ಮಸ್ಕಿ ಉಪಚುನಾವಣೆ: ಉಸ್ತುವಾರಿಗಳ ಬದಲಾವಣೆ ಹಿಂದಿದೆ ಜಾತಿ ಲೆಕ್ಕಾಚಾರ..!

ಈ ಮೊದಲು ಬಿಜೆಪಿಯು ಸಚಿವ ವಿ ಸೋಮಣ್ಣ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಹಾಗು ಪ್ರಧಾನಕಾರ್ಯದರ್ಶಿ ರವಿಕುಮಾರ್ ಇದ್ದರು, ಆದರೆ ಈಗ ಹೊಸ ಉಸ್ತುವಾರಿ ಗಳನ್ನು ನೇಮಕ ಮಾಡಲಾಗಿದ್ದು ಸಚಿವ ಶ್ರೀರಾಮುಲು, ಬಿಎಸ್ವೈ ಪುತ್ರ ವಿಜಯೇಂದ್ರ ಹಾಗೂ ರವಿಕುಮಾರ, ರಾಜುಗೌಡ, ಡಾ ಶಿವರಾಜ ಪಾಟೀಲ, ನೇಮಿರಾಜ್ ನಾಯಕರನ್ನು ನೇಮಕ ಮಾಡಿದೆ.

ಪ್ರತಾಪಗೌಡ ಪಾಟೀಲ

ಪ್ರತಾಪಗೌಡ ಪಾಟೀಲ

  • Share this:
ರಾಯಚೂರು(ಫೆ.06): 2018 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲರ ರಾಜೀನಾಮೆಯಿಂದ ತೆರವಾದ ಮಸ್ಕಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ಘೋಷಣೆಯ ಕಾಲ‌ ಹತ್ತಿರವಿದೆ. ಈ ಮಧ್ಯೆ ಈ ಹಿಂದೆ ಚುನಾವಣೆಗೆ ಬಿಜೆಪಿಯಲ್ಲಿ ಉಸ್ತುವಾರಿಯಾಗಿ ನೇಮಕವಾದರವರನ್ನು ಬದಲಾಯಿಸಲಾಗಿದ್ದು ಇದರ ಹಿಂದೆ ಜಾತಿ ಲೆಕ್ಕಾಚಾರ ಅಡಗಿದೆ.  ಹೇಗಾದರೂ ಮಸ್ಕಿ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಪ್ರತಾಪಗೌಡ ಪಾಟೀಲರ ಯತ್ನಕ್ಕೆ ಬಿಜೆಪಿಯ ವರಿಷ್ಠರು ಸಾಥ್ ನೀಡಿದ್ದಾರೆ.

2008 ರಲ್ಲಿ ಕ್ಷೇತ್ರ ಪುನರ್ವಿಂಗಡನೆಯ ನಂತರ ರಚನೆಯಾದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಇಲ್ಲಿಯವರೆಗೂ ಮೂರು ಬಾರಿ ಚುನಾವಣೆ ನಡೆದಿದ್ದು ಮೂರೂ ಬಾರಿ ಪ್ರತಾಪಗೌಡ ಪಾಟೀಲ ಆಯ್ಕೆಯಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಪ್ರತಾಪಗೌಡ, 2013 ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು, 2018ರಲ್ಲಿಯೂ ಕಾಂಗ್ರಸ್ಸಿನಿಂದ ಆಯ್ಕೆಯಾಗಿದ್ದರು. ಆದರೆ ಆಯ್ಕೆಯಾಗಿದ್ದು ಮಾತ್ರ ಅತ್ಯಲ್ಪ ಮತಗಳಿಂದ. ಕೇವಲ 213 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಮುಂದಿನ‌ ದಿನಗಳಲ್ಲಿ ಕಾಂಗ್ರೆಸ್ಸಿನಲ್ಲಿ ಉಳಿದರೆ ಆಯ್ಕೆ ಕಷ್ಟ ಎನ್ನುವ ಲೆಕ್ಕಾಚಾರ ಒಂದು ಕಡೆಯಾದರೆ, ಕುಮಾರಸ್ವಾಮಿ ಸರಕಾರದಲ್ಲಿ ಸಚಿವರಾಗುವ ಕನಸು ಕಂಡಿದ್ದರು, ಆದರೆ ಸಚಿವರಾಗಲಿಲ್ಲ. ಈ ಕಾರಣಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈಗ ಬಿಜೆಪಿಯಿಂದ ಸ್ಪರ್ಧಿಸಿ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ.

ಕಳೆದ ಬಾರಿ ಕೇವಲ 213 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದ ಬಸನಗೌಡ ತುರ್ವಿಹಾಳ ಪ್ರತಾಪಗೌಡ, ಬಿಜೆಪಿಗೆ ಸೇರಿದ ನಂತರ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪ್ರತಾಪಗೌಡರಿಗೆ ಪ್ರಬಲ ಪೈಪೋಟಿ ನೀಡುವ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ನಂತರ ಅವರ ಬೆಂಬಲಿಗರು ಸಹ ಕಾಂಗ್ರೆಸ್ ಸೇರಿದ್ದಾರೆ. ಈ ಮಧ್ಯೆ ಮಸ್ಕಿ ಬೈ ಎಲೆಕ್ಷನ್ ಮುನ್ನ 5ಎ ಕಾಲುವೆಗಾಗಿ ಹೋರಾಟ ನಡೆದಿದೆ. ಈ ಹೋರಾಟದಿಂದಾಗಿ ಪ್ರತಾಪಗೌಡರಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಈಗ ಬೇರೆ ಬೇರೆ ತಂತ್ರಗಳನ್ನು ಬಿಜೆಪಿ ರೂಪಿಸುತ್ತಿದೆ.  ಇದೇ ಕಾರಣಕ್ಕಾಗಿ ಚುನಾವಣೆಯ ಉಸ್ತುವಾರಿಗಳನ್ನು ಬದಲಾಯಿಸಿದೆ.

ಇಂದು ಕೊಡವರ ನಾಡಲ್ಲಿ ರಾಷ್ಟ್ರಪತಿ: ಜನರಲ್ ಕೆ.ಎಸ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಕ್ಷಣಗಣನೆ

ಈ ಮೊದಲು ಬಿಜೆಪಿಯು ಸಚಿವ ವಿ ಸೋಮಣ್ಣ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಹಾಗು ಪ್ರಧಾನಕಾರ್ಯದರ್ಶಿ ರವಿಕುಮಾರ್ ಇದ್ದರು, ಆದರೆ ಈಗ ಹೊಸ ಉಸ್ತುವಾರಿ ಗಳನ್ನು ನೇಮಕ ಮಾಡಲಾಗಿದ್ದು ಸಚಿವ ಶ್ರೀರಾಮುಲು, ಬಿಎಸ್ವೈ ಪುತ್ರ ವಿಜಯೇಂದ್ರ ಹಾಗೂ ರವಿಕುಮಾರ, ರಾಜುಗೌಡ, ಡಾ ಶಿವರಾಜ ಪಾಟೀಲ, ನೇಮಿರಾಜ್ ನಾಯಕರನ್ನು ನೇಮಕ ಮಾಡಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ್ ಹಾಗೂ ನಾಯಕ ಜನಾಂಗದ ಮತಗಳು ಅಧಿಕವಾಗಿವೆ. 52 ಸಾವಿರ ಜನ ಲಿಂಗಾಯತರು, 50 ಸಾವಿರ ನಾಯಕ ಜನಾಂಗದವರು ಇದ್ದಾರೆ. ನಾಯಕ ಸಮಾಜದಲ್ಲಿ ಶ್ರೀರಾಮುಲು ಹಿಡಿತವಿದೆ, ಶ್ರೀರಾಮುಲು ಚುನಾವಣೆ ವಹಿಸಿಕೊಂಡರೆ ನಾಯಕ ಸಮಾಜದ ಮತಗಳು ಒಂದೆಡೆ ಸೇರುವ ಸಾಧ್ಯತೆ ಲೆಕ್ಕಾಚಾರವಿದೆ.  ವಿಜಯೇಂದ್ರರಿಂದ ಲಿಂಗಾಯತ ಮತಗಳು ಬರಲಿವೆ ಎಂಬ ಲೆಕ್ಕಾಚಾರವಿದೆ. ಈ ಹಿಂದೆ ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ, ಇದೇ ಕಾರಣಕ್ಕೆ ವಿಜಯೇಂದ್ರ ಮಸ್ಕಿ ವಿಧಾನಸಭಾ ಜವಾಬ್ದಾರಿ ವಹಿಸಲು ಪ್ರತಾಪಗೌಡ ಆಗ್ರಹಿಸಿದ್ದರು. ಈ ಆಗ್ರಹಕ್ಕೆ ಬಿಜೆಪಿ ರಾಜ್ಯ ಸಮಿತಿ ಒಪ್ಪಿಗೆ ನೀಡಿದೆ.

ಈ ಮಧ್ಯೆ ದೇವದುರ್ಗಾದ ಶಾಸಕ ಶಿವನಗೌಡ ನಾಯಕರಿಗೆ ಚುನಾವಣೆ ಜವಾಬ್ದಾರಿ ನೀಡಿಲ್ಲ.  2009 ಹಾಗೂ 2015 ರ ಉಪಚುನಾವಣೆಯಲ್ಲಿ ಸಚಿವ ವಿ ಸೋಮಣ್ಣ ಉಸ್ತುವಾರಿ ವಹಿಸಿಕೊಂಡು ಶಿವನಗೌಡ ನಾಯಕ ಆಯ್ಕೆಗೆ ಶ್ರಮ ವಹಿಸಿದ್ದರು. ಆದರೆ ಮಸ್ಕಿಯಲ್ಲಿ ಸೋಮಣ್ಣ ಬದಲಾವಣೆ ಹಾಗೂ ಶಿವನಗೌಡ ನಾಯಕರಿಗೆ ಜವಾಬ್ದಾರಿ ವಹಿಸದೆ ಇರುವುದು ಚರ್ಚೆಗೆ ಕಾರಣವಾಗಿದೆ.
Published by:Latha CG
First published: