ಮಸ್ಕಿ ಉಪಚುನಾವಣೆ: 5ಎ ಕಾಲುವೆ ಹೋರಾಟಕ್ಕೆ ಬೆಂಬಲ ನೀಡಿದ ಕಾಂಗ್ರೆಸ್

ಸಿದ್ದರಾಮಯ್ಯ ಮಸ್ಕಿ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಸಿಂಧನೂರಿನ ಪಗಡದಿನ್ನಿಯಲ್ಲಿ ಸಿದ್ದರಾಮಯ್ಯ ಮಸ್ಕಿಯಲ್ಲಿ ಜನರ ಬೆಂಬಲ ನಿರೀಕ್ಷೆ ಮಾಡದಷ್ಟು ಪ್ರಮಾಣದಲ್ಲಿ ಇದೆ.  ಇಷ್ಟೊಂದು ಪ್ರಮಾಣದ ಭ್ರಷ್ಟಾಚಾರದ ಸರ್ಕಾರವನ್ನ ನಾನು ನನ್ನ 40 ವರ್ಷದ ಅನುಭವದಲ್ಲಿ ನೋಡಿಲ್ಲ, ಇದು 20 ಪರ್ಸೆಂಟ್  ಸರ್ಕಾರ, ವಿಜಯೇಂದ್ರನಿಗೆ ದುಡ್ಡು ಕೊಟ್ಟರೆ ಟ್ರಾನ್ಸಫರ್ ಆಗುತ್ತವೆ, ಯಡಿಯೂರಪ್ಪ ಕೇವಲ ಸಹಿ ಮಾಡ್ತಾರೆ ಎಂದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್.

  • Share this:
ರಾಯಚೂರು(ಏ.07): ಮಸ್ಕಿ ತಾಲೂಕಿನಲ್ಲಿ ನಡೆಯುತ್ತಿರುವ 5ಎ ಕಾಲುವೆ ಹೋರಾಟಕ್ಕೆ ಕಾಂಗ್ರೆಸ್​ ಬೆಂಬಲ ನೀಡಿದೆ. ಇಂದು ಕಾಂಗ್ರೆಸ್ ತಂಡ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್​, 5ಎ ಕಾಲುವೆ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾನು ನೀರಾವರಿ ಸಚಿವನಾಗಿದ್ದಾಗ ನನಗೆ ಪ್ರಸ್ತಾವನೆ ಬಂದಿತ್ತು. ಹಿಂದಿನ ಶಾಸಕರು ಈ ಬಗ್ಗೆ ನನ್ನ ಬಳಿ, ಎಂ ಬಿ ಪಾಟೀಲ ಹಾಗೂ ಸಿದ್ದರಾಮಯ್ಯ ಬಳಿಯೂ ಕೇಳಿಲ್ಲ. ಈ ಬಗ್ಗೆ ಅಧ್ಯಯನ ಮಾಡುತ್ತೇವೆ. ನಾವು ನಿಮ್ಮ ಪರ ಧ್ವನಿಯಾಗಿರುತ್ತೇವೆ.  ಶ್ರೀರಾಮುಲು ಸಹ ಪ್ರತಾಪಗೌಡ ನನ್ನ ಬಳಿ ಪ್ರಸ್ತಾವನೆ ತಂದಿಲ್ಲ ಎಂದಿದ್ದಾರೆ. 50 ಹಳ್ಳಿಗಳ ಜನ ಕಾಂಗ್ರೆಸ್ ಅಭ್ಯರ್ಥಿ ಪರ ಆಶೀರ್ವಾದ ಮಾಡಿ, ನಾವು ನಿಮ್ಮ ಪರವಾಗಿ ಇರುತ್ತೇವೆ. ಹೋರಾಟ ಕೈ ಬಿಡಿ ಎಂದು ಡಿ ಕೆ ಶಿವಕುಮಾರ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ  ಸಿದ್ದರಾಮಯ್ಯ,  ಪ್ರತಾಪಗೌಡ ಪಾಟೀಲ ಒಂದು ದಿನವೂ 5ಎ ಕಾಲುವೆಯ ಬಗ್ಗೆ ಮಾತನಾಡಿಲ್ಲ. ಒತ್ತಾಯ ಮಾಡಿದ್ದರೆ ಅಂದೇ ಮಂಜೂರು ಮಾಡುತ್ತಿದ್ದೆವು. ಈ ಯೋಜನೆಗೆ 3 ಸಾವಿರ ರೂಪಾಯಿ ಕೋಟಿ ನೀಡಬೇಕಾಗಿತ್ತು. ನಮ್ಮ ಸರಕಾರ ಬಂದರೆ 5ಎ ಕಾಲುವೆ ಮಾಡುತ್ತೇವೆ, ಸರಕಾರ ಸಂಬಳ ಕೊಡಲು ಸರಕಾರದ ಬಳಿ ಹಣವಿಲ್ಲ, ಅಧಿಕಾರಿಗಳ ಕರೆದು ನೀರಿನ ಲಭ್ಯತೆ ಇದ್ದರೆ ಜಾರಿಗೊಳಿಸಲಾಗುವುದು, ಅಧಿವೇಶನದಲ್ಲಿ ಈ ಚಳುವಳಿ ಕುರಿತು ಮಾತನಾಡುತ್ತೇನೆ, ಯಡಿಯೂರಪ್ಪ ಸರಕಾರ ಮಾಡದಿದ್ದರೆ, 2023 ರಲ್ಲಿ ಕಾಂಗ್ರೆಸ್ ಬರುತ್ತೆ. ನಾವು ಅಧಿಕಾರಕ್ಕೆ ಬಂದರೆ ಮಾಡೇ ಮಾಡುತ್ತೇವೆ ಎಂದು ಹೇಳಿದರು. ಹೋರಾಟ ಕೈ ಬಿಡುವ ಬಗ್ಗೆ ರೈತರು ಮತ್ತೊಮ್ಮೆ ಸಭೆ ಸೇರಿ ನಿರ್ಧಾರ ಮಾಡಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ.

ಲಾಕ್‍ಡೌನ್ ಜಾರಿ ಬಳಿಕ ಪ್ರಾಣಿಗಳ ಮೇಲಿನ ಕಿರುಕುಳ ಪ್ರಕರಣಗಳ ಹೆಚ್ಚಳ: ವರದಿಯಲ್ಲಿ ಬಯಲು

ಸಿದ್ದರಾಮಯ್ಯ ಮಸ್ಕಿ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಸಿಂಧನೂರಿನ ಪಗಡದಿನ್ನಿಯಲ್ಲಿ ಸಿದ್ದರಾಮಯ್ಯ ಮಸ್ಕಿಯಲ್ಲಿ ಜನರ ಬೆಂಬಲ ನಿರೀಕ್ಷೆ ಮಾಡದಷ್ಟು ಪ್ರಮಾಣದಲ್ಲಿ ಇದೆ.  ಇಷ್ಟೊಂದು ಪ್ರಮಾಣದ ಭ್ರಷ್ಟಾಚಾರದ ಸರ್ಕಾರವನ್ನ ನಾನು ನನ್ನ 40 ವರ್ಷದ ಅನುಭವದಲ್ಲಿ ನೋಡಿಲ್ಲ, ಇದು 20 ಪರ್ಸೆಂಟ್  ಸರ್ಕಾರ, ವಿಜಯೇಂದ್ರನಿಗೆ ದುಡ್ಡು ಕೊಟ್ಟರೆ ಟ್ರಾನ್ಸಫರ್ ಆಗುತ್ತವೆ, ಯಡಿಯೂರಪ್ಪ ಕೇವಲ ಸಹಿ ಮಾಡ್ತಾರೆ, ವಿಜಯೇಂದ್ರ ಡಿ ಫ್ಯಾಕ್ಟರ್ ಚೀಫ್ ಮಿನಿಸ್ಟರ್, ಅಸೆಂಬ್ಲಿ ಡಿಸಾಲ್ವ್ ಮಾಡಿ ಎಲೆಕ್ಷನ‌್ ಗೆ ಹೋಗೋಣ ಎಂದೆ, ಸಿಎಂ ಬಿಎಸ್ ವೈ ಪ್ರತಿಕ್ರಿಯೆ ಇಲ್ಲ, ಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆ ದಿಕ್ಸೂಚಿ ಆಗಲ್ಲ, ಅನ್ನಭಾಗ್ಯ ಬಿಜೆಪಿಯವದ್ದು ಅಂದ್ರೆ ಯಾರಾದ್ರೂ ನಂಬ್ತಾರಾ? ಎಂದು ಪ್ರಶ್ನಿಸಿದರು.

ಯಾವನ್ರಿ ಅವನು ರೇಣುಕಾಚಾರ್ಯ, ಮೊದಲೇ ಯೋಜನೆಗೆ ಫೈಲ್ ರೆಡಿ ಮಾಡಿದವರು, ಯಾಕೆ 5 ಕೆಜಿ ಮಾಡಬೇಕು, ಹೆಚ್ಚು ಮಾಡಬೇಕಿತ್ತು, ರಮೇಶ ಜಾರಕಿಹೊಳಿಗೆ ಕೊರೋನಾ ಬಗ್ಗೆ ನನಗೆ ಏನೂ ಗೊತ್ತಿಲ್ಲ ಅದನ್ನ ಡಾಕ್ಟರ್ ಹೇಳಬೇಕು, ಸೆಕ್ಸ್ ಸಿಡಿ ವಿಚಾರ ಎಲೆಕ್ಷನ್ ಗೆ ಬಳಸಿಕೊಳ್ಳುವುದಿಲ್ಲ, ಈಶ್ವರಪ್ಪ ಗಂಭೀರವಾದ ಆರೋಪ ಮಾಡಿದ್ದಾರೆ, ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ ಅಂದ್ರೆ ಸುಮ್ನೆನಾ, ಸರ್ಕಾರದಲ್ಲಿ , ಪಕ್ಷದಲ್ಲಿ ಸರಿಯಿದೆ ಅಂತ ಹೇಗೆ ಅನಿಸುತ್ತೆ, ಯತ್ನಾಳ ದಿನಾ ಪಕ್ಷದ ವಿರುದ್ದ ಮಾತನಾಡುತ್ತಿದ್ದಾನೆ. ಮೇ ತಿಂಗಳಲ್ಲಿ ಸರ್ಕಾರ ಬೀಳುತ್ತೆ ಅಂತಾನೆ, ಯತ್ನಾಳ ವಿರುದ್ದ ಕ್ರಮ ಯಾಕೆ ಇಲ್ಲ, ಕ್ರಮ ತೆಗೆದುಕೊಳ್ಳಲು ಎಷ್ಟು ಸಮಯ ಬೇಕು, ಮೂರ್ನಾಲ್ಕು ತಿಂಗಳಿಂದ ಮಾತನಾಡುತ್ತಿದ್ದಾನೆ ,  ಆರ್ ಎಸ್ ಎಸ್ , ಸಂತೋಷ ಬೆಂಬಲ ಯತ್ನಾಳ ಹಾಗು ಈಶ್ವರಪ್ಪಗೆ ಇದೆ, ಬಿಎಸ್ ವೈ ಯನ್ನ ಅಧಿಕಾರದಿಂದ ಇಳಿಸಬೇಕು ಅನ್ನೋದು ಉದ್ದೇಶ, ನಾನು ಗಂಭೀರ ನಾಯಕರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ವಿಜಯೇಂದ್ರ, ಲಖನ್ ಜಾರಕಿಹೊಳಿ ಬಗ್ಗೆ ಮಾತಾಡಲ್ಲ ಎಂದರು.

ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ನಿಲ್ತಿನಿ ಅಂತ ಮೊದಲು ಹೇಳಿದ್ದ ನಿಂತಿಲ್ಲ, ಬಂದು ನಿಂತರೆ ನಿಲ್ಲಲಿ, ಅಲ್ಲಿ 59 ಸಾವಿರ ಮತಗಳಿಂದ ಯತೀಂದ್ರ ಗೆದ್ದಿದ್ದಾನೆ, ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಕೊಡುಗೆ  ಏನು? ಅಭಿವೃದ್ಧಿ ಮಾಡಿರುವುದು ನಾವು., ಜಾತಿ ಹೇಳಿಕೊಂಡು ಬಂದ್ರೆ ಮತದಾರರು ಬಿಟ್ಟುಕೊಡ್ತಾರಾ, ಯಾರು ಬಂದ್ರೆ ನಾವು ಸ್ವಾಗತ ಮಾಡುತ್ತೇವೆ, ಜೆಡಿಎಸ್ ನಿಂದ ಉಚ್ಚಾಟನೆ ಮಾಡಿದ ಮೇಲೆ ನಾನು ಹೊರಬಂದೆ, ದೇವೇಗೌಡ ಉಪಮುಖ್ಯಮಂತ್ರಿಯಾಗಿದ್ದವನ್ನ ಹೊರಹಾಕಿದರು, ಹೊರಬಂದು ಅಹಿಂದ ಕಟ್ಟಿ ಹೋರಾಟ ನಡೆಸಿದೆ, ಕಾಂಗ್ರೆಸ್‌ನವರು ಕರೆದರೂ ಹೋದೆ, ಪ್ರತಾಪ್ ಗೌಡನನ್ನ ಯಾರಾದರೂ ಕರೆದಿದ್ರಾ ಅವರು ಸೇಲ್ ಆಗಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಅನಿರೀಕ್ಷಿತ ಮಟ್ಟದ ದೊಡ್ಡ ಪ್ರತಿಕ್ರಿಯೆ ಬರುತ್ತಿದೆ, ಬಸವಕಲ್ಯಾಣದಲ್ಲೂ ಅನುಕಂಪ ಇದೆ. ಬೆಳಗಾವಿ ಯಲ್ಲಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೆವೆ ಮೂರು ಕಡೆ ಗೆಲ್ಲುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ  ಸಾರಿಗೆ ನೌಕರರ ಮುಷ್ಕರ ವಿಚಾರವಷ್ಟೆ ಅಲ್ಲ ಸರ್ಕಾರಕ್ಕೆ ಯಾವುದೇ ಸಮಸ್ಯೆಗಳನ್ನ ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಸಾರಿಗೆ ನೌಕರರು ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ, ಸರಿಯಾಗಿ ಆಡಳಿತ ನಡೆಸುವಲ್ಲಿ ಸರ್ಕಾರ ಸೋತಿದೆ ಎಂದರು.ಸಿನೆಮಾ ಮಂದಿರಗಳ ವಿಚಾರದಲ್ಲೂ ತಪ್ಪು ನಿರ್ಧಾರ ಮಾಡಿ ಅಲ್ಲಿನ ಜನರಿಗೆ ತೊಂದರೆ ಕೊಡುತ್ತಿದೆ, ನಾವು ಬರುವಾಗ ಫ್ಲೈಟ್ ನಲ್ಲಿ ಬಂದೆವು ಅಲ್ಲಿ ತುಂಬಾ ಜನ ಇದ್ರು ಅಲ್ಲಿ ರೂಲ್ಸ್ ಇಲ್ಲಾ, ಬಸ್ ಗೆ ಮಾತ್ರ ಯಾಕೆ ನಿಯಮ ಜಾರಿ ಮಾಡಬೇಕು, ಮಸ್ಕಿ ಉಪಚುನಾವಣೆಯಲ್ಲಿ ಜನರ ಉತ್ಸಾಹ ಹೆಚ್ಚಾಗಿದೆ, ಜನರ ಈ ಉತ್ಸಾಹ ನಾನು ಎಲ್ಲೂ ನೋಡಿಲ್ಲ , ಪ್ರಚಾರಕ್ಕೆ ಹೋದಲೆಲ್ಲಾ ಕೂಲಿ ಕಾರ್ಮಿಕರು ಸಹ ದೇಣಿಗೆ ಕೊಡುತ್ತಿದ್ದಾರೆ. ಕೈಲಾದಷ್ಟು ಹಣ ನೀಡಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಿದ್ದಾರೆ, ಇದನ್ನೇ ಬಿಜೆಪಿಯವರು ದುಡ್ಡು ಕೊಟ್ಟು ವಾಪಸ್ ತೆಗದುಕೊಳ್ಳುತ್ತಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ, ಇದು ಬಸನಗೌಡ ತುರವಿಹಾಳ ಎಲೆಕ್ಷಲ್ ಅಲ್ಲ ಸ್ವಾಭಿಮಾನಿಗಳ ಚುನಾವಣೆ,  ಸ್ವಾಭೀಮಾನಕ್ಕೆ ಜನ ತೀರ್ಪು ಕೊಡುತ್ತಾರೆ, ಪ್ರತಾಪ್ ಗೌಡ ಮಾರಾಟ ಮಾಡಿಕೊಂಡಿದ್ದಾರೆ, 25 ಸಾವಿರ ಅಂತರದಲ್ಲಿ ಬಸನಗೌಡ ಗೆಲ್ತಾರೆ, ಬಿಜೆಪಿ ಅಭ್ಯರ್ಥಿಯಾಗಿದ್ರಿಂದ   ಕಳೆದ ಬಾರಿ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ರಿಂದ ಈಗ ಗೆಲ್ತಾರೆ ಎಂದರು.
Published by:Latha CG
First published: