ಸಿನಿಮಾ ನಟರು ಹೀರೋಗಳಲ್ಲ, ಸೈನಿಕನೇ ನಿಜವಾದ ಹೀರೋ; ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ

ಸೈನಿಕ ತನ್ನ ಮನೆಗಾಗಿ ದುಡಿಯಲ್ಲ, ತನ್ನ ಬಂಧುಗಳಿಗಾಗಿ ದುಡಿಯಲ್ಲ. ತನ್ನ ದೇಶಕ್ಕಾಗಿ ದುಡಿಯುತ್ತಾರೆ. ಸಿನಿಮಾ ನಟರು ಬರೀ ನಟರು ಅಷ್ಟೇ. ಇಂದಿನ ಯುವ ಸಮೂಹ ಇದನ್ನು ಅರ್ಥ ಮಾಡಿಕೊಳ್ಳಬೇಕು

Latha CG | news18-kannada
Updated:January 16, 2020, 1:08 PM IST
ಸಿನಿಮಾ ನಟರು ಹೀರೋಗಳಲ್ಲ, ಸೈನಿಕನೇ ನಿಜವಾದ ಹೀರೋ; ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ
ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್
  • Share this:
ಚಿಕ್ಕಮಗಳೂರು(ಜ.19): ಕಳೆದ 4 ವರ್ಷಗಳ ಹಿಂದೆ ಸಿಯಾಚಿನ್​ನಲ್ಲಿ ಭೀಕರ ಹಿಮಪಾತಕ್ಕೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್​ ಎಲ್ಲರ ಮನಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.  ಈ ವೀರಯೋಧನ ಪತ್ನಿ ಮಹಾದೇವಿ ಕೊಪ್ಪದ್, ನಟರು ಹೀರೋಗಳಲ್ಲ, ಸೈನಿಕರೇ ನಿಜವಾದ ಹೀರೋಗಳು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ವಿವೇಕಾನಂದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೂರು ಗಂಟೆ ಸಿನಿಮಾದಲ್ಲಿ ನಟಿಸುವವರು ನಿಜವಾದ ಹೀರೋಗಳಲ್ಲ. ದೇಶಕ್ಕಾಗಿ ಪ್ರಾಣ ಕೊಡುವ ಸೈನಿಕನೇ ನಿಜವಾದ ಹೀರೋ. ರಿಯಲ್​​ ಹೀರೋಗಳು ಅಂದರೆ ಸಿನಿಮಾ ನಟರಲ್ಲ. ನಿಜವಾಗಿಯೂ ರಿಯಲ್​ ಹೀರೋಗಳು ಅಂದರೆ ಸೈನಿಕರು ಮತ್ತು ರೈತರು ಮಾತ್ರ," ಎಂದು ಹೇಳಿದ್ದಾರೆ.

ಮೌಲ್ವಿ ವಿಚಾರಣೆ ಬಳಿಕ ವಿಧ್ವಂಸಕ ಕೃತ್ಯದ ಭೀತಿ; ಚಾಮರಾಜನಗರ ಗಡಿಯಲ್ಲಿ ಪೊಲೀಸರ ಹದ್ದಿನ ಕಣ್ಣು

"ಇಂದಿನ ಯುವಕರಿಗೆ ಸಿನಿಮಾ ನಟರೇ ಹೀರೋಗಳು. ಅವರು ವೇದಿಕೆ ಹತ್ತಿದರೆ ಚಪ್ಪಾಳೆ, ಶಿಳ್ಳೆ ಹಾಕಿ ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಒಬ್ಬ ಯೋಧ ಬಂದು ನಿಂತು ಮಾತನಾಡಿದರೆ ಅಷ್ಟು ಚಪ್ಪಾಳೆ ಸದ್ದು ಬರುವುದಿಲ್ಲ. ಸಿನಿಮಾ ನಟರ ಹೆಸರು ಕೇಳಿದರೆ ಯುವ ಜನತೆಗೆ ಪ್ರೀತಿ ಜಾಸ್ತಿ," ಎಂದು ಬೇಸರಿಸಿದರು.

ಮುಂದುವರೆದ ಅವರು," ಸೈನಿಕ ತನ್ನ ಮನೆಗಾಗಿ ದುಡಿಯಲ್ಲ, ತನ್ನ ಬಂಧುಗಳಿಗಾಗಿ ದುಡಿಯಲ್ಲ. ತನ್ನ ದೇಶಕ್ಕಾಗಿ ದುಡಿಯುತ್ತಾರೆ. ಸಿನಿಮಾ ನಟರು ಬರೀ ನಟರು ಅಷ್ಟೇ. ಇಂದಿನ ಯುವ ಸಮೂಹ ಇದನ್ನು ಅರ್ಥ ಮಾಡಿಕೊಳ್ಳಬೇಕು," ಎಂದು ಒತ್ತಿ ಹೇಳಿದರು.

ಷೇರುಪೇಟೆ ಝಗಮಗ; ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ

2016ರ ಫೆಬ್ರವರಿ ತಿಂಗಳಲ್ಲಿ ಸಿಯಾಚಿನ್​ನಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿತ್ತು. ಈ ವೇಳೆ ಯೋಧ ಹನುಮಂತಪ್ಪ ಕೊಪ್ಪದ್​ ಹಿಮದಲ್ಲಿ ಸಿಲುಕಿದ್ದರು. ಸುಮಾರು 6 ದಿನಗಳ ಕಾಲ ಹಿಮದ ನಡುವೆಯೇ ಜೀವನ್ಮರಣ ಹೋರಾಟ ನಡೆಸಿದ್ದರು. ಬಳಿಕ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದರು.ಹನುಮಂತಪ್ಪ ಕೊಪ್ಪದ್​ ಧಾರವಾಡ ಜಿಲ್ಲೆಯ ಕುಂದಗೋಳದ ಬೆಟದೂರು ಗ್ರಾಮದ ಯೋಧ. ಅವರು ಹುತಾತ್ಮರಾಗಿ 4  ವರ್ಷಗಳೇ ಕಳೆಯುತ್ತಿವೆ. ಆದರೆ ಅವರ ಶೌರ್ಯ, ದೇಶಕ್ಕಾಗಿ ಮಾಡಿದ ತ್ಯಾಗ ಮಾತ್ರ ಅವಿಸ್ಮರಣೀಯ. ಕೊಪ್ಪದ್​ ಅವರ ಶೌರ್ಯವನ್ನು ಮೆಚ್ಚಿ, ಭಾರತೀಯ ಸೇನೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading