Maski Bypoll: ಮಸ್ಕಿ ಉಪಚುನಾವಣೆಯಲ್ಲಿ ಜಾತಿಯದ್ದೇ ಲೆಕ್ಕಾಚಾರ...!

ಬಿಜೆಪಿಯಿಂದ ಅಂದು ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು, ಇಬ್ಬರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜಾತಿವಾರು ಮತಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ.

ಪ್ರತಾಪಗೌಡ ಪಾಟೀಲ

ಪ್ರತಾಪಗೌಡ ಪಾಟೀಲ

  • Share this:
ರಾಯಚೂರು(ಮಾ.31): ಇಂದಿನ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗುವುದು ಯಾವ ಜಾತಿಯವರು ಯಾರಿಗೆ ಮತ ಹಾಕುತ್ತಾರೆ? ಯಾರನ್ನು ಕರೆದುಕೊಂಡು ಬಂದರೆ ತಮ್ಮ ಕಡೆ ಜಾತಿವಾರು ಮತಗಳ ಸೆಳೆಯಬಹುದು? ಎಂಬುವುದು. ಅದೇ ರೀತಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಮುಖ್ಯವಾಗಿ ಲಿಂಗಾಯತ ಮತಗಳು ಯಾರ ಪಾಲಿಗೆ, ಯಡಿಯೂರಪ್ಪ ಲಿಂಗಾಯತ, ಯಡಿಯೂರಪ್ಪನವರ ಮಗ ವಿಜಯೇಂದ್ರ ಕ್ಷೇತ್ರದಲ್ಲಿ ಬಂದ ನಂತರ ಲಿಂಗಾಯತ ಮತಗಳು ಒಂದೆಡೆ ಸೇರುತ್ತವೆ ಎಂಬ ವದಂತಿ ಇದೆ. ಆದರೆ ನಾವು ಲಿಂಗಾಯತರೇ, ಲಿಂಗಾಯತ್ ಎಂದರೆ ಯಡಿಯೂರಪ್ಪ ಮಾತ್ರನಾ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.

ಏಪ್ರಿಲ್ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದೆ. ನಿನ್ನೆಗೆ ನಾಮಪತ್ರ ಸಲ್ಲಿಕೆ ಕೊನೆಯಾಗಿದೆ. ಈ ಚುನಾವಣೆಯಲ್ಲಿ ನೇರವಾಗಿ ಸ್ಪರ್ಧೆ ಏರ್ಪಟ್ಟಿರುವುದು ಕಾಂಗ್ರೆಸ್ ಹಾಗೂ ಬಿಜೆಪಿಯ ಮಧ್ಯೆ. ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈಗ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ 2018ರಲ್ಲಿಯ ಅಭ್ಯರ್ಥಿಗಳೇ ಸ್ಪರ್ಧಿಸಿದ್ದಾರೆ, ಆದರೆ ಆಗ ಅಭ್ಯರ್ಥಿಗಳೇ ಎದುರಾಳಿಗಳಾಗಿದ್ದಾರೆ. ಆದರೆ ಪಕ್ಷ ಮಾತ್ರ ಅದಲು ಬದಲು.

ಬಿಜೆಪಿಯಿಂದ ಅಂದು ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು, ಇಬ್ಬರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜಾತಿವಾರು ಮತಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ. 2018 ರಲ್ಲಿ ಕೇವಲ 213 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಪ್ರತಾಪಗೌಡ ಪಾಟೀಲರಿಗೆ ಮಸ್ಕಿ ಕ್ಷೇತ್ರದಲ್ಲಿಯ ಲಿಂಗಾಯತ್ ರು ಬಿಜೆಪಿಗೆ ಬೆಂಬಲಿಸುತ್ತಾರೆ ಎನ್ನುವುದು ತಿಳಿದು ಮುಂದಾಲೋಚನೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ; ಮಲ್ಲಿಕಾರ್ಜುನ ಖೂಬಾ ಮನವೊಲಿಕೆಗೆ ಸಿಎಂ ಸೂಚನೆ

ಈ ಮಧ್ಯೆ ಈಗಿನ ಚುನಾವಣೆಯ ಉಸ್ತುವಾರಿ ಯನ್ನು ಸಿಎಂ ಪುತ್ರ ವಿಜಯೇಂದ್ರರಿಗೆ ನೀಡಬೇಕೆಂದು ಪಟ್ಟು ಹಿಡಿದು ಮೊದಲು ನೀಡಿದ್ದ ಉಸ್ತುವಾರಿಗಳನ್ನು ಬದಲಾಯಿಸಿ ವಿಜಯೇಂದ್ರರೆ ಬರಬೇಕೆಂದು ಪಟ್ಟು ಹಿಡಿದು ಹಾಕಿಸಿಕೊಂಡಿದ್ದಾರೆ, ಈ ಮಧ್ಯೆ ಮಸ್ಕಿಯಲ್ಲಿ ವಾಲ್ಮೀಕಿ ನಾಯಕ, ಲಿಂಗಾಯತ್ , ಪರಿಶಿಷ್ಠ ಜಾತಿ ಹಾಗು ಕುರುಬ ಜನಾಂಗದ ಮತಗಳೇ ಅಧಿಕವಾಗಿವೆ, ಕುರಬ ಮತಗಳ ಮೇಲೆ ಹಿಡಿತವಿರುವ ಮಾಜಿ ಸಂಸದ ಕೆ ವಿರುಪಾಕ್ಷಪ್ಪರನ್ನು ಚುನಾವಣೆಯ ಸಂದರ್ಭದಲ್ಲಿ ಯೇ ಬಿಜೆಪಿಗೆ ಸೇರಿಸಿಕೊಂಡಿದ್ದು ಈಗ ಕೆ ವಿರುಪಾಕ್ಷಪ್ಪ ಪ್ರಚಾರ ನಡೆಸುತ್ತಿದ್ದಾರೆ. ವಿಜಯೇಂದ್ರ ಚುನಾವಣೆ ಮುಗಿಯುವವರೆಗೂ  ಇಲ್ಲಿಯೇ ಮನೆ ಮಾಡಿಕೊಂಡು ಮತ ಸೆಳೆಯಲು ಯತ್ನಿಸಲಿದ್ದಾರೆ.

ಈಗ ಕ್ಷೇತ್ರದಲ್ಲಿ ಕೇಳಿ ಬರುವ ಮಾತು ವಿಜಯೇಂದ್ರ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ ನಂತರ ಲಿಂಗಾಯತ್ ಮತಗಳು ಕ್ರೂಢಿಕರಣವಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡರಾದ ಕುಷ್ಟಗಿಯ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಲಿಂಗಾಯತರೆಂದರೇ ಕೇವಲ ವಿಜಯೇಂದ್ರ ಹಾಗು ಯಡಿಯೂರಪ್ಪ ನಾ ನಾವು ಲಿಂಗಾಯತರು ನಾವು ಲಿಂಗಾಯತ್ ಮತಗಳನ್ನು ಸೆಳೆಯುತ್ತೇವೆ ಎನ್ನುತ್ತಾರೆ.

ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಈ ಬಗ್ಗೆ ಕೇಳಿದಾಗ ಜಾತಿವಾರು ಮತಗಳಿಗಿಂತ ಕ್ಷೇತ್ರದ ಜನ ನನ್ನ ಪರವಾಗಿ ಮತ ಚಲಾಯಿಸುತ್ತಾರೆ, ಕೇವಲ ಚುನಾವಣೆಗಾಗಿ ಜಾತಿವಾರು ಲೆಕ್ಕಾಚಾರ ಎಂಬಂತೆ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಕುರುಬ ಜನಾಂಗದ ಮತಗಳ ಸೆಳೆಯಲು ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದು ಈಗಾಗಲೇ ಒಮ್ಮೆ ಪ್ರಚಾರ ಮಾಡಿದ್ದಾರೆ, ಇನ್ನೂ ಹಕವಾರು ಬಾರಿ ಪ್ರಚಾರಕ್ಕೆ ಬರಲಿದ್ದಾರೆ.ಒಟ್ಟಾರೆಯಾಗಿ ಮಸ್ಕಿ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಹಾಗು ಬಿಜೆಪಿಯವರ ಜಾತಿವಾರು ಲೆಕ್ಕಾಚಾರ ಜೋರಾಗಿದೆ.
Published by:Latha CG
First published: