ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಭಾರೀ ಬದಲಾವಣೆ; ಬಿ.ವೈ ವಿಜಯೇಂದ್ರಗೆ ಕೈ ತಪ್ಪಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ

ಯುವ ಮೋರ್ಚಾ ಅಧ್ಯಕ್ಷ ಹುದ್ದೆ ನೇಮಕದಲ್ಲೂ ಬಿ.ವೈ ವಿಜಯೇಂದ್ರಗೆ ಭಾರೀ ಹಿನ್ನಡೆಯಾಗಿದೆ.  ಆಪ್ತ ತಮ್ಮೇಶ್‌ಗೌಡ ಅವರನ್ನು ಅಧ್ಯಕ್ಷರಾಗಿಸಲು ವಿಜಯೇಂದ್ರ ಭಾರೀ ಲಾಬಿ ನಡೆಸಿದ್ದರು. ಆದರೆ, ಪಕ್ಷದ ಹೈಕಮಾಂಡ್ ವಿಜಯೇಂದ್ರಗೆ ಮಣೆ ಹಾಕಿಲ್ಲ.

news18-kannada
Updated:July 31, 2020, 8:41 PM IST
ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಭಾರೀ ಬದಲಾವಣೆ; ಬಿ.ವೈ ವಿಜಯೇಂದ್ರಗೆ ಕೈ ತಪ್ಪಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ
ಬಿಜೆಪಿ
  • Share this:
ಬೆಂಗಳೂರು; ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟ್ಟು, ಭಾರೀ ಲಾಬಿ ನಡೆಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ.  

ಬೆಂಗಳೂರು ಕೇಂದ್ರದಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಬಿ.ವೈ ವಿಜಯೇಂದ್ರ, ಅರವಿಂದ ಲಿಂಬಾವಳಿ, ನಿರ್ಮಲ ಕುಮಾರ್ ಸುರಾನ ಅವರನ್ನು ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ಒಂದರಿಂದಲೇ ಮೂವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಉಳಿದಂತೆ ಉಡುಪಿಯಿಂದ ಶೋಭಾ ಕರಂದ್ಲಾಜೆ, ಕಲಬುರ್ಗಿಯಿಂದ ಮಾಲೀಕಯ್ಯ ಗುತ್ತೇದಾರ್, ಬೆಂಗಳೂರು ದಕ್ಷಿಣದಿಂದ ತೇಜಸ್ಬಿನಿ ಅನಂತ ಕುಮಾರ್, ಮೈಸೂರಿನಿಂದ ಪ್ರತಾಪ ಸಿಂಹ, ತುಮಕೂರಿನಿಂದ ಎಂ.ಬಿ ನಂದೀಶ್,  ಬೆಂಗಳೂರು ದಕ್ಷಿಣದಿಂದ ಎಂ. ಶಂಕರಪ್ಪ, ಮೈಸೂರಿನಿಂದ ಎಂ. ರಾಜೇಂದ್ರ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ದಿ.ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಪಕ್ಷ ಸಂಘಟನೆ ಜವಾಬ್ದಾರಿ ನೀಡಲಾಗಿದೆ. ಯುವ ಮೋರ್ಚಾ ಅಧ್ಯಕ್ಷ ಹುದ್ದೆ ನೇಮಕದಲ್ಲೂ ಬಿ.ವೈ ವಿಜಯೇಂದ್ರಗೆ ಭಾರೀ ಹಿನ್ನಡೆಯಾಗಿದೆ.  ಆಪ್ತ ತಮ್ಮೇಶ್‌ಗೌಡ ಅವರನ್ನು ಅಧ್ಯಕ್ಷರಾಗಿಸಲು ವಿಜಯೇಂದ್ರ ಭಾರೀ ಲಾಬಿ ನಡೆಸಿದ್ದರು. ಆದರೆ, ಪಕ್ಷದ ಹೈಕಮಾಂಡ್ ವಿಜಯೇಂದ್ರಗೆ ಮಣೆ ಹಾಕಿಲ್ಲ. ಹಾಗೆಯೇ ಯುವ ಮೋರ್ಚಾ ಅಧ್ಯಕ್ಷ ಹುದ್ದೆ ಮೇಲೆ ಸಚಿವ ವಿ.ಸೋಮಣ್ಣ ಪುತ್ರ
ಡಾ‌.ಅರುಣ್ ಸೋಮಣ್ಣ ಅವರೂ ಲಾಬಿ ನಡೆಸಿದ್ದರು. ಆದರೆ, ಸೋಮಣ್ಣ ಪುತ್ರನಿಗೂ ಭಾರೀ ನಿರಾಸೆಯಾಗಿದೆ. ಯುವ ಮೋರ್ಚಾ ನೂತನ ಅಧ್ಯಕ್ಷರಾಗಿ ಡಾ.ಸಂದೀಪ್ ಅವರನ್ನು ನೇಮಿಸಲಾಗಿದೆ.

ನಾಲ್ವರನ್ನು ರಾಜ್ಯ ಪ್ರಧಾನ‌ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ದಾವಣಗೆರೆಯಿಂದ  ಎನ್. ರವಿಕುಮಾರ್, ಮೈಸೂರಿನಿಂದ ಸಿದ್ದರಾಜು, ಬೆಂಗಳೂರು ಕೇಂದ್ರದಿಂದ ಅಶ್ವಥ್ ನಾರಾಯಣ, ಹುಬ್ಬಳ್ಳಿ-ಧಾರವಾಡ ಮಹಾನಗರದಿಂದ ಮಹೇಶ್ ಟೆಂಗಿನಕಾಯಿ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯ ಬಿಜೆಪಿ ಕಾರ್ಯದರ್ಶಿಗಳನ್ನಾಗಿ ಶಾಸಕ ಸತೀಶ್ ರೆಡ್ಡಿ, ತುಳಸಿ ಮುನಿರಾಜುಗೌಡ,  ಎಸ್‌.ಕೇಶವ ಪ್ರಸಾದ್, ಜಗದೀಶ್ ಹಿರೇಮನಿ, ಸುಧಾ ಜಯ ರುದ್ರೇಶ್, ಭಾರತಿ ಮುಗ್ದಂ,  ಹೇಮಲತಾ ನಾಯಕ್, ಉಜ್ವಲಾ ಬಡವಣ್ವಾಚೆ, ಕೆ.ಎಸ್. ನವೀನ್, ವಿನಯ್ ಬಿದರೆ ಅವರನ್ನು ನೇಮಿಸಲಾಗಿದೆ.

ಮಹಿಳಾ ಮೋರ್ಚಾ ಅಧ್ಯಕ್ಷ ಹುದ್ದೆಯಿಂದ ಎಂಎಲ್‌, ಹಾಗೂ ಸಿಎಂ ಬಿಎಸ್​ವೈ  ಆಪ್ತೆ
ಭಾರತಿ ಶೆಟ್ಟಿ ಅವರುಗೆ ಕೊಕ್​ ನೀಡಲಾಗಿದ್ದು, ಅವರ ಜಾಗಕ್ಕೆ ಗೀತಾ ವಿವೇಕಾನಂದ‌ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗೆ ರಾಜ್ಯಸಭೆಗೆ ನೇಮಕವಾದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿಗೂ ಅವಕಾಶ ನೀಡಲಾಗಿದ್ದು,  ರಾಜ್ಯ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ಕಡಾಡಿ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಅಶೋಕ್ ಗಸ್ತಿ ಅವರನ್ನು ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷರಾಗಿ ನೇಮಿಸಲಾಗಿದೆ.ಇದನ್ನು ಓದಿ: Coronavirus Updates Karnataka: ವರಮಹಾಲಕ್ಷ್ಮಿ ಹಬ್ಬದ ದಿನ 5483 ಮಂದಿಗೆ ಸೋಂಕು; 84 ಜನ ಕೊರೋನಾಗೆ ಬಲಿ

ಬಿಜಪಿ ರಾಜ್ಯ ಖಜಾಂಚಿಗಳಾಗಿ ಸುಬ್ಬಾ ನರಸಿಂಹ, ಲೆಹರ್ ಸಿಂಗ್, ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಚಲವಾದಿ ನಾರಾಯಣಸ್ವಾಮಿ,  ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ತಿಪ್ಪರಾಜು ಹವಾಲ್ದಾರ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮುಜಾಮಿಲ್ ಬಾಬು ಅವರನ್ನು ನೇಮಿಸಲಾಗಿದೆ. ಹಾಗೆಯೇ ಬಿಜೆಪಿ ರಾಜ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ಅವರನ್ನು ನೇಮಕ ಮಾಡಲಾಗಿದೆ.
Published by: HR Ramesh
First published: July 31, 2020, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading