• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mask Must: ಮಾಸ್ಕ್ ತೆಗಿಬೇಡಿ, ವ್ಯಾಕ್ಸಿನ್ ಮರಿಬೇಡಿ! ರಾಜ್ಯ ಸರ್ಕಾರದಿಂದ ಮತ್ತೆ ಖಡಕ್ ರೂಲ್ಸ್

Mask Must: ಮಾಸ್ಕ್ ತೆಗಿಬೇಡಿ, ವ್ಯಾಕ್ಸಿನ್ ಮರಿಬೇಡಿ! ರಾಜ್ಯ ಸರ್ಕಾರದಿಂದ ಮತ್ತೆ ಖಡಕ್ ರೂಲ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಮತ್ತೆ ಕಠಿಣ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯಾದ್ಯಂತ ಮತ್ತೆ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಲೇ ಬೇಕು ಅಂತ ಆರೋಗ್ಯ ಇಲಾಖೆ ಆದೇಶಿಸಿದೆ.

  • Share this:

ಬೆಂಗಳೂರು: ರಾಜ್ಯಾದ್ಯಂತ ಕೋವಿಡ್ ಕೇಸ್‌ಗಳು (Covid Cases) ಜಾಸ್ತಿಯಾಗುತ್ತಿದೆ. ದೈನಂದಿನ ಪ್ರಕರಣಗಳು (Daily Cases) ಕಳೆದ 99 ದಿನಗಳಲ್ಲಿ ಇದೇ ಮೊದಲ ಬಾರಿಗೆ 7,000ಕ್ಕೆ ತಲುಪಿದೆ. 7 ದಿನಗಳ ಸರಾಸರಿಯು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಡಬಲ್ (Double) ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಹಲಿಯಲ್ಲಿ (Delhi) ಗುರುವಾರ 622 ಪ್ರಕರಣಗಳು ದಾಖಲಾಗಿವೆ. ಮೇ 14 ರಿಂದ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಕೊರೋನಾ ಮತ್ತೊಂದು ಅಲೆಯ (Wave) ಸೂಚನೆಯನ್ನು ಕೊಟ್ಟಿದೆ. ಬೆಂಗಳೂರಿನಲ್ಲಿ (Bengaluru) ಗುರುವಾರ 458 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಹಿಂದಿನ ದಿನಕ್ಕಿಂತ ಸುಮಾರು 100 ಪ್ರಕರಣಗಳು ಹೆಚ್ಚಿಗೆ ಪತ್ತೆಯಾಗಿರುವುದು ಉದ್ಯಾನ ನಗರಿಯಲ್ಲಿ ಮತ್ತೆ ವೈರಸ್ ಭೀತಿಯನ್ನು ಹೆಚ್ಚಿಸಿದೆ. ಇಷ್ಟಾದರೂ ಕೂಡ ಜನ ಮೈಮರೆತು, ಮಾಸ್ಕ್ (Mask) ಧರಿಸೋದನ್ನೇ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರ (State Government) ಇದೀಗ ಮತ್ತೆ ಸ್ಟ್ರಿಕ್ಟ್ ರೂಲ್ಸ್ (Strict Rules) ತಂದಿದೆ.


ರಾಜ್ಯ ಸರ್ಕಾರದಿಂದ ಮತ್ತೆ ಸ್ಟ್ರಿಕ್ಟ್ ರೂಲ್ಸ್


ರಾಜ್ಯದಲ್ಲಿ ಮತ್ತೆ ಕಠಿಣ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯಾದ್ಯಂತ ಮತ್ತೆ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಲೇ ಬೇಕು ಅಂತ ಆರೋಗ್ಯ ಇಲಾಖೆ ಆದೇಶಿಸಿದೆ.


ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ


ಪ್ರಸ್ತುತ, ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯನ್ನು ಗಮನಿಸಲಾಗಿದ್ದು, ದಿನಾಂಕ: 9.6.2022 ರಂದು 471 ಪ್ರಕರಣಗಳು ಹೂಗು ಪಾಸಿಟಿವ್ ಪ್ರಮಾಣ 2.14%ರಷ್ಟು ವರದಿಯಾಗಿದೆ. ಕೋವಿಡ್ 19ನ ಮೂರನೇ ಅಲೆಯ ನಂತರದ ಅವಧಿಯ ಏರಿಕೆ ಇದಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ ಅಂತ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.


ಇದನ್ನೂ ಓದಿ: Bengaluru: ಮಕ್ಕಳಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು; 4ನೇ ಅಲೆ ಕುರಿತು ಶುರುವಾಯ್ತು ಆತಂಕ


ಮಾಸ್ಕ್ ಧರಿಸುವುದು ಕಡ್ಡಾಯ


ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಸಲಾಗಿದೆ. ಈ ಕ್ರಮವನ್ನು ಜಾರಿಗೊಳಿಸಲು ಮಾರ್ಷಲ್ ಅಥವಾ ಪೋಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯಲು ಸೂಚಿಸಲಾಗಿದೆ.


ಎಲ್ಲೆಲ್ಲಿ ಮಾಸ್ಕ್ ಧರಿಸಲೇಬೇಕು?


ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯಾ,  ಹೊಟೇಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಛೇರಿಗಳು, ಕಾರ್ಖಾನೆ ಇತ್ಯಾದಿ ಪ್ರದೇಶಗಳಲ್ಲಿ ಸಿಬ್ಬಂದಿಗಳು ಹಾಗೂ ಸಾರ್ವಜನಿತರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಪ್ರದೇಶಗಳಿಗೆ ಮಾಸ್ಕ್ ಧರಿಸಿ ಬರುವರಿಗೆ ಮಾತ್ರವೇ ಪ್ರವೇಶ ನೀಡುವಂತೆ ಸೂಚಿಸಲಾಗಿದೆ. ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಆಯಾ ಸಂಸ್ಥೆಯ ಮಾಲೀಕರು ಅಥವಾ ಆಡಳಿತಗಳ ಜವಾಬ್ದಾರಿಯಾಗಿರುತ್ತದೆ ಅಂತ ಸರ್ಕಾರ ಹೇಳಿದೆ.

ಆರೋಗ್ಯ ಇಲಾಖೆ ಆದೇಶ ಪ್ರತಿ


ಸ್ವಂತ ವಾಹನದಲ್ಲಿ ಹೋದರೂ ಮಾಸ್ಕ್ ಧರಿಸಲೇ ಬೇಕು


ಇನ್ನು ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಅಂದರೆ ಬಸ್ ಹಾಗೂ ರೈಲು ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.


ಆರೋಗ್ಯ ಕೈಕೊಟ್ಟರೆ ಹುಷಾರ್


ಇನ್ನು ILI ಮತ್ತು SARI ಲಕ್ಷಣಗಳನ್ನು ಹೊಂದಿದವರು, ಹೈರಿಸ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ.


ಇದನ್ನೂ ಓದಿ: Explained: ಮತ್ತೆ ಹೊಸ ರೂಪದಲ್ಲಿ ಬಂತಾ ಒಮೈಕ್ರಾನ್‌? ಭಾರತದಲ್ಲಿ ಮತ್ತಷ್ಟು ಉಲ್ಬಣಿಸುತ್ತಾ ಕೋವಿಡ್?


ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಸೂಚನೆ


ಇನ್ನು ಅರ್ಹ ಜನರೆಲ್ಲರೂ Precautionary dose ಸೇರಿದಂತೆ, ಕೋವಿಡ್ 19 ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಕೋವಿಡ್ 19 ಮುಂಜಾಗ್ರತಾ ಕ್ರಮವಾಗಿ ಮೇಲೆ ತಿಳಿಸಿದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ತನ್ನ ಆದೇಶದಲ್ಲಿ ಸೂಚಿಸಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು