ಬ್ಯಾಂಕ್ ಖಾಸಗೀಕರಣ ವಿರೋಧಿ ವೇದಿಕೆಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ!

ಕೇಂದ್ರದ ಖಾಸಗೀಕರಣ ನೀತಿ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೀತು. ಅಲ್ಲದೇ ಮತ್ತೆ ಹೋರಾಟದ ಎಚ್ಚರಿಕೆ ನೀಡಿವೆ. ಆದ್ರೆ, ಬೆಂಗಳೂರಿನಲ್ಲಿ ನಡೆದ ಹೋರಾಟ ಕೇಂದ್ರಕ್ಕೆ ತಲುಪುತ್ತಾ, ಖಾಸಗೀಕರಣಕ್ಕೆ ಬ್ರೇಕ್ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಖಾಸಗೀಕರಣ ವಿರೋಧಿ ಪ್ರತಿಭಟನೆ.

ಖಾಸಗೀಕರಣ ವಿರೋಧಿ ಪ್ರತಿಭಟನೆ.

  • Share this:
ಬೆಂಗಳೂರು (ಮಾರ್ಚ್​ 16); ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಂದು ಬೃಹತ್ ಹೋರಾಟಕ್ಕೆ ಸಾಕ್ಷಿಯಾಯ್ತು. ಖಾಸಗೀಕರಣ ವಿರೋಧಿಸಿ ಬೀದಿಗಿಳಿದಿದ್ದ ಖಾಸಗೀಕರಣ ವಿರೋಧ ವೇದಿಕೆ, ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿತು. ಅಲ್ಲದೇ, ಮುಂದಿನ ದಿನಗಳಲ್ಲಿ‌ ಮೋದಿ ಸರ್ಕಾರ ನಮ್ಮ ದೇಶವನ್ನೇ ಬೇರೆ ದೇಶಗಳಿಗೆ ಮಾರಿ ಬಿಡ್ತಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ದೇಶದ ನಿರ್ಮಾಣಕ್ಕೆ ಹಾಗೂ ಕೃಷಿ ಕೇತ್ರಗಳ ಬೆಳವಣಿಗೆಗೆ ಮೂಲ ಕಾರಣವಾಗಿರುವ ಸಾರ್ವಜನಿಕ ಸಂಸ್ಥೆ ಹಾಗೂ ಉದ್ದಿಮೆಗಳ ಸ್ವಾಯತ್ತೆಗಾಗಿ ಇಂದು ಖಾಸಗೀಕರಣ ವಿರೋಧಿ ವೇದಿಕೆಯಿಂದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಆರಂಭವಾದ ರ್ಯಾಲಿ ಫ್ರೀಡಂ ಪಾರ್ಕ್‌ವರೆಗೂ ನಡೆಸಲಾಯ್ತು.

ಎಚ್ ಎ ಎಲ್, ಬೆಮಲ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ರ್ಯಾಲಿಯಲ್ಲಿ  ಭಾಗಿಯಾಗಿ, ಕೇಂದ್ರದ ಖಾಸಗೀಕರಣ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ರು. ಲಾಕ್ ಡೌನ್ ಸಂದರ್ಭದಲ್ಲಿ ಬೆಮಲ್ ಸೇರಿದಂತೆ ಎಚ್ ಎ ಎಲ್ ಜನರ ಪರವಾಗಿ ಕೆಲಸ ಮಾಡಿ ತಮ್ಮ ಸಾಮರ್ಥ್ಯ ತೋರಿವೆ. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆ ಸೇರಿದಂತೆ ಜನರಿಗೆ ಬದುಕಲು ಬೇಕಾದ ಎಲ್ಲಾ ಸಹಕಾರವನ್ನು ನೀಡಿವೆ. ಅಷ್ಟೇ ಅಲ್ಲ ಈ ಸಾರ್ವಜನಿಕ ಉದ್ದಿಮೆಗಳು ಕೋಟ್ಯಾಂತರ ಹಣವನ್ನು ಕೇಂದ್ರಕ್ಕೆ ಸಾಲ ಕೊಡುವಷ್ಟು ಲಾಭ ತಂದ್ರೂ ಇವುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿರೋದು ಎಷ್ಟು ಸರಿ ಅಂತ ಇಲ್ಲಿನ ನೌಕರರು ಪ್ರಶ್ನೆ ಮಾಡಿದರು.

ಇನ್ನೂ ಈ ಬಗ್ಗೆ ಮಾತನಾಡಿದ  ಖಾಸಗೀಕರಣ ವಿರೋಧಿ ಸಮಿತಿಯ ಸಂಚಾಲಕಿ ಎಸ್ ವರಲಕ್ಷ್ಮಿ, ಸಾರ್ವಜನಿಕ  ಸಂಸ್ಥೆಗಳು ಸರ್ಕಾರಕ್ಕೆ ತುಂಬಾ ಕೊಡುಗೆಗಳು ನೀಡಿವೆ. ಈಗ ಅವುಗಳನ್ನ ಖಾಸಗೀಕರಣ ಮಾಡೊಕೆ ಕೇಂದ್ರ ಸರ್ಕಾರ ಹೊರಟ್ಟಿದೆ. ಕೇಂದ್ರ ಸರ್ಕಾ ಖಾಸಗೀಕರಣ ಮಾಡ್ತಿರೋದು ಸರಿಯಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ದೇಶವನ್ನು ಬೇರೆ ದೇಶಗಳಿಗೆ ಮಾರಿ‌ ಬಿಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Coronavirus | ನಾಳೆಯಿಂದ ಮಧ್ಯಪ್ರದೇಶದ ಬೋಪಾಲ್, ಇಂದೋರ್​ನಲ್ಲಿ ನೈಟ್ ಕರ್ಫ್ಯೂ ಜಾರಿ!

ಸಾರ್ವಜನಿಕ ಉದ್ದಿಮೆಗಳು ಬಿಳಿ ಆನೆ ಅಂತ ಆರೋಪ ಮಾಡುವ ಕೇಂದ್ರ ಸರಕಾರ, ಪದೇ ಪದೇ ಬಿ ಎಸ್ ಎನ್ ಎಲ್ ಕಂಪನಿಯ  ಉದಾಹರಣೆ ನೀಡುತ್ತದೆ. ಇದೊಂದು ಹುನ್ನಾರ. ಖಾಸಗಿ ಕಂಪನಿಗಳಿಗೆ ಸಿಗುವ ಸಹಕಾರ ಕೇಂದ್ರ ಸರಕಾರ ಬಿ ಎಸ್ ಎನ್ ಎಲ್ ಗೆ ಕೊಡ್ಲಿಲ್ಲ  ಕೊಟ್ಟು ನೋಡಿ ಹೇಗೆ ಕಂಪನಿ ಬೆಳೆಯುತ್ತೆ ಅಂತ ಖಾಸಗೀಕರಣ ವಿರೋಧಿ ವೇದಿಕೆ ಟೀಕಿಸಿದೆ.

ಒಟ್ಟಲ್ಲಿ ಕೇಂದ್ರದ ಖಾಸಗೀಕರಣ ನೀತಿ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೀತು. ಅಲ್ಲದೇ ಮತ್ತೆ ಹೋರಾಟದ ಎಚ್ಚರಿಕೆ ನೀಡಿವೆ. ಆದ್ರೆ, ಬೆಂಗಳೂರಿನಲ್ಲಿ ನಡೆದ ಹೋರಾಟ ಕೇಂದ್ರಕ್ಕೆ ತಲುಪುತ್ತಾ, ಖಾಸಗೀಕರಣಕ್ಕೆ ಬ್ರೇಕ್ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

(ವರದಿ- ಆಶಿಕ್ ಮುಲ್ಕಿ)
Published by:MAshok Kumar
First published: