Maski By Election: ಬಿಜೆಪಿ ಅಭ್ಯರ್ಥಿಗೆ ಕೊರೋನಾ ಪಾಸಿಟಿವ್; ಘಟಾನುಘಟಿ ನಾಯಕರಿಂದ ಭರ್ಜರಿ ಪ್ರಚಾರ

ಮಸ್ಕಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರು, ಬಿಜೆಪಿ  ಎಂದರೆ ಭ್ರಷ್ಟಾಚಾರ, ಬಿ ಎಂದರೆ ಭ್ರಷ್ಟಾಚಾರ, ಜನತಾ ಪಾರ್ಟಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಈಗ ಸುಮ್ಮನೆ ನಮ್ಮ  ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಪ್ರತಾಪಗೌಡ ಪಾಟೀಲ

ಪ್ರತಾಪಗೌಡ ಪಾಟೀಲ

  • Share this:
ರಾಯಚೂರು(ಏ.12): ಪ್ರತಾಪಗೌಡರ ರಾಜೀನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯು ಏಪ್ರಿಲ್ 17ರಂದು ನಡೆಯುತ್ತಿದೆ. ಮತದಾನ ಹತ್ತಿರವಾಗುತ್ತಿರುವದರಿಂದ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ಸಿಎಂ ಜಾತಿವಾರು ಮತಗಳಿಗೆ ಕೈ ಹಾಕಿ, ಪರಿಶಿಷ್ಠರ ಮನೆಯಲ್ಲಿ ಊಟ ಮಾಡಿದ್ದಾರೆ. ಸಿದ್ದರಾಮಯ್ಯ ಸಹ ಹಿಂದುಳಿದ ವರ್ಗಗಳ ಸಮಾವೇಶ ನಡೆಸಿದರು. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

ಕಾಂಗ್ರೆಸ್ ಸಮಾವೇಶ:

ಏಪ್ರಿಲ್ 17 ರಂದು ನಡೆಯುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯ ಪ್ರಚಾರ ಭರಾಟೆ ಜೋರಾಗಿದೆ. ಭಾನುವಾರ ಕಾಂಗ್ರೆಸ್​ನಿಂದ ಘಟಾನುಘಟಿ ನಾಯಕರು ಪ್ರಚಾರ ಮಾಡಿದರು. ಕ್ಷೇತ್ರದ ಹೊರಗೆ ಹಿಂದುಳಿದ ವರ್ಗಗಳ ಸಮಾವೇಶ ನಡೆಸಿದರೆ, ಸಂಜೆ ಮಸ್ಕಿಯಲ್ಲಿ ಬೃಹತ್ ಸಮಾವೇಶ ನಡೆಸಿದರು.

ಈಗಾಗಲೇ ಎರಡು ಬಾರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ ಭಾನುವಾರ ಮತ್ತೊಮ್ಮೆ  ಪ್ರಚಾರ ನಡೆಸಿದರು.  ಮಾಜಿ ಸಿಎಂ ಸಿದ್ದರಾಮಯ್ಯ ಮಟ್ಟೂರು, ಬುದ್ದಿನ್ನಿಗಳಲ್ಲಿ ರೋಡ್ ಶೋ ಮಾಡಿದರು. ಸಿಂಧನೂರಿನಲ್ಲಿ ಮಸ್ಕಿ ಕ್ಷೇತ್ರದ ಹಿಂದುಳಿದ ವರ್ಗಗಳ ಸಮುದಾಯಗಳ ಸಮಾವೇಶ ನಡೆಸಿದರು. ಸಂಜೆ ಮಸ್ಕಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ್, ಸಿದ್ದರಾಮಯ್ಯ, ಡಿ ಕೆ ಶಿವಕುಮಾರರಿಗೆ ಸಾಥ್ ನೀಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ರಾಜ್ಯದಲ್ಲಿ ಕೊರೊನಾ ಎರಡನೆಯ ಅಲೆ ಅಬ್ಬರಿಸುತ್ತಿರುವಾಗ ರಾಜಕಾರಣಿಗಳು ಕೋವಿಡ್ ನಿಯಮ ಪಾಲನೆ ಮಾಡುತ್ತಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು. ಸಾರ್ವಜನಿಕ ಸಭೆಗಳಲ್ಲಿ 500 ಜನಕ್ಕಿಂತ ಹೆಚ್ಚು ಸೇರಬಾರದು ಎಂಬ ನಿಯಮ ಪಾಲನೆಯಾಗಿಲ್ಲ.

ಸಾರಿಗೆ ನೌಕರರ ಮುಷ್ಕರ: ಯಾದಗಿರಿಯಲ್ಲಿ ಕರ್ತವ್ಯಕ್ಕೆ ಗೈರಾದ 31 ನೌಕರರ ವಜಾ...!

ಪ್ರತಿಭಟನೆ:

ಮಸ್ಕಿ ಉಪಚುನಾವಣೆಯ ಸಂದರ್ಭದಲ್ಲಿಯೇ ರಾಜ್ಯ ಮಹಿಳಾ ಕಾಂಗ್ರೆಸ್ ನಿಂದ‌ ವಿನೂತನ ಬೃಹತ್ ಪ್ರತಿಭಟನೆ ನಡೆಸಿದರು.ಮಸ್ಕಿ ಬೈ ಎಲೆಕ್ಷನ್ ಪ್ರಚಾರಕ್ಕೆ ಆಗಮಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ನೇತ್ರತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿದರು, ಜನಸಾಮಾನ್ಯರಿಗೆ ಹೊರೆಯಾಗಿರುವ ಇಂಧನ ಬೆಲೆ ಏರಿಕೆ, ದಿನಸಿ ಬೆಲೆ ಏರಿಕೆ, ಅಡುಗೆ ಮಾಡುವ ಮಹಿಳೆಯರು, ದುಡಿದು ತಿನ್ನುವ ಬಡವರು ಸಂಕಷ್ಟ ಅನುಭವಿಸುವಂತಾಗಿದೆ.

ಈ ಬಗ್ಗೆ ಸರಕಾರ ಬೆಲೆ ಇಳಿಸಲು ಕ್ರಮ ಕೈಗೊಂಡಿಲ್ಲ, ಈ ಹಿಂದೆ ಯುಪಿಎ ಸರಕಾರವಿದ್ದಾಗ ಬೆಲೆಯೇರಿಕೆಯ ವಿರುದ್ದ ಹೋರಾಟ ಮಾಡುತ್ತಿದ್ದ ಬಿಜೆಪಿಯ ಮುಖಂಡರು ಈಗ ಮೌನವಾಗಿದ್ದಾರೆ ಎಂದು ಆರೋಪಿಸಿದರು. ಪುಷ್ಪಾ ಅಮರನಾಥ ಸೇರಿದಂತೆ ಸಾವಿರಾರು ಮಹಿಳೆಯರು ಸಿಲಿಂಡರ್, ತರಕಾರಿಗಳನ್ನು ಹೊತ್ತುಕೊಂಡು ಮಸ್ಕಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಉಪಚುನಾವಣೆ ಯು ಬೆಲೆಯೇರಿಕೆಗೆ ಉತ್ತರವಾಗಲಿ ಎಂದು ಆಗ್ರಹಿಸಿದರು, ಇದೇ ಸಮಯದಲ್ಲಿ ಬಿಜೆಪಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗೆ ಮತ ಹಾಕದಂತೆ ಹೇಳಿದರು.

ಬಿಜೆಪಿ ಜಾತಿ ಸಮಾವೇಶ:

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿನ್ನೆ ಇಡೀ ದಿನ ಮುದಗಲ್ ನಲ್ಲಿ ಕ್ಷೇತ್ರದ  ಪ್ರಮುಖ ಸಮುದಾಯ ಗಳಾದ ವೀರಶೈವ ಲಿಂಗಾಯತ್, ಕುರುಬ, ನಾಯಕ, ಬೋವಿ ಸೇರಿದಂತೆ ವಿವಿಧ ಜನಾಂಗದವರೊಂದಿಗೆ ಸಂವಾದ ನಡೆಸಿದರು.ಇದೇ ವೇಳೆ ಮಸ್ಕಿ ಉಪಚುನಾವಣೆಯ ಸಂದರ್ಭದಲ್ಲಿ ದಲಿತರ ಮಬೆಗೆ ಹೋಗಿ ಊಟ ಮಾಡಿ ಮತ ಸೆಳೆಯುವ ಪ್ರಯತ್ನ ಮುಂದುವರಿದಿದೆ, ಸಿಎಂ ಒಂದು ದಿನ ಪರಿಶಿಷ್ಠ ಜಾತಿಯವರ ಮನೆಯಲ್ಲಿ ಭಾನುವಾರ ಪರಿಶಿಷ್ಠ ಪಂಗಡದವರ ಮನೆಯಲ್ಲಿ ಊಟ ಮಾಡಿ ಮತ ಭೇಟೆ ಮಾಡಿದರು.ಒಟ್ಟು ಮೂರು ದಿನ ಮಸ್ಕಿಯಲ್ಲಿದ್ದ ಯಡಿಯೂರಪ್ಪ ಕ್ಷೇತ್ರದಲ್ಲಿಯ ದಲಿತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಶುಕ್ರವಾರ ಸಂಜೆ ಮಸ್ಕಿಯಲ್ಲಿಯ ಮಾರೆಮ್ಮ ಎಂಬ ದಲಿತ ಮಹಿಳೆಯ ಮನೆಯಲ್ಲಿ ಉಪ್ಪಿಟ್ಟು, ಅವಲಕ್ಕಿ  ಉಪಹಾರ ಸೇವಿಸಿದರು. ಭಾನುವಾರ ಮದ್ಯಾಹ್ನ ಮೆದಕಿನಾಳದ ದುರ್ಗಪ್ಪ ಎಂಬ ಪರಿಶಿಷ್ಠ ಜಾತಿಯ ಬಿಜೆಪಿ ಪಕ್ಷದ ಬೂತ ಮಟ್ಟದ ಅಧ್ಯಕ್ಷನ ಮನೆಯಲ್ಲಿ ಊಟ ಮಾಡಿದರು. ಯುಗಾದಿ ಹಬ್ಬವಾಗಿದ್ದರಿಂದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ಕಾಳು, ಹೊಳಿಗೆ, ಗೋಧಿ ಹುಗ್ಗಿ, ಅನ್ನ ಸಾರು, ಮಜ್ಜಿಗೆ ಹಪ್ಪಳ ಹೀಗೆ ಬಗೆ ಬಗೆಯ ಊಟವನ್ನು ಸವಿದರು. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಇಲ್ಲಿ ಯಾವುದೇ ರಾಜಕೀಯ ತಂತ್ರಗಾರಿಕೆ ಇಲ್ಲ, ಸಾಮಾನ್ಯವಾಗಿ ನಾನು ಹೊರಗಡೆ ಹೋದಾಗ ಬಡವರು ಆತ್ಮೀಯರು ಮನೆಗೆ ಊಟಕ್ಕೆ ಕರೆದಾಗ ತಪ್ಪದೆ ಹೋಗುತ್ತೇನೆ ಇದೆ ನನಗೆ ಸಂತೋಷ, ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7.5 ರಷ್ಟು ಮೀಸಲಾತಿ ನೀಡಲು ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ, ನ್ಯಾಯಾಲಯದ ಅನುಮತಿ ಸಿಕ್ಕ ತಕ್ಷಣ ಜಾರಿಗೊಳಿಸಲಾಗುವುದು ಎಂದರು.

ಆರೋಪ- ಪ್ರತ್ಯಾರೋಪ:

ಮಸ್ಕಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರು, ಬಿಜೆಪಿ  ಎಂದರೆ ಭ್ರಷ್ಟಾಚಾರ, ಬಿ ಎಂದರೆ ಭ್ರಷ್ಟಾಚಾರ, ಜನತಾ ಪಾರ್ಟಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಈಗ ಸುಮ್ಮನೆ ನಮ್ಮ  ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು. ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ಯಡಿಯೂರಪ್ಪ ಸುಳ್ಳುಗಳ ಹೇಳುವದರಲ್ಲಿ ನಿಸ್ಸಿಮರು, ಮಸ್ಕಿಯಲ್ಲಿ ಹಣ ಹಂಚುವದನ್ನು ನೋಡಿ ಸುಮ್ಮನೆ ಇರಬೇಕಾ? ಹಣ ಹಂಚುವ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಮಸ್ಕಿಯಲ್ಲಿ ಸರಳವಾಗಿ ಬಿಜೆಪಿ ಗೆಲ್ಲುವದಿದ್ದರೆ ಯಾಕೆ ಎಲ್ಲಾ ಸಚಿವರು ಇಲ್ಲಿ ಇರುತ್ತಿದ್ದರು.

ಸಾರಿಗೆ ನೌಕರರಿಗೆ ಕಾನೂನು ಜಾರಿಗೊಳಿಸುವುದು ಸರಕಾರದ ಮೂರ್ಖತನ, ಕಾನೂನು ಮೂಲಕ ಎಲ್ಲವನ್ನು ಬಗೆಹರಿಸಲು ಸಾಧ್ಯವಿಲ್ಲ, ಮಾತುಕತೆ ಮೂಲಕ ಬಗೆಹರಿಸಬೇಕು, ಸಿದ್ದರಾಮಯ್ಯ ಮುದಗಲ್ ನಲ್ಲಿ ಹೇಳಿದರು.ಮಸ್ಕಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ, ಬಿ ಎಂದರೆ ಭ್ರಷ್ಟಾಚಾರ, ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ ಎಂಬ ಸಿದ್ದರಾಮಯ್ಯ ಆರೋಪ ಹಿನ್ನಲೆ, ಸಿದ್ದರಾಮಯ್ಯ ಈ ರೀತಿ ಮಾತನಾಡಬಾರದು, ಹಗುರುವಾಗಿ ಮಾತನಾಡುವುದನ್ನು ಬಿಡಬೇಕು, ಈಗಾಗಲೇ ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ, ಪ್ರತಾಪಗೌಡ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಬಗ್ಗೆ, ಕೇಂದ್ರ ಸರಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು, ಎಲ್ಲರು ಮಾಸ್ಕ್ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರಿಗೆ ನೌಕರರು ತಮ್ಮ ಹೋರಾಟ ಕೈ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಯಾವುದೇ ಕಾರಣಕ್ಕೂ ಅವರೊಂದಿಗೆ ಮಾತುಕತೆ ಮಾಡುವುದಿಲ್ಲ ಎಂದರು.

ಪ್ರತಾಪಗೌಡರಿಗೆ ಪಾಸಿಟಿವ್:

ಮಸ್ಕಿ ಬೈ ಎಲೆಕ್ಷನ್ ಅಬ್ಬರದ ಮಧ್ಯೆ ಬಿಜೆಪಿ ಅಭ್ಯರ್ಥಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು ಆತಂಕ ಸೃಷ್ಠಿಯಾಗಿದೆ, ಇದರಿಂದಾಗಿ ಸಿಎಂ ಯಡಿಯೂರಪ್ಪ ಹಾಗು ಜನರಲ್ಲಿ ಆತಂಕ ಸೃಷ್ಠಿಯಾಗಿದೆ.ಮಸ್ಕಿಯ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಭಾನುವಾರ ಕೊರೊನಾ ಸೋಂಕು ದೃಢಪಟ್ಟಿದೆ, ಭಾನುವಾರ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆ ಲಿಂಗಸಗೂರು ಆಸ್ಪತ್ರೆಗೆ ಹೋಗಿದ್ದರು, ಈ ಸಂದರ್ಭದಲ್ಲಿ ಅವರ ಗಂಟಲದ್ರವ ಪರೀಕ್ಷೆ ಮಾಡಿದಾಗ ಸೋಂಕು ದೃಡಪಟ್ಟಿದೆ, ಈ ಕುರಿತು ಪ್ರತಾಪಗೌಡ ತಾವೇ ಸಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿ ನಾನು ಹೋಂ ಐಸೋಲೇಷನ್ ಆಗುತ್ತಿದ್ದೇನೆ, ಯಾರು ಭಯಪಡುವದು ಬೇಡ, ಏಪ್ರಿಲ್ 17ರ ಚುನಾವಣೆಯಲ್ಲಿ ನನ್ನ ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶುಕ್ರವಾರ ಹಾಗೂ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದು ಈಗ ಪ್ರತಾಪಗೌಡರಿಗೆ ಪಾಸಿಟಿವ್ ಆಗಿರುವುದು ಸಿಎಂ ಸೇರಿದಂತೆ ಹಲವರಿಗೆ ಆತಂಕ ಸೃಷ್ಠಿಯಾಗಿದೆ, ಚುನಾವಣೆ ಸಂದರ್ಭದಲ್ಲಿ ಪಾಸಿಟಿವ್ ಆಗಿರುವುದು ಪ್ರಚಾರದಲ್ಲಿ ಗೊಂದಲ ಮೂಡಿದೆ.
Published by:Latha CG
First published: