• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • JDS Program: ರಾಮನಗರದಲ್ಲಿ ಜೆಡಿಎಸ್​ ಪಂಚರತ್ನ ರಥ ಯಾತ್ರೆಗೆ ಅಖಾಡ ರೆಡಿ! HDK ಹುಟ್ಟುಹಬ್ಬಕ್ಕೂ ಭರ್ಜರಿ ತಯಾರಿ

JDS Program: ರಾಮನಗರದಲ್ಲಿ ಜೆಡಿಎಸ್​ ಪಂಚರತ್ನ ರಥ ಯಾತ್ರೆಗೆ ಅಖಾಡ ರೆಡಿ! HDK ಹುಟ್ಟುಹಬ್ಬಕ್ಕೂ ಭರ್ಜರಿ ತಯಾರಿ

JDS ನಾಯಕರು

JDS ನಾಯಕರು

ಡಿಸೆಂಬರ್​ 15 ರಂದು ಪಂಚರತ್ನ ರಥ ಯಾತ್ರೆ ಹಾಗೂ ಹೆಚ್‌.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ ಇದ್ದು. ಈ ಹಿನ್ನೆಲೆ ನಾಳೆ (ಡಿ.15) ಸಂಜೆ ಮಾಗಡಿಯ ಕೋಟೆಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ‌.

 • News18 Kannada
 • 5-MIN READ
 • Last Updated :
 • Karnataka, India
 • Share this:

ರಾಮನಗರ (ಡಿ.14): ಜೆಡಿಎಸ್​ ಪಕ್ಷದ (JDS Party) ಜನತಾ ಜಲಧಾರೆ ಬಳಿಕ ಈಗ ಮತ್ತೊಂದು ಮಹತ್ವಾಕಾಂಕ್ಷೆಯ ಚುನಾವಣಾ ತಂತ್ರ ಪ್ರಾರಂಭ ಆಗಿದೆ. ಪಂಚರತ್ನ ಯೋಜನೆ ಮೂಲಕ ಈಗಾಗಲೇ ಹವಾ ಸೃಷ್ಟಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಈಗ ಸ್ವಕ್ಷೇತ್ರದಲ್ಲಿ ಹವಾ ಎಬ್ಬಿಸಲು ಮುಂದಾಗಿದ್ದಾರೆ. ಡಿಸೆಂಬರ್ 15 ಅಂದರೆ ನಾಳೆ ಜಿಲ್ಲೆಗೆ ಪಂಚರತ್ನ ರಥಯಾತ್ರೆ  ಆಗಮಿಸುವ ಹಿನ್ನೆಲೆ ಮಾಗಡಿ ಶಾಸಕ ಎ. ಮಂಜು (MLA Manju) ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.


ಮಾಗಡಿಯ ಕೋಟೆಯಲ್ಲಿ ಬೃಹತ್ ಸಮಾವೇಶ


ಡಿಸೆಂಬರ್​ 15 ರಂದು ಪಂಚರತ್ನ ರಥ ಯಾತ್ರೆ ಹಾಗೂ ಹೆಚ್‌.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ ಇದ್ದು. ಈ ಹಿನ್ನೆಲೆ ನಾಳೆ (ಡಿ.15) ಸಂಜೆ ಮಾಗಡಿಯ ಕೋಟೆಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ‌. ಈ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ, ಜೆಡಿಎಸ್ ವರಿಷ್ಠ ದೇವೇಗೌಡರು, ಜೆಡಿಎಸ್ ಯುವ ಘಟಕದ ರಾಜ್ಯಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.‌ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರಿಸಲು ತಯಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ‌
ಸಂಗೀತ ಕಾರ್ಯಕ್ರಮಗಳ ಆಯೋಜನೆ


ಇನ್ನು ಅದೇ ದಿನ ರಾತ್ರಿ ಹಲವು ಸಂಗೀತ ಗಾಯಕರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಮನಗರ ಜಿಲ್ಲೆಯ ಎಲ್ಲಾ ಜನರಿಗೂ ಮಾಧ್ಯಮದ ಮೂಲಕ ಆಹ್ವಾನ ನೀಡಲಾಗಿದೆ. ಕುಮಾರಸ್ವಾಮಿಯವರು ಮಾಗಡಿಗೆ ಸಂಜೆ 4ರ ನಂತರ ಬರುತ್ತಾರೆ. ಮೊದಲಿಗೆ ಮಾಗಡಿ ರಂಗನಾಥಸ್ವಾಮಿ, ಸೋಮೇಶ್ವರ, ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಇದೇ. ನಂತರ 7.30 ರ ಹೊತ್ತಿಗೆ ಕೋಟೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದ್ದಾರೆ.


HDKಗೆ 64ನೇ ಹುಟ್ಟುಹಬ್ಬ ಸಂಭ್ರಮ


ಇನ್ನು ಕುಮಾರಸ್ವಾಮಿಯವರ 64 ನೇ ಹುಟ್ಟುಹಬ್ಬ ಹಿನ್ನೆಲೆ ರಾತ್ರಿ 12.30 ಕ್ಕೆ ಕೇಕ್ ಕತ್ತರಿಸುವ ಕಾರ್ಯಕ್ರಮ ಇದೇ, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಲವರು ಬೃಹತ್ ವೇದಿಕೆ ಮೂಲಕ ಪಕ್ಷ ಸೇರ್ಪಡೆ ಸಹ ಇದೇ ಎಂದು ಮಾಹಿತಿ ನೀಡಿದರು. ‌


ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, 2023 ರ ಟಾರ್ಗೆಟ್ :


ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇತ್ತು. ಆದರೆ ಕುಮಾರಸ್ವಾಮಿ ರವರ ಪೊಲಿಟಿಕಲ್ ಗೇಮ್ ಗೆ ಈಗ ಡಿ.ಕೆ.ಬ್ರದರ್ಸ್ ಗೂ ಸಹ ಕೊಂಚ ಹಿನ್ನೆಡೆಯಾಗಿದೆ. ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನರು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬರುವ ಎಲ್ಲರಿಗೂ ವಿಶೇಷ ಸಿಹಿ ಊಟ ಏರ್ಪಾಡು ಮಾಡಲಾಗಿದೆ.


16 ರಂದು ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ನಡೆಯುತ್ತಿರುವ ಈ ವಿಶೇಷ ಪೂಜಾ ದಿನದಿಂದಲೇ ಕುಮಾರಸ್ವಾಮಿ 2023 ರ ಸಾರ್ವತ್ರಿಕ ಚುನಾವಣೆಯ ಅಖಾಡಕ್ಕೆ ಅಧಿಕೃತವಾಗಿ ಧುಮುಕಲಿದ್ದಾರೆ. ಈ ವಿಶೇಷ ಪೂಜೆಯಲ್ಲಿ ದೇವೇಗೌಡರು, ಚೆನ್ನಮ್ಮನವರು, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವತಿ ಭಾಗಿಯಾಗಲಿದ್ದಾರೆ.


ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹುಟ್ಟೂರು ಚಕ್ಕೆರೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ?! 


ಡಿಸೆಂಬರ್​ 15 ಮಾಗಡಿ, 16-17 ರಾಮನಗರ, 18ಕ್ಕೆ ಡಿಕೆಶಿ ಸ್ವಕ್ಷೇತ್ರ ಕನಕಪುರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ. ನಂತರ 19 ರಂದು ಕುಮಾರಸ್ವಾಮಿ ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ, ಅದರಲ್ಲಿಯೂ ವಿಶೇಷವಾಗಿ ಸಿ.ಪಿ.ಯೋಗೇಶ್ವರ್ ಹುಟ್ಟೂರು ಚಕ್ಕೆರೆಯಲ್ಲಿ ವಾಸ್ತವ್ಯ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಜೆಡಿಎಸ್ ನ‌ ಮೂಲಗಳಿಂದ ನ್ಯೂಸ್ 18 ಗೆ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಚನ್ನಪಟ್ಟಣದಲ್ಲಿ ಹೊಸ ಅಲೆ ಸೃಷ್ಟಿಸಲು ಕುಮಾರಸ್ವಾಮಿ ಸರ್ವರೀತಿಯಲ್ಲಿಯೂ ತಯಾರಿ ಮಾಡಿಕೊಂಡು ಸಜ್ಜಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.‌

Published by:ಪಾವನ ಎಚ್ ಎಸ್
First published: