ಸಂತ್ರಸ್ತರಿಗೆ ನೀಡಿದ ವಸ್ತುಗಳು ಗೋದಾಮಿನಲ್ಲಿ; ಬಳ್ಳಾರಿ ಜಿಲ್ಲಾಡಳಿತ ಸಂತ್ರಸ್ಥರಿಗೆ ಇನ್ಯಾವಾಗ ತಲುಪಿಸುತ್ತೆ?
news18
Updated:September 9, 2018, 3:44 PM IST
news18
Updated: September 9, 2018, 3:44 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ
ಬಳ್ಳಾರಿ ( ಸೆ.09) : ಕೊಡಗು ಸಂತ್ರಸ್ತರಿಗೆ ನೀಡಿದ ವಸ್ತುಗಳು ಬಳ್ಳಾರಿ ಗೋದಾಮಿನಲ್ಲಿ ಧೂಳಿಡುತ್ತಿದೆ. ಆದರೆ ಬಳ್ಳಾರಿ ಜಿಲ್ಲಾಡಳಿತ ಸಂತ್ರಸ್ಥರಿಗೆ ಇನ್ಯಾವಾಗ ತಲುಪಿಸುತ್ತೋ ಎಂಬ ಪ್ರಶ್ನೆ ಎದುರಾಗಿದೆ.
ಕೊಡಗು ಜಿಲ್ಲೆ, ನೆರೆಯ ಕೇರಳ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆದ ಅನಾಹುತದಲ್ಲಿ ಉಳಿದವರ ನೆರವಿಗೆಂದು ನೀಡಿದ ಬಟ್ಟೆ, ಬರೆ, ದವಸ ಧಾನ್ಯ ಈಗಲೂ ಗೃಹರಕ್ಷಕ ದಳದ ಕಚೇರಿಯಲ್ಲಿ ಬಿದ್ದಿವೆ.
ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಮೈ ಮೇಲಿನ ಬಟ್ಟೆ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಇದನ್ನು ಅರಿತ ಜನರು ಬಟ್ಟೆ, ಬರೆ, ಪಾತ್ರ, ಕೊಡಪಾನ, ಬಕೆಟ್ ಹೀಗೆ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ನೀಡಿದರು. ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಇವುಗಳಿಂದ ಒಂದಿಷ್ಟಾದರೂ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಅನುಕೂಲ ಆಗಲಿ ಎಂಬುದು ಈ ವಸ್ತುಗಳನ್ನು ದಾನ ಮಾಡಿದವರ ಉದ್ದೇಶ ಆಗಿತ್ತು. ಆದರೆ, ಜಿಲ್ಲಾಡಳಿತ ಇವನ್ನು ಗೋದಾಮಿನಲ್ಲಿ ಇಟ್ಟುಕೊಂಡು ಕುಳಿತಿದೆ.ಈ ಕುರಿತು ಗೃಹರಕ್ಷಕ ದಳದ ಸಿಬ್ಬಂದಿ ಪ್ರಶ್ನೆಮಾಡಿದರೆ ಜಿಲ್ಲಾಧಿಕಾರಿಗಳು ಈ ವಸ್ತುಗಳನ್ನು ಸಾಗಿಸಲು ನಮಗೆ ಅನುಮತಿ ನೀಡಿಲ್ಲ. ಅನುಮತಿ ಸಿಕ್ಕ ತಕ್ಷಣ ನಾವು ಲಾರಿಯಲ್ಲಿ ಸಾಗಿಸಲು ಸಿದ್ಧರಿದ್ದೇವೆ ಎನ್ನುತ್ತಾರೆ.
ಜಿಲ್ಲಾ ರೆಡಿಮೇಡ್ ಬಟ್ಟೆ ಮಾರಾಟಗಾರರ ಸಂಘ, ಕೇರಳ ಸಂಘ, ಸ್ವತಃ ಗೃಹ ರಕ್ಷಕ ದಳ ನಗರದ ಬೀದಿ ಬೀದಿ ಅಲೆದು ಈ ವಸ್ತು ಸಂಗ್ರಹ ಮಾಡಿಕೊಟ್ಟಿದೆ. ಸಂಗ್ರಹಿತ ಸಾಮಾನುಗಳಲ್ಲಿ ಅಡುಗೆ ಸಾಮಾನು, ಬಟ್ಟೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳಿವೆ. ಹಾಲಿ ಕೊಡಗು, ಕೇರಳ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿಹೋಗಿದೆ. ಜನರಿಗೆ ಮನೆ ನಿರ್ಮಾಣ ಮಾಡಿಕೊಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಇಷ್ಟಾದರೂ ಬಳ್ಳಾರಿ ಜಿಲ್ಲಾಡಳಿತ ಈ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕುರಿತು ಚಿಂತನೆ ನಡೆಸದೇ ಇರುವುದು ಅದಕ್ಕಿರುವ ನೈಜ ಕಾಳಜಿಯನ್ನು ತೋರುತ್ತದೆ.
ಹಣದ ರೂಪದಲ್ಲಿಯೂ ಲಕ್ಷಾಂತರ ಜನ ನೆರೆಹಾವಳಿಗೆ ತುತ್ತಾದ ಕೊಡಗು ಜಿಲ್ಲೆ, ಕೇರಳದ ಜನರಿಗೆ ನೆರವಾಗಲಿ ಎಂದು ನೆರವು ನೀಡಿದ್ದಾರೆ. ಚೆಕ್, ನಗದು ರೂಪದಲ್ಲಿ ನೀಡಿದ ಹಣ ಸಹ ಇದುವರೆಗೆ ಜಿಲ್ಲಾಡಳಿತದ ಬಳಿಯೇ ಇದೆ. ವಸ್ತುಗಳ ಸಾಗಣೆಗೆ ಸಮಯ ಬೇಕು ಎಂಬುದು ನಿಜ. ಆದರೆ, ಹಣ ಜಮಾಮಾಡಲು ಇಷ್ಟೊಂದು ಸಮಯ ಬೇಕೆ ಎಂಬ ಪ್ರಶ್ನೆ ಮೂಡುತ್ತದೆ. ಆನ್ಲೈನ್ ಬ್ಯಾಂಕಿಂಗ್ ನಂತಹ ಫಟಾಫಟ್ ಯುಗದಲ್ಲೂ ಜಿಲ್ಲಾಡಳಿತ ಜನರು ಸಂತ್ರಸ್ತರಿಗೆ ಕೊಟ್ಟ ಹಣದ ರೂಪದ ನೆರವನ್ನು ಇಂದಿಗೂ ತನ್ನಲ್ಲಿಟ್ಟುಕೊಂಡಿದೆ.ಕೊಡಗು, ಕೇರಳ ಸಂತ್ರಸ್ತರ ಹೆಸರಲ್ಲಿ ಹಲವು ಸಂಘ, ಸಂಸ್ಥಯವರು ಬೀದಿ, ಬೀದಿ ಅಲೆದು ಹಣ, ವಸ್ತು ಸಂಗ್ರಹಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೆಲವು ತಮ್ಮ ಸಂಬಳ ಬಿಟ್ಟುಕೊಟ್ಟಿದ್ದಾರೆ. ಆದರೆ, ಇದುವರೆಗೆ ನಮ್ಮ ಜಿಲ್ಲೆಯ ವಿವಿಧ ಮೂಲಗಳಿಂದ ಸಂಗ್ರಹ ಆದ ಹಣದ ಒಟ್ಟು ಮೊತ್ತ ಕೇವಲ 8,63,308 ರೂ. ಮಾತ್ರ. ಗೃಹರಕ್ಷಕ ದಳದ ಕಚೇರಿಯಲ್ಲಿ ಲಭ್ಯ ಇರುವ ಮಾಹಿತಿಯಂತೆ ಈವರೆಗೆ ಸಂಗ್ರಹ ಆದ ಮೊತ್ತ ಇದು.
ಕೆಲ ಚೆಕ್ಗಳನ್ನು ಕೊಟ್ಟವರು ಯಾರು ಎಂಬುದರ ಮಾಹಿತಿಯನ್ನೂ ಜಿಲ್ಲಾಡಳಿತ ಸಮರ್ಪಕವಾಗಿ ಪಡೆದಿಲ್ಲ.
ಬಳ್ಳಾರಿ ( ಸೆ.09) : ಕೊಡಗು ಸಂತ್ರಸ್ತರಿಗೆ ನೀಡಿದ ವಸ್ತುಗಳು ಬಳ್ಳಾರಿ ಗೋದಾಮಿನಲ್ಲಿ ಧೂಳಿಡುತ್ತಿದೆ. ಆದರೆ ಬಳ್ಳಾರಿ ಜಿಲ್ಲಾಡಳಿತ ಸಂತ್ರಸ್ಥರಿಗೆ ಇನ್ಯಾವಾಗ ತಲುಪಿಸುತ್ತೋ ಎಂಬ ಪ್ರಶ್ನೆ ಎದುರಾಗಿದೆ.
ಕೊಡಗು ಜಿಲ್ಲೆ, ನೆರೆಯ ಕೇರಳ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆದ ಅನಾಹುತದಲ್ಲಿ ಉಳಿದವರ ನೆರವಿಗೆಂದು ನೀಡಿದ ಬಟ್ಟೆ, ಬರೆ, ದವಸ ಧಾನ್ಯ ಈಗಲೂ ಗೃಹರಕ್ಷಕ ದಳದ ಕಚೇರಿಯಲ್ಲಿ ಬಿದ್ದಿವೆ.
ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಮೈ ಮೇಲಿನ ಬಟ್ಟೆ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಇದನ್ನು ಅರಿತ ಜನರು ಬಟ್ಟೆ, ಬರೆ, ಪಾತ್ರ, ಕೊಡಪಾನ, ಬಕೆಟ್ ಹೀಗೆ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ನೀಡಿದರು. ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಇವುಗಳಿಂದ ಒಂದಿಷ್ಟಾದರೂ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಅನುಕೂಲ ಆಗಲಿ ಎಂಬುದು ಈ ವಸ್ತುಗಳನ್ನು ದಾನ ಮಾಡಿದವರ ಉದ್ದೇಶ ಆಗಿತ್ತು. ಆದರೆ, ಜಿಲ್ಲಾಡಳಿತ ಇವನ್ನು ಗೋದಾಮಿನಲ್ಲಿ ಇಟ್ಟುಕೊಂಡು ಕುಳಿತಿದೆ.ಈ ಕುರಿತು ಗೃಹರಕ್ಷಕ ದಳದ ಸಿಬ್ಬಂದಿ ಪ್ರಶ್ನೆಮಾಡಿದರೆ ಜಿಲ್ಲಾಧಿಕಾರಿಗಳು ಈ ವಸ್ತುಗಳನ್ನು ಸಾಗಿಸಲು ನಮಗೆ ಅನುಮತಿ ನೀಡಿಲ್ಲ. ಅನುಮತಿ ಸಿಕ್ಕ ತಕ್ಷಣ ನಾವು ಲಾರಿಯಲ್ಲಿ ಸಾಗಿಸಲು ಸಿದ್ಧರಿದ್ದೇವೆ ಎನ್ನುತ್ತಾರೆ.
ಜಿಲ್ಲಾ ರೆಡಿಮೇಡ್ ಬಟ್ಟೆ ಮಾರಾಟಗಾರರ ಸಂಘ, ಕೇರಳ ಸಂಘ, ಸ್ವತಃ ಗೃಹ ರಕ್ಷಕ ದಳ ನಗರದ ಬೀದಿ ಬೀದಿ ಅಲೆದು ಈ ವಸ್ತು ಸಂಗ್ರಹ ಮಾಡಿಕೊಟ್ಟಿದೆ. ಸಂಗ್ರಹಿತ ಸಾಮಾನುಗಳಲ್ಲಿ ಅಡುಗೆ ಸಾಮಾನು, ಬಟ್ಟೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳಿವೆ. ಹಾಲಿ ಕೊಡಗು, ಕೇರಳ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿಹೋಗಿದೆ. ಜನರಿಗೆ ಮನೆ ನಿರ್ಮಾಣ ಮಾಡಿಕೊಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಇಷ್ಟಾದರೂ ಬಳ್ಳಾರಿ ಜಿಲ್ಲಾಡಳಿತ ಈ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕುರಿತು ಚಿಂತನೆ ನಡೆಸದೇ ಇರುವುದು ಅದಕ್ಕಿರುವ ನೈಜ ಕಾಳಜಿಯನ್ನು ತೋರುತ್ತದೆ.
ಹಣದ ರೂಪದಲ್ಲಿಯೂ ಲಕ್ಷಾಂತರ ಜನ ನೆರೆಹಾವಳಿಗೆ ತುತ್ತಾದ ಕೊಡಗು ಜಿಲ್ಲೆ, ಕೇರಳದ ಜನರಿಗೆ ನೆರವಾಗಲಿ ಎಂದು ನೆರವು ನೀಡಿದ್ದಾರೆ. ಚೆಕ್, ನಗದು ರೂಪದಲ್ಲಿ ನೀಡಿದ ಹಣ ಸಹ ಇದುವರೆಗೆ ಜಿಲ್ಲಾಡಳಿತದ ಬಳಿಯೇ ಇದೆ. ವಸ್ತುಗಳ ಸಾಗಣೆಗೆ ಸಮಯ ಬೇಕು ಎಂಬುದು ನಿಜ. ಆದರೆ, ಹಣ ಜಮಾಮಾಡಲು ಇಷ್ಟೊಂದು ಸಮಯ ಬೇಕೆ ಎಂಬ ಪ್ರಶ್ನೆ ಮೂಡುತ್ತದೆ. ಆನ್ಲೈನ್ ಬ್ಯಾಂಕಿಂಗ್ ನಂತಹ ಫಟಾಫಟ್ ಯುಗದಲ್ಲೂ ಜಿಲ್ಲಾಡಳಿತ ಜನರು ಸಂತ್ರಸ್ತರಿಗೆ ಕೊಟ್ಟ ಹಣದ ರೂಪದ ನೆರವನ್ನು ಇಂದಿಗೂ ತನ್ನಲ್ಲಿಟ್ಟುಕೊಂಡಿದೆ.
Loading...