• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Polls 2023: ಮತಯಂತ್ರಗಳನ್ನು ಪುಡಿ ಪುಡಿ ಮಾಡಿದ ಗ್ರಾಮಸ್ಥರು; ಸಿಬ್ಬಂದಿಯ ಕಾರ್ ಪಲ್ಟಿ

Karnataka Polls 2023: ಮತಯಂತ್ರಗಳನ್ನು ಪುಡಿ ಪುಡಿ ಮಾಡಿದ ಗ್ರಾಮಸ್ಥರು; ಸಿಬ್ಬಂದಿಯ ಕಾರ್ ಪಲ್ಟಿ

EVM ಯಂತ್ರ ಪುಡಿ ಪುಡಿ

EVM ಯಂತ್ರ ಪುಡಿ ಪುಡಿ

Vijayapura: ಸದ್ಯ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕರ್ತವ್ಯನಿರತ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ.

 • News18 Kannada
 • 4-MIN READ
 • Last Updated :
 • Bijapur, India
 • Share this:

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ತಾಲೂಕಿನ ಮಸಬಿನಾಳ (Masabinala Village) ಗ್ರಾಮದಲ್ಲಿ  ಮತಯಂತ್ರಗಳನ್ನ (Voting Machine ) ಒಡೆದು ಪುಡಿ ಪುಡಿ ಮಾಡಲಾಗಿದೆ. ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ (Vijayapura) ಅಧಿಕಾರಿಗಳು ವಾಪಸ್ ತೆಗೆದುಕೊಂಡು ಹೋಗುತ್ತಿದ್ದರು. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಇವಿಎಂ ಹಾಗೂ ವಿವಿ ಪ್ಯಾಟ್  (VV PAT) ಮಶೀನ್‌ಗಳನ್ನ ಒಡೆದು ಹಾಕಿದ್ದಾರೆ. ಅಧಿಕಾರಿಗಳ ಕಾರ್​​ನ್ನು ಸಹ ಜಖಂಗೊಳಿಸಲಾಗಿದೆ. ಸದ್ಯ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕರ್ತವ್ಯನಿರತ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ.


ಗ್ರಾಮಸ್ಥರು ವಾಹನ ತಡೆದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಉತ್ತರಿಸಲು ತಡಬಡಾಯಿಸಿದ್ದರಿಂದ ಗ್ರಾಮಸ್ಥರು  ಅನುಮಾನಗೊಂಡು ಕಾರ್ ಉರುಳಿಸಿದ್ದಾರೆ. ನಂತರ ಕಾರ್​ನಲ್ಲಿದ್ದ ಇವಿಎಂ ಯಂತ್ರ, ವಿವಿ ಪ್ಯಾಟ್​ ಧ್ವಂಸಗೊಳಿಸಿದ್ದಾರೆ.


ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ತಾಳ್ಮೆಯಿಂದ ವಿಷಯವನ್ನು ತಿಳಿದುಕೊಳ್ಳದೇ ಯಂತ್ರಗಳನ್ನು ನಾಶಗೊಳಿಸಿದ್ದಾರೆ.


ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಬಸವನ ಬಾಗೇವಾಡಿ ಡಿವೈಎಸ್‌ಪಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸೆಕ್ಟರ್ ಅಧಿಕಾರಿ ಜನರ ತಪ್ಪು ಕಲ್ಪನೆಯಿಂದಾಗಿ ಈ ಘಟನೆ ನಡೆದಿದೆ ಎಂದು ಡಿಸಿಯವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿವಿಪ್ಯಾಟ್, ಇವಿಎ ಯಂತ್ರ ಒಡೆದು ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಡಿಸಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


25-30 ಜನರು ಪೊಲೀಸ್ ವಶಕ್ಕೆ


ಎಸ್​ಪಿ ಆನಂದಕುಮಾರ ಈ ಕುರಿತು ಮಾಹಿತಿ ನೀಡಿದ್ದು, ಈಗಾಗಲೇ 25-30 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇಂಥ ಕೃತ್ಯದಲ್ಲಿ ಭಾಗವಹಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


ತೀರ್ಥಹಳ್ಳಿಯಲ್ಲಿ ಕೈ ಕೊಟ್ಟ ಮತ ಯಂತ್ರ


ತೀರ್ಥಹಳ್ಳಿಯಲ್ಲಿ ಮತ ಯಂತ್ರ ಕೈ ಕೊಟ್ಟ ಹಿನ್ನೆಲೆ ಸುಮಾರು ಒಂದು ಗಂಟೆ ಮತದಾನ ಸ್ಥಗಿತಗೊಂಡ ಘಟನೆ ನಡೆದಿದೆ. ತೀರ್ಥಹಳ್ಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹೊದಲ ಮತಗಟ್ಟೆಯ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು,ಮತಗಟ್ಟೆ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಮಹದೇವಪುರ ಕ್ಷೇತ್ರದ ಜ್ಯೋತಿಪುರ ಗ್ರಾಮದ ಮತಗಟ್ಟೆ ಸಂಖ್ಯೆ 3ರಲ್ಲಿ ತಾಂತ್ರಿಕ ತೊಂದರೆ ಎದುರಾಗಿದ್ದು, ಅರ್ಧಗಂಟೆಗೂ ಹೆಚ್ಚು ಕಾಲ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಸರತಿ ಸಾಲಿನಲ್ಲಿ 150 ಕ್ಕೂ ಹೆಚ್ಚು ಮತದಾರರು ನಿಂತಿದ್ದು, ಮತಯಂತ್ರ ದೋಷದಿಂದ ಸಮಸ್ಯೆ ಉಂಟಾಗಿದೆ.


ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ- ಆಯೋಗದ ಎಡವಟ್ಟು, ಚಿಕ್ಕಪೇಟೆಯಲ್ಲಿ ಮರುಮತದಾನ?


ಚುನಾವಣಾ ಆಯೋಗದ ಎಡವಟ್ಟು


ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗ, ಕೆಜಿಎಫ್ ಬಾಬು ಕ್ರಮ ಸಂಖ್ಯೆ 12 ಆದ್ರೆ 13 ಅಂತಾ ತಪ್ಪಾಗಿ ದಾಖಲಿಸಿರೋ ಚುನಾವಣಾ ಆಯೋಗ. ಈ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ಕೆಜಿಎಫ್ ಬೆಂಬಲಿಗರು.

First published: