ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದು, ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಬಂದು ನೂತನ ಸಚಿವ ಸಂಪುಟ ರಚನೆಯನ್ನೂ ಮಾಡಲಾಗಿದೆ. ಇನ್ನು ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಉಳಿದಿವೆ. ಈ ಸ್ಥಾನಗಳಿಗೆ ಬಿಜೆಪಿ ಶಾಸಕರು ಭಾರೀ ಲಾಬಿ ಮಾಡುತ್ತಿದ್ದಾರೆ. ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಎರಡು ಡಜನ್‍ಗೂ ಅಧಿಕ ಶಾಸಕರು ಮಂತ್ರಿ ಸ್ಥಾನದ ಕುರ್ಚಿಗೆ ಟವಲ್ ಹಾಕಲ ಮುಂದಾಗಿದ್ದಾರೆ. ಉಳಿದಿರುವ ಎರಡೂವರೆ ವರ್ಷಗಳ ಅವಧಿಯಲ್ಲಾದರೂ ಮಂತ್ರಿಯಾಗಲೇಬೇಕೆಂದು ಪಟ್ಟು ಹಿಡಿದಿರುವ ಶಾಸಕರು ತಮ್ಮ ತಮ್ಮ ಗಾಡ್ ಫಾದರ್ ಗಳ ಮೂಲಕ ಲಾಬಿ ನಡೆಸುತ್ತಿದ್ದಾರೆ. ಶಾಸಕರ ಲಾಬಿ ಸಿಎಂ ಬೊಮ್ಮಾಯಿ ಹಾಗೂ ವರಿಷ್ಠರಿಗೂ ಕಗ್ಗಂಟಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ , ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮೂಲಕ ಒತ್ತಡ ತಂತ್ರದ ಮೊರೆ ಹೋಗಿದ್ದಾರೆ.
ಜಾರಕಿಹೊಳಿ ಸಹೋದರರಿಂದಲೂ ಲಾಭಿ
ಜಾರಕಿಹೊಳಿ ಸಹೋದರರು ಈ ಬಾರಿ ಸಂಪುಟಕ್ಕೆ ಸೇರಲು ಇನ್ನಿಲ್ಲದಂತೆ ಪ್ರಯತ್ನ ನಡೆಸಿದ್ದಾರೆ. ಇತ್ತೀಚಿಗಷ್ಟೇ ನವದೆಹಲಿಗೆ ತೆರಳಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಸಿಡಿ ಪ್ರಕರಣದಿಂದಾಗಿ ಸದ್ಯಕ್ಕೆ ಮಂತ್ರಿ ಸ್ಥಾನ ಮರೀಚಿಕೆಯಾಗಿದೆ. ನನ್ನ ಬದಲಿಗೆ ಯಾರಾನ್ನಾದರೂ ತೆಗೆದುಕೊಳ್ಳಿ. ನಮ್ಮ ಪಾಲಿನ ಮಂತ್ರಿ ಸ್ಥಾನ ಖಾಲಿ ಇಡಿ. ಸಿಡಿ ಪ್ರಕರಣದ ಬಳಿಕ ನಮಗೆ ಕೊಡಿ ಎಂದು ಸಿಎಂ ಹಾಗೂ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ಉಳಿದಂತೆ ಶಾಸಕರಾದ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಪರಿಷತ್ ಸದಸ್ಯರಾದ ಸಿಪಿ ಯೋಗೀಶ್ವರ್, ಆರ್. ಶಂಕರ್ ರಿಂದ ಸಿಎಂ ಬೊಮ್ಮಾಯಿಗೆ ಒತ್ತಡ ಹಾಕುತ್ತಿದ್ದಾರೆ. ಹೈಕಮಾಂಡ್ ಒಪ್ಪಲಿದೆ ನಮ್ಮನ್ನು ಮಂತ್ರಿ ಮಾಡಿ. ಮಾಜಿ ಸಿಎಂ ಬಿಎಸ್ವೈ ವಿರೋಧಿಸಿದರೆ ಅದನ್ನ ನೀವೇ ಮ್ಯಾನೇಜ್ ಮಾಡಿ ಎಂದು ಸಿಪಿ ಯೋಗೇಶ್ವರ್ ಸಿಎಂ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಅವರು ಬಿಎಸ್ವೈ ಒಪ್ಪಿಸೋದು ನನ್ನ ಕೈಯಲ್ಲಿ ಆಗಲ್ಲ. ನೀವೇ ಬಿಎಸ್ವೈ ಒಪ್ಪಿಸಿಕೊಳ್ಳಿ ಎಂದು ಕೈ ತೊಳೆದುಕೊಂಡಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರೂ ಸಹ ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿದ್ದಾರೆ.
ಇದನ್ನು ಓದಿ: ತಾಲಿಬಾನ್ ಅಬ್ದುಲ್ ಬರಾದಾರ್ ಅಘ್ಘಾನಿಸ್ತಾನದ ಮುಂದಿನ ಅಧ್ಯಕ್ಷ? ಯಾರು ಈತ?
ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವವರು
ಎಂ.ಪಿ.ರೇಣುಕಾಚಾರ್ಯ
ಶಿವನಗೌಡ ನಾಯಕ್
ರಾಜುಗೌಡ ನಾಯಕ್
ರಮೇಶ್ ಜಾರಕಿಹೊಳಿ
ಶ್ರೀಮಂತ ಪಾಟೀಲ್
ಆನಂದ್ ಮಾಮಾನಿ
ಅರವಿಂದ್ ಬೆಲ್ಲದ್
ನೆಹರು ಓಲೇಕರ್
ಮಾಡಾಳ್ ವಿರೂಪಾಕ್ಷಪ್ಪ
ಹರತಾಳು ಹಾಲಪ್ಪ
ಕುಮಾರ್ ಬಂಗಾರಪ್ಪ
ದತ್ತಾತ್ರೇಯ ಪಾಟೀಲ್ ರೇವೂರ
ಎಸ್.ಎ ರಾಮದಾಸ್
ಸತೀಶ್ ರೆಡ್ಡಿ
ಅಪ್ಪಚ್ಚು ರಂಜನ್
ಪ್ರೀತಂ ಗೌಡ
ಎಂ.ಪಿ.ಕುಮಾರಸ್ವಾಮಿ
ಜಿ ಹೆಚ್ ತಿಪ್ಪಾರೆಡ್ಡಿ
ಗೂಳಿಹಟ್ಟಿ ಶೇಖರ್
ಸೋಮಶೇಖರ್ ರೆಡ್ಡಿ
ಆರ್.ಶಂಕರ್
ಸಿ.ಪಿ.ಯೋಗೇಶ್ವರ್
ಎಸ್ ಎ ರವೀಂದ್ರನಾಥ
ಬಸನಗೌಡ ಪಾಟೀಲ್ ಯತ್ನಾಳ್
ಒಟ್ಟಿನಲ್ಲಿ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಿಗೆ 20ಕ್ಕೂ ಹೆಚ್ಚು ಶಾಸಕರು ಲಾಬಿ ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೆ ಹೈಕಮಾಂಡ್ ಮಂತ್ರಿ ಭಾಗ್ಯ ಕರುಣಿಸಲಿದೆ ಎಂದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ