಲೀಸರು ಮಸೀದಿ ಮತ್ತು ಮದರಸಗಳಿಗೆ ಅಪರಿಚಿ ವ್ಯಕ್ತಿಗಳು ಬಂದರೆ ತಕ್ಷಣ ಮಾಹಿತಿ ನೀಡುವಂತೆ ತಾಕೀತು ಮಾಡಿದ್ದಾರೆ.

ಚಾಮರಾಜ ನಗರದ ಮುಸ್ಲಿಂ ನಾಯಕರನ್ನು ಪೊಲೀಸ್​ ಠಾಣೆಗೆ ಕರೆದು ಖಡಕ್​ ಎಚ್ಚರಿಕೆ ನೀಡಿರುವ ಪೊಲೀಸ್​ ತಕ್ಷಣ ನಗರದ ಎಲ್ಲಾ ಮಸೀದಿ ಮತ್ತು ಮದರಸಗಳಲ್ಲಿ ತಪ್ಪದೆ ಸಿಸಿ ಕ್ಯಾಮರಾ ಅಳವಡಿಸುವಂತೆಯೂ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

(ವರದಿ - ಎಸ್​.ಎಂ. ನಂದೀಶ್​)

ಇದನ್ನೂ ಓದಿ : ‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪಾಠ ಮಾಡುವುದಿಲ್ಲ‘: ಜೆಎನ್​​​ಯು ಪ್ರಾಧ್ಯಾಪಕರ ಆಗ್ರಹ
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading