ಸಿಎಎ ವಿರೋಧಿಸಿ ಕಲಬುರಗಿಯಲ್ಲಿ ಬೃಹತ್​ ಸಮಾವೇಶ; ರಾಷ್ಟ್ರೀಯ ನಾಯಕರು ಭಾಗಿ

ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿಅತುಲಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ  ಭಾಗಿಯಾಗಲಿದ್ದಾರೆ.

news18-kannada
Updated:January 21, 2020, 2:00 PM IST
ಸಿಎಎ ವಿರೋಧಿಸಿ ಕಲಬುರಗಿಯಲ್ಲಿ ಬೃಹತ್​ ಸಮಾವೇಶ; ರಾಷ್ಟ್ರೀಯ ನಾಯಕರು ಭಾಗಿ
ಸಮಾವೇಶ ನಿಮಿತ್ತ ಕೈಗೊಂಡ ಪಾದಯಾತ್ರೆ ಚಿತ್ರ
  • Share this:
ಕಲಬುರಗಿ (ಜ.21): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ ಇಂದು ನಗರದಲ್ಲಿ ರಾಷ್ಟ್ರಮಟ್ಟದ ಬಹೃತ್​ ಜನಾಂದೋಲನ ಸಮಾವೇಶ ನಡೆಸಲು ಸಿದ್ದತೆ ನಡೆಸಲಾಗಿದೆ. 

ಕರ್ನಾಟಕ ಪೀಪಲ್ಸ್​ ಫೋರಂ ನೇತೃತ್ವದ ವತಿಯಿಂದ ನಗರದ ಪೀರ್​ ಬಂಗಾಲಿ ಮೈದಾನದಲ್ಲಿ ಮಧ್ಯಾಹ್ನ ಬೃಹತ್​ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಎಸ್.ಯು.ಸಿ.ಐ. ಮತ್ತಿತರ ಪಕ್ಷಗಳಿಂದ ಬೆಂಬಲ ನೀಡಿದ್ದು, ರಾಷ್ಟ್ರ ಮಟ್ಟದ ನಾಯಕರು ಭಾಗಿಯಾಗಲಿದ್ದಾರೆ.  ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ರಾಷ್ಟ್ರಮಟ್ಟದ ನಾಯಕರು ಈಗಾಗಲೇ ಕಲಬುರಗಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿಅತುಲಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ  ಭಾಗಿಯಾಗಲಿದ್ದಾರೆ.

ಸಮಾವೇಶಕ್ಕಾಗಿ ಬೃಹತ್​ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ದಲಿತ ಸಂಘಟನೆಗಳು, ಎಡ ಪಕ್ಷಗಳು, ಪ್ರಗತಿ ಹಾಗೂ ಜನಪರ ಸಂಘಟನೆಗಳು ಹಾಗೂ ಲಿಂಗಾಯದ ಧರ್ಮ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಕೂಡ ಭಾಗಿಯಾಗಲಿದ್ದು, ಸಿಎಎ ವಿರುದ್ಧ ಧ್ವನಿ ಎತ್ತಲಿದ್ದಾರೆ.

ಇದನ್ನು ಓದಿ:  ಸಿಎಎ ವಿರೋಧಿಸುವವರು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳು - ಎಲ್ಲರೂ ಸಿಎಎ ಒಪ್ಪಿಕೊಳ್ಳಬೇಕು ; ಬಸನಗೌಡ ಪಾಟೀಲ ಯತ್ನಾಳ್

ಮೈದಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.  ನಗರದ ಆಯಕಟ್ಟಿನ ಸ್ಥಳ ಮತ್ತು ಸಮಾವೇಶ ನಡೆಯೋ ಮೈದಾನ ಮತ್ತಿತರ ಕಡೆ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.

ಸಿಎಎಯನ್ನು ಹಿಂಪಡೆಯುವಂತೆ ಆಗ್ರಹಿಸಿ,  ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕವೂ ಜನ ಆಗಮಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಸುರಪುರದಿಂದ ಪಾದಯಾತ್ರೆ ಮೂಲಕ ಸಮಾವೇಶಕ್ಕೆ ಹೊರಟ್ಟಿದ್ದ ನೂರಾರು ಕಾರ್ಯಕರ್ತರಿಗೆ ಪೊಲೀಸರು ಅಡ್ಡಿಯುಂಟು ಮಾಡಿದ್ದರು.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading