Karnataka Rains: ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ; ತೋಟಗಳೆಲ್ಲಾ ಜಲಾವೃತ

ಈಗಾಗಲೇ ಬೆಳೆದು ನಿಂತಿದ್ದ ಸೇವಂತಿ, ಗುಲಾಬಿ ಮತ್ತಿತರ ಬೆಳೆಗಳು ಮಳೆ ನೀರಿನಲ್ಲಿ ಕೊಳೆಯುತ್ತಿವೆ‌. ಸಾಲ ಮಾಡಿ ಹಗಲಿರುಳು ಕಷ್ಟಪಟ್ಟು ದುಡಿದ ರೈತರು ಬೆಳೆಹಾನಿ ನಷ್ಟ ಅನುಭವಿಸಿದ್ದು, ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತ ಬೀದಿಪಾಲು ಆಗುವಂತಾಗಿದೆ ಎಂದು ರೈತ ನಂಜುಂಡಚಾರಿ ಬೇಸರ ವ್ಯಕ್ತಪಡಿಸಿದ್ದಾರೆ .

ತೋಟ ಜಲಾವೃತ

ತೋಟ ಜಲಾವೃತ

  • Share this:
ಆನೇಕಲ್ : ಹಲವು ವರ್ಷಗಳಿಂದ ಬರ ಎದುರಿಸುತ್ತಿದ್ದ ರಾಗಿ ಕಣಜ ಖ್ಯಾತಿಯ ಆನೇಕಲ್​ನಲ್ಲಿ (Anekal) ಕಳೆದ ಹಲವು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಕೆರೆಗಳು (Lakes) ತುಂಬಿ ಹರಿಯುತ್ತಿವೆ. ಮಾತ್ರವಲ್ಲದೇ ಹೊಲ ಗದ್ದೆ ಮತ್ತು ತೋಟಗಳಿಗೆ ಮಳೆ ನೀರು (Flood Create) ನುಗ್ಗಿದ್ದು, ಬೆಳೆಹಾನಿಯಿಂದಾಗಿ ರೈತರು (Farmers) ಕಂಗಾಲು ಆಗಿದ್ದಾರೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಆದಿಗೊಂಡನಹಳ್ಳಿ ಗ್ರಾಮದ (Adigondanahalli) ಹತ್ತಾರು ಎಕರೆ ಪ್ರದೇಶದಲ್ಲಿ ರೈತರು ತಮ್ಮ ತೋಟಗಳಲ್ಲಿ ಬೆಳೆದಿದ್ದ ಗುಲಾಬಿ, ಸೇವಂತಿ, ಬೆಂಡಿಕಾಯಿ ಮತ್ತು ಜೋಳ ಜಲಾವೃತವಾಗಿದೆ. ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ಮೈದುಂಬಿ ಹರಿಯುತ್ತಿವೆ. ನಾಲೆ ಕಾಲುವೆಗಳು (Canals) ಮಳೆ ನೀರಿನಿಂದ ತುಂಬಿವೆ. ಜೊತೆಗೆ ರೈತರ ತೋಟಗಳ ಮೇಲೂ ಮಳೆ ನೀರು ಹರಿದಿದ್ದು, ರೈತರ ಬೆಳೆಗಳು ಹಾಳಾಗಿವೆ.

ರಾಜಕಾಲುವೆಗಳ ಒತ್ತುವರಿಯಿಂದ ಮಳೆ ನೀರು ರೈತರ ತೋಟಗಳಿಗೆ ನುಗ್ಗಿದ್ದು, ನೂರಾರು ಎಕರೆಯಲ್ಲಿ ಬೆಳೆದಿದ್ದ ಸೇವಂತಿ, ಗುಲಾಬಿ, ತರಕಾರಿ ಬೆಳೆಗಳು ಜಲಾವೃತವಾಗಿವೆ. ರೈತರು ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದರೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿಲ್ಲ ಮತ್ತು ಪರಿಶೀಲನೆ ಕೂಡ ನಡೆಸಿಲ್ಲ.

ರಾಜಕಾಲುವೆ ತೆರವುಗೊಳಿಸಲು ಒತ್ತಾಯ

ನಮಗೆ ಸರ್ಕಾರ ನೀಡುವ ಬೆಳೆ ನಷ್ಟ ಪರಿಹಾರ ಬೇಕಾಗಿಲ್ಲ. ಬದಲಿಗೆ ಒತ್ತುವರಿಯಾಗಿರುವ ರಾಜ ಕಾಲುವೆಗಳನ್ನು ತೆರವುಗೊಳಿಸಬೇಕು ಎಂದು ರೈತ ಸುನಿಲ್ ಒತ್ತಾಯಿಸಿದ್ದಾರೆ.

ಇನ್ನೂ ಇಂತಹ ಮಳೆ ನಾವು ಚಿಕ್ಕಂದಿನಿಂದ ಇಲ್ಲಿಯವರೆಗೆ ಕಂಡಿಲ್ಲ. ಜೋರು ಮಳೆ ಬರುತ್ತಿತ್ತು, ಬಳಿಕ ನಿಂತು ಹೋಗುತ್ತಿತ್ತು. ಆದ್ರೆ ಹೀಗೆ ತಿಂಗಳುಗಟ್ಟಲೆ ಬಿಟ್ಟು ಬಿಡದೇ ಮಳೆ ಎಡೆಬಿಡದೆ ಸುರಿಯುತ್ತಿರಲಿಲ್ಲ. ಕೆರೆಗಳು ತುಂಬಿ ಹರಿದರು ಹೊಲ ಗದ್ದೆಗಳ ಮೇಲೆ ನುಗ್ಗುತ್ತಿರಲಿಲ್ಲ.

Massive Crop Loss To Farmers As Heavy Rains Hits Anekal cank mrq
ತೋಟ ಜಲಾವೃತ


ಇದನ್ನೂ ಓದಿ:  Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ

ಮಳೆ ನೀರಿನಲ್ಲಿ ಕೊಳೆಯುತ್ತಿರುವ ಬೆಳೆ

ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿರಲಿಲ್ಲ. ಆದ್ರೆ ಈಗ ಮಳೆ ನೀರು ರೈತರ ಹೊಲ ಗದ್ದೆಗಳ ಮೇಲೆ ಹರಿಯುತ್ತಿದ್ದು, ಬೆಳೆಗಳು ಹಾಳಾಗಿವೆ. ಈ ಮಳೆ ಹೀಗೆ ಮುಂದುವರೆದರೆ ಅಳಿದುಳಿದ ರೈತರ ಬೆಳೆಗಳು ನೀರು ಪಾಲಾಗುತ್ತವೆ. ಈಗಾಗಲೇ ಬೆಳೆದು ನಿಂತಿದ್ದ ಸೇವಂತಿ, ಗುಲಾಬಿ ಮತ್ತಿತರ ಬೆಳೆಗಳು ಮಳೆ ನೀರಿನಲ್ಲಿ ಕೊಳೆಯುತ್ತಿವೆ‌. ಸಾಲ ಮಾಡಿ ಹಗಲಿರುಳು ಕಷ್ಟಪಟ್ಟು ದುಡಿದ ರೈತರು ಬೆಳೆಹಾನಿ ನಷ್ಟ ಅನುಭವಿಸಿದ್ದು, ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತ ಬೀದಿಪಾಲು ಆಗುವಂತಾಗಿದೆ ಎಂದು ರೈತ ನಂಜುಂಡಚಾರಿ ಬೇಸರ ವ್ಯಕ್ತಪಡಿಸಿದ್ದಾರೆ .

ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಒಟ್ಟಿನಲ್ಲಿ ಉತ್ತಮವಾಗಿ ಮಳೆ ಸುರಿದರೆ ಹರ್ಷಪಡಬೇಕಿದ್ದ ರೈತರು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಜೊತೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಲಾವೃತವಾದ ತೋಟಗಳು, ಹಾಳಾದ  ಬೆಳೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸದ ತಹಶೀಲ್ದಾರ್ ವಿರುದ್ಧವು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ,

Massive Crop Loss To Farmers As Heavy Rains Hits Anekal cank mrq
ತೋಟ ಜಲಾವೃತ


ಇನ್ನಾದರೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯಾಗಿರುವ ರಾಜ ಕಾಲುವೆಗಳನ್ನು ತೆರವುಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  Arkavathi River: ದಶಕಗಳ ನಂತರ ಮೈದುಂಬಿ ಹರಿಯುತ್ತಿದ್ದಾಳೆ ಅರ್ಕಾವತಿ; 1962ರಲ್ಲಿ ಕಾಣಿಸಿಕೊಂಡಿತ್ತು ಪ್ರವಾಹ

ರಾಮನಗರ ತಾಲೂಕಿನಲ್ಲಿ ಸೇತುವೆ ಕುಸಿತ

ರಾಮನಗರ ತಾಲೂಕಿನಲ್ಲಿ ಮತ್ತೊಂದು ಸೇತುವೆ ಕುಸಿತವಾಗಿದ್ದು, ಗದಗಯ್ಯನದೊಡ್ಡಿ ಹಾಗೂ ಲಿಂಗೇಗೌಡನದೊಡ್ಡಿ ಸಂಪರ್ಕ ಕಡಿತವಾಗಿದೆ. ಸೇತುವೆ ಕುಸಿದ ಪರಿಣಾಮ ಬದಲಿ ಮಾರ್ಗ ಬಳಕೆ ಮಾಡಲಾಗುತ್ತಿದೆ. ನೂತನ ಸೇತುವೆ ಕಾಮಗಾರಿ ಆರಂಭವಾಗಿದ್ದರೂ ಕಳೆದ 4 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಸೇತುವೆ ಕುಸಿದ ಪರಿಣಾಮ ಮಹಿಳೆಯರು, ಶಾಲಾಮಕ್ಕಳ ಓಡಾಟಕ್ಕೆ ಸಂಕಷ್ಟಕ್ಕೆ ಎದುರಾಗಿದೆ. ಸೇತುವೆ ಕುಸಿತದಿಂದ 7 ಕಿ.ಮೀ ಬಳಸಿಕೊಂಡು ಮಕ್ಕಳು ಶಾಲೆಗೆ ಬರಬೇಕಿದೆ.

Massive Crop Loss To Farmers As Heavy Rains Hits Anekal cank mrq
ತೋಟ ಜಲಾವೃತ


ಸ್ಥಳೀಯ ಜನಪ್ರತಿನಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಿಲ್ಲ. ಕೂಡಲೇ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Published by:Mahmadrafik K
First published: