• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Viral Photo: ಟೀಂ​​ 40% ಹಾಗೂ ಟೀಂ 50% ಫೈನಲ್ ಪಂದ್ಯದ ಹಣಾಹಣಿ; ಹಲವೆಡೆ ಪತ್ತೆಯಾದ ಭಿತ್ತಿಪತ್ರಗಳು

Viral Photo: ಟೀಂ​​ 40% ಹಾಗೂ ಟೀಂ 50% ಫೈನಲ್ ಪಂದ್ಯದ ಹಣಾಹಣಿ; ಹಲವೆಡೆ ಪತ್ತೆಯಾದ ಭಿತ್ತಿಪತ್ರಗಳು

ವೈರಲ್ ಆಗಿರುವ ಭಿತ್ತಿಪತ್ರ

ವೈರಲ್ ಆಗಿರುವ ಭಿತ್ತಿಪತ್ರ

ಬಿತ್ತಿಪತ್ರದಲ್ಲಿ ಕ್ಯೂ‌ಆರ್ ಕೋಡ್ ಹಾಕಲಾಗಿದ್ದು, ಸ್ಕ್ಯಾನ್ ಮಾಡಿದ್ರೆ  ಸರ್ಕಾರದ ಹಗರಣಗಳು ಎನ್ನಲಾದ ವೆಬ್‌ಸೈಟ್ ಓಪನ್ ಆಗುತ್ತದೆ. ಪಿ‌ಎಸ್‌ಐ ಅಕ್ರಮ, ಬಿಟ್ ಕಾಯನ್ ಹಗರಣ, ರೌಡಿ ಮೋರ್ಚಾ ಸೇರಿದಂತೆ ಬಿಜೆಪಿ ಸರ್ಕಾರದ ಹಲವು ವೈಫಲ್ಯಗಳು ಈ ವೆಬ್​​ಸೈಟ್​ನಲ್ಲಿವೆ.

  • Share this:

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಾಂಗ್ರೆಸ್ (Congress) ಪೇಸಿಎಂ ಸೇರಿದಂತೆ ಹಲವು ಅಭಿಯಾನಗಳನ್ನು ಮಾಡಿತ್ತು. ಪೇಸಿಎಂ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ತುಂಬೆಲ್ಲಾ ಭಿತ್ತಿಪತ್ರಗಳನ್ನು ಹಂಚಲಾಗಿತ್ತು. ಇದೀಗ ಬೆಂಗಳೂರು ಹೊರವಲಯದ ನೆಲಮಂಗಲ (Nelamangala, Bengaluru) ಭಾಗದಲ್ಲಿ  ಬಿಜೆಪಿ ವಿರುದ್ಧದ ಭಿತ್ತಿಪತ್ರ ಹರಿದಾಡುತ್ತಿದೆ. ಆದರೆ ಈ ಭಿತ್ತಿಪತ್ರ ಯಾರು ಹಂಚಿಕೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಭ್ರಷ್ಟ ಬಿಜೆಪಿ ಕಪ್ ಎಂಬ ಕ್ಯಾಂಪೇನ್ ಮಾಡಲಾಗುತ್ತಿದೆ. ಭಿತ್ತಿಪತ್ರ ಹಂಚಿಕೆಗೆ ಸ್ಥಳೀಯ ಬಿಜೆಪಿ ನಾಯಕರು (BJP Leaders) ಆಕ್ರೋಶ ಹೊರಹಾಕಿದ್ದಾರೆ.  


ಟೀಂ 40% ಹಾಗೂ ಟೀಂ 50% ಫೈನಲ್‌ ಪಂದ್ಯದ ಹಣಾಹಣಿ ಎನ್ನುವ ಭಿತ್ತಿಪತ್ರ ವೈರಲ್ ಆಗಿದೆ. ನೆಲಮಂಗಲ ನಗರದ ಉಪನೋಂದಣಾಧಿಕಾರಿ ಕಚೇರಿ ಸೇರಿದಂತೆ ಹಲವೆಡೆ ಭಿತ್ತಿಪತ್ರ ಪತ್ತೆಯಾಗಿವೆ.


ಟೀಂ 40% ಹಾಗೂ ಟೀಂ 50% ಪರ್ಸೆಂಟ್ ಎಂದು ಉಲ್ಲೇಖ ಮಾಡಲಾಗಿದೆ. ಟೀಂ 40% ನಲ್ಲಿ ಬಿ‌ಎಲ್ ಸಂತೋಷ್ ಹಾಗೂ ಟೀಂ ಟೀ 50% ನಲ್ಲಿ ಬಿಎಸ್‌ವೈ ಅಂಡ್ ಟೀಂ ಎಂದು ಫೋಟೋ ಹಾಕಲಾಗಿದೆ.


40% ಟೀಂ


ಬಿ‌ಎಲ್ ಸಂತೋಷ್, ಅಶ್ವಥ್ ನಾರಾಯಣ್, ಬಿಸಿ ನಾಗೇಶ್, ಬಿ‌.ಸಿ ಪಾಟೀಲ್, ಈಶ್ವರಪ್ಪ, ಎಸ್‌ಟಿ ಸೋಮಶೇಖರ್, ಯತ್ನಾಳ್, ಸಿಟಿ ರವಿ, ಮುನಿರತ್ನ, ವಿ.ಸೋಮಣ್ಣ,  ಸಂಸದ ತೇಜಸ್ವಿ ಸೂರ್ಯ




50% ಟೀಂ


ಬಿಎಸ್​ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮುನಿಸ್ವಾಮಿ, ಪ್ರತಾಪ್ ಸಿಂಹ, ಕೆ‌ಸಿ ನಾರಾಯಣಗೌಡ, ಆರ್.ಅಶೋಕ್, ವಿಜಯೇಂದ್ರ, ನಿರ್ಮಲಾ ಸೀತಾರಾಮನ್, ಶೋಭಾ ಕರಂದಾಜ್ಲೆ, ರೇಣುಕಾಚಾರ್ಯ, ಎಂ‌ಟಿಬಿ ನಾಗರಾಜ್, ಎಸ್‌‌ಆರ್ ವಿಶ್ವನಾಥ್, ಸೇರಿ ಹಲವರ ತಂಡ


ಇದನ್ನೂ ಓದಿ: Karnataka Election Dates 2023 LIVE: ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ, ಮೇ 13ಕ್ಕೆ ಫಲಿತಾಂಶ


ಬಿತ್ತಿಪತ್ರದಲ್ಲಿ ಕ್ಯೂ‌ಆರ್ ಕೋಡ್ ಹಾಕಲಾಗಿದ್ದು, ಸ್ಕ್ಯಾನ್ ಮಾಡಿದ್ರೆ  ಸರ್ಕಾರದ ಹಗರಣಗಳು ಎನ್ನಲಾದ ವೆಬ್‌ಸೈಟ್ ಓಪನ್ ಆಗುತ್ತದೆ. ಪಿ‌ಎಸ್‌ಐ ಅಕ್ರಮ, ಬಿಟ್ ಕಾಯನ್ ಹಗರಣ, ರೌಡಿ ಮೋರ್ಚಾ ಸೇರಿದಂತೆ ಬಿಜೆಪಿ ಸರ್ಕಾರದ ಹಲವು ವೈಫಲ್ಯಗಳು ಈ ವೆಬ್​​ಸೈಟ್​ನಲ್ಲಿವೆ.

First published: