• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kolara: ಸರ್ಕಾರಿ ಭೂಮಿ ಕಬಳಿಕೆಗೆ ಜಿಲ್ಲಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿದ್ರು!

Kolara: ಸರ್ಕಾರಿ ಭೂಮಿ ಕಬಳಿಕೆಗೆ ಜಿಲ್ಲಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿದ್ರು!

ಸರ್ಕಾರಿ ಭೂಮಿ

ಸರ್ಕಾರಿ ಭೂಮಿ

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಆಲಹಳ್ಳಿ ಗ್ರಾಮದಲ್ಲಿನ ಜಮೀನಿಗೆ ಕೋಟ್ಯಾಂತರ ರೂಪಾಯಿ ಬೆಲೆಯಿದ್ದು , ಭೂಗಳ್ಳರ ಕಣ್ಣು  ಸರ್ಕಾರಿ ಜಮೀನಿನ ಮೇಲೆ ಬಿದ್ದಿದೆ. ಜಮೀನು ಕಬಳಿಸಲು ಜಿಲ್ಲಾಧಿಕಾರಿ ಸಹಿಯನ್ನೆ ನಕಲು ಮಾಡಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದೆ.

ಮುಂದೆ ಓದಿ ...
  • Share this:

ಕೋಲಾರ(ಜೂ.24): ಕೋಟಿ ಕೋಟಿ ಬೆಲೆ ಬಾಳುವ ಭೂಕಬಳಿಕೆಗೆ ಜಿಲ್ಲಾಧಿಕಾರಿಗಳ ಸಹಿಯನ್ನೆ ನಕಲು ಮಾಡಿರುವ ಘಟನೆ, ಕೋಲಾರ (Kolara) ತಾಲೂಕಿನ  ಆಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಮೀಪದಲ್ಲಿ ನರಸಾಪುರ ಕೈಗಾರಿಕಾ ವಲಯ ಇದೆ.  ಪರಿಣಾಮ ಇಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಪರಿಣಾಮ ಖಾಸಗಿ ಕಂಪನಿಯೊಂದಕ್ಕೆ (Private Company) ಸರಕಾರಿ ಜಮೀನು (Govt Land) ಮಂಜೂರು ಮಾಡಲು ತಹಸೀಲ್ದಾರ್ (Tahasildar) ಕಚೇರಿಯ ಅಧಿಕಾರಿಗಳೇ ಜಿಲ್ಲಾಕಾರಿಗಳ ಸಹಿ ನಕಲು (Forgery) ಮಾಡಿ ಕೋಟ್ಯಾಂತರ ರೂಪಾಯಿ ಹಣ ಹೊಡೆಯಲು ಮುಂದಾಗಿದ್ದ ಪ್ರಕರಣ ಬಯಲಾಗಿದೆ. ಸನ್‌ ಲಾರ್ಜ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯು (Real Estate Company) ತಾಲೂಕಿನ ವಕ್ಕಲೇರಿ ಹೋಬಳಿಯ ಆಲಹಳ್ಳಿ ಗ್ರಾಮದ ಹಲವು ಸರ್ವೆ ಸಂಖ್ಯೆಯಲ್ಲಿರುವ ಹಿಡುವಳಿ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಿದ್ದಾರೆ.


ಜಿಲ್ಲಾಧಿಕಾರಿಗಳ ಸಹಿ ನಕಲು ಮಾಡಿ ಅಕ್ರಮ


ಈ ಜಮೀನುಗಳ ಮಧ್ಯದಲ್ಲಿ ಸರ್ವೆ ಸಂಖ್ಯೆ 127 ರಲ್ಲಿನ 3.23 ಎಕರೆ ಸರಕಾರಿ ಖರಾಬು ಜಮೀನು ಆಗಿರುವುದರಿಂದ ಲ್ಯಾಂಡ್ ಲಾಕ್ಡ್ ಲ್ಯಾಂಡ್ ಆಗಿರುತ್ತದೆ. ಈ ಕಂಪನಿಗೆ ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಸರಕಾರವೇ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ, ತಹಸೀಲ್ದಾರ್ ಕಚೇರಿ ಅಕಾರಿಗಳು ಮಾತ್ರ ಜಿಲ್ಲಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಕೈಚಳಕ ತೋರಿಸಿದ್ದಾರೆ.


ಸ್ಕ್ಯಾನ್ ಮಾಡಿ ಜಿಲ್ಲಾಕಾರಿಗಳ ಸಹಿ ಮುದ್ರಣ


ಜಿಲ್ಲಾಕಾರಿಗಳ ಕಾರ್ಯಾಲಯದಿಂದ ಪತ್ರ ಬಂದಿರುವ ರೀತಿ ನಕಲಿ ದಾಖಲೆಯನ್ನು ಸೃಷ್ಟಿಸಿರುವ ಅಧಿಕಾರಿಗಳು, ಜಮೀನು ಮಂಜೂರು ಮಾಡಲು ಅವಕಾಶವಿದ್ದು, ತಹಸೀಲ್ದಾರ್ ಅವರಿಗೆ ಮುಂದಿನ ಕ್ರಮಕ್ಕಾಗಿ ಹಿಂದಿರುಗಿಸಿದೆ ಎಂದು ಉಲ್ಲೇಖಿಸಿ ಸ್ಕ್ಯಾನ್ ಮಾಡಿ ಜಿಲ್ಲಾಕಾರಿಗಳ ಸಹಿಯನ್ನು ಮುದ್ರಿಸಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ.


ಸಹಿ ನೋಡಿ ಸಂಶಯಗೊಂಡ ತಹಸೀಲ್ದಾರ್


ಖಾಸಗಿ ಕಂಪನಿಗೆ ಜಮೀನು ವರ್ಗಾಯಿಸಲು ಕಡತ ಬಹುತೇಕ ಅಂತಿಮ ಹಂತಕ್ಕೆ ಬಂದು, ಕಂಪನಿಯವರಿಂದ ಶೇಕಡಾ 50 ರಷ್ಟು ಹಣ ಕಟ್ಟಿಸಿಕೊಳ್ಳಲು ನೋಟಿಸ್ ನೀಡಬೇಕಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಡತವನ್ನು ತಹಸೀಲ್ದಾರ್‌ಗೆ ಕಳುಹಿಸಿದ್ದರು. ಈ ವೇಳೆ ಕಡತವನ್ನು ಪರಿಶೀಲಿಸಿದ ತಹಸೀಲ್ದಾರ್ ನಾಗರಾಜ್ ಅವರಿಗೆ ಜಿಲ್ಲಾಧಿಕಾರಿಗಳ ಸಹಿಯ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಕಾರಿಗಳಿಂದ ತಾಲೂಕು ಕಚೇರಿಗೆ ಬಂದಿರುವ ಬೇರೊಂದು ಕಡತವನ್ನು ತರಿಸಿಕೊಂಡು ಪರಿಶೀಲಿಸಿದಾಗ ಸಹಿ ನಕಲಿ ಎಂಬುದು ಪತ್ತೆಯಾಗಿದೆ.


ಹೀಗಾಗಿ ಗ್ರಾಮದ ಮಾರ್ಗಸೂಚಿ ಬೆಲೆಯಂತೆ ಕರ್ನಾಟಕ ಮಂಜೂರಾತಿ ನಿಯಮಗಳು 1969 ರ ನಿಯಮ 22 ರ ಅಡಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಮಂಜೂರು ಮಾಡಲು ಕಂಪನಿಯು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ಅದರಂತೆ ಜಿಲ್ಲಾಕಾರಿಗಳು ತಹಸೀಲ್ದಾರ್, ಸಹಾಯಕ ಕಮೀಷನರ್‌ಗಳು ಸದರಿ ಜಮೀನು ಪಹಣಿ ದಾಖಲೆಯಂತೆ ಸರಕಾರಿ ಖರಾಬು ಎಂಬುದಾಗಿ ವರ್ಗೀಕರಿಸಲಾಗಿದೆ.


ಪ್ರಸ್ತಾವನೆ ತಿರಸ್ಕಾರ


ಇನ್ನೂ ಕೈಗಾರಿಕಾ ಉದ್ದೇಶಕ್ಕಾಗಿ ಮಾರ್ಗಸೂಚಿ ದರದನ್ವಯ ಮಂಜೂರು ಮಾಡಲು,  ಕರ್ನಾಟಕ ಭೂ  ಮಂಜೂರಾತಿ ನಿಯಮಗಳು, 1969 ನಿಯಮ 22 ರನ್ವಯ ಅವಕಾಶ ಇರುವುದಿಲ್ಲ ಎಂಬ ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ತಿರಸ್ಕಾರಿಸಲಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿಯಾದ ಸೆಲ್ವಮಣಿ ಅವರು ಕಳೆದ ವರ್ಷದ ಡಿಸೆಂಬರ್ ನಲ್ಲಿ  ಆದೇಶಿಸಿದ್ದಾರೆ. ಅದರಂತೆ ಜಿಲ್ಲಾಕಾರಿಗಳು ಕೋಲಾರ ತಹಸೀಲ್ದಾರ್‌ಗೆ ಕಡತವನ್ನು ಹಿಂತಿರುಗಿಸುತ್ತಾ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಿರುತ್ತಾರೆ.


ಜಿಲ್ಲಾಧಿಕಾರಿಗಳ ಪತ್ರದಲ್ಲಿ ತಿರಸ್ಕರಿಸಲಾಗಿದೆ ಎಂಬುದನ್ನು ತಿದ್ದಿರುವ ಭೂಗಳ್ಳರು, ಪುರಸ್ಕರಿಸಲಾಗಿದೆ ಎಂದು ತಿರುಚಿರುವುದು ಬೆಳಕಿಗೆ ಬಂದಿದೆ.ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಕಂಪನಿಗೆ ಯಾವುದೇ ಮಾಹಿತಿಯೂ ಇಲ್ಲ ಹಾಗೂ ಸಂಬಂಧವೂ  ಇಲ್ಲವೆಂದು ಕಂಪನಿಯ ನಿರ್ದೇಶಕರು ಕೋಲಾರ ತಹಸೀಲ್ದಾರ್ ಅವರಿಗೆ ಜೂನ್ 16 ರಂದು ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: PU ಫಲಿತಾಂಶದಲ್ಲಿ ಚಿತ್ರದುರ್ಗ ಲಾಸ್ಟ್! ಆತ್ಮಾವಲೋಕನ ಸಭೆಯಲ್ಲಿ ಮಹತ್ವದ ನಿರ್ಧಾರಗಳು


ಒಟ್ಟಾರೆ ತಾಲ್ಲೂಕು ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳು,  ಜಿಲ್ಲಾಧಿಕಾರಿಗಳಿಂದ ಬಂದಿರುವ ಕಡತಕ್ಕೆ ಪರ್ಯಾಯವಾಗಿ ಮತ್ತೊಂದು ಪತ್ರವನ್ನು ಸಿದ್ಧಪಡಿಸಿದ್ದಾರೆ. ಜಮೀನು ಮಂಜೂರಿಗೆ ಕೆಲ ಖಾಸಗಿ ವ್ಯಕ್ತಿಗಳು, ತಾಲ್ಲೂಕು ಕಚೇರಿ ಸಿಬ್ಬಂದಿ ಶಾಮೀಲಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಸಹಿ ನಕಲು ಮಾಡಿರುವ ಕಿಡಿಗೇಡಿಗಳ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Published by:Divya D
First published: